ಕನ್ನಡ ಸುದ್ದಿ  /  Entertainment  /  Kashmir Files Director Is Asking Why I Am Not Getting Oscar. He Will Not Even Get A Bhaskar Says Prakash Raj

Prakash raj: ʻಈ ನಿಮ್ಮ ನಾನ್‌ಸೆನ್ಸ್‌ ಚಿತ್ರಕ್ಕೆ ಆಸ್ಕರ್‌ ಅಲ್ಲ, ಭಾಸ್ಕರ್‌ ಸಹ ಸಿಗಲ್ಲʼ; ʻಕಾಶ್ಮೀರ್‌ ಫೈಲ್ಸ್‌ʼ ಬಗ್ಗೆ ಪ್ರಕಾಶ್‌ ರಾಜ್‌

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಇದೀಗ ಮತ್ತೆ ಕಾಶ್ಮೀರ್‌ ಫೈಲ್ಸ್‌ ಚಿತ್ರದ ವಿರುದ್ಧ ಹರಿಹಾಯ್ದಿದ್ದಾರೆ. ಪಠಾಣ್‌ ಚಿತ್ರ ವಿರೋಧಿಸಿದವರಿಗೂ ಚಾಟಿ ಬೀಸಿದ್ದಾರೆ.

ʻಈ ನಿಮ್ಮ ನಾನ್‌ಸೆನ್ಸ್‌ ಚಿತ್ರಕ್ಕೆ ಆಸ್ಕರ್‌ ಅಲ್ಲ, ಭಾಸ್ಕರ್‌ ಸಹ ಸಿಗಲ್ಲʼ; ʻಕಾಶ್ಮೀರ್‌ ಫೈಲ್ಸ್‌ʼ ಬಗ್ಗೆ ಪ್ರಕಾಶ್‌ ರಾಜ್‌ ಟೀಕೆ
ʻಈ ನಿಮ್ಮ ನಾನ್‌ಸೆನ್ಸ್‌ ಚಿತ್ರಕ್ಕೆ ಆಸ್ಕರ್‌ ಅಲ್ಲ, ಭಾಸ್ಕರ್‌ ಸಹ ಸಿಗಲ್ಲʼ; ʻಕಾಶ್ಮೀರ್‌ ಫೈಲ್ಸ್‌ʼ ಬಗ್ಗೆ ಪ್ರಕಾಶ್‌ ರಾಜ್‌ ಟೀಕೆ

Prakash raj on Kashmir Files: ಬಹುಭಾಷಾ ನಟ ಪ್ರಕಾಶ್‌ ರಾಜ್‌ ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ತೀಕ್ಷ್ಣ ಟ್ವಿಟ್‌ಗಳ ಮೂಲಕವೇ ಸರ್ಕಾರದ ವಿರುದ್ಧ ಹರಿಹಾಯುತ್ತಾರೆ. ಇದೀಗ ಪಠಾಣ್‌ ಸಿನಿಮಾ ಟೀಕಿಸಿದವರ ಬಗ್ಗೆ, ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಂಡಾಡಿದವರ ಬಗ್ಗೆ ಮಾತನಾಡಿದ್ದಾರೆ. ಮಾತಿನ ಮೂಲಕವೇ ಚಾಟಿ ಬೀಸಿದ್ದಾರೆ. ಇತ್ತೀಚೆಗೆ ಕೇರಳದ ತಿರುವನಂತಪುರದಲ್ಲಿ ನಡೆದ ಮಾತೃಭೂಮಿ ಅಂತಾರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಿದ ಪ್ರಕಾಶ್‌ ರಾಜ್, ಪಠಾಣ್‌ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.

"ಶಾರುಖ್‌ ಖಾನ್‌ ಅವರ ಪಠಾಣ್‌ ಚಿತ್ರವನ್ನು ಬ್ಯಾನ್‌ ಮಾಡಬೇಕೆಂದು ಮೂರ್ಖರು, ಮತಾಂಧರ ಒಂದು ದೊಡ್ಡ ಪಡೆಯೇ ಮುಂದೆ ಬಂದಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಇತ್ತ ಪಠಾಣ್‌ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ನೂರಾರು ಕೋಟಿ ಗಳಿಕೆ ಮಾಡಿತು. ಇದೇ ಮೂರ್ಖರಿಗೆ ಪ್ರಧಾನಿ ಮೋದಿ ಚಿತ್ರ ಬಿಡುಗಡೆ ಆದಾಗ ಕೇವಲ 30 ಕೋಟಿ ಗಳಿಕೆ ಮಾಡಿಸಲು ಆಗಲಿಲ್ಲ.. ಹಾಗಾಗಿ ಇದು ಕೇವಲ ಬೊಗಳುವಿಕೆ ಮಾತ್ರವೇ ಹೊರತು ಕಚ್ಚುವಿಕೆಯಲ್ಲ" ಎಂದಿದ್ದಾರೆ.

ಕಾಶ್ಮೀರ್‌ ಫೈಲ್ಸ್‌ ಚಿತ್ರಕ್ಕೂ ಟೀಕೆ..

ಅದೇ ರೀತಿ ಕಾಶ್ಮೀರ್‌ ಫೈಲ್ಸ್‌ ಚಿತ್ರದ ಬಗ್ಗೆಯೂ ಮಾತನಾಡಿದ ಪ್ರಕಾಶ್‌ ರಾಜ್, "ಕಾಶ್ಮೀರ್ ಫೈಲ್ಸ್ ಒಂದು ನಾನ್‌ಸೆನ್ಸ್‌ ಸಿನಿಮಾ. ಆದರೆ, ಆ ಚಿತ್ರವನ್ನು ನಿರ್ಮಿಸಿದವರು ಯಾರು ಎಂಬುದು ನಮಗೆ ತಿಳಿದಿರುವ ವಿಚಾರ. ಈ ನಾಚಿಗೆ ಇಲ್ಲದ ಚಿತ್ರಕ್ಕೆ ಅಂತಾರಾಷ್ಟ್ರೀಯ ಸಿನಿಮಾ ತೀರ್ಪುಗಾರರು ಉಗಿದಿದ್ದಾರೆ. ಇತ್ತ ನನಗೇಕೆ ಆಸ್ಕರ್‌ ಸಿಗುತ್ತಿಲ್ಲ ಎಂದು ನಿರ್ದೇಶಕರು ಹೇಳಿಕೊಳ್ಳುತ್ತಿದ್ದಾರೆ. ಆಸ್ಕರ್‌ ಅಲ್ಲ ಇವರಿಗೆ ಭಾಸ್ಕರ್‌ ಕೂಡ ಸಿಗುವುದಿಲ್ಲ. ಈ ಥರದ ಸಿನಿಮಾ ಮಾಡುವ ಸಲುವಾಗಿಯೇ ಅವರು 2000 ಕೋಟಿ ಹಣವನ್ನು ತೆಗೆದಿಟ್ಟಿದ್ದಾರೆ. ಆದರೆ, ಎಲ್ಲ ಸಮಯದಲ್ಲೂ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ." ಎಂದು ಪ್ರಕಾಶ್‌ ರಾಜ್‌ ಹೇಳಿದ್ದಾರೆ.

ಪಠಾಣ್‌ ಬಾಕ್ಸ್‌ ಆಫೀಸ್‌ ಕಮಾಯಿ..

ಶಾರುಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾ ಬಿಡುಗಡೆಗೂ ಮುನ್ನ ಒಂದು ರೀತಿ ಸದ್ದು ಮಾಡಿತ್ತು. ಆದರೆ, ಬಿಡುಗಡೆ ಬಳಿಕ ಅದು ಬೇರೆಯದೇ ಸ್ವರೂಪ ಪಡೆಯಿತು. ಚಿತ್ರ ಬಿಡುಗಡೆಯಾಗಿ15 ದಿನಗಳಾದರೂ ಕಲೆಕ್ಷನ್‌ ಇನ್ನೂ ನಿಂತಿಲ್ಲ. ಬಾಕ್ಸ್‌ ಆಫೀಸ್‌ನಲ್ಲಿ ನೂರಾರು ಕೋಟಿ ಗಳಿಕೆ ಮಾಡಿ, ಹಿಟ್ ಪಟ್ಟಿ ಸೇರಿದೆ ಈ ಚಿತ್ರ. ಅಷ್ಟೇ ಅಲ್ಲ ಸೋಲಿನ ಸುಳಿಗೆ ಸಿಲುಕಿದ್ದ ಶಾರುಖ್‌ಗೂ ಪಠಾಣ್‌ ಕೈ ಹಿಡಿದಿದೆ. ಹಿಂದಿಯಲ್ಲಿಯೇ 430 ಕೋಟಿ ಗಳಿಕೆ ಮಾಡುವ ಮೂಲಕ ಈ ಹಿಂದಿನ ಕೆಜಿಎಫ್‌ ಚಾಪ್ಟರ್‌ 2 ಹೆಸರಿನಲ್ಲಿದ್ದ ದಾಖಲೆಯನ್ನೂ ಮುರಿದು ಎರಡನೇ ಸ್ಥಾನವನ್ನು ಅಲಂಕರಿಸಿದ್ದಾನೆ ಪಠಾಣ್.‌ ಒಟ್ಟಾರೆಯಾಗಿ ಭಾರತದಲ್ಲಿ 446 ಕೋಟಿ ಗಳಿಕೆ ಮಾಡಿರುವ ಪಠಾಣ್‌, ಜಾಗತಿಕವಾಗಿ 850 ಕೋಟಿಗೂ ಅಧಿಕ ಗಳಿಕೆ ಕಂಡ ಚಿತ್ರವಾಗಿದೆ.

IPL_Entry_Point