Darshan on Sudeep: ‘ಭಿನ್ನಾಭಿಪ್ರಾಯ ಬಿಟ್ಟು ಸುದೀಪ್‌ ಮತ್ತೆ ನೀವು ಒಂದಾಗಬೇಕು!’; ಮುಖ್ಯಮಂತ್ರಿ ಚಂದ್ರು ಮಾತಿಗೆ ನಕ್ಕ ದರ್ಶನ್‌!
ಕನ್ನಡ ಸುದ್ದಿ  /  ಮನರಂಜನೆ  /  Darshan On Sudeep: ‘ಭಿನ್ನಾಭಿಪ್ರಾಯ ಬಿಟ್ಟು ಸುದೀಪ್‌ ಮತ್ತೆ ನೀವು ಒಂದಾಗಬೇಕು!’; ಮುಖ್ಯಮಂತ್ರಿ ಚಂದ್ರು ಮಾತಿಗೆ ನಕ್ಕ ದರ್ಶನ್‌!

Darshan on Sudeep: ‘ಭಿನ್ನಾಭಿಪ್ರಾಯ ಬಿಟ್ಟು ಸುದೀಪ್‌ ಮತ್ತೆ ನೀವು ಒಂದಾಗಬೇಕು!’; ಮುಖ್ಯಮಂತ್ರಿ ಚಂದ್ರು ಮಾತಿಗೆ ನಕ್ಕ ದರ್ಶನ್‌!

ಇತರರ ಜತೆಗಿನ ದರ್ಶನ್‌ ಅವರ ಇಕ್ಕಟ್ಟು ಬಿಕ್ಕಟ್ಟು ದೂರವಾಗಲಿ. ಆದಷ್ಟು ಬೇಗ ಬಗೆಹರಿಯಲಿ. ಎಲ್ಲರೂ ಒಟ್ಟಿಗೆ ಸೇರಿದರೆ ಇನ್ನೂ ದೊಡ್ಡ ಮಟ್ಟದಲ್ಲಿ ಸಾಧಿಸಬಹುದು ಎಂದಿದ್ದಾರೆ ಮುಖ್ಯಮಂತ್ರಿ ಚಂದ್ರು.

‘ಭಿನ್ನಾಭಿಪ್ರಾಯ ಬಿಟ್ಟು  ಸುದೀಪ್‌ ಮತ್ತೆ ನೀವು ಒಂದಾಗಬೇಕು!’; ಮುಖ್ಯಮಂತ್ರಿ ಚಂದ್ರು ಮಾತಿಗೆ ನಕ್ಕ ದರ್ಶನ್‌!
‘ಭಿನ್ನಾಭಿಪ್ರಾಯ ಬಿಟ್ಟು ಸುದೀಪ್‌ ಮತ್ತೆ ನೀವು ಒಂದಾಗಬೇಕು!’; ಮುಖ್ಯಮಂತ್ರಿ ಚಂದ್ರು ಮಾತಿಗೆ ನಕ್ಕ ದರ್ಶನ್‌!

Darshan on Sudeep: ಹೊಸಪೇಟೆಯಲ್ಲಿ ‘ಕ್ರಾಂತಿ’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ದರ್ಶನ್‌ ಮೇಲೆ ಚಪ್ಪಲಿ ಎಸೆದ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಘಟನೆಯ ಬಳಿಕ ಇಡೀ ಸ್ಯಾಂಡಲ್‌ವುಡ್‌ ಅವರ ಪರವಾಗಿ ನಿಂತಿತ್ತು. ಸಿನಿಮಾ ಸ್ನೇಹಿತರು, ಕಲಾವಿದರು ಒಟ್ಟಾಗಿ ನಾವಿದ್ದೇವೆ ಎಂದು ಹೇಳಿ ದರ್ಶನ್‌ಗೆ ಸಾಥ್‌ ನೀಡಿದ್ದರು. ಇದೆಲ್ಲದರ ನಡುವೆ ಅಭಿಮಾನಿಗಳ ಖುಷಿ ಇಮ್ಮಡಿಯಾಗುವಂತೆ ಮಾಡಿದ್ದು ನಟ ಸುದೀಪ್‌, ದರ್ಶನ್‌ಗೆ ಬೆಂಬಲಕ್ಕೆ ನಿಂತು ಬರೆದ ಸಾಲುಗಳು. ಅದಾದ ಮೇಲೆ ಸುದೀಪ್‌ ಮಾತಿಗೆ ದರ್ಶನ್‌ ಸಹ ಪ್ರತಿಕ್ರಿಯೆ ನೀಡಿ ಧನ್ಯವಾದ ಅರ್ಪಿಸಿದ್ದರು. ಈ ಎರಡು ಟ್ವಿಟ್‌ಗಳು ದರ್ಶನ್‌ ಮತ್ತು ಸುದೀಪ್‌ ಅಭಿಮಾನಿಗಳನ್ನು ಒಂದು ಮಾಡಿತ್ತು. ಸಂಭ್ರಮಕ್ಕೂ ಹಾಲೆರೆದಿತ್ತು.

ಈ ಘಟನೆ ನಡೆದ ಬಳಿಕ ಅಭಿಮಾನಿ ವಲಯದಲ್ಲಿ ಈ ಕಿಚ್ಚ ದಚ್ಚು ಜೋಡಿ ಅದ್ಯಾವಾಗ ಕೈ ಜೋಡಿಸುತ್ತಾರೆ ಎಂದು ಕಾಯುತ್ತಲೇ ಇದ್ದರು. ಆದರೆ, ಆ ಬೆಳವಣಿಗೆ ಕಾಣಿಸಲೇ ಇಲ್ಲ. ಇದೀಗ ಚಂದನವನದ ಹಿರಿಯ ನಟ ಮತ್ತು ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಮತ್ತೆ ಈ ಜೋಡಿಯನ್ನು ಒಟ್ಟಾಗೆ ನೋಡಬೇಕು ಎಂದು ಬಯಸಿದ್ದಾರೆ. ವೇದಿಕೆ ಮೇಲೆಯೇ ನೇರವಾಗಿ ದರ್ಶನ್‌ಗೆ ಸಲಹೆ ನೀಡಿದ್ದಾರೆ.

‘ಕ್ರಾಂತಿ’ ಚಿತ್ರ ಕಳೆದ ಜನವರಿ 26ರಂದು ಬಿಡುಗಡೆ ಆಗಿದೆ. ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡು, ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮುಂದುವರಿಸಿದೆ. ಈ ಖುಷಿಯ ವಿಚಾರವನ್ನು ಹಂಚಿಕೊಳ್ಳಲೆಂದೆ ಇಡೀ ತಂಡ ಸಕ್ಸಸ್‌ ಪಾರ್ಟಿ ಆಯೋಜನೆ ಮಾಡಿತ್ತು. ಚಿತ್ರದ ಬಹುತೇಕ ಎಲ್ಲ ಪ್ರಮುಖ ಪಾತ್ರಧಾರಿಗಳು, ತಂತ್ರಜ್ಞರು ಭಾಗವಹಿಸಿದ್ದರು. ಈ ವೇಳೆ ಸಿನಿಮಾ ಕಲೆಕ್ಷನ್‌, ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ, ರಾಜಕೀಯ ವ್ಯಕ್ತಿಗಳಿಂದ ಸಿಕ್ಕ ಭರವಸೆ ಹೀಗೆ ಎಲ್ಲವನ್ನೂ ತಂಡ ಹೇಳಿಕೊಂಡಿತು.

ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾಗಿ.."

"ದರ್ಶನ್‌ ಅವರ ಇಕ್ಕಟ್ಟು ಬಿಕ್ಕಟ್ಟು ದೂರವಾಗಲಿ. ಆದಷ್ಟು ಬೇಗ ಬಗೆಹರಿಯಲಿ. ಎಲ್ಲರೂ ಒಟ್ಟಿಗೆ ಸೇರಿದರೆ ಇನ್ನೂ ದೊಡ್ಡ ಮಟ್ಟದಲ್ಲಿ ಸಾಧಿಸಬಹುದು. ಕೇವಲ ನದಿಯಿಂದ ನೀರು ಕುಡಿದರೆ ಸಾಕಾಗಲ್ಲ, ತೊರೆಯಿಂದ ನೀರು ಕುಡಿದರೆ ಸಾಕಾಗಲ್ಲ.. ಬಾವಿಯಿಂದ ನೀರು ಕುಡಿದರೆ ಸಾಲಲ್ಲ.. ಸರೋವರವನ್ನೇ ಬದಲಾಯಿಸಬೇಕು. ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸಬೇಕು. ಸಿಹಿ ನೀರಾಗಿ ಮಾಡುವುದರೆಂದರೆ ಇಡೀ ಇಂಡಸ್ಟ್ರಿ ಒಂದಾಗಬೇಕು, ಇಡೀ ಚಿತ್ರೋದ್ಯಮ ಸಿಹಿ ನೀರಾಗಬೇಕು. ನಿಮ್ಮ ಭಿನ್ನಾಭಿಪ್ರಾಯ ಬದಿಗೊತ್ತಿ, ಬದುಕಿನ ಕಡೆ ನೋಡಿ" ಎಂದು ಪರೋಕ್ಷವಾಗಿ ಸುದೀಪ್‌ ಮತ್ತು ನೀವು ಒಂದಾಗಿ ಎಂದು ದರ್ಶನ್‌ಗೆ ಸಲಹೆ ನೀಡಿದ್ದಾರೆ. ಇತ್ತ ಮುಖ್ಯಮಂತ್ರಿ ಚಂದ್ರು ಅವರ ಮಾತಿಗೆ ಏನನ್ನೂ ಉತ್ತರಿಸದೇ, ಕಿರು ನಗೆಯ ಮೂಲಕವೇ ದರ್ಶನ್‌ ಪ್ರತಿಕ್ರಿಯೆ ನೀಡಿದ್ದಾರೆ.

'ಕ್ರಾಂತಿ' ಚಿತ್ರವನ್ನು ಮೀಡಿಯಾ ಹೌಸ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಬಿ. ಸುರೇಶ್‌ ಹಾಗೂ ಶೈಲಜಾ ನಾಗ್‌ ನಿರ್ಮಾಣ ಮಾಡಿದ್ದಾರೆ. ವಿ. ಹರಿಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಹರಿಕೃಷ್ಣ ಅವರದ್ದೇ ಸಂಗೀತ ಇದೆ. ರವಿಚಂದ್ರನ್‌ ಹಾಗೂ ಸುಮಲತಾ ಸೇರಿ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದ್ದಾರೆ.

Whats_app_banner