ಕನ್ನಡ ಸುದ್ದಿ  /  Karnataka  /  Bangalore Metro News Bmrcl Yellow Line Operations December 2023 Bommasandra Rv Road Karnataka News In Kannada Pcp

Namma Metro: ನಮ್ಮ ಮೆಟ್ರೋ ಹಳದಿ ಮಾರ್ಗ ಡಿಸೆಂಬರ್‌ಗೆ ರೆಡಿ, ಆರ್‌ವಿ ರಸ್ತೆ ಬೊಮ್ಮಸಂದ್ರ ನಡುವೆ ಪ್ರಯಾಣಿಸುವರಿಗೆ ಗುಡ್‌ನ್ಯೂಸ್‌

ಬೆಂಗಳೂರು ಮೆಟ್ರೋದ (Namma Metro) ಬಹುನಿರೀಕ್ಷಿತ ಹಳದಿ ಮಾರ್ಗವು (Yellow Line) ಈ ವರ್ಷದ ಡಿಸೆಂಬರ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ತಿಳಿಸಿದೆ. ಬೊಮ್ಮಸಂದ್ರವನ್ನು ಆರ್‌ವಿ ರಸ್ತೆಯೊಂದಿಗೆ ಸಂಪರ್ಕಿಸುವ ಹಳದಿ ಮಾರ್ಗವು ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳಲಿದೆ.

Namma Metro: ನಮ್ಮ ಮೆಟ್ರೋ ಹಳದಿ ಮಾರ್ಗ ಡಿಸೆಂಬರ್‌ಗೆ ರೆಡಿ
Namma Metro: ನಮ್ಮ ಮೆಟ್ರೋ ಹಳದಿ ಮಾರ್ಗ ಡಿಸೆಂಬರ್‌ಗೆ ರೆಡಿ

ಬೆಂಗಳೂರು: ನಮ್ಮ ಮೆಟ್ರೋದ (Namma Metro) ಬಹುನಿರೀಕ್ಷಿತ ಹಳದಿ ಮಾರ್ಗವು (Yellow Line) ಈ ವರ್ಷದ ಡಿಸೆಂಬರ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ತಿಳಿಸಿದೆ. ಬೊಮ್ಮಸಂದ್ರವನ್ನು ಆರ್‌ವಿ ರಸ್ತೆಯೊಂದಿಗೆ ಸಂಪರ್ಕಿಸುವ ಹಳದಿ ಮಾರ್ಗವು ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳಲಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರ ಪತ್ರಿಕೆ ಲೈವ್‌ ಮಿಂಟ್‌ ವರದಿ ಮಾಡಿದೆ. 

ಈ ಮೊದಲು, ಮೆಟ್ರೋ ಪ್ರಾಧಿಕಾರವು ಎರಡು ಹಂತಗಳಲ್ಲಿ ಹಳದಿ ಮಾರ್ಗವನ್ನು ತೆರೆಯಲು ನಿರ್ಧರಿಸಿತ್ತು. ಅಂದರೆ, ಮೊದಲ ಹಂತದಲ್ಲಿ ಇದೇ ಜೂನ್‌ ತಿಂಗಳಲ್ಲಿ ಬೊಮ್ಮಸಂದ್ರದಿಂದ ಸಿಲ್ಕ್‌ಬೋರ್ಡ್‌ವರೆಗೆ ಮತ್ತು ಡಿಸೆಂಬರ್‌ ತಿಂಗಳಲ್ಲಿ ಎರಡನೇ ಹಂತದಲ್ಲಿ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಿಂದ ಆರ್‌ವಿ ರಸ್ತೆಯವರೆಗಿನ ಮೆಟ್ರೋ ಕಾರ್ಯಾಚರಣೆ ಆರಂಭಿಸಲು ಉದ್ದೇಶಿಸಿತ್ತು. ಆದರೆ, ಈ ರೀತಿ ಎರಡು ಹಂತದಲ್ಲಿ ತೆರೆಯುವುದರಿಂದ ಹೆಚ್ಚು ಪ್ರಯಾಣಿಕರನ್ನು ಸೆಳೆಯುವುದು ಕಷ್ಟವೆಂದು ತಿಳಿದು ಒಂದೇ ಹಂತದಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು.

ಬೆಂಗಳೂರು ಮೆಟ್ರೋ ರೈಲಿನ ಹಸಿರು ಮಾರ್ಗ ಉತ್ತರ-ದಕ್ಷಿಣ (ನಾಗಸಂದ್ರ-ಸಿಲ್ಕ್ ಇನ್‌ಸ್ಟಿಟ್ಯೂಟ್) ಮತ್ತು ಪೂರ್ವ-ಪಶ್ಚಿಮ (ಬೈಯಪ್ಪನಹಳ್ಳಿ-ಕೆಂಗೇರಿ) ಕಾರಿಡಾರ್‌ಗಳನ್ನು ಒಳಗೊಂಡಿದೆ. ಹಳದಿ ಮಾರ್ಗವು ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯ ಜನನಿಬಿಡ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಇಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಳದಿ ಮಾರ್ಗ ನೆರವಾಗಲಿದೆ. ಈ ಮಾರ್ಗ ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು ಸಹ ಒಳಗೊಂಡಿರುತ್ತದೆ. ಅಲ್ಲಿ ಎರಡು ಹಂತದ ಸೇತುವೆಯು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ 3.3 ಕಿಮೀವರೆಗೆ ಇರುತ್ತದೆ.

ಬೆಂಗಳೂರು ಮೆಟ್ರೋ ಅಧಿಕಾರಿಗಳು 2025 ರ ವೇಳೆಗೆ 175 ಕಿಲೋಮೀಟರ್ ಮೆಟ್ರೋ ಜಾಲವನ್ನು ಪೂರ್ಣಗೊಳಿಸುವ ಉದ್ದೇಶದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ಕೃಷ್ಣರಾಜಪುರ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ್ದರು. ವೈಟ್‌ಫೀಲ್ಡ್‌- ಕೆಆರ್‌ ಪುರ ಮೆಟ್ರೋವು ಈ ಎರಡು ಪ್ರದೇಶಗಳ ನಡುವೆ ಇರುವ ಹಲವು ಜನರಿಗೆ ಅನುಕೂಲವಾಗಲಿದೆ. ವೈಟ್‌ಫೀಲ್ಡ್‌, ಚನ್ನಸಂದ್ರ, ಕಾಡುಗೋಡಿ ಟ್ರೀಪಾರ್ಕ್‌, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಾಸಾಯಿ ಆಸ್ಪತ್ರೆ, ನಲ್ಲೂರಹಳ್ಳಿ, ಕುಂದಹಳ್ಳಿ, ಸೀತಾರಾಮನಪಾಳ್ಯ, ಹೂಡಿ, ಗರುಡಾಚಾರ್‌ ಪಾಳ್ಯ, ಸಿಂಗಯ್ಯನಪಾಳ್ಯ, ಕೆಆರ್‌ಪುರದಲ್ಲಿ ಮೆಟ್ರೋ ನಿಲ್ದಾಣಗಳಿವೆ. ಮುಂದೆ ಈ ರೈಲು ಮಾರ್ಗವು ಬೈಯಪ್ಪನಹಳ್ಳಿಗೆ ಸಂಪರ್ಕಗೊಂಡರೆ ನಗರದ ಎಲ್ಲರಿಗೂ ಅನುಕೂಲವಾಗಲಿದೆ.

ಮೆಟ್ರೋ ಮಾರ್ಗವು ಸಾವಿರಾರು ಐಟಿ ಉದ್ಯೋಗಿಗಳಿಗೆ ಯಾವುದೇ ಟ್ರಾಫಿಕ್ ಜಾಮ್ ಅನ್ನು ಎದುರಿಸದೆ ಕೆಲಸಕ್ಕೆ ಹೋಗಲು ಸಹಾಯ ಮಾಡುತ್ತದೆ. ನಗರದಲ್ಲಿ ವಾಸಿಸುವವರು ಮಾತ್ರವಲ್ಲದೆ ನಗರಕ್ಕೆ ಆಗಮಿಸುವ ಹೊರಗಿನವರಿಗೂ ಬೆಂಗಳೂರಿನ ಯಾವುದೇ ಮೂಲೆಗಳಿಗೆ ಸುಲಭವಾಗಿ ಪ್ರಯಾಣಿಸಲು ನಮ್ಮ ಮೆಟ್ರೋ ನೆರವಾಗುತ್ತದೆ.

IPL_Entry_Point