ಕನ್ನಡ ಸುದ್ದಿ  /  ಕರ್ನಾಟಕ  /  Nsui Karnataka Bandh: ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹ; ಎನ್ಎಸ್ ಯುಐ ನೇತೃತ್ವದಲ್ಲಿ ಡಿ.17ಕ್ಕೆ ರಾಜ್ಯ ಮಟ್ಟದ ಬಂದ್!

NSUI Karnataka Bandh: ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹ; ಎನ್ಎಸ್ ಯುಐ ನೇತೃತ್ವದಲ್ಲಿ ಡಿ.17ಕ್ಕೆ ರಾಜ್ಯ ಮಟ್ಟದ ಬಂದ್!

ವಿದ್ಯಾರ್ಥಿಗಳ ಸಮಸ್ಯೆ ಬಗೆರಿಸುವಂತೆ ಆಗ್ರಹಿಸಿ ಡಿ.17ರಂದು ಎನ್ಎಸ್ ಯಐ ಮುಂದಾಳತ್ವದಲ್ಲಿ ರಾಜ್ಯ ಮಟ್ಟದ ಬಂದ್ ಗೆ ಕರೆ ನೀಡಲಾಗಿದೆ.

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಎನ್ ಎಸ್ ಯುಐ ಡಿ 17 ರಂದು ಬಂದ್ ಗೆ ಕರೆ ನೀಡಿದೆ
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಎನ್ ಎಸ್ ಯುಐ ಡಿ 17 ರಂದು ಬಂದ್ ಗೆ ಕರೆ ನೀಡಿದೆ

ಬೆಂಗಳೂರು: ವಿದ್ಯಾರ್ಥಿ ವೇತನ, ಸಾರಿಗೆ ವ್ಯವಸ್ಥೆ, ಫಲಿತಾಂಶ ವಿಳಂಬ, ಉಚಿತ ಬಸ್ ಪಾಸ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.17ರಂದು ರಾಜ್ಯ ಮಟ್ಟದ ಬಂದ್ ಗೆ ವಿದ್ಯಾರ್ಥಿಗಳು ಬಂದ್ ಮಾಡುತ್ತಿದ್ದು, ಈ ಹೋರಾಟಕ್ಕೆ ಎನ್ಎಸ್ ಯೂಐ ನೇತೃತ್ವ ವಹಿಸುತ್ತಿದೆ ಎಂದು ಎನ್ಎಸ್ ಯೂಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅವರು ತಿಳಿಸಿದ್ದಾರೆ.

ಕ್ವಿನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ನಾಡಿನ ಪ್ರಗತಿಗೆ ಮುಖ್ಯವಾದುದು ವಿದ್ಯಾರ್ಥಿಗಳು ಹಾಗೂ ಅವರಿಗೆ ಶಿಕ್ಷಣ ನೀಡುವುದಾಗಿದೆ. ಇಂದು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡದಂತೆ ಸರ್ಕಾರ ನೀತಿ ರೂಪಿಸುತ್ತಿವೆ. ಹಿಂದೆ ಎಲ್ಲ ಸರ್ಕಾರಗಳು ವಿದ್ಯಾರ್ಥಿಗಳು ಓದಬೇಕು ಎಂದು ವಿದ್ಯಾರ್ಥಿ ವೇತನ, ಬ್ಯಾಂಕ್ ಸಾಲ, ಸಾರಿಗೆ ವ್ಯವಸ್ಥೆ, ಬಸ್ ಪಾಸ್ ನೀಡುತ್ತಿದ್ದವು. ಆದರೆ ಇಂದು ವಿದ್ಯಾಭ್ಯಾಸ ಆಗದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಫಲಿತಾಂಶಗಳು ನಿಗದಿತ ಅವಧಿಗಿಂತ ಕೆಲ ದಿನ ಮುಂಚಿತವಾಗಿ ಅಥವಾ ಕೆಲ ದಿನ ತಡವಾಗಿ ಬರುತ್ತಿದ್ದವು. ಆದರೆ ಈಗ ಪರೀಕ್ಷೆ ನಡೆದು ಒಂದು ವರ್ಷವಾಗಿದ್ದರೂ ಫಲಿತಾಂಶ ನೀಡಲು ತಯಾರಿಲ್ಲ. ಇದನ್ನು ಪ್ರಶ್ನಿಸಿದರೆ ಒಬ್ಬರೂ ಮತ್ತೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ. ನೀವು ಯಾವುದೇ ಕಾಲೇಜು, ವಿವಿಗೆ ಹೋಗಿ ಎನ್ಇಪಿ ಅಂದರೆ ಏನು ಎಂದು ಹೋಗಿ ಕೇಳಿ. ಅವರು ನಮಗೆ ಗೊತ್ತಿಲ್ಲ. ಸರ್ಕಾರ ಜಾರಿಗೆ ತಂದಿದೆ ಸರ್ಕಾರ ನೌಕರರು ನಾವು ಇದರ ಬಗ್ಗೆ ಧ್ವನಿ ಎತ್ತುವಂತಿಲ್ಲ ಎಂದು ಪ್ರಾಂಶುಪಾಲರು ಹೇಳುತ್ತಾರೆ.

ಇನ್ನು ವಿದ್ಯಾರ್ಥಿ ವೇತನ ವಿಚಾರಕ್ಕೆ ಬಂದರೆ ಕೋವಿಡ್ ಸಮಯದಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಆ ಮೊತ್ತ ಸರ್ಕಾರದ ಬಳಿಯೇ ಇದೆ. ಕೋವಿಡ್ ನಂತರವೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಸುಮಾರು 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಶಿಕ್ಷಣ ನಿಲ್ಲಿಸಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕಾಲೇಜಿನಲ್ಲಿ ನಿನ್ನ ವಿದ್ಯಾರ್ಥಿ ವೇತನ ಹಣ ಬಂದಿಲ್ಲ, ನೀನೇ ಶುಲ್ಕ ಪಾವತಿ ಮಾಡು ಎಂದು ಒತ್ತಡ ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ನಿಲ್ಲಿಸಬೇಕಾಗುತ್ತದೆ. ಈ ಸಮಯದಲ್ಲಿ 10ನೇ ಹಾಗೂ ಪಿಯುಸಿ ಅಂಕಪಟ್ಟಿಯನ್ನು ನೀಡದೇ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಶುಲ್ಕ ನೀಡಿದರೆ ಹಿಂದಿರುಗಿಸುವುದಾಗಿ ಹೇಳುತ್ತಾರೆ.

ರಾಜ್ಯದ ಶೇ.90ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಹಿಂದಿನ ಸರ್ಕಾರಗಳು ಉಚಿತ ಬಸ್ ಪಾಸ್ ನೀಡಿದ್ದವು. ಆದರೆ ಈಗ ಪರಿಶಿಷ್ಟ ಸಮುದಾಯದವರಿಗೆ ಉಚಿತ ಪಾಸ್ ನೀಡಿದ್ದು, ಇದರ ಬಗ್ಗೆ ನಮಗೆ ಆಕ್ಷೇಪವಿಲ್ಲ. ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು. ಬಸ್ ಕೊರತೆಯಿಂದ ಕಾಲೇಜು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು ಕೀರ್ತಿ ಗಣೇಶ್ ಆರೋಪಿಸಿದ್ದಾರೆ.

ರ್ಕಾರಿ ಕಾಲೇಜುಗಳಲ್ಲಿ ಖಾಸಗಿ ಕಾಲೇಜು ರೀತಿಯಲ್ಲಿ ಶುಲ್ಕ ಏರಿಕೆ ಮಾಡಲಾಗಿದೆ. ಖಾಸಗಿ ಕಾಲೇಜಿನ ಜತೆ ಸ್ಪರ್ಧೆಗಿಳಿದು ಶುಲ್ಕ ಏರಿಕೆ ಮಾಡುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸರ್ಕಾರ, ವಿವಿಗಳಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ರಾಜ್ಯದ ಎಲ್ಲ ವಿದ್ಯಾರ್ಥಿಗಳ ಅಭಿಪ್ರಾಯ ಪಡೆದು ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಲು ರಾಜ್ಯಾದ್ಯಂತ ಡಿ.17ರಂದು ರಾಜ್ಯ ಮಟ್ಟದ ಬಂದ್ ಗೆ ಕರೆ ನೀಡಲಾಗುತ್ತಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಆಕ್ರೋಶ ಮತ್ತಷ್ಟು ಹೆಚ್ಚಲಿದೆ ಎಂದಿದ್ದಾರೆ.

ಸರಿಯಾದ ಸಮಯಕ್ಕೆ ಫಲಿತಾಂಶ ಸಿಗುತ್ತಿಲ್ಲ, ವಿದ್ಯಾರ್ಥಿ ವೇತನ ನೀಡುತ್ತಿಲ್ಲ

ರಾಜ್ಯದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಫಲಿತಾಂಶ ಸಿಗುತ್ತಿಲ್ಲ, ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಉಚಿತ ಬಸ್ ಪಾಸ್ ನೀಡುತ್ತಿಲ್ಲ, ಸರ್ಕಾರಿ ಶಿಕ್ಷಣ ಕೇಂದ್ರಗಳಲ್ಲಿ ಶುಲ್ಕ ಏರಿಕೆ, ವಿದ್ಯಾರ್ಥಿ ನಿಲಯಗಳ ಸೌಲಭ್ಯಗಳಿಲ್ಲ. ಇದೆಲ್ಲದರ ಜತೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಇದೆಲ್ಲದರಿಂದ ಮನನೊಂದು ಹಲವು ವಿದ್ಯಾರ್ಥಿಗಳು ರಾಜ್ಯಾದ್ಯಂತ ಎನ್ಎಸ್ ಯುಐಗೆ ದೂರು ಸಲ್ಲಿಸಿದ್ದಾರೆ. ಇದನ್ನು ಮಾಧ್ಯಮಗಳ ಮುಂದೆ ಇಟ್ಟು ವಿದ್ಯಾರ್ಥಿಗಳ ಧ್ವನಿಯಾಗುತ್ತಿದ್ದೇವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ ಯುಐ ಅಧ್ಯಕ್ಷ ಲಕ್ಷ್ಯರಾಜ್ ಹೇಳಿದ್ದಾರೆ.

IPL_Entry_Point

ವಿಭಾಗ