ಕನ್ನಡ ಸುದ್ದಿ  /  Karnataka  /  Mysuru Dasara 2022:do You Have Any Plans For A Tour During This Dasara Check This Ksrtc Special Tour Packages

Mysuru Dasara 2022: ದಸರಾ ರಜೆ ಬಂತಲ್ವಾ? ಟೂರ್‌ ಏನಾದ್ರೂ ಪ್ಲ್ಯಾನ್‌ ಮಾಡಿದ್ರಾ?; ಮೈಸೂರು, ಮಡಿಕೇರಿ, ಊಟಿ ಪ್ರವಾಸ ಮಾಡ್ತೀರಾ?

Dasara Tour Package by KSRTC: ಮೈಸೂರು ದಸರಾಕ್ಕೆ ಬೆರಳೆಣಿಕೆ ದಿನವಷ್ಟೇ ಬಾಕಿ. ದಸರಾ ರಜೆಯೂ ಬಂದಿದೆ. ಸಾಮಾನ್ಯವಾಗಿ ಇದು ಪ್ರವಾಸದ ಅವಧಿ. ಒಂದೇ ದಿನದ ಪ್ರವಾಸ ಮತ್ತು ವಾರದ ಪ್ರವಾಸಕ್ಕೂ ಇದು ಸೂಕ್ತ ಕಾಲ. ಮೈಸೂರು, ಮಡಿಕೇರಿ, ಊಟಿ ಸುತ್ತಮುತ್ತ ಕೆಎಸ್‌ಆರ್‌ಟಿಸಿ ದಸರಾ ಟೂರ್‌ ಪ್ಯಾಕೇಜ್‌ ಸೇವೆ ಒದಗಿಸಲಾರಂಭಿಸಿದೆ. ಇದರ ವಿವರ ಇಲ್ಲಿದೆ.

ಮೈಸೂರು ದಸರಾ ಟೂರ್‌ ಪ್ಯಾಕೇಜ್‌
ಮೈಸೂರು ದಸರಾ ಟೂರ್‌ ಪ್ಯಾಕೇಜ್‌

ಬೆಂಗಳೂರು: ನಾಡಿನಾದ್ಯಂತ ಈಗ ದಸರಾ ಸಂಭ್ರಮ. ಅನೇಕರು ಪ್ರವಾಸ ಹೊರಟಿರಬಹುದು. ಇನ್ನೂ ಅನೇಕರು ಎಲ್ಲಿ ಹೋಗೋದು ಎಂದು ಇನ್ನೂ ತಲೆಕೆಡಿಸಿಕೊಂಡಿರಬಹುದು. ಮೈಸೂರು, ಮಡಿಕೇರಿ, ಊಟಿ ಪ್ರವಾಸ ಮಾಡುತ್ತೀರಾದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಟೂರ್‌ ಪ್ಯಾಕೇಜ್‌ ಕಡೆಗೊಮ್ಮೆ ದೃಷ್ಟಿಹಾಯಿಸಬಹುದು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್ ಆರ್ ಟಿಸಿ) ಮೈಸೂರು ದಸರಾ ಅಂಗವಾಗಿ ಕರ್ನಾಟಕ ಸಾರಿಗೆ (ವೇಗದೂತ), ರಾಜಹಂಸ, ಸೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಶ್ವಲ್ ) ಹಾಗೂ ಅಂಬಾರಿ ಕ್ಲಬ್ ಕ್ಲಾಸ್ ಸಾರಿಗೆ ಸೇವೆಗಳ ಜತೆಗೆ ವಿಶೇಷ ಪ್ಯಾಕೇಜ್ ಟೂರ್‌ ಸೇವೆ ಒದಗಿಸುತ್ತಿದೆ. ದಸರಾ ಅವಧಿಯ ಈ ಪ್ಯಾಕೇಜ್‌ ಟೂರ್‌ ಈಗಾಗಲೇ ಶುರುವಾಗಿದ್ದು, ಅ.9 ರತನಕ ಲಭ್ಯವಿರಲಿದೆ.

ಮೈಸೂರು ಸೆಂಟ್ರಲ್‌ ಬಸ್‌ನಿಲ್ದಾಣದಿಂದ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಕೈಗೊಳ್ಳುವ ಪ್ರವಾಸದಲ್ಲಿ ಮೂರು ರೀತಿಯ ವರ್ಗೀಕರಣವನ್ನು ಕೆಎಸ್‌ಆರ್‌ಟಿಸಿ ಮಾಡಿದೆ. ಈ ಮೂರು ಪ್ರವಾಸ್‌ ಪ್ಯಾಕೇಜಲ್ಲಿ ಬೆಳಗ್ಗೆ 6.30ಕ್ಕೆ ಪ್ರವಾಸ ಶುರುವಾಗಲಿದೆ.

ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ (ವಯಸ್ಕರಿಗೆ 400 ರೂ., ಮಕ್ಕಳಿಗೆ 250 ರೂ.)

ಜಲದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ, ನಿಸರ್ಗಧಾಮ, ರಾಜಾಸೀಟ್, ಪಾರಂಗಿ ಮತ್ತು ಕೆಆ‌ಎಸ್. (ವಯಸ್ಕರಿಗೆ 450 ರೂ., ಮಕ್ಕಳಿಗೆ 250 ರೂ.)

ದೇವದರ್ಶಿನಿ: ನಂಜನಗೂಡು, ಬಸ್, ಮುಡುಕುತೊರೆ, ತಲಕಾಡು, ಸೋಮನಾಥಮರ, ಶ್ರೀರಂಗಪಟ್ಟಣ, (ವಯಸ್ಕರಿಗೆ 300 ರೂ., ಮಕ್ಕಳಿಗೆ 175 ರೂ.)

ಇದಲ್ಲದೆ, ಮೃಸೂರು ದರ್ಶಿನಿ, ಮೈಸೂರು ನಗರ ದೀಪಾಲಂಕಾರ ದರ್ಶನ ಪ್ರವಾಸದ ಪ್ಯಾಕೇಜನ್ನೂ ಕೆಎಸ್‌ಆರ್‌ಟಿಸಿ ಒದಗಿಸಿದೆ.

ಮೈಸೂರು ದರ್ಶಿನಿ: ನಗರ ವೋಲ್ಟ್ ಬಸ್‌ಗಳಲ್ಲಿ ನಂಜನಗೂಡು, ಚಾಮುಂಡಿಬೆಟ್ಟ ಮೃಗಾಲಯ, ಅರಮನೆ, ಶ್ರೀರಂಗಪಟ್ಟಣ, ಕಆರ್‌ಎಸ್.(ವಯಸ್ಕರಿಗೆ 400 ರೂ., ಮಕ್ಕಳಿಗೆ 200 ರೂ.)

ಮೈಸೂರು ನಗರ ದೀಪಾಲಂಕಾರ ದರ್ಶನ: ಮೈಸೂರು ನಗರ ಬಸ್‌ ನಿಲ್ದಾಣದಿಂದ ಅರಮನೆ ರಸ್ತೆ, ಮೈಸೂರು ಕೇಂದ್ರೀಯ ಬಸ್ ನಿಲ್ದಾಣ ರಸ್ತೆ, ಎಲ್‌ ಐಸಿ ವೃತ್ತ, ಬಂಬೂ ಬಜಾರ್ ರಸ್ತೆ, ರೈಲ್ವೆ ನಿಲ್ದಾಣ ವೃತ್ತ, ಜೆಎಲ್‌ ಬಿ ರಸ್ತೆ(ಮೂಡ ಕಚೇರಿ ರಸ್ತೆ) ಮತ್ತು ನಗರ ಬಸ್ ನಿಲ್ದಾಣ. (ವಯಸ್ಕರಿಗೆ 200 ರೂ., ಮಕ್ಕಳಿಗೆ 150 ರೂ.). ಈ ಪ್ರವಾಸದ ವೋಲ್ವೊ ಬಸ್‌ ಸಂಜೆ 6ಕ್ಕೆ ಹೊರಡಲಿವೆ.

ಇನ್ನು ಮೈಸೂರಿಂದ ಹೊರಗೆ ಅಂದರೆ ಐರಾವತ ಕ್ಲಬ್ ಕ್ಲಾಸ್ ಪ್ರವಾಸ ಪ್ಯಾಕೇಜ್‌ ಇದೆ. ಇದರಲ್ಲಿ,

ಮಡಿಕೇರಿ ಪ್ಯಾಕೇಜ್‌: ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ, ರಾಜಾ ಸೀಟ್, ಅಬ್ಬಿಫಾಲ್ಸ್, (ವಯಸ್ಕರಿಗೆ 1200 ರೂ.,ಮಕ್ಕಳಿಗೆ 1000 ರೂ.)

ಊಟಿ ಪ್ಯಾಕೇಜ್‌: ಊಟಿ, ಬಟಾನಿಕಲ್ ಗಾರ್ಡನ್, ಇಟಾಲಿಯನ್ ರೋಸ್ ಗಾರ್ಡನ್, ಬೋಟ್ ಹೌಸ್, (ವಯಸ್ಕರಿಗೆ 1600 ರೂ., ಮಕ್ಕಳಿಗೆ 1200 ರೂ.)

ಹೆಚ್ಚಿನ ಮಾಹಿತಿ ಮತ್ತು ಸೀಟ್‌ ಬುಕ್‌ ಮಾಡಲು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌  ಗಮನಿಸಿ.

ದಕ್ಷಿಣಕನ್ನಡದ ಮಂಗಳೂರು ದರ್ಶನ

Navaratri 2022: ಈ ದಸರಾ ರಜೆಗೆ ಏನ್‌ ಪ್ಲ್ಯಾನ್‌ ಮಾಡ್ಕೊಂಡಿದ್ದೀರಿ? ಒಂದೇ ದಿನ 9+1 ದೇವಸ್ಥಾನಗಳು, ಒಂದು ಬೀಚ್‌ ನೋಡೋ ಆಸೆ ಇದೆಯಾ? ನಮ್ಮ ಕೆಎಸ್‌ಆರ್‌ಟಿಸಿ (KSRTC) ಯವರು ತೋರಿಸ್ತಾರಂತೆ! ಏನಿದು ಮಂಗಳೂರು ದಸರಾ ದರ್ಶನ (Mangaluru Dasara Darshana)? ಇಲ್ಲಿದೆ ವಿವರ. Navaratri 2022: ಒಂದೇ ದಿನ 9 ದೇವಿ ದೇವಸ್ಥಾನಕ್ಕೆ ಭೇಟಿ?! ಕಣ್ಣರಳಿಸಿ ನೋಡಬೇಡಿ; ಬೀಚ್‌ಗೂ ಹೋಗಬಹುದು! ಈ ನವರಾತ್ರಿ ಮಂಗಳೂರಲ್ಲಿ ಆಚರಿಸಿ!

IPL_Entry_Point