ಕನ್ನಡ ಸುದ್ದಿ  /  Karnataka  /  Odisha Train Accident First Team Of Kannadigas To Land In Karnataka Led By Minister Santosh Lad Rmy

Odisha Train Accident: ಒಡಿಶಾ ರೈಲು ದುರಂತ; ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಕರ್ನಾಟಕಕ್ಕೆ ಬಂದಿಳಿದ ಕನ್ನಡಿಗರ ಮೊದಲ ತಂಡ

ತಂಡದಲ್ಲಿದ್ದವರ ಪೈಕಿ ಸುಮಾರು ಹದಿನೆಂಟು ಮಂದಿ ಫ್ಲೈ ಬಸ್ ನಲ್ಲಿ ಮೈಸೂರಿಗೆ ತೆರಳಲಿದ್ದಾರೆ. ಉಳಿದಂತೆ ಹಲವರು ಹಾಸನ, ಚಿಕ್ಕಮಗಳೂರು ಮತ್ತಿತರೆಡೆ ಪ್ರಯಾಣಿಸಲಿದ್ದಾರೆ.

ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಗಾಯಗೊಂಡಿದ್ದ ಕನ್ನಡಿಗರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಮೊದಲ ತಂಡ ರಾಜ್ಯಕ್ಕೆ ಆಗಮಿಸಿದೆ
ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಗಾಯಗೊಂಡಿದ್ದ ಕನ್ನಡಿಗರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಮೊದಲ ತಂಡ ರಾಜ್ಯಕ್ಕೆ ಆಗಮಿಸಿದೆ

ಬೆಂಗಳೂರು: ಒಡಿಶಾದಲ್ಲಿ ನಡೆದ ರೈಲು ದುರಂತದಲ್ಲಿ (Odisha Train Accident) ಗಾಯಗೊಂಡಿದ್ದ ಕನ್ನಡಿಗರ (Kannadiga) ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮೊದಲ ತಂಡ ಬಾಲಸೋರ್‌ನಿಂದ ಕರ್ನಾಟಕಕ್ಕೆ (Karnataka) ಆಗಮಿಸಿದೆ.

ತಂಡದಲ್ಲಿದ್ದವರ ಪೈಕಿ ಸುಮಾರು ಹದಿನೆಂಟು ಮಂದಿ ಫ್ಲೈ ಬಸ್ ನಲ್ಲಿ ಮೈಸೂರಿಗೆ ತೆರಳಲಿದ್ದಾರೆ. ಉಳಿದಂತೆ ಹಲವರು ಹಾಸನ, ಚಿಕ್ಕಮಗಳೂರು ಮತ್ತಿತರೆಡೆ ಪ್ರಯಾಣಿಸಲಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸಚಿವ ಸಂತೋಷ್ ಲಾಡ್ ಅವರ (Minister Santosh Lad) ಆಪ್ತ ಸಿಬ್ಬಂದಿ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳ ಉಪಸ್ಥಿತರಿದ್ದು, ಸಕಲ ತಯಾರಿಯಲ್ಲಿ ನಿರತಕಾರಿದ್ದಾರೆ. ಎಡನೇ ತಂಡ ಕೂಡ ಇಂದೇ (ಜೂನ್ 4, ಭಾನುವಾರ) ಆಗಮಿಸುತ್ತಿದೆ ಎಂದು ಹೇಳಲಾಗಿದೆ.

ಯಶವಂತಪುರ-ಹೌರಾ ರೈಲಿನಲ್ಲಿದ್ದ ಚಿಕ್ಕಮಗಳೂರು ಮೂಲದ 110 ಮಂದಿ ಕನ್ನಡಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರೆಲ್ಲರೂ ತೀರ್ಥಯಾತ್ರೆ ತೆರಳಿದ್ದರು.

ಚಿಕ್ಕಮಗಳೂರು ಜಿಲ್ಲೆ ಕಳಸಾ ತಾಲೂಕಿನ ನಿವಾಸಿಗಳಾದ 110ಕ್ಕೂ ಹೆಚ್ಚು ಕನ್ನಡಿಗರು ಜೈನತೀರ್ಥ ಕೇತ್ರವಾದ ಜಾರ್ಖಂಡ್‌ನ ಸಮ್ಮೇದ ಶಿಖರಕ್ಕೆ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಯಶ್ವಂತಪುರ ಹೌರಾ ಎಕ್ಸ್‌ಪ್ರೆಸ್ ರೈಲು ಮೂಲಕ ಹೊರಟ್ಟಿದ್ದರು.

ರೈಲು ಕೋಲ್ಕತ್ತಾ ಬಳಿ ಇಂಜಿನ ಬದಲಿಸಿದ ಪರಿಣಾಮ ಇವರಿದ್ದ ಬೋಗಿಗಳು ಮುಂದಕ್ಕೆ ಶಿಫ್ಟ್ ಆಗಿವೆ. ಅಪಘಾತದಲ್ಲಿ ರೈಲಿನ ಕೊನೆಯ ನಾಲ್ಕು ಬೋಗಿಗಳಿಗೆ ಡಿಕ್ಕಿ ಹೊಡಿದ್ದ ಪರಿಣಾಮ ಇವರೆಲ್ಲಾ ಪ್ರಣಾಪಾಯದಿಂದ ಪಾರಾಗಿದ್ದು, ಸಚಿವ ಸಂತೋಷ್ ಲಾಡ್ ಅವರ ನೇತೃತ್ವದ ತಂಡದ ನೆರವಿನಿಂದ ಕರ್ನಾಟಕಕ್ಕೆ ವಾಪಸ್ ಆಗ್ತಿದ್ದಾರೆ.

ಘಟನೆಯಲ್ಲಿ ಯಾರಾದರೂ ಕನ್ನಡಿಗರು ಸಿಲುಕಿದ್ಧಾರೆಯೇ ಎನ್ನುವ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಕೆಲವರು ಯಶವಂತಪುರದಿಂದ ಹೊರಟಿದ್ದ ರೈಲುಕಿನ ಸಿಲುಕಿರುವ ಮಾಹಿತಿಯಿದ್ದು, ಅವರ ರಕ್ಷಣೆಗೆ ತಂಡವನ್ನು ರಚಿಸಿಕೊಂಡು ಮುನ್ನಡೆಯುವಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು.

ಕರ್ನಾಟಕದಲ್ಲಿರುವ ವಿಪತ್ತು ನಿರ್ವಹಣೆ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ. ಆಯುಕ್ತ ಮನೋಜ್‌ ರಾಜನ್‌ ಕೂಡ ಒಡಿಶಾದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದಾರೆ. ಸಚಿವರ ನೇತೃತ್ವದ ತಂಡ ಘಟನೆ ನಡೆದ ಸ್ಥಳಕ್ಕೆ ತೆರಳಲಿ ಅಲ್ಲಿನ ಅಧಿಕಾರಿಗಳ ನೆರವಿನಿಂದ ಕನ್ನಡಿಗರ ರಕ್ಷಣೆ ಕೆಲಸವನ್ನು ಮಾಡುತ್ತಿದೆ.

ಒಡಿಶಾದ ಬಾಲಸೋರ್‌ ಬಳಿ ಶುಕ್ರವಾರ (ಜೂನ್ 2) ಸಂಜೆ ನಡೆದ ಭೀಕರ ರೈಲು ಅಪಘಾತದಲ್ಲಿ ಸಾವಿನ ಸಂಖ್ಯೆ 294ಕ್ಕೆ ಏರಿಕೆಯಾಗಿದ್ದು, 1,110ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಗೂಡ್ಸ್‌ ರೈಲು ಮತ್ತು ಎರಡು ಎಕ್ಸ್‌ಪ್ರೆಸ್‌ ರೈಲುಗಳ ಬೋಗಿಗಳು ಹಳಿ ತಪ್ಪಿವೆ. ಈ ಅಪಘಾತದಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ (12841)ನ 10-12 ಬೋಗಿಗಳು ಬಾಲೇಶ್ವರ ಬಳಿ ಹಳಿತಪ್ಪಿ ಎದುರಿನ ಹಳಿಯಲ್ಲಿ ಬಿದ್ದಿವೆ.

ಸ್ವಲ್ಪ ಸಮಯದ ನಂತರ, ಯಶವಂತಪುರದಿಂದ ಹೌರಾಕ್ಕೆ ಹೋಗುತ್ತಿದ್ದ ಯಶವಂತಪುರ ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ (12864) ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಅದರ 3-4 ಬೋಗಿಗಳು ಹಳಿತಪ್ಪಿದವು ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದರು.

IPL_Entry_Point

ವಿಭಾಗ