ಕನ್ನಡ ಸುದ್ದಿ  /  Karnataka  /  Spat Continues Between Women Officers D Roopa And Rohini Sindhuri

IAS vs IPS: ಮತ್ತೆ ಸಿಡಿದ ಐಪಿಎಸ್ ಅಧಿಕಾರಿ ಡಿ ರೂಪಾ; ಪತ್ರಿಕೆಯೊಂದರ ಲೇಖನ ಪ್ರಸ್ತಾಪಿಸಿ ರೋಹಿಣಿ ಸಿಂಧೂರಿ ವಿರುದ್ಧ ಎಫ್ ಬಿ ಫೋಸ್ಟ್

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಲೇಖನ ಪ್ರಸ್ತಾಪಿಸಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತೆ ಫೇಸ್ ಬುಕ್ ವಾರ್ ಮುಂದುವರೆಸಿದ್ದಾರೆ.

ಐಪಿಎಸ್ ಅಧಿಕಾರಿ ಡಿ ರೂಪಾ (ಫೋಟೋ-ANI)
ಐಪಿಎಸ್ ಅಧಿಕಾರಿ ಡಿ ರೂಪಾ (ಫೋಟೋ-ANI)

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವೆ ಸಾರ್ವಜನಿಕವಾಗಿ ನಡೆಯುತ್ತಿರುವ ಜಗಳ ಮುಂದುವರೆದಿದೆ.

ರೋಹಿಣಿ ಸಿಂಧೂರಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪೋಸ್ಟ್ ಗಳನ್ನು ಮಾಡಿದ್ದ ಡಿ ರೂಪಾ ಅವರು ಸರ್ಕಾರದ ಎಚ್ಚರಿಕೆಯ ಹೊರತಾಗಿಯೂ ಪತ್ರಿಕೆಯೊಂದರ ಕೆಲ ವರದಿಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಸಿಡಿದಿದ್ದಾರೆ.

ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣ, ಮಾಧ್ಯಮ ಹಾಗೂ ಸಾರ್ವಜನಿಕವಾಗಿ ಪೋಸ್ಟ್ ಅಥವಾ ಹೇಳಿಕೆ ನೀಡಬಾರದು ಎಂದು ಈ ಇಬ್ಬರು ಅಧಿಕಾರಿಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಕೂಡ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದರು. ಆದರೂ ಡಿ ರೂಪಾ ಅವರ ಸಿಟ್ಟು ತಣ್ಣಗಾಗುವಂತೆ ಕಾಣುತ್ತಿಲ್ಲ.

ಕಳೆದ ಭಾನುವಾರ (ಫೆ.26) ಡಿ ರೂಪಾ ಅವರು ಸಿಂಧೂರಿ ವಿರುದ್ಧ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಎಂದು ಪತ್ರಿಕೆಯೊಂದರ ಮೂರು ಲೇಖನಗಳನ್ನು ಹಂಚಿಕೊಂಡಿದ್ದಾರೆ. ಮಾನ್ಯ ಸಂಸದರ ಪ್ರಕಾರ ಡಿಸಿ ಆಗಿದ್ದ ರೋಹಿಣಿ ಸಿಂಧೂರಿ ಕೋವಿಡ್ ಸಮಯದ ಮರಣ ಸಂಖ್ಯೆ ಮುಚ್ಚಿಟ್ಟರು. ಯಾಕೆ. ಇದರ ಮೇಲೆ ಕ್ರಮ ಆಯಿತೇ? ಎಂದು ಪ್ರಶ್ನಿಸಿದ್ದಾರೆ ಅಂತೇಳಿ 2021ರ ಜೂನ್ ನಲ್ಲಿ ಪ್ರಕಟವಾದ ಪತ್ರಿಕೆಯ ಲೇಖನದ ಲಿಂಕ್‌ ಅನ್ನು ರೂಪಾ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲೆಯ ಕೋವಿಡ್-19 ಸಾವುಗಳ ದತ್ತಾಂಶವನ್ನು ಅಂದಿನ ಜಿಲ್ಲಾಧಿಕಾರಿ ಸಿಂಧೂರಿ ಅವರನ್ನು ಗುರಿಯಾಗಿಸಿಕೊಂಡು ಜಿಲ್ಲಾಡಳಿತದ ವಿರುದ್ಧ ಮಾಡಿದ ಆರೋಪಗಳನ್ನು ಲೇಖನದಲ್ಲಿ ಎತ್ತಿ ತೋರಿಸಲಾಗಿದೆ.

ಮತ್ತೊಂದು ಪೋಸ್ಟ್‌ನಲ್ಲಿ, ಐಪಿಎಸ್ ಅಧಿಕಾರಿಯು ಐಎಎಸ್ ಅಧಿಕಾರಿ ಡಿ ರೂಪಾ ಅವರು, ಮೈಸೂರಿನ ಆಡಳಿತ ತರಬೇತಿ ಸಂಸ್ಥೆ- ATI ನಿಂದ ರೋಹಿಣಿ ಸಿಂಧೂರಿ ಅವರು ಸರ್ಕಾರಿ ಸಾಮಾನುಗಳನ್ನು ತೆಗೆದುಕೊಂಡು ಹೋದದ್ದು, ಅವುಗಳು ಡಿಸಿ ಮನೆಯಲ್ಲಿ ಕೂಡ ಇಲ್ಲ, ಎಲ್ಲಿ ಹೋದವು ಎಂದಾಗಿ ಸಿಂಧೂರಿ ಅವರಿಗೆ ನೊಟೀಸ್ ಜಾರಿ ಮಾಡಿದ್ದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ?

ಸರ್ಕಾರಿ ವಸ್ತು 50 ರೂಪಾಯಿ ಇರಲಿ, 50 ಕೋಟಿ ಇರಲಿ, ತಪ್ಪು ತಪ್ಪೇ. 1000 ರೂಪಾಯಿ ಲಂಚ ತೆಗೆದುಕೊಂಡವರು ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ. ಕಾನೂನು ಡಿಸಿಗು ಗುಮಸ್ತನಿಗು ಒಂದೇ ಎಂದು ಫೇಸ್‌ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರು ಮಾಡಿರುವ ಭ್ರಷ್ಟಾಚಾರದ ಆರೋಪಗಳ ಸಂಬಂಧ ರಾಜ್ಯ ಸರ್ಕಾರ ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖೆ ಮಟ್ಟದ ತನಿಖೆಗೆ ಆದೇಶಿಸಿತ್ತು. ಸಾರ್ವಜನಿಕವಾಗಿ ಈ ಇಬ್ಬರೂ ಅಧಿಕಾರಿಗಳು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದರು. ಇದು ಸರ್ಕಾರವನ್ನು ಮುಜುಗರಕ್ಕೀಡಾಗುವಂತೆ ಮಾಡಿತ್ತು. ವಿಪಕ್ಷಗಳು ಇದೇ ವಿಷಯದಲ್ಲಿ ಸರ್ಕಾರ ವಿರುದ್ಧ ದೂರಿದ್ದರು. ಸರ್ಕಾರ ಇಬ್ಬರನ್ನು ಸ್ಥಳ ಸೂಚಿಸದೆ ವರ್ಗಾವಣೆ ಮಾಡುವ ಮೂಲಕ ಕ್ರಮ ಕೈಗೊಂಡಿತ್ತು.

ಸಿಂಧೂರಿ ಅವರ ವಿರುದ್ಧ ಡಿ ರೂಪಾ ಭ್ರಷ್ಟಾಚಾರ ಆರೋಪ ಮಾಡಿದ್ದರು. ಜೊತೆಗೆ ಅವರ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಇದು ಭಾರಿ ಸುದ್ದಿಯಾಗಿತ್ತು. ಈ ಸಂಬಂಧ ರೋಹಿಣಿ ಸಿಂಧೂರಿ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮಗಳಲ್ಲಿ ಸಿಂಧೂರಿ ಅವರಿಗೆ ಸಂಬಂಧಿಸಿದ ಯಾವುದೇ ರೀತಿಯ ಪೋಸ್ಟ್ ಗಳನ್ನು ಮಾಡದಂತೆ ಸೂಚಿಸಿತ್ತು.

IPL_Entry_Point

ವಿಭಾಗ