ಕನ್ನಡ ಸುದ್ದಿ  /  Lifestyle  /  Vastu Tips For North East Direction

Vastu Tips for North East: ಈಶ್ವರ ಅಧಿಪತಿಯಾಗಿರುವ ಈಶಾನ್ಯ ದಿಕ್ಕು ಹೇಗಿರಬೇಕು..ವಾಸ್ತುಶಾಸ್ತ್ರ ಏನು ಹೇಳುತ್ತದೆ..?

ವಾಸ್ತು ಪ್ರಕಾರ ಪ್ರತಿಯೊಂದು ದಿಕ್ಕಿಗೂ ಒಬ್ಬ ಅಧಿಪತಿ ಇರುತ್ತಾನೆ. ಪೂರ್ವ ದಿಕ್ಕನ್ನು ಇಂದ್ರ, ಪಶ್ಚಿಮವನ್ನು ವರುಣ , ಉತ್ತರವನ್ನು ಕುಬೇರ ಮತ್ತು ದಕ್ಷಿಣ ದಿಕ್ಕನ್ನು ಯಮ ಆಳುತ್ತಾನೆ. ಅದೇ ರೀತಿ ಈಶಾನ್ಯದಲ್ಲಿ ಈಶ್ವರ, ಆಗ್ನೇಯದಲ್ಲಿ ಅಗ್ನಿ, ವಾಯುವ್ಯದಲ್ಲಿ ವಾಯು ಮತ್ತು ನೈಋತ್ಯದಲ್ಲಿ ರಾಕ್ಷಸ ನೆಲೆಸಿದ್ದಾನೆ ಎಂದು ನಂಬಲಾಗಿದೆ.

 ಈಶಾನ್ಯ ದಿಕ್ಕಿನ ವಾಸ್ತು
ಈಶಾನ್ಯ ದಿಕ್ಕಿನ ವಾಸ್ತು (PC: Pixaby)

ಇಂದಿನ ಆಧುನಿಕ ಯುಗದಲ್ಲಿ ವಾಸ್ತು ಶಾಸ್ತ್ರ ಬಹಳ ಮುಖ್ಯ. ಇನ್ನೂ ಅನೇಕ ಜನರು ಕೆಲವು ಶುಭ ಕಾರ್ಯಗಳನ್ನು ಮಾಡಲು, ಮನೆಯನ್ನು ಕಟ್ಟಲು ವಾಸ್ತು ಶಾಸ್ತ್ರವನ್ನು ಅನುಸರಿಸಿ ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ. ಏಕೆಂದರೆ ಯಾವ ದಿಕ್ಕಿಗೆ ಯಾವ ಕೊಠಡಿಗಳು ಇರಬೇಕು. ಪೀಠೋಪಕರಣಗಳ ವಿವರಗಳನ್ನು ಈ ವಾಸ್ತುಶಾಸ್ತ್ರದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.

ವಾಸ್ತು ಪ್ರಕಾರ ಪ್ರತಿಯೊಂದು ದಿಕ್ಕಿಗೂ ಒಬ್ಬ ಅಧಿಪತಿ ಇರುತ್ತಾನೆ. ಪೂರ್ವ ದಿಕ್ಕನ್ನು ಇಂದ್ರ, ಪಶ್ಚಿಮವನ್ನು ವರುಣ , ಉತ್ತರವನ್ನು ಕುಬೇರ ಮತ್ತು ದಕ್ಷಿಣ ದಿಕ್ಕನ್ನು ಯಮ ಆಳುತ್ತಾನೆ. ಅದೇ ರೀತಿ ಈಶಾನ್ಯದಲ್ಲಿ ಈಶ್ವರ, ಆಗ್ನೇಯದಲ್ಲಿ ಅಗ್ನಿ, ವಾಯುವ್ಯದಲ್ಲಿ ವಾಯು ಮತ್ತು ನೈಋತ್ಯದಲ್ಲಿ ರಾಕ್ಷಸ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಈಶ್ವರನು ಅಧಿಪತಿಯಾಗಿರುವ ಈಶಾನ್ಯ ದಿಕ್ಕು ಹೇಗಿರಬೇಕು..?ಈ ದಿಕ್ಕಿಗೆ ಯಾವ ವಸ್ತುಗಳನ್ನು ಇಟ್ಟರೆ ಶುಭ..? ಐಶ್ವರ್ಯ ಪ್ರಾಪ್ತಿಯಾಗುತ್ತದೆ..?ಇದರಲ್ಲಿ ಯಾವ ವಸ್ತುಗಳನ್ನು ಇಡಬಾರದು..? ಎಂಬ ವಿಚಾರವನ್ನು ತಿಳಿಯುವುದು ಬಹಳ ಮುಖ್ಯ.

ನಿಮ್ಮ ಮನೆಯನ್ನು ನಿರ್ಮಿಸುವಾಗ, ನೀವು ಈಶಾನ್ಯ ದಿಕ್ಕಿನಲ್ಲಿ ಪೂಜಾ ಮಂದಿರವನ್ನು ಕಟ್ಟಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಈ ಸ್ಥಳದಲ್ಲಿ ಪೂಜಾ ಕೊಠಡಿ ಇದ್ದರೆ ದೇವರ ಆಶೀರ್ವಾದ ಸಿಗುತ್ತದೆ. ಇದಲ್ಲದೆ, ನಿಮ್ಮ ಮನೆಯ ವಾತಾವರಣವು ಯಾವಾಗಲೂ ಆಹ್ಲಾದಕರವಾಗಿರುತ್ತದೆ. ಆದ್ದರಿಂದ ಯಾವುದೇ ಸಂದರ್ಭದಲ್ಲಿ ಇದನ್ನು ಮರೆಯಬೇಡಿ. ಪೂಜಾ ಮಂದಿರದ ನಿರ್ಮಾಣವನ್ನು ಪ್ರಾರಂಭಿಸುವ ಮೊದಲು ಹಸುವಿಗೆ ಪೂಜೆಯನ್ನು ಮಾಡಿ.

ನಿಮ್ಮ ಮನೆಯ ಈಶಾನ್ಯದಲ್ಲಿರುವ ಕೋಣೆ ಅಥವಾ ಸ್ಥಳವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ಇದು ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಆದ್ದರಿಂದ ಈ ಕೋಣೆಯನ್ನು ಸ್ವಚ್ಛಗೊಳಿಸುವುದರಿಂದ ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳನ್ನು ಹೊಡೆದೋಡಿಸಬಹುದು. ನಿಮ್ಮ ಮನೆಯು ಯಾವಾಗಲೂ ಧನಾತ್ಮಕ ಶಕ್ತಿಯನ್ನು ಹೊಂದಿರುತ್ತದೆ. ಹಾಗೆಯೇ ಈಶಾನ್ಯದಲ್ಲಿ ಖಾಲಿ ಜಾಗವಿದ್ದರೆ ಅಲ್ಲಿ ತುಳಸಿ ಗಿಡವನ್ನು ನೆಟ್ಟರೆ ಶುಭ ಫಲ ಸಿಗುತ್ತದೆ.

ನಿಮ್ಮ ಮನೆಯಲ್ಲಿ ಮಕ್ಕಳ ಅಥವಾ ವಿದ್ಯಾರ್ಥಿಗಳ ಕೊಠಡಿ ಈಶಾನ್ಯದಲ್ಲಿರಬೇಕು. ಹೀಗೆ ಮಾಡುವುದರಿಂದ ಅವರಲ್ಲಿ ಶಿಕ್ಷಣದ ಆಸಕ್ತಿ ಹೆಚ್ಚುತ್ತದೆ. ಅಂತೆಯೇ, ಈ ದಿಕ್ಕಿನಲ್ಲಿ ನೀರಿನ ಮೂಲಗಳನ್ನು ಖಾತ್ರಿಪಡಿಸಿಕೊಳ್ಳಬೇಕು. ನಿಮ್ಮ ಮನೆಯ ಕಾಂಪೌಂಡ್‌ನಲ್ಲಿರುವ ಖಾಲಿ ಜಾಗದಲ್ಲಿ ಬಾವಿ ಅಥವಾ ಕೊಳವೆ ಬಾವಿಯನ್ನು ನಿರ್ಮಿಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ನಾನಗೃಹವನ್ನು ನಿರ್ಮಿಸಬಾರದು. ಸ್ನಾನಗೃಹ ಈಶಾನ್ಯ ದಿಕ್ಕಿನಲ್ಲಿದ್ದರೆ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ. ಹೊಸದಾಗಿ ಮದುವೆಯಾದ ದಂಪತಿಗಳು ಈಶಾನ್ಯ ದಿಕ್ಕಿನಲ್ಲಿರುವ ಕೋಣೆಯಲ್ಲಿ ಉಳಿಯಬಾರದು. ಹೀಗೆ ಮಾಡಿದರೆ ದಾಂಪತ್ಯ ಜೀವನದಲ್ಲಿ ಜಗಳ ಶುರುವಾಗುತ್ತದೆ.

ಈಶಾನ್ಯ ದಿಕ್ಕಿನಲ್ಲಿ ಯಾವುದೇ ವಸ್ತುಗಳನ್ನು ಇಡಬೇಡಿ. ಈ ಜಾಗವನ್ನು ಬಹಳ ವಿಶಾಲವಾಗಿ ಇಡಬೇಕು. ಆ ಜಾಗದಲ್ಲಿ ವಸ್ತುಗಳನ್ನು ಇಟ್ಟರೆ ನಿಮ್ಮ ಮನೆಯಲ್ಲಿ ಜಗಳವಾಗುವ ಸಂಭವವಿದೆ. ಅದೇ ರೀತಿ ಯಾವುದೇ ಸಂದರ್ಭದಲ್ಲೂ ಈ ದಿಕ್ಕಿಗೆ ಚಪ್ಪಲಿ, ಬೂಟು, ಕಸದ ಬುಟ್ಟಿ ಇತ್ಯಾದಿಗಳನ್ನು ಹಾಕಬಾರದು. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಸಮಸ್ಯೆಗಳು ಆರಂಭವಾಗುವ ಸಾಧ್ಯತೆ ಇದೆ.

ವಿಭಾಗ