ಕನ್ನಡ ಸುದ್ದಿ  /  Nation And-world  /  Aadhaar In Death Certificate Aadhaar Deactivation For A Deceased Person Soon Said News Report

Aadhaar in Death Certificate: ಆಧಾರ್‌ ಬಳಕೆದಾರ ಮೃತನಾದರೆ, ಅವರ ಜತೆಗೆ ಆಧಾರ್‌ ಸಂಖ್ಯೆ ಕೂಡ ಸಾಯಲಿದೆ!

Aadhaar in Death Certificate: ಯುಐಡಿಎಐ, ಜನನ ಪ್ರಮಾಣಪತ್ರಗಳೊಂದಿಗೆ ಆಧಾರ್ ಸಂಖ್ಯೆಗಳನ್ನು ನಿಯೋಜಿಸುವ ಯೋಜನೆಯನ್ನು ಜಾರಿಗೆ ತಂದ ನಂತರ ಈ ಕ್ರಮವು ಬಂದಿದೆ. ಇಲ್ಲಿಯವರೆಗೆ, 20 ಕ್ಕೂ ಹೆಚ್ಚು ರಾಜ್ಯಗಳು ಯೋಜನೆಯನ್ನು ಜಾರಿಗೆ ತಂದಿವೆ. ವ್ಯಕ್ತಿಯ ಸಾವಿನ ಸಂದರ್ಭದಲ್ಲಿಯೂ ಆಧಾರ್ ಅನ್ನು ನಿಷ್ಕ್ರಿಯಗೊಳಿಸುವುದಕ್ಕೆ ಪ್ರಸ್ತುತ ಯಾವುದೇ ಕಾರ್ಯವಿಧಾನವಿಲ್ಲ.

ಆಧಾರ್‌
ಆಧಾರ್‌ (HT File Photo)

ಆಧಾರ್‌ ಬಳಕೆದಾರ ಮೃತನಾದರೆ, ಅವರ ಜತೆಗೆ ಆಧಾರ್‌ ಸಂಖ್ಯೆ ಕೂಡ ಸಾಯಲಿದೆ. ಹೌದು, ಮೃತ ವ್ಯಕ್ತಿಯ ಆಧಾರ್‌ ಕಾರ್ಡ್‌ ನಿಷ್ಕ್ರಿಯಗೊಳಿಸುವ ಕಾರ್ಯವಿಧಾನವನ್ನು ಶೀಘ್ರವೇ ಪರಿಚಯಿಸುವ ಕೆಲಸ ಪ್ರಗತಿಯಲ್ಲಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮತ್ತು ಭಾರತೀಯ ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ಈ ಕೆಲಸದಲ್ಲಿ ನಿರತವಾಗಿವೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಹೇಳಿದೆ.

ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕಾರ್ಯವಿಧಾನವನ್ನು ಜಾರಿಗೊಳಿಸಲಾಗುವುದು. ಈ ಉಪಕ್ರಮದ ಅನುಷ್ಠಾನಕ್ಕೆ ಕುಟುಂಬದ ಸದಸ್ಯರು ಮೃತ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವ ಅಗತ್ಯವಿದೆ. ಅವರ ಅನುಮತಿಯೊಂದಿಗೆ ಮಾತ್ರವೇ ಆಧಾರ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂಬುದನ್ನು ವರದಿ ಉಲ್ಲೇಖಿಸಿದೆ.

ಯುಐಡಿಎಐ, ಜನನ ಪ್ರಮಾಣಪತ್ರಗಳೊಂದಿಗೆ ಆಧಾರ್ ಸಂಖ್ಯೆಗಳನ್ನು ನಿಯೋಜಿಸುವ ಯೋಜನೆಯನ್ನು ಜಾರಿಗೆ ತಂದ ನಂತರ ಈ ಕ್ರಮವು ಬಂದಿದೆ. ಇಲ್ಲಿಯವರೆಗೆ, 20 ಕ್ಕೂ ಹೆಚ್ಚು ರಾಜ್ಯಗಳು ಯೋಜನೆಯನ್ನು ಜಾರಿಗೆ ತಂದಿವೆ. ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸುವ ನಿರೀಕ್ಷೆಯಿದೆ. ವ್ಯಕ್ತಿಯ ಸಾವಿನ ಸಂದರ್ಭದಲ್ಲಿಯೂ ಆಧಾರ್ ಅನ್ನು ನಿಷ್ಕ್ರಿಯಗೊಳಿಸುವುದಕ್ಕೆ ಪ್ರಸ್ತುತ ಯಾವುದೇ ಕಾರ್ಯವಿಧಾನವಿಲ್ಲ.

ಇದಕ್ಕೂ ಮುನ್ನ, ಮರಣ ಪ್ರಮಾಣಪತ್ರವನ್ನು ನೀಡುವಾಗ ಮೃತ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಸೇರಿಸುವ ಸಲುವಾಗಿ, ಜನನ ಮತ್ತು ಮರಣ ನೋಂದಣಿ ಕಾಯ್ದೆ 1969 ಕ್ಕೆ ತಿದ್ದುಪಡಿ ತರುವ ವಿಚಾರದಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ಅವರು ಯುಐಡಿಎಐ ಬಳಿ ಪ್ರತಿಕ್ರಿಯೆ ಕೇಳಿದ್ದರು.

ಹತ್ತು ವರ್ಷಕ್ಕೆ ಒಮ್ಮೆ ಆಧಾರ್‌ ವಿವರ ಅಪ್ಡೇಟ್‌ ಮಾಡಿ

ಆಧಾರ್ ದಾಖಲಾತಿ ಮತ್ತು ನವೀಕರಣ ನಿಯಮಗಳು 2016 ರ ಪ್ರಕಾರ, ಆಧಾರ್ ಸಂಖ್ಯೆ ಹೊಂದಿರುವವರು ಗುರುತಿನ ಪುರಾವೆ (POI) ಮತ್ತು ವಿಳಾಸದ ಪುರಾವೆ (POA) ಅನ್ನು ಸಲ್ಲಿಸುವ ಮೂಲಕ ಆಧಾರ್‌ಗೆ ದಾಖಲಾದ ದಿನಾಂಕದಿಂದ ಕನಿಷ್ಠ 10 ವರ್ಷಗಳಿಗೊಮ್ಮೆ ಆಧಾರ್‌ನಲ್ಲಿ ತಮ್ಮ ಪೋಷಕ ದಾಖಲೆಗಳನ್ನು ನವೀಕರಿಸಬಹುದು. ದಾಖಲೆಗಳು, ತಮ್ಮ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಈ ರೀತಿ ಕ್ರಮಗಳು ಅವಶ್ಯ.ಆಧಾರ್‌ ಅನ್ನು ಹಲವಾರು ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಬಳಸಲಾಗುವ ಕಾರಣ ಇಂತಹ ಕ್ರಮಗಳು ಅನಿವಾರ್ಯ. ಇದು "ಉತ್ತಮ ಸೇವೆಯ ವಿತರಣೆಯನ್ನು ಸುಧಾರಿಸುತ್ತದೆ ಮತ್ತು ದೃಢೀಕರಣದ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುತ್ತದೆ" ಎಂದು ಯುಐಡಿಎಐ ಹೇಳಿದೆ.

ಜೂ.14ರ ತನಕ ಆನ್‌ಲೈನಲ್ಲಿ ಆಧಾರ್‌ ವಿವರ ಉಚಿತವಾಗಿ ಅಪ್ಡೇಟ್‌ ಮಾಡಿ

ಆನ್‌ಲೈನ್‌ನಲ್ಲಿ ಇನ್ನು ಆಧಾರ್‌ ಡಾಕ್ಯುಮೆಂಟ್‌ಗಳ ವಿವರವನ್ನು ಉಚಿತವಾಗಿ ಅಪ್ಡೇಟ್‌ ಮಾಡಬಹುದು. ಮುಂದಿನ ಮೂರು ತಿಂಗಳವರೆಗೆ, ಅಂದರೆ ಮಾರ್ಚ್ 15 ರಿಂದ ಜೂನ್ 14 ರವರೆಗೆ ಈ ಉಚಿತ ಸೇವೆ ಲಭ್ಯವಿದೆ. ಈ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಉಚಿತವಾಗಿದೆ. ಸ್ಥಳೀಯ ಆಧಾರ್ ಕೇಂದ್ರಗಳಲ್ಲಿ ಇದೇ ಸೇವೆಯನ್ನು 50 ರೂಪಾಯಿ ಶುಲ್ಕವನ್ನು ಪಾವತಿಸಿ ಪಡೆಯಬಹುದು. ಅಲ್ಲಿ ಇದು ಉಚಿತವಲ್ಲ ಎಂಬುದನ್ನು ಯುಐಡಿಎಐ ಸ್ಪಷ್ಟಪಡಿಸಿದೆ.

ಕೈದಿಗಳ ಆಧಾರ್ ದೃಢೀಕರಣ ಅಧಿಕಾರ ಇನ್ನು ರಾಜ್ಯಗಳಿಗೆ; ಕೇಂದ್ರ ಗೃಹ ಸಚಿವಾಲಯದಿಂದ ಅಧಿಸೂಚನೆ

ಜೈಲಿನಲ್ಲಿರುವ ಕೈದಿಗಳ ಆಧಾರ್‌ ದೃಢೀಕರಣವನ್ನು ಸ್ವಯಂಪ್ರೇರಿತವಾಗಿ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ನಡೆಯಿಂದಾಗಿ, ಕೈದಿಗಳು ಅವರ ಆರೋಗ್ಯ ರಕ್ಷಣೆ, ಕೌಶಲ್ಯ, ವೃತ್ತಿಪರ ತರಬೇತಿ, ಸಂಬಂಧಿಕರ ಸಂದರ್ಶನ ಮತ್ತು ಕಾನೂನು ನೆರವು ಹಾಗೂ ಇತರ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point