ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ola S1 X: ಓಲಾ S1 X ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸುವವರಿಗೆ ಗುಡ್‌ನ್ಯೂಸ್; ಗರಿಷ್ಠ 10,000 ರೂಪಾಯಿ ದರ ಕಡಿತ

Ola S1 X: ಓಲಾ S1 X ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸುವವರಿಗೆ ಗುಡ್‌ನ್ಯೂಸ್; ಗರಿಷ್ಠ 10,000 ರೂಪಾಯಿ ದರ ಕಡಿತ

ವಿದ್ಯುತ್ ಚಾಲಿತ ಸ್ಕೂಟರ್‌ಗಳ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್‌ ಗಮನಸೆಳೆಯುವ ಕ್ರಮವನ್ನು ಘೋಷಿಸಿದೆ. ಓಲಾ S1 X ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸುವವರಿಗೆ ಗುಡ್‌ನ್ಯೂಸ್ ನೀಡಿರುವ ಓಲಾ ಎಲೆಕ್ಟ್ರಿಕ್‌, ಗರಿಷ್ಠ 10,000 ರೂಪಾಯಿ ದರ ಕಡಿತ ಘೋಷಿಸಿದೆ. ವಿವರ ವರದಿ ಇಲ್ಲಿದೆ.

ಓಲಾ ಎಲೆಕ್ಟ್ರಿಕ್ ಎಸ್‌1 ಎಕ್ಸ್‌ ಎಲೆಕ್ಟ್ರಿಕ್ ಸ್ಕೂಟರ್‌ನ ಎಲ್ಲಾ ರೂಪಾಂತರಗಳ ಬೆಲೆಯನ್ನು ಕಡಿಮೆ ಮಾಡಿದೆ.
ಓಲಾ ಎಲೆಕ್ಟ್ರಿಕ್ ಎಸ್‌1 ಎಕ್ಸ್‌ ಎಲೆಕ್ಟ್ರಿಕ್ ಸ್ಕೂಟರ್‌ನ ಎಲ್ಲಾ ರೂಪಾಂತರಗಳ ಬೆಲೆಯನ್ನು ಕಡಿಮೆ ಮಾಡಿದೆ.

ನವದೆಹಲಿ/ ಬೆಂಗಳೂರು: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪ್ರಿಯರಿಗೆ ಒಂದು ಗುಡ್ ನ್ಯೂಸ್‌. ಓಲಾ ಎಲೆಕ್ಟ್ರಿಕ್‌ನ ಎಸ್‌1ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆಯಾಗಿದೆ. ಎಸ್1 ಎಕ್ಸ್ ಎಲೆಕ್ಟ್ರಿಕ್‌ನ ಬೆಲೆಯನ್ನು ಇಳಿಸಿರುವುದಾಗಿ ಓಲಾ ಎಲೆಕ್ಟ್ರಿಕ್‌ ಸೋಮವಾರ (ಏಪ್ರಿಲ್ 15) ಘೋಷಿಸಿದೆ. ಪರಿಷ್ಕೃತ ಎಸ್1 ಎಕ್ಸ್ ಎಲೆಕ್ಟ್ರಿಕ್‌ನ ಎಕ್ಸ್‌ ಶೋರೂಮ್ ದರ ಈಗ 69,999 ರೂಪಾಯಿ. ಇದಕ್ಕೂ ಮೊದಲು ಇದು 79,999 ರೂಪಾಯಿ ಇತ್ತು.

ಟ್ರೆಂಡಿಂಗ್​ ಸುದ್ದಿ

ಸ್ವದೇಶಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆ ಓಲಾ ಎಲೆಕ್ಟ್ರಿಕ್‌ ತನ್ನ ಎಲ್ಲ ಮಾದರಿಯ ಓಲಾ ಎಸ್‌1 ಎಕ್ಸ್‌ ದ್ವಿಚಕ್ರ ವಾಹನಗಳ ಬೆಲೆಯನ್ನು 4,000 ರೂಪಾಯಿಂದ 10,000 ರೂಪಾಯಿ ನಡುವೆ ಇಳಿಕೆ ಮಾಡಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಎಸ್‌1 ಎಕ್ಸ್‌ ಎಲೆಕ್ಟ್ರಿಕ್ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಮುಂದಿನ ವಾರದಿಂದ ವಾಹನವನ್ನು ಪೂರೈಸಲಾಗುತ್ತಿದೆ ಎಂದು ಓಲಾ ಎಲೆಕ್ಟ್ರಿಕ್‌ ಹೇಳಿಕೊಂಡಿದೆ.

ಎಲೆಕ್ಟ್ರಿಕ್ ಮೊಬಿಲಿಟಿ ಅಳವಡಿಕೆಗೆ ವೇಗ ಒದಗಿಸಲು ದರ ಪರಿಷ್ಕರಣೆ ಎಂದ ಓಲಾ ಎಲೆಕ್ಟ್ರಿಕ್‌

ಎಸ್‌1ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ದರ ಪರಿಷ್ಕರಣೆಯು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೆಚ್ಚು ಗ್ರಾಹಕರು ಖರೀದಿಸುವಂತೆ ಮಾಡಲಿದೆ. ಈ ದರ ಇಳಿಕೆಯ ಕ್ರಮವು ಭಾರತದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ಅಳವಡಿಕೆಗೆ ವೇಗ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಓಲಾ ಎಲೆಕ್ಟ್ರಿಕ್ ವ್ಯಾಖ್ಯಾನಿಸಿದೆ.

ಓಲಾ ಎಸ್‌1 ಎಕ್ಸ್ (S1 X) ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಅವಲಂಬಿಸಿ ಮೂರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. 2 kWh ಬ್ಯಾಟರಿ-ಚಾಲಿತ ರೂಪಾಂತರವು 79,999 ರೂಪಾಯಿ (ಎಕ್ಸ್-ಶೋರೂಮ್) ಮೂಲ ದರ ಇದೆಯಾದರೂ ಈಗ 69,999 ರೂಪಾಯಿ(ಎಕ್ಸ್-ಶೋರೂಮ್)ಗೆ ಲಭ್ಯವಿದೆ. 3 kWh ಬ್ಯಾಟರಿ ಪ್ಯಾಕ್ ರೂಪಾಂತರವು ಈಗ 89,999 ರೂಪಾಯಿಗೆ ಬದಲಿಗೆ 84,999 (ಎಕ್ಸ್-ಶೋ ರೂಂ) ರೂಪಾಯಿಗೆ ಬೆಲೆಗೆ ಬರುತ್ತದೆ. (ಎಕ್ಸ್ ಶೋ ರೂಂ). ಇದೇ ರೀತಿ ಎಸ್‌1 ಎಕ್ಸ್‌ ಸ್ಕೂಟರ್‌ನ ಟಾಪ್-ಎಂಡ್ 4 kWh ಬ್ಯಾಟರಿ-ಚಾಲಿತ ರೂಪಾಂತರವು ಈಗ 99,999 (ಎಕ್ಸ್-ಶೋ ರೂಂ) ರೂಪಾಯಿಗೆ ಲಭ್ಯವಿದೆ. ಈ ರೂಪಾಂತರದ ಮೂಲಬೆಲೆ 109,999 (ಎಕ್ಸ್-ಶೋ ರೂಂ) ರೂಫಾಯಿ ಇತ್ತು.

ಓಲಾ ಎಸ್‌1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್‌; ಮೊದಲ ನೋಟ ಹೀಗಿದೆ

ಓಲಾ ಎಸ್‌1 ಎಕ್ಸ್‌ ಎಂಬುದು ಓಲಾ ಎಲೆಕ್ಟ್ರಿಕ್‌ನ ಎಸ್‌1 ಶ್ರೇಣಿಯ ಸ್ಕೂಟರ್‌ಗಳ ಪೈಕಿ ಅತ್ಯಂತ ಒಳ್ಳೆ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಮೂಡಿಬಂದಿದೆ. ಇದರಲ್ಲಿ ಬರಲಿರುವ ಇತರೆ ಮಾದರಿಗಳ ಪೈಕಿ ಎಸ್‌1 ಪ್ರೋ, ಎಸ್‌1 ಏರ್ ಆಂಡ್ ಎಸ್‌1 ಎಕ್ಸ್‌+ಗಳೂ ಇವೆ. ಇವುಗಳ ಉತ್ಪಾದನೆಯೊಂದಿಗೆ ಓಲಾ ಎಲೆಕ್ಟ್ರಿಕ್‌ ತನ್ನ ಸ್ಕೂಟರ್‌ಗಳ ಶ್ರೇಣಿಯೊಂದಿಗೆ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಅಳವಡಿಕೆಗೆ ವೇಗ ನೀಡತೊಡಗಿದೆ. ಈಗ ಕಂಪನಿಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯ ದೊಡ್ಡ ಭಾಗವನ್ನು ತನ್ನ ಮುಂಬರುವ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳೊಂದಿಗೆ ಪಡೆದುಕೊಳ್ಳುವ ಗುರಿಯನ್ನು ಹೊಂದಿದೆ.

ಓಲಾ ಎಲೆಕ್ಟ್ರಿಕ್ 4 ವಿಭಿನ್ನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಅಭಿವೃದ್ದಿ ಪಡಿಸುವಲ್ಲಿ ಕೆಲಸ ಮಾಡುತ್ತಿದೆ. ಇವುಗಳನ್ನು 2024 ರ ಕೊನೆಯಲ್ಲಿ ಅನಾವರಣಗೊಳಿಸಲು ಕಂಪನಿ ನಿರ್ಧರಿಸಿದೆ. ಕಂಪನಿಯು ಈಗಾಗಲೇ ನಾಲ್ಕು ವಿಭಿನ್ನ ಪರಿಕಲ್ಪನೆಯ ಮೋಟಾರ್‌ಸೈಕಲ್‌ಗಳನ್ನು ಅನಾವರಣಗೊಳಿಸಿದೆ. ಪ್ರಸ್ತುತ ಅವು ಅಭಿವೃದ್ಧಿ ಹಂತದಲ್ಲಿವೆ. ಇದಲ್ಲದೆ, ಓಲಾ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಕಾರು ತಯಾರಿಸುವಲ್ಲೂ ಗಮನಹರಿಸಿದೆ.

IPL_Entry_Point