ಕನ್ನಡ ಸುದ್ದಿ  /  Nation And-world  /  In Morbi Bridge Collapse Case, Gujarat Hc Wants Report On Bridges, Their Condition

Morbi bridge collapse: ದುರಂತದ ಬಳಿಕ ಗುಜರಾತ್​ನ ಎಲ್ಲಾ ಸೇತುವೆಗಳ ಸ್ಥಿತಿಗತಿಯ ಬಗ್ಗೆ ರಾಜ್ಯ ಸರ್ಕಾರದ ಬಳಿ ವರದಿ ಕೇಳಿದ ಹೈಕೋರ್ಟ್​

ಮೊರ್ಬಿ ಸೇತುವೆ ದುರಂತ ಗಂಭೀರತೆಯನ್ನು ನೋಡಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವ ಗುಜರಾತ್​ ಹೈಕೋರ್ಟ್​ ಇದೀಗ ರಾಜ್ಯದ ಎಲ್ಲಾ ಸೇತುವೆಗಳ ಸ್ಥಿತಿಗತಿಯ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ.

ಮೊರ್ಬಿ ಸೇತುವೆ ದುರಂತ
ಮೊರ್ಬಿ ಸೇತುವೆ ದುರಂತ

ಗುಜರಾತ್​: ಮೊರ್ಬಿ ಸೇತುವೆ ದುರಂತ ಗಂಭೀರತೆಯನ್ನು ನೋಡಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವ ಗುಜರಾತ್​ ಹೈಕೋರ್ಟ್​ ಇದೀಗ ರಾಜ್ಯದ ಎಲ್ಲಾ ಸೇತುವೆಗಳ ಸ್ಥಿತಿಗತಿಯ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ.

ಗುಜರಾತ್ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಎಲ್ಲಾ ಸೇತುವೆಗಳ ಸಮೀಕ್ಷೆ ನಡೆಸಿ ಮತ್ತು ಅವು ಸರಿಯಾದ ಸ್ಥಿತಿಯಲ್ಲಿ ಇವೆಯೇ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಿದೆ. ಸಂತ್ರಸ್ತರ ಕುಟುಂಬಗಳಿಗೆ ನೀಡುವ ಪರಿಹಾರವು ಸೂಕ್ತವಾಗಿರಬೇಕು ಎಂದೂ ನ್ಯಾಯಾಲಯ ಹೇಳಿದೆ.

ಮೊರ್ಬಿ ಸೇತುವೆ ಕುಸಿತದ ಘಟನೆಯನ್ನು ದೊಡ್ಡ ದುರಂತ ಎಂದು ಕರೆದಿರುವ ಸುಪ್ರೀಂಕೋರ್ಟ್​, ಘಟನೆಗೆ ಸಂಬಂಧಿಸಿದ ತನಿಖೆ ಮತ್ತು ಇತರ ಅಂಶಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವಂತೆ ಗುಜರಾತ್​ ಹೈಕೋರ್ಟ್​ಗೆ ಸೂಚಿಸಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಕ್ಟೋಬರ್ 30 ರಂದು ಗುಜರಾತ್​ನ ಮೊರ್ಬಿ ಸೇತುವೆ ಕುಸಿದು 45 ಮಕ್ಕಳು ಸೇರಿದಂತೆ 141 ಮಂದಿ ಬಲಿಯಾದ ಹಾಗೂ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸೇತುವೆ ಕುಸಿತದ ಘಟನೆಯ ತನಿಖೆಗೆ ಗುಜರಾತ್ ಸರ್ಕಾರ ಐದು ಸದಸ್ಯರ ಸಮಿತಿಯನ್ನು ರಚಿಸಿದೆ. ಸೇತುವೆಯನ್ನು ದುರಸ್ತಿ ಮಾಡಿದ್ದ ಒರೆವಾ ಗ್ರೂಪ್​​ನ ಇಬ್ಬರು ವ್ಯವಸ್ಥಾಪಕರು, ಟಿಕೆಟ್​ ಮಾರಾಟಗಾರರು ಸೇರಿದಂತೆ ಒಂಬತ್ತು ಜನರನ್ನು ವಿಚಾರಣೆ ಬಳಿಕ ಪೊಲೀಸರು ಬಂಧಿಸಿದ್ದಾರೆ.

ಇಷ್ಟೊಂದು ಜನರನ್ನು ಬಲಿ ಪಡೆದ ಮೊರ್ಬಿ ತೂಗು ಸೇತುವೆಗೆ, ಸುರಕ್ಷತಾ ಪ್ರಮಾಣ ಪತ್ರವೇ ಇರಲಿಲ್ಲ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ. ಅಲ್ಲದೇ ನಿಗದಿತ ಅವಧಿಗೂ ಮೊದಲೇ ತೂಗು ಸೇತುವೆಯನ್ನು ಪುನಃ ಸಾರ್ವಜನಿಕ ಬಳಕೆಗೆ ತೆರೆದಿರುವ ಮಾಹಿತಿ ಕೂಡ ಬಹಿರಂಗವಾಗಿದೆ.

ಮೊರ್ಬಿ ಸ್ಥಳೀಯ ಆಡಳಿತ ನೀಡಿರುವ ಮಾಹಿತಿ ಪ್ರಕಾರ, ದುರಸ್ತಿ ಕಾರ್ಯಕ್ಕಾಗಿ ಏಳು ತಿಂಗಳಿಂದ ಮುಚ್ಚಲ್ಪಟ್ಟಿದ್ದ ತೂಗು ಸೇತುವೆಯನ್ನು ಘಟನೆ ನಡೆಯು ನಾಲ್ಕು ದಿನಗಳ ಹಿಂದಷ್ಟೇ (ಅ.26 ರಂದು) ಸಾರ್ವಜನಿಕರ ಬಳಕೆಗೆ ಪುನಃ ತೆರೆಯಲಾಗಿತ್ತು. 143 ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಕಾಲದ ಈ ತೂಗು ಸೇತುವೆಯ ಸುರಕ್ಷತಾ ಪ್ರಮಾಣ ಪತ್ರವನ್ನು ಇನ್ನೂ ಬಿಡುಗಡೆ ಮಾಡಿರಲಿಲ್ಲ. ಅಷ್ಟರಲ್ಲೇ ಇದರ ಪುನಃ ಬಳಕೆಗೆ ಅವಕಾಶ ನೀಡಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ.

ನವೆಂಬರ್ 1 ರಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜೊತೆ ಪ್ರಧಾನಿ ನರೇಂದ್ರ ಮೋದಿ ಮೊರ್ಬಿಯಲ್ಲಿ ಸೇತುವೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಚ್ಚು ನದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವವರನ್ನು ಮಾತನಾಡಿಸಿ ಮಾಹಿತಿ ಪಡೆದುಕೊಂಡಿದ್ದರು.

ಅದೇ ದಿನ ಮೊರ್ಬಿಯ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಮೋದಿ ಭೇಟಿ ಮಾಡಿದ್ದರು. ಗಾಂಧಿನಗರದ ರಾಜಭವನದಲ್ಲಿ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿ ಘಟನೆ ಹಾಗೂ ರಕ್ಷಣಾ-ಪರಿಹಾರ ಕಾರ್ಯಾಚರಣೆಯ ಸಂಪೂರ್ಣ ವಿವರ ಪಡೆದಿದ್ದರು.

IPL_Entry_Point

ವಿಭಾಗ