ಕನ್ನಡ ಸುದ್ದಿ  /  Nation And-world  /  Man Kills Mother In Pimpri For Asking Him To Quit Drinking, Arrested

Man kills mother: ಕುಡಿತ ಬಿಡು ಎಂದದ್ದಕ್ಕೆ ಹೆತ್ತತಾಯಿಯನ್ನೇ ಕೊಂದ ಮಗ, ಆರೋಪಿ ಬಂಧನ

ವಿಶ್ವಾಸ್ ಅಶೋಕ್ ಶಿಂಧೆ ಕುಡಿತದ ದಾಸನಾಗಿದ್ದ. ಕುಡಿತದ ಚಟಕ್ಕೆ ಬಿದ್ದ ಈತ ನಿತ್ಯ ತನ್ನ ತಾಯಿಯ ಜತೆ ಜಗಳ ಮಾಡುತ್ತಿದ್ದ. ಕುಡಿತ ಬಿಡು ಮತ್ತು ಕೆಲಸದ ಮೇಲೆ ಗಮನ ನೀಡು ಎಂದು ತಾಯಿ ನಿತ್ಯ ಈತನಿಗೆ ಬುದ್ಧಿವಾದ ಹೇಳುತ್ತಿದ್ದಳು

Man kills mother: ಕುಡಿತ ಬಿಡು ಎಂದದ್ದಕ್ಕೆ ಹೆತ್ತತಾಯಿಯನ್ನೇ ಕೊಂದ ಮಗ, ಆರೋಪಿ ಬಂಧನ (Getty Images/iStockphoto)
Man kills mother: ಕುಡಿತ ಬಿಡು ಎಂದದ್ದಕ್ಕೆ ಹೆತ್ತತಾಯಿಯನ್ನೇ ಕೊಂದ ಮಗ, ಆರೋಪಿ ಬಂಧನ (Getty Images/iStockphoto)

ಪುಣೆ: ತನ್ನ ತಾಯಿಯನ್ನು ಕೊಲೆ ಮಾಡಿರುವ ಆರೋಪದಡಿ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್‌ 9ರಂದು ಮಗನೇ ತಾಯಿಯನ್ನು ಕೊಂದ ಘಟನೆ ವರದಿಯಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ವಿಶ್ವಾಸ್ ಅಶೋಕ್ ಶಿಂಧೆ ಎಂದು ಗುರುತಿಸಲಾಗಿದೆ. ಆತನು ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್‌ನ ಕಸ ತುಂಬುವ ಕೆಲಸ ಮಾಡುತ್ತಿದ್ದ. ಹತ್ಯೆಗೀಡಾದ ಈತನ ತಾಯಿಯನ್ನು ಪ್ರಯಾಗ್ಬಾಯಿ ಅಶೋಕ್ ಶಿಂಧೆ (58) ಎಂದು ಗುರುತಿಸಲಾಗಿದೆ.

ವಿಶ್ವಾಸ್ ಅಶೋಕ್ ಶಿಂಧೆ ಕುಡಿತದ ದಾಸನಾಗಿದ್ದ. ಕುಡಿತದ ಚಟಕ್ಕೆ ಬಿದ್ದ ಈತ ನಿತ್ಯ ತನ್ನ ತಾಯಿಯ ಜತೆ ಜಗಳ ಮಾಡುತ್ತಿದ್ದ. ಕುಡಿತ ಬಿಡು ಮತ್ತು ಕೆಲಸದ ಮೇಲೆ ಗಮನ ನೀಡು ಎಂದು ತಾಯಿ ನಿತ್ಯ ಈತನಿಗೆ ಬುದ್ಧಿವಾದ ಹೇಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಹತ್ಯೆಗೀಡಾದ ತಾಯಿ ಪ್ರಯಾಗ್ಬಾಯಿ ಅಶೋಕ್ ಶಿಂಧೆ (58) ತನ್ನ ಮಗನ ಜತೆ ವಾಸಿಸುತ್ತಿದ್ದರು. ಮಾರ್ಚ್‌ 9ರಂದು ಬೆಳಗ್ಗೆ ಎಂಟು ಗಂಟೆ ಆಸುಪಾಸಿನಲ್ಲಿ ಮಗ ಆಲ್ಕೋಹಾಲ್‌ ಕುಡಿಯುತ್ತಿದ್ದ. ಈ ಸಮಯದಲ್ಲಿ ತಾಯಿ, "ಸಾಕು ಕುಡಿದದ್ದು, ಕೆಲಸಕ್ಕೆ ಹೋಗು" ಎಂದಿದ್ದಾಳೆ.

ಈ ಸಮಯದಲ್ಲಿ ಕೋಪಗೊಂಡ ಈತ ತಾಯಿಗೆ ಅವ್ಯಾಚಪದಗಳಿಂದ ನಿಂದಿಸಿದ್ದಾನೆ. ಬಳಿಕ ಸಿಮೆಂಟ್‌ ಇಟ್ಟಿಗೆಯಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಈಕೆ ಮೃತಪಟ್ಟಿದ್ದಳು.

ಈತನ ವಿರುದ್ಧ ಐಪಿಸಿ ಸೆಕ್ಷನ್‌ 302ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರ್ಯಾಂಡ್ ಬೆಂಗಳೂರು ಹೆಸರು ಕೆಡಿಸಲು ಸಾಧ್ಯವಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಹೆಸರು ಕೆಡಿಸಲು ಸಾಧ್ಯವಿಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಾಯಂಡಹಳ್ಳಿ ವಾರ್ಡ್‍ನ ಪಂತರಪಾಳ್ಯಯಲ್ಲಿ ಆಯೋಜಿಸಿದ್ದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಂತರ ಪಾಳ್ಯದಲ್ಲಿ ನಿರ್ಮಿಸಿರುವ “ಡಾ. ಪುನೀತ್ ರಾಜ್‍ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಅಭಿವೃದ್ಧಿಪಡಿಸಲಾಗಿರುವ ನಾಯಂಡಹಳ್ಳಿ ಕೆರೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಬ್ರ್ಯಾಂಡ್ ಬೆಂಗಳೂರು ವಿಶ್ವಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದು, ಎಲ್ಲ ನಗರಗಳಿಂತ ವೇಗವಾಗಿ ಅಭಿವೃದ್ಧಿಯಾಗಿದೆ. ಅದರೆ, ಕೆಲವರು ಇದರ ಹೆಸರ ಕೆಡಿಸುವ ಪ್ರಯತ್ನ ನಡೆಸಿದ್ದಾರೆ ಎಂದರು.

ಪ್ರತಿ ದಿನ ಐದು ಸಾವಿರ ವಿಜ್ಞಾನಿಗಳು ಬರುತ್ತಾರೆ. ಪ್ರತಿ ದಿನ 5000 ವಾಹನಗಳು ರಸ್ತೆಗಿಳಿಯುತ್ತವೆ. ಸುಮಾರು 400 ಆರ್ ಆಂಡ್ ಡಿ ಕೇಂದ್ರಗಳಿವೆ‌. ಸೇಫ್ ಸಿಟಿ ಯೋಜನೆ ಅಡಿಯಲ್ಲಿ 7000 ಸಿಸಿ ಕ್ಯಾಮರಾಗಳನ್ನು ಹೆಣ್ಣು ಮಕ್ಕಳ ಸುರಕ್ಷತೆಗೆ ಕ್ಯಾಮರಾ ಅಳವಡಿಸಲಾಗಿದೆ. ರಾತ್ರಿಪಾಳಿಯಲ್ಲಿ ಹೆಣ್ಣು ಮಕ್ಕಳು ಕೆಲಸ ಮಾಡಲು ಅನುಮತಿ ನೀಡಲಾಗಿದೆ.

ಬೆಂಗಳೂರು ನಮ್ಮ ಹೆಮ್ಮೆ, ಪ್ರತಿಷ್ಠೆ, ಗೌರವ. ಕೆಂಪೇಗೌಡರು ಕಟ್ಟಿರುವ ಬೆಂಗಳೂರು ಹೆಸರು ಉಳಿಸುವುದು ನಮ್ಮ ಕರ್ತವ್ಯ. ರಾಜ್ಯಕ್ಕೆ ಅತಿ ಹೆಚ್ಚು ಆದಾಯ ತರುವ ಊರು ಬೆಂಗಳೂರು. ಬೆಂಗಳೂರಿನ ಬ್ರ್ಯಾಂಡ್ ಉಳಿಸಲು ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

IPL_Entry_Point

ವಿಭಾಗ