ಕನ್ನಡ ಸುದ್ದಿ  /  Nation And-world  /  Noted Economist And Former Union Minister Yk Alagh Passes Away

YK Alagh passes away: ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಕೇಂದ್ರ ಸಚಿವ ವೈ.ಕೆ.ಅಲಘ್ ವಿಧಿವಶ.. ಪ್ರಧಾನಿ ಮೋದಿ ಸಂತಾಪ

ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಕೇಂದ್ರ ಸಚಿವ ಮತ್ತು ಅಹಮದಾಬಾದ್​ನ ಸರ್ದಾರ್ ಪಟೇಲ್ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಅಂಡ್ ಸೋಶಿಯಲ್ ರಿಸರ್ಚ್ (ಎಸ್‌ಪಿಐಎಸ್‌ಆರ್) ನ ವಿಶ್ರಾಂತ ಪ್ರಾಧ್ಯಾಪಕ ಯೋಗಿಂದರ್ ಕೆ ಅಲಘ್ ಅವರು ಇಂದು ನಗರದ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮಾಜಿ ಕೇಂದ್ರ ಸಚಿವ ವೈ.ಕೆ.ಅಲಘ್ ವಿಧಿವಶ.. ಪ್ರಧಾನಿ ಮೋದಿ ಸಂತಾಪ
ಮಾಜಿ ಕೇಂದ್ರ ಸಚಿವ ವೈ.ಕೆ.ಅಲಘ್ ವಿಧಿವಶ.. ಪ್ರಧಾನಿ ಮೋದಿ ಸಂತಾಪ

ಅಹಮದಾಬಾದ್ (ಗುಜರಾತ್​): ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಕೇಂದ್ರ ಸಚಿವ ಮತ್ತು ಅಹಮದಾಬಾದ್​ನ ಸರ್ದಾರ್ ಪಟೇಲ್ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಅಂಡ್ ಸೋಶಿಯಲ್ ರಿಸರ್ಚ್ (ಎಸ್‌ಪಿಐಎಸ್‌ಆರ್) ನ ವಿಶ್ರಾಂತ ಪ್ರಾಧ್ಯಾಪಕ ಯೋಗಿಂದರ್ ಕೆ ಅಲಘ್ ಅವರು ಇಂದು ನಗರದ ತಮ್ಮ ಸ್ವಗೃಹದಲ್ಲಿ ನಿಧನರಾದರು.

"ಕಳೆದ ಎರಡು ತಿಂಗಳಿಂದ ಅವರು ಆರೋಗ್ಯ ಸರಿ ಇರಲಿಲ್ಲ. ಕಳೆದ 20-25 ದಿನಗಳಲ್ಲಿ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಅವರು ಮನೆಯಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆ ಥಾಲ್ತೇಜ್ ಚಿತಾಗಾರದಲ್ಲಿ ನಡೆಯಲಿದೆ" ಎಂದು ಅವರ ಪುತ್ರ ಪ್ರೊಫೆಸರ್ ಮುನೀಶ್ ಅಲಗ್ ತಿಳಿಸಿದ್ದಾರೆ.

ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, "ಪ್ರೊಫೆಸರ್ ವೈ.ಕೆ. ಅಲಘ್ ಅವರು ಸಾರ್ವಜನಿಕ ನೀತಿಯ ವಿವಿಧ ಅಂಶಗಳ ಬಗ್ಗೆ ವಿಶೇಷವಾಗಿ ಗ್ರಾಮೀಣ ಅಭಿವೃದ್ಧಿ, ಪರಿಸರ ಮತ್ತು ಅರ್ಥಶಾಸ್ತ್ರದ ಬಗ್ಗೆ ಉತ್ಸುಕರಾಗಿದ್ದರು. ಅವರ ನಿಧನದಿಂದ ನೋವಾಗಿದೆ. ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇವೆ. ಓಂ ಶಾಂತಿ" ಎಂದು ಟ್ವೀಟ್​ ಮಾಡಿದ್ದಾರೆ.

1939 ರಲ್ಲಿ ಚಕ್ವಾಲ್‌ನಲ್ಲಿ (ಇಂದಿನ ಪಾಕಿಸ್ತಾನದಲ್ಲಿ) ಜನಿಸಿದ ವೈ.ಕೆ.ಅಲಘ್ ಅವರು ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು ಮತ್ತು ನಂತರ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅವರು ಐಐಎಂ-ಕಲ್ಕತ್ತಾ ಸೇರಿದಂತೆ ಪ್ರತಿಷ್ಠಿತ ಭಾರತೀಯ ಮತ್ತು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅರ್ಥಶಾಸ್ತ್ರವನ್ನು ಬೋಧನೆ ಮಾಡಿದರು ಮತ್ತು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಉಪಕುಲಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು.

1996-98 ರವರೆಗೆ ಅವರು ಕೇಂದ್ರ ಸರ್ಕಾರದಲ್ಲಿ ವಿದ್ಯುತ್, ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವರಾಗಿ ಕಾರ್ಯನಿರ್ವಹಿಸಿದರು. ಯೋಗಿಂದರ್ ಕೆ ಅಲಘ್ ಅವರು ಯೋಜನಾ ಆಯೋಗದ ಸದಸ್ಯರೂ ಆಗಿದ್ದರು.

"ಪ್ರೊಫೆಸರ್ ವೈ.ಕೆ.ಅಲಘ್ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಇನ್‌ಸ್ಟಿಟ್ಯೂಟ್‌ಗೆ ಬರುತ್ತಿರಲಿಲ್ಲ" ಎಂದು ಸ್ಪೈಸರ್‌ನ (SPISER) ನಿರ್ದೇಶಕಿ ಪ್ರೀತಿ ಮೆಹ್ತಾ ಹೇಳಿದ್ದಾರೆ. ಅಲಘ್ ಅವರು ಈ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿದ್ದರು.

ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ನಿಯಮಿತ ಅಂಕಣಕಾರರೂ ಆಗಿದ್ದ ಅಲಘ್​ ಅವರು 2006-2012 ರವರೆಗೆ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್ ಆನಂದ್ (IRMA) ನ ಅಧ್ಯಕ್ಷರಾಗಿ ಮತ್ತು ಗುಜರಾತ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

IPL_Entry_Point

ವಿಭಾಗ