ಕನ್ನಡ ಸುದ್ದಿ  /  Nation And-world  /  Viral News Pre Wedding Photoshoot With Snake Twitter Viral Image Couples Trending News Relationship Kannada News Rst

Viral News: ಪ್ರೇಮಸಂಬಂಧಕ್ಕೆ ಮುನ್ನುಡಿ ಬರೆದ ಹಾವು; ಪ್ರಿ ವೆಡ್ಡಿಂಗ್‌ ಶೂಟ್‌ನಲ್ಲೂ ಹಾವಿನೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡ ಜೋಡಿ

ಜಗತ್ತಿನಲ್ಲಿ ಸಾಕಷ್ಟು ಭಿನ್ನ ಪ್ರೇಮಕಥೆಗಳನ್ನು ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಪ್ರೇಮಕಥೆ ಇದೆ, ಈ ಪ್ರೇಮ್‌ಕಹಾನಿಗೆ ಹಾವು ಮುನ್ನುಡಿ ಬರೆದಿತ್ತು. ಇನ್ನೂ ವಿಚಿತ್ರ ಅಂದ್ರೆ ಈ ಜೋಡಿ ಹಾವಿನೊಂದಿಗೆ ಪ್ರಿ ವೆಡ್ಡಿಂಗ್‌ ಶೂಟಿಂಗ್‌ ಮಾಡಿಸಿರುವುದು. ಈ ಫೋಟೊ ಈಗ ಸಾಕಷ್ಟು ವೈರಲ್‌ ಆಗಿದೆ. ಏನಿದು ಕಥೆ, ತಿಳಿಯಬೇಕು ಎಂದರೆ ಮುಂದೆ ಓದಿ

ಹಾವಿನೊಂದಿಗೆ ಫೋಟೊಶೂಟ್‌ ಮಾಡಿಸಿಕೊಂಡ ಜೋಡಿ
ಹಾವಿನೊಂದಿಗೆ ಫೋಟೊಶೂಟ್‌ ಮಾಡಿಸಿಕೊಂಡ ಜೋಡಿ

ಪ್ರಿ ವೆಡ್ಡಿಂಗ್‌ ಫೋಟೊಶೂಟ್‌ ಕಳೆದ ಕೆಲ ವರ್ಷಗಳಿಂದ ಚಾಲ್ತಿಯಲ್ಲಿರುವ ವಿದ್ಯಮಾನ. ಮದುವೆಗೂ ಮುನ್ನ ಹುಡುಗ ಹುಡುಗಿ ಭಿನ್ನ ವಿಭಿನ್ನ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಬದುಕಿನ ನೆನಪಿಗೆ ಜೊತೆಯಾಗಿಸಿಕೊಳ್ಳುತ್ತಾರೆ.

ಪ್ರಿ ವೆಡ್ಡಿಂಗ್‌ ಫೋಟೊಶೂಟ್‌ (Pre Wedding Photoshoot) ಹೆಸರಿನಲ್ಲಿ ಸಮುದ್ರದಲ್ಲಿ ತೀರದಲ್ಲಿ ಈಜುವುದು, ಬೆಟ್ಟದಿಂದ ಹಾರುವುದು, ಪ್ರಾಣಿಗಳ ಮಧ್ಯೆ ಫೋಟೊ ಕ್ಲಿಕ್ಕಿಸಿಕೊಳ್ಳುವುದು ಹೀಗೆ ಹಲವು ರೀತಿ ಫೋಟೊಶೂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವುದನ್ನು ನೋಡಿರುತ್ತೇವೆ.

ಆದರೆ ಇಲ್ಲೊಂದು ಪ್ರಿ ವೆಡ್ಡಿಂಗ್‌ ಫೋಟೊಶೂಟ್‌ ಇದೆಲ್ಲಕ್ಕಿಂತ ಭಿನ್ನ. ಅದೇನೆಂದರೆ ಇಲ್ಲೊಂದು ಜೋಡಿ ಹಾವಿನ ಜೊತೆ ಫೋಟೊಶೂಟ್‌ ಮಾಡಿಸಿಕೊಂಡಿದೆ. ಇದು ಕಥೆ ಮುಂದೆ ಓದಿ.

ವೈರಲ್‌ ಆಯ್ತು ಹಾವಿನ ಜೊತೆಗಿನ ಪ್ರಿ ವೆಡ್ಡಿಂಗ್‌ ಫೋಟೊ ಶೂಟ್‌

ಟ್ವಿಟರ್‌ನಲ್ಲಿ ಅಪರೂಪ ಎನ್ನಿಸುವ ಪ್ರಿ ವೆಡ್ಡಿಂಗ್‌ ಶೂಟ್‌ನ ಫೋಟೊ ಒಂದು ವೈರಲ್‌ ಆಗಿದೆ. ಇದರಲ್ಲಿ ಮದುವೆಯಾಗಲಿರುವ ಹುಡುಗ ಹಾಗೂ ಹುಡುಗಿ ಹಾವಿನ ಜೊತೆ ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ. ಆ ಮೂಲಕ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ. ಆದರೆ ಇಲ್ಲಿ ವಿಷಯವೇ ಬೇರೆ.

ಟ್ವಿಟರ್‌ ಬಳಕೆದಾರ ವಿವೇಕ್‌ ಎನ್ನುವವರು ಈ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಪ್ರಿ ವೆಡ್ಡಿಂಗ್‌ ಫೋಟೊಶೂಟ್‌ ಮತ್ತು ಒಂದು ದಾರʼ ಎಂದು ಶೀರ್ಷಿಕೆ ನಿಡುವ ಮೂಲಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಫೋಟೊ ಮೇಲೆ ಸಮ್ಮಿ ಜೈ ಫೋಟೊಗ್ರಫಿ ಎಂದು ವಾಟರ್‌ ಮಾರ್ಕ್‌ ಇದ್ದು, ಫೋಟೊ ಕ್ಲಿಕ್ಕಿಸಿದವರಿಗೆ ಕ್ರೆಡಿಟ್‌ ನೀಡಲಾಗಿದೆ. ಈ ಫೋಟೊವು ವಧು ವರನನ್ನು ಹೇಗೆ ಭೇಟಿಯಾದರು ಎಂಬ ಕಥೆಯನ್ನು ಹೇಳುವಂತಿದೆ.

ಪ್ರೇಮಕ್ಕೆ ಸೇತುವೆಯಾದ ಹಾವು

ಸುಂದರವಾದ ಹುಡುಗಿಯೊಬ್ಬಳು ಕೆಂಪು ಬಣ್ಣದ ಡ್ರೆಸ್‌ನಲ್ಲಿ ಮನೆಯ ಹಿತ್ತಲಿಗೆ ಹೋಗುವುದರಿಂದ ಈ ಕಥೆ ಆರಂಭವಾಗುತ್ತದೆ. ಆಕೆ ಸುತ್ತಲು ಮರಗಳಿರುವ ಪ್ರದೇಶದಲ್ಲಿ ತಿರುಗಾಡುತ್ತಿರುವಾಗ ಹಾವು ಎದುರಾಗುತ್ತದೆ. ಹೆದರಿದ ಆಕೆ ತನ್ನ ಮೊಬೈಲ್‌ನಲ್ಲಿ ಉಗರತಜ್ಞರ ನಂಬರ್‌ ಹುಡುಕಿ ಕರೆ ಮಾಡುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ಇಬ್ಬರು ಪುರುಷರು ಸ್ಕೂಟರ್‌ನಲ್ಲಿ ಅವಳ ಮನೆಗೆ ಬರುತ್ತಾರೆ. ಅವರಲ್ಲೊಬ್ಬ ಧೈರ್ಯದಿಂದ ಹಾವನ್ನು ಹಿಡಿದು ರಕ್ಷಿಸುತ್ತಾನೆ, ಅಲ್ಲಿಂದ ತೆರಳುವಾಗ ಆಕೆ ಬಳಿ ನಂಬರ್‌ ಕೊಟ್ಟು ಕಾಲ್‌ ಮಾಡಲು ಹೇಳುತ್ತಾನೆ. ಇಲ್ಲಿಂದ ಅವರ ಪ್ರೇಮ್‌ಕಹಾನಿ ಆರಂಭವಾಗುತ್ತದೆ. ಕೊನೆಯ ಚಿತ್ರದಲ್ಲಿ ಈ ಜೋಡಿ ಸಂತಸದಿಂದ ಹೆಜ್ಜೆ ಹಾಕುತ್ತಾ ಸಾಗುತ್ತಾರೆ, ಹಾವು ಅವರನ್ನೇ ನೋಡುತ್ತಿರುತ್ತದೆ.

ಈ ಚಿತ್ರವು ಮೇ 27ರಂದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಆಗಿತ್ತು. ಇಲ್ಲಿಯವರೆಗೆ 5.6 ಲಕ್ಷಕ್ಕೂ ಮಂದಿ ಪೋಸ್ಟ್‌ ನೋಡಿದ್ದಾರೆ, ಅಲ್ಲದೆ ಈ ಚಿತ್ರಕ್ಕೆ ಇನ್ನೂ ಅಭಿಮಾನಿಗಳು ಹೆಚ್ಚುತ್ತಿದ್ದಾರೆ. ಅಲ್ಲದೆ ಹಲವರು ಇವರ ಪ್ರೇಮಕಥೆಗೆ ಮೆಚ್ಚುಗೆ ಸೂಚಿಸಿ ಕಾಮೆಂಟ್‌ ಮಾಡಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ʼಇದನ್ನು ಆಸ್ಕರ್‌ ಕಿರುಚಿತ್ರಗಳ ವಿಭಾಗಕ್ಕೆ ನಾಮನಿರ್ದೇಶನ ಮಾಡಬೇಕುʼ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ. ʼಇದು ನಾನು ಟ್ವೀಟರ್‌ನಲ್ಲಿ ನೋಡಿದ ಬೆಸ್ಟ್‌ ವಿಷಯʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼವಾವ್‌, ಈ ಲವ್‌ ಸ್ಟೋರಿ ನಿಜಕ್ಕೂ ಭಿನ್ನವಾಗಿದೆʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಒಟ್ಟು ಕಾಮೆಂಟ್‌ಗಳು ಹೀಗಿ ಸಾಗಿವೆ.

IPL_Entry_Point

ವಿಭಾಗ