Kannada News  /  Photo Gallery  /  Bollywood News Clothing Brands Owned By Indian Celebrities Sachin Tendulkar To Anushka Sharma Jra

Celebrity Clothing Brands: ಇವರು ಸೆಲೆಬ್ರಿಟಿಗಳು ಮಾತ್ರ ಅಲ್ಲ; ಪ್ರಮುಖ ಉಡುಪು ಬ್ರ್ಯಾಂಡ್‌ಗಳ ಮಾಲೀಕರೂ ಹೌದು

Apr 24, 2023 10:02 PM IST Jayaraj
Apr 24, 2023 10:02 PM , IST

  • ಬಿ-ಟೌನ್ ಎಂದರೆ ಅದು ಪ್ರತಿಭಾವಂತ ನಟರ ಸಾಗರ. ಹಲವು ಶ್ರೇಷ್ಠ ನಟರು ನಟನೆಯೊಂದಿಗೆ, ಉದ್ಯಮಿಗಳಾಗಿಯೂ ಸಂಪಾದನೆ ಮಾಡುತ್ತಿದ್ದಾರೆ. ಕೆಲವೊಬ್ಬರು ಭಾರತದಾದ್ಯಂತ ಪ್ರಸಿದ್ಧ ಫುಡ್‌ ಪ್ರಾಡಕ್ಟ್ ಮಾಲೀಕರಾಗಿದ್ದರೆ, ಇನ್ನೂ ಕೆಲವರು ತಮ್ಮದೇ ಆದ ಬಟ್ಟೆ ಬ್ರ್ಯಾಂಡ್‌ ಬೆಳೆಸುತ್ತಿದ್ದಾರೆ.

ಅನುಷ್ಕಾ ಶರ್ಮಾ ಅವರ ನಶ್‌(NUSH)ನಿಂದ ಹಿಡಿದು ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್‌(Being Human )ವರೆಗೆ, ಭಾರತದ ಪ್ರಸಿದ್ಧ ಸೆಲೆಬ್ರಿಟಿಗಳ ಮಾಲೀಕತ್ವದ ಕೆಲವು ಬ್ರ್ಯಾಂಡ್‌ಗಳು ಇಲ್ಲಿವೆ.

(1 / 8)

ಅನುಷ್ಕಾ ಶರ್ಮಾ ಅವರ ನಶ್‌(NUSH)ನಿಂದ ಹಿಡಿದು ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್‌(Being Human )ವರೆಗೆ, ಭಾರತದ ಪ್ರಸಿದ್ಧ ಸೆಲೆಬ್ರಿಟಿಗಳ ಮಾಲೀಕತ್ವದ ಕೆಲವು ಬ್ರ್ಯಾಂಡ್‌ಗಳು ಇಲ್ಲಿವೆ.

Rheson: ಸೋನಮ್ ಕಪೂರ್ ಮತ್ತು ರಿಯಾ ಕಪೂರ್ (Sonam Kapoor and Rhea Kapoor) ಅವರ ರೇಸನ್ ಬ್ರಾಂಡ್‌ ಹೆಸರುವಾಸಿ. ಕಪೂರ್ ಸಹೋದರಿಯರಾದ ರಿಯಾ ಮತ್ತು ಸೋನಮ್ 2017ರಲ್ಲಿ ತಮ್ಮ ಬಟ್ಟೆ ಬ್ರಾಂಡ್ 'ರೇಸನ್' ಅನ್ನು ಪ್ರಾರಂಭಿಸಿದರು. ಈ ಬ್ರ್ಯಾಂಡ್ ಸೆಲೆಬ್ರಿಟಿ ಲೇಬಲ್ ಅಲ್ಲ. ಆದರೆ ಹೈ-ಸ್ಟ್ರೀಟ್ ಫ್ಯಾಶನ್ ಘಟಕವಾಗಿದೆ ಎಂದು ಸೋನಮ್ ಹೇಳಿದ್ದಾರೆ.

(2 / 8)

Rheson: ಸೋನಮ್ ಕಪೂರ್ ಮತ್ತು ರಿಯಾ ಕಪೂರ್ (Sonam Kapoor and Rhea Kapoor) ಅವರ ರೇಸನ್ ಬ್ರಾಂಡ್‌ ಹೆಸರುವಾಸಿ. ಕಪೂರ್ ಸಹೋದರಿಯರಾದ ರಿಯಾ ಮತ್ತು ಸೋನಮ್ 2017ರಲ್ಲಿ ತಮ್ಮ ಬಟ್ಟೆ ಬ್ರಾಂಡ್ 'ರೇಸನ್' ಅನ್ನು ಪ್ರಾರಂಭಿಸಿದರು. ಈ ಬ್ರ್ಯಾಂಡ್ ಸೆಲೆಬ್ರಿಟಿ ಲೇಬಲ್ ಅಲ್ಲ. ಆದರೆ ಹೈ-ಸ್ಟ್ರೀಟ್ ಫ್ಯಾಶನ್ ಘಟಕವಾಗಿದೆ ಎಂದು ಸೋನಮ್ ಹೇಳಿದ್ದಾರೆ.(Instagram/@wearerheson)

HRX (Hrithik Roshan): ಇದನ್ನು 2013ರಲ್ಲಿ ಹೃತಿಕ್ ಪ್ರಾರಂಭಿಸಿದರು. ಇದು ಭಾರತದ ಮೊದಲ ಸ್ವದೇಶಿ ಫಿಟ್ನೆಸ್ ಬ್ರಾಂಡ್ ಆಗಿದೆ. ಚಿಲ್ಲರೆ ಉಡುಪುಗಳಿಂದ ಹಿಡಿದು ಫಿಟ್‌ನೆಸ್ ಟ್ರ್ಯಾಕರ್‌ಗಳು ಮತ್ತು ಪರಿಕರಗಳವರೆಗೆ ಎಲ್ಲವೂ ಈ ಬ್ರ್ಯಾಂಡ್‌ನಲ್ಲಿ ದೊರಕುತ್ತವೆ. ಹೃತಿಕ್ ಇದನ್ನು ಫಿಟ್‌ನೆಸ್ ಉತ್ಸಾಹಿಗಳಿಗಾಗಿ ರೂಪಿಸಿದ್ದಾರೆ.

(3 / 8)

HRX (Hrithik Roshan): ಇದನ್ನು 2013ರಲ್ಲಿ ಹೃತಿಕ್ ಪ್ರಾರಂಭಿಸಿದರು. ಇದು ಭಾರತದ ಮೊದಲ ಸ್ವದೇಶಿ ಫಿಟ್ನೆಸ್ ಬ್ರಾಂಡ್ ಆಗಿದೆ. ಚಿಲ್ಲರೆ ಉಡುಪುಗಳಿಂದ ಹಿಡಿದು ಫಿಟ್‌ನೆಸ್ ಟ್ರ್ಯಾಕರ್‌ಗಳು ಮತ್ತು ಪರಿಕರಗಳವರೆಗೆ ಎಲ್ಲವೂ ಈ ಬ್ರ್ಯಾಂಡ್‌ನಲ್ಲಿ ದೊರಕುತ್ತವೆ. ಹೃತಿಕ್ ಇದನ್ನು ಫಿಟ್‌ನೆಸ್ ಉತ್ಸಾಹಿಗಳಿಗಾಗಿ ರೂಪಿಸಿದ್ದಾರೆ.(Instagram/@hrxbrand)

Being Human (Salman Khan): ಈ ಪ್ರಸಿದ್ಧ ಬ್ರ್ಯಾಂಡ್ 2007ರಿಂದ ಮಾರುಕಟ್ಟೆಯಲ್ಲಿದೆ. 2007ರಲ್ಲಿ ಖಾನ್ ಸ್ಥಾಪಿಸಿದ ಮುಂಬೈ ಮೂಲದ ಚಾರಿಟಿಯಾದ ದಿ ಬೀಯಿಂಗ್ ಹ್ಯೂಮನ್ ಫೌಂಡೇಶನ್ ಅನ್ನು ಬೆಂಬಲಿಸಲು ಇದನ್ನು ರಚಿಸಲಾಗಿದೆ.

(4 / 8)

Being Human (Salman Khan): ಈ ಪ್ರಸಿದ್ಧ ಬ್ರ್ಯಾಂಡ್ 2007ರಿಂದ ಮಾರುಕಟ್ಟೆಯಲ್ಲಿದೆ. 2007ರಲ್ಲಿ ಖಾನ್ ಸ್ಥಾಪಿಸಿದ ಮುಂಬೈ ಮೂಲದ ಚಾರಿಟಿಯಾದ ದಿ ಬೀಯಿಂಗ್ ಹ್ಯೂಮನ್ ಫೌಂಡೇಶನ್ ಅನ್ನು ಬೆಂಬಲಿಸಲು ಇದನ್ನು ರಚಿಸಲಾಗಿದೆ.(Instagram/@beinghumanclothing)

Just F (Jacqueline Fernandez): ಶ್ರೀಲಂಕಾದಲ್ಲಿ ಜನಪ್ರಿಯ ಉಪಾಹಾರ ಗೃಹದ ಸಹ-ಮಾಲೀಕರಾಗಿರುವ ನಟಿ ಜಾಕ್ವೆಲಿನ್‌, 2018ರಲ್ಲಿ 'ಜಸ್ಟ್ ಎಫ್' ಎಂಬ ಸಕ್ರಿಯ ಉಡುಗೆ ಬ್ರ್ಯಾಂಡ್‌ ಅನ್ನು ಪ್ರಾರಂಭಿಸಿದರು.

(5 / 8)

Just F (Jacqueline Fernandez): ಶ್ರೀಲಂಕಾದಲ್ಲಿ ಜನಪ್ರಿಯ ಉಪಾಹಾರ ಗೃಹದ ಸಹ-ಮಾಲೀಕರಾಗಿರುವ ನಟಿ ಜಾಕ್ವೆಲಿನ್‌, 2018ರಲ್ಲಿ 'ಜಸ್ಟ್ ಎಫ್' ಎಂಬ ಸಕ್ರಿಯ ಉಡುಗೆ ಬ್ರ್ಯಾಂಡ್‌ ಅನ್ನು ಪ್ರಾರಂಭಿಸಿದರು.(Instagram/@justf143)

True Blue (Sachin Tendulkar): ಕ್ರಿಕೆಟಿಗ ಸಚಿನ್, ಅರವಿಂದ್ ಫ್ಯಾಶನ್ ಬ್ರಾಂಡ್ಸ್ ಲಿಮಿಟೆಡ್ ಸಹಯೋಗದೊಂದಿಗೆ 2016ರಲ್ಲಿ ಈ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದರು. ಇದು ಸಾಂಪ್ರದಾಯಿಕ ಮತ್ತು ಇತರ ಪುರುಷರ ಉಡುಪುಗಳನ್ನು ಒಳಗೊಂಡಿದೆ.

(6 / 8)

True Blue (Sachin Tendulkar): ಕ್ರಿಕೆಟಿಗ ಸಚಿನ್, ಅರವಿಂದ್ ಫ್ಯಾಶನ್ ಬ್ರಾಂಡ್ಸ್ ಲಿಮಿಟೆಡ್ ಸಹಯೋಗದೊಂದಿಗೆ 2016ರಲ್ಲಿ ಈ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದರು. ಇದು ಸಾಂಪ್ರದಾಯಿಕ ಮತ್ತು ಇತರ ಪುರುಷರ ಉಡುಪುಗಳನ್ನು ಒಳಗೊಂಡಿದೆ.(Instagram/@truebluebrand)

NUSH (Anushka Sharma): ನಟಿ, ನಿರ್ಮಾಪಕಿ, ಉದ್ಯಮಿ ಆಗಿರುವ ಅನುಷ್ಕಾ ಶರ್ಮಾ, 2017ರಲ್ಲಿ 'NUSH' ಎಂಬ ಫ್ಯಾಶನ್ ಬ್ರ್ಯಾಂಡ್ ಪ್ರಾರಂಭಿಸಿದರು. ಅವರ ಉತ್ಪನ್ನಗಳ ವಿಶೇಷತೆ ಏನೆಂದರೆ ಅವರು ಕ್ರೌರ್ಯ-ಮುಕ್ತ ಬಟ್ಟೆಗಳನ್ನು ಬಳಸುತ್ತಾರೆ .

(7 / 8)

NUSH (Anushka Sharma): ನಟಿ, ನಿರ್ಮಾಪಕಿ, ಉದ್ಯಮಿ ಆಗಿರುವ ಅನುಷ್ಕಾ ಶರ್ಮಾ, 2017ರಲ್ಲಿ 'NUSH' ಎಂಬ ಫ್ಯಾಶನ್ ಬ್ರ್ಯಾಂಡ್ ಪ್ರಾರಂಭಿಸಿದರು. ಅವರ ಉತ್ಪನ್ನಗಳ ವಿಶೇಷತೆ ಏನೆಂದರೆ ಅವರು ಕ್ರೌರ್ಯ-ಮುಕ್ತ ಬಟ್ಟೆಗಳನ್ನು ಬಳಸುತ್ತಾರೆ .(Instagram/@nushbrand)

House of Pataudi (Saif Ali Khan): ಸ್ವತಃ ಎಥ್ನಿಕ್ ಧರಿಸುವುದನ್ನು ಇಷ್ಟಪಡುವ ಸೈಫ್, 2018ರಲ್ಲಿ ತಮ್ಮದೇ ಆದ ಭಾರತೀಯ ಎಥ್ನಿಕ್ ವೇರ್ ಅನ್ನು ಪರಿಚಯಿಸಿದರು.

(8 / 8)

House of Pataudi (Saif Ali Khan): ಸ್ವತಃ ಎಥ್ನಿಕ್ ಧರಿಸುವುದನ್ನು ಇಷ್ಟಪಡುವ ಸೈಫ್, 2018ರಲ್ಲಿ ತಮ್ಮದೇ ಆದ ಭಾರತೀಯ ಎಥ್ನಿಕ್ ವೇರ್ ಅನ್ನು ಪರಿಚಯಿಸಿದರು.(Instagram/@houseofpataudi)

ಇತರ ಗ್ಯಾಲರಿಗಳು