Breakup Day: ಬ್ರೇಕ್‌ಅಪ್ ಬೇಸರವೇ? ಮನಸ್ಸಿನ ನೋವು ಮರೆಯಲು ಹೀಗೆ ಮಾಡಿ
ಪ್ರೀತಿಯಲ್ಲಿ ಬ್ರೇಕ್‌ಅಪ್ ಆದ ಬಳಿಕ ಸಕಾರಾತ್ಮಕವಾಗಿರುವುದು ಬಹಳ ಮುಖ್ಯ. ನಿಮಗೆ ಖುಷಿ ಹಾಗೂ ಆತ್ಮತೃಪ್ತಿ ನೀಡುವ ಕೆಲಸಗಳ ಮೇಲೆ ಗಮನ ಹರಿಸಿ. ಕೆಲವು ಮೋಜಿನ ಸಂಗತಿಗಳಲ್ಲಿ ತೊಡಗಿಸಿಕೊಳ್ಳಿ. ಆ ಮೂಲಕ ಬೆಳವಣಿಗೆ ಹೊಂದುವ ಜೊತೆಗೆ ಸ್ವ-ಅನ್ವೇಷಣೆ ಮಾಡಿಕೊಳ್ಳಿ. ಇದರಿಂದ ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಬಹುದು.
(1 / 9)
ಬ್ರೇಕ್‌ಆಪ್ ಆದ ಬಳಿಕ ಎಲ್ಲವನ್ನೂ ಎದುರಿಸಿ ಮುಂದೆ ಸಾಗುವುದು ಕಷ್ಟವಾಗಬಹುದು. ಇದರಿಂದ ಸ್ವಲ್ಪ ಸಮಯದವರೆಗೆ ಅತ್ಯಂತ ನೋವು, ದುಃಖ ಉಂಟಾಗುವುದು ಸಹಜ. ಆದರೆ ಅದೇ ನೋವಿನಲ್ಲಿ ಮುಳುಗೇಳುವುದಕ್ಕಿಂತ ಸ್ವ ಅಭಿವೃದ್ಧಿಯ ಮೇಲೆ ನೀವ್ಯಾಕೆ ಗಮನ ಹರಿಸಬಾರದು. ಮೋಜು-ಮಸ್ತಿ ನಿಮ್ಮ ನೋವನ್ನು ಮರೆಸುತ್ತದೆ ಎಂದರೆ ಆ ದಾರಿಯಲ್ಲಿ ಹೋಗುವುದು ಉತ್ತಮ. ಹೊಸ ಅನುಭವಗಳನ್ನು ಹೊಂದುವ ದಾರಿಯನ್ನು ಹುಡುಕಬೇಕು. ಬ್ರೇಕ್‌ಅಪ್ ನಂತರ ಮನಸ್ಸು ಹಗುರ ಮಾಡಿಕೊಳ್ಳಲು ಸಾಧ್ಯವಿರುವ ದಾರಿಗಳನ್ನು ಹುಡುಕಿ. ಆ ಮೂಲಕ ಭವಿಷ್ಯದ ಬೆಳವಣಿಗೆಯ ದಾರಿಯನ್ನು ಕಂಡುಕೊಳ್ಳಿ.
(pixabay)(2 / 9)
ಏಕಾಂಗಿ ಪ್ರವಾಸ: ಹೊಸ ದೇಶ ಅಥವಾ ಸ್ಥಳಗಳಿಗೆ ಭೇಟಿ ನೀಡುವುದರಿಂದ ಹೊಸತನವನ್ನು ಅನ್ವೇಷಿಸಲು ಸಾಧ್ಯವಾಗುತ್ತದೆ. ಬೇರೆ ಬೇರೆ ನಗರದ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ತಿಳಿಯಿರಿ. ಆ ಮೂಲಕ ನಿಮ್ಮ ಜೀವನದ ಬಗ್ಗೆ ಹೊಸ ದೃಷ್ಟಿಕೋನವನ್ನು ಹೊಂದಿರಿ.
(Shutterstock)(3 / 9)
ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಿರಿ: ನಿಮ್ಮನ್ನು ಪ್ರೀತಿಸುವ ಕುಟುಂಬದವರು ಹಾಗೂ ಸ್ನೇಹಿತರು ನಿಮ್ಮೊಂದಿಗೆ ಸದಾ ಇರುತ್ತಾರೆ. ನಿಮ್ಮ ನೋವನ್ನು ಮರೆಸುವ ಶಕ್ತಿ ಅವರಲ್ಲಿದೆ. ಹಾಗಾಗಿ ಅವರೊಂದಿಗೆ ಸಮಯ ಕಳೆಯಿರಿ. ಅವರೊಂದಿಗೆ ಪಾರ್ಟಿ ಮಾಡಿ, ಪ್ರವಾಸ ಏರ್ಪಡಿಸಿ ಅವರೊಂದಿಗೆ ಗುಣಮಟ್ಟದ ಸಮಯ ಕಳೆಯಿರಿ.
(Pexels )(4 / 9)
ಸ್ವ-ಆರೈಕೆಯಲ್ಲಿ ತೊಡಗಿಸಿಕೊಳ್ಳಿ: ಮನಸ್ಸಿಗೆ ಅತಿಯಾಗಿ ನೋವಾದಾಗ ಸ್ವ ಆರೈಕೆ ಬಹಳ ಮುಖ್ಯ ಎನ್ನಿಸುತ್ತದೆ. ನಿಮಗೆ ನೀವೇ ಮಸಾಜ್ ಮಾಡಿಕೊಳ್ಳಿ. ಎಣ್ಣೆ ಸ್ನಾನ ಮಾಡಿ. ನಿಮ್ಮ ಮನಸ್ಸಿಗೆ ಖುಷಿ ಎನ್ನಿಸುವಷ್ಟು ಹೊತ್ತು ಸ್ನಾನ ಮಾಡುತ್ತಲೇ ಇರಿ.
(Unsplash)(5 / 9)
ಹೊಸ ಕೌಶಲ ಕಲಿಯಿರಿ: ಹೊಸ ಹವ್ಯಾಸಕ್ಕೆ ನಿಮ್ಮನ್ನು ತೆರೆದುಕೊಳ್ಳಿ. ಹೊಸ ಹೊಸ ವಿಷಯಗಳನ್ನು ಕಲಿಯುವತ್ತ ಆಸಕ್ತಿ ತೋರಿ. ತರಗತಿಗಳಿಗೆ ಸೇರಿಕೊಂಡು ಹೊಸತನ್ನು ಕಲಿಯಿರಿ.
(Pexels )(6 / 9)
ಸಕ್ರಿಯರಾಗಿರಿ: ಮನಸ್ಸನ್ನು ಆಹ್ಲಾದಗೊಳಿಸಲು ವ್ಯಾಯಾಮ ಉತ್ತಮ ವಿಧಾನ. ಇದು ಮನಸ್ಸಿನ ಒತ್ತಡವನ್ನೂ ನಿವಾರಿಸುತ್ತದೆ. ಹೊಸದು ಎನ್ನಿಸುವ ವರ್ಕೌಟ್ ತರಗತಿಗೆ ಸೇರಿಕೊಳ್ಳಿ. ಕ್ರಿಯಾಶೀಲರಾಗಿರಲಿ ಹೊಸ ಜನರನ್ನು ಭೇಟಿ ಮಾಡಿ.
(Pexels)(7 / 9)
ನಿಮ್ಮ ಒಲವಿನ ವಿಷಯಗಳನ್ನು ಮರುಶೋಧಿಸಿ: ನೀವು ಪ್ರೀತಿಯಲ್ಲಿ ಇದ್ದ ಸಮಯದಲ್ಲಿ ನಿರ್ಲಕ್ಷ್ಯ ಮಾಡಿದ ಹಳೆಯ ಹವ್ಯಾಸಗಳು ಹಾಗೂ ನಿಮ್ಮ ಒಲವಿನ ವಿಷಯ ಅಥವಾ ಹವ್ಯಾಸಗಳನ್ನು ಮರುಪರಿಶೀಲನೆ ಮಾಡಿ. ಅವು ನಿಮ್ಮ ಮನಸ್ಸಿಗೆ ಸಂತಸ ತರುವುದಾದರೆ ಅವುಗಳನ್ನು ಪುನಃ ಆರಂಭಿಸಿ.
(Unsplash)(8 / 9)
ಹಳೆಯ ಸ್ನೇಹಿತರನ್ನು ಭೇಟಿ ಮಾಡಿ: ನೀವು ಇತ್ತೀಚೆಗೆ ಭೇಟಿ ಮಾಡದ ಹಳೆಯ ಸ್ನೇಹಿತರನ್ನು ಭೇಟಿ ನೀಡಿ. ಕಾಫಿ ಅಥವಾ ಡಿನ್ನರ್‌ಗೆ ಪ್ಲಾನ್ ಮಾಡಿ. ಇದರಿಂದ ಹಳೆಯ ಸ್ನೇಹಕ್ಕೆ ಮರುಜೀವ ಸಿಕ್ಕಂತಾಗುತ್ತದೆ ಮಾತ್ರವಲ್ಲ ನಿಮಗೆ ಮಾನಸಿಕ ಬೆಂಬಲ ಹಾಗೂ ಸ್ನೇಹಿತರ ಪ್ರೀತಿಯೂ ಮರಳಿ ಸಿಕ್ಕಂತಾಗುತ್ತದೆ.
(Unsplash)ಇತರ ಗ್ಯಾಲರಿಗಳು