ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sudhir Kumar Chaudhary: ದೇಶ-ವಿದೇಶದಲ್ಲಿ ಸಚಿನ್​​ ಆಟ ಕಣ್ತುಂಬಿಕೊಳ್ಳಲು ಆಸ್ತಿ ಮಾರಿದ್ದ ವೀರಾಭಿಮಾನಿ ಸುನಿಲ್​ ಕುಮಾರ್ ಚೌಧರಿ!

Sudhir Kumar Chaudhary: ದೇಶ-ವಿದೇಶದಲ್ಲಿ ಸಚಿನ್​​ ಆಟ ಕಣ್ತುಂಬಿಕೊಳ್ಳಲು ಆಸ್ತಿ ಮಾರಿದ್ದ ವೀರಾಭಿಮಾನಿ ಸುನಿಲ್​ ಕುಮಾರ್ ಚೌಧರಿ!

  • ಭಾರತದಲ್ಲಿ ಸಾಕಷ್ಟು ತಾರಾ ಕ್ರಿಕೆಟಿಗರ ದಂಡೇ ಇದ್ದರೂ 2 ದಶಕಗಳಿಗೂ ಹೆಚ್ಚು ಕಾಲ ತಮ್ಮ ಆಟದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಇಷ್ಟಪಡದವರೇ ಇಲ್ಲ. ಆದರೆ ಸಚಿನ್​ ಮಾತ್ರ ಈತನಿಗೆ ದೊಡ್ಡ ಅಭಿಮಾನಿಯಾಗಿದ್ದ ಎಂಬುದು ವಿಶೇಷ.

ಕ್ರಿಕೆಟ್​​ ದೇವರಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್‌ಗೆ ಎಷ್ಟೇ ಅಭಿಮಾನಿಗಳಿದ್ದರೂ, ಈ ಅಭಿಮಾನಿಗೆ ಮಾತ್ರ ಮಾಸ್ಟರ್​ ಬ್ಲಾಸ್ಟರ್​​​​​,  ಅವರೇ ಕಟ್ಟಾ ಅಭಿಮಾನಿಯಾಗಿದ್ದಾರೆ. ಈ ಅಭಿಮಾನಿ ತುಂಬಾ ವಿಶೇಷ. ಸಚಿನ್​ಗೆ ಆ ಅಭಿಮಾನಿ ಎಂದರೆ ತುಂಬಾ ಇಷ್ಟ. ಅವರ ಹೆಸರು ಸುಧೀರ್ ಕುಮಾರ್ ಚೌಧರಿ. ಯಾರು ಈ ಸುಧೀರ್ ಕುಮಾರ್ ಚೌಧರಿ? ಆತನ ಹಿನ್ನೆಲೆ ಏನು?
icon

(1 / 8)

ಸಚಿನ್​ ತೆಂಡೂಲ್ಕರ್​ ನಿವೃತ್ತಿಗೂ ಮೊದಲು ಮೈದಾನದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಅದು ಸುಧೀರ್​ ಕುಮಾರ್​ ಅವರೇ. ಭಾರತ ದೇಶ - ವಿದೇಶ ಎಲ್ಲಿಯೇ ಆಡಲಿ, ಸುಧೀರ್​ ಹಾಜರಿ ಖಂಡಿತ ಇರುತಿತ್ತು. ಅವರು ಜನಿಸಿದ್ದು 1982ರಲ್ಲಿ. ಬಿಹಾರದ ಮುಜಾಫರ್​ಪುರ. ದೇಹದ ತುಂಬೆಲ್ಲಾ ತ್ರಿವರ್ಣ ಧ್ವಜ ಬಳಿದುಕೊಂಡು, ಒಂದು ಕೈಯಲ್ಲಿ ರಾಷ್ಟ್ರ ಧ್ವಜ, ಮತ್ತೊಂದು ಶಂಖ ಹಿಡಿದು ಭಾರತ ತಂಡಕ್ಕೆ ಮತ್ತು ಸಚಿನ್​​ಗೆ ಹುರುದುಂಬಿಸುತ್ತಿದ್ದರು. ಎದೆಯ ಮೇಲೆ ಸಚಿನ್ ತೆಂಡೂಲ್ಕರ್ ಹೆಸರು ಇದ್ದೇ ಇರುತ್ತಿತ್ತು.
icon

(2 / 8)

ಸಚಿನ್​ ಹೋದಲೆಲ್ಲಾ ಸುಧೀರ್​ ಕುಮಾರ್​ ಹೋಗುತ್ತಾರೆ ಅಂದರೆ ಆಗರ್ಭ ಶ್ರೀಮಂತ ಎನಿಸಿರಬಹುದು. ಆದರೆ ಅವರದ್ದು ತೀರಾ ಬಡತನ ಕುಟುಂಬ. 14ನೇ ವಯಸ್ಸಿನಲ್ಲೇ ಅಂದರೆ ತನ್ನ 6ನೇ ತರಗತಿಗೇ ಓದು ನಿಲ್ಲಿಸಿದ್ದರಂತೆ. ಆಗ ಕೆಲ ಕಾಲ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರಂತೆ. ವರ್ಷಗಳು ಉರುಳಿದಂತೆ ಕ್ರಿಕೆಟ್​​​ ಬಗ್ಗೆ ಅರಿತರು. 6ನೇ ವಯಸ್ಸಿಗೆ ಹಾಗೆಯೇ ಸಚಿನ್​ಗೆ ದೊಡ್ಡ ಅಭಿಮಾನಿಯಾದರು. ಅಂದಿನಿಂದ ಜೀವನವನ್ನೇ ಕ್ರಿಕೆಟ್​ ಪಂದ್ಯಗಳಿಗೆ ಮೀಸಲಿಡಬೇಕು ಎಂದು ಶಪಥ ತೊಟ್ಟು ಸಣ್ಣಪುಟ್ಟ ಕೆಲಸಗಳೊಂದಿಗೆ ಹಣ ಸಂಪಾದಿಸುತ್ತಿದ್ದರು.
icon

(3 / 8)

2003ರಿಂದ ಟೀಮ್​ ಇಂಡಿಯಾ ಪಂದ್ಯಗಳನ್ನು ನೋಡುವುದು ಮತ್ತು ತಂಡವನ್ನು ಬೆಂಬಲಿಸುವ ಉತ್ಸಾಹ ಸುಧೀರ್ ಚೌಧರಿ ಮತ್ತಷ್ಟು ಹೆಚ್ಚಾಯಿತು. ಏಪ್ರಿಲ್ 2010ರ ಹೊತ್ತಿಗೆ, ಸರಿ ಸುಮಾರು 150 ಪಂದ್ಯಗಳಿಗೆ ಹಾಜರಿ ಹಾಕಿದ್ದರು. ಆಗಾಗ್ಗೆ ಪಂದ್ಯದ ಸ್ಥಳವನ್ನು ತಲುಪಲು ಬೈಸಿಕಲ್‌ನಲ್ಲಿ ಪ್ರಯಾಣಿಸುತ್ತಿದ್ದರು. 2007ರಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬಾಂಗ್ಲಾದೇಶಕ್ಕೆ ಮತ್ತು 2006ರಲ್ಲಿ ಪಾಕಿಸ್ತಾನದ ಲಾಹೋರ್‌ಗೆ ಹೋಗಿದ್ದರು. ಸೈಕಲ್​​ನಲ್ಲಿ ಹೋಗುತ್ತಿದ್ದದ್ದು ಹಣವನ್ನು ಉಳಿಸಲು. ಕೆಲವೊಮ್ಮೆ ರೈಲುಗಳಲ್ಲಿ ಟಿಕೆಟ್ ರಹಿತ ಪ್ರಯಾಣವನ್ನೂ ಮಾಡಿದ್ದಾರೆ.
icon

(4 / 8)

ಸುಧೀರ್ ಚೌಧರಿ ಅವರು ಪಂದ್ಯದ ಹಿಂದಿನ ದಿನದಂದು ತಮ್ಮ ದೇಹಕ್ಕೆ ಬಣ್ಣ ಬಳಿಯುತ್ತಾರೆ. ಮಲಗಿದರೆ ಬಣ್ಣ ಬಣ್ಣ ಹಾಳಾಗುತ್ತದೆ ಎಂಬ ಕಾರಣಕ್ಕೆ ಆ ರಾತ್ರಿ ನಿದ್ರೆಯನ್ನೇ ಬಿಟ್ಟು ಬಿಡುತ್ತಾರೆ. ಅಕ್ಟೋಬರ್​​ 28, 2003ರಂದು ಆಸ್ಟ್ರೇಲಿಯಾ ವಿರುದ್ಧ ಸಚಿನ್ ಆಡುವುದನ್ನು ವೀಕ್ಷಿಸಲು ಬಿಹಾರದ ಮುಜಾಫರ್‌ಪುರದಿಂದ ಮುಂಬೈಗೆ 21 ದಿನಗಳ ಕಾಲ ಸೈಕ್ಲಿಂಗ್ ಮಾಡಿದರು. ಆದರೆ ಇಷ್ಟೆಲ್ಲಾ ಮಾಡುವ ಸುಧೀರ್​​​ಗೆ ಹಣ ಎಲ್ಲಿಂದ ಬರುತ್ತಿತ್ತು ಎಂಬುದು ನಿಮ್ಮ ಪ್ರಶ್ನೆ. ಕ್ರಿಕೆಟ್​​ಗಾಗಿ ತನ್ನ ಸರ್ವಸ್ವವನ್ನೇ ಮುಡಿಪಾಗಿಟ್ಟ ಚೌದರಿ, ಸಚಿನ್ ಆಡುವ ಪ್ರತಿಯೊಂದು ಪಂದ್ಯವನ್ನು ವೀಕ್ಷಿಸುವ ಸಲುವಾಗಿ ತನ್ನ ಆಸ್ತಿಯನ್ನೇ ಮಾರಾಟ ಮಾಡಿದ್ದರು ಎಂಬುದು ವಿಶೇಷ.
icon

(5 / 8)

ತನ್ನ ಆಟ ಕಣ್ತುಂಬಿಕೊಳ್ಳಲು ಆಸ್ತಿಯನ್ನೇ ಮಾರಾಟ ಮಾಡಿದ್ದರ ವಿಷಯ ತಿಳಿದುಕೊಂಡ ಸಚಿನ್​, ಪಂದ್ಯದ ವೀಕ್ಷಣೆಗೆ ಟಿಕೆಟ್​ ಮೊತ್ತವನ್ನು ತಾನೇ ಭರಿಸುವುದಾಗಿ ಹೇಳಿದ್ದರು. ಸುಧೀರ್ ಅವರಿಗೆ ಸಾರ್ವಜನಿಕರು ನೀಡುತ್ತಿದ್ದ ಹಣದ ಬೆಂಬಲದಿಂದ ಪಂದ್ಯದ ವೀಕ್ಷಿಸುತ್ತಿದ್ದರು. ಏಪ್ರಿಲ್ 2, 2011ರಂದು ಭಾರತ ಏಕದಿನ ವಿಶ್ವಕಪ್ ಗೆದ್ದಾಗ ಇಡೀ ದೇಶವೇ ಸಂಭ್ರಮಿಸಿತ್ತು. ಭಾರತೀಯ ಆಟಗಾರರೂ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮಿಸಿದರು. ಆ ವೇಳೆ ಸಚಿನ್ ಅವರೇ ಸುಧೀರ್ ಅವರನ್ನು ಆಹ್ವಾನಿಸಿ ಸನ್ಮಾನಿಸಿದ್ದರು. ಇದು ಸುಧೀರ್​ ಚೌದರಿ ಪಾಲಿಗೆ ಅವಿಸ್ಮರಣೀಯ ದಿನವಾಗಿತ್ತು.
icon

(6 / 8)

ಮಾರ್ಚ್ 2010ರಲ್ಲಿ ಕಾನ್ಪುರದಲ್ಲಿ ಸುಧೀರ್ ಕುಮಾರ್ ಅವರನ್ನು ಅಭ್ಯಾಸದ ಸಮಯದಲ್ಲಿ ಸಚಿನ್ ಅವರೊಂದಿಗೆ ಕೈಕುಲುಕಲು ಪ್ರಯತ್ನಿಸಿದಾಗ ಅವರನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಡೆದು ಥಳಿಸಿದ್ದರು. ನಂತರ ತೆಂಡೂಲ್ಕರ್ ಅವರ ಮಧ್ಯಸ್ಥಿಕೆ ಮತ್ತು ವಿನಂತಿಯ ನಂತರ ಅವರನ್ನು ಕೈಬಿಡಲಾಗಿತ್ತು. ಅಧಿಕಾರಿಗೆ ಸಚಿನ್​ ಒಂದು ಮಾತು ಹೇಳಿದ್ದರು. ಸುಧೀರ್​ ಅವರು ನನಗೆ ದೊಡ್ಡ ಅಭಿಮಾನಿ. ಆದರೆ ನಾನು ಅವರಿಗೆ ದೊಡ್ಡ ಅಭಿಮಾನಿ ಎಂದಿದ್ದರು ನಂತರ ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್​​ಗೆ ಕ್ಷಮೆಯಾಚಿಸಿದ್ದರು.
icon

(7 / 8)

ಈ ಘಟನೆಯ ನಂತರ, BCCI ಪ್ರತಿ ಪಂದ್ಯಕ್ಕೂ ಸುಧೀರ್ ಕುಮಾರ್ ಅವರಿಗೆ ಉಚಿತ ಟಿಕೆಟ್​ ನೀಡುವುದಾಗಿ ಘೋಷಿಸಿತ್ತು. 2015ರಲ್ಲಿ, ಭಾರತ - ಬಾಂಗ್ಲಾದೇಶದ ಮಿರ್‌ಪುರದಲ್ಲಿ ಸರಣಿಯ ಸಂದರ್ಭದಲ್ಲಿ ಬಾಂಗ್ಲಾ ಅಭಿಮಾನಿಗಳಿ ಸುಧೀರ್ ಮೇಲೆ ದಾಳಿ ಮಾಡಿದ್ದರು. ಕ್ರೀಡಾಂಗಣದಿಂದ ಹೊರಬರುತ್ತಿದ್ದಾಗ ಭಾರತದ ವಿರುದ್ಧ ಬೊಬ್ಬೆ ಹೊಡೆಯುತ್ತಿದ್ದ ಬಾಂಗ್ಲಾದೇಶದ ಅಭಿಮಾನಿಗಳು ಅವರ ಮೇಲೆ ದಾಳಿ ಮಾಡಿ ಕಿರುಕುಳಕ್ಕೆ ಒಳಗಾಗಿದ್ದರು. ತನ್ನ ಜೀವದ ಭಯಕ್ಕೂ ಸಿಲುಕಿದ್ದರು. ಅಂತಿಮವಾಗಿ ಬಾಂಗ್ಲಾದೇಶ ಪೋಲೀಸರಿಂದ ರಕ್ಷಿಸಲ್ಪಟ್ಟನು.
icon

(8 / 8)

ಇತರ ಗ್ಯಾಲರಿಗಳು