ಕನ್ನಡ ಸುದ್ದಿ  /  Photo Gallery  /  Cricket News If India Doesn T Come To Pakistan We Will Not Be Going To India For World Cup Pcb Chief Najam Sethi Prs

Ind vs Pak: ಪಾಕ್​ ವಿರುದ್ಧ ಭಾರತ ಸೋಲುವ ಭೀತಿಯಲ್ಲಿದೆ, ಅದಕ್ಕೆ ಪಾಕಿಸ್ತಾನಕ್ಕೆ ಬರಲು ಹೆದರುತ್ತಿದೆ; ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ

  • IND vs PAK: ಏಷ್ಯಾ ಕಪ್-2023 ಆಡಲು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದಿಲ್ಲ ಎಂದು ಹೇಳಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ನಜಮ್ ಸೇಥಿ ಕೌಂಟರ್​ ಕೊಟ್ಟಿದ್ದಾರೆ.

ಏಷ್ಯಾಕಪ್ ವಿವಾದವು ಬಿಸಿಸಿಐ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಈ ಟೂರ್ನಿ ಪಾಕಿಸ್ತಾನದಲ್ಲಿ ಆಯೋಜನೆಯಾದರೆ ನಾವು ಪ್ರಯಾಣ ಬೆಳೆಸುವುದಿಲ್ಲ. ಹೈಬ್ರಿಡ್ ಮಾದರಿಯಾದರೆ ಮಾತ್ರ ಆಡುತ್ತೇವೆ ಎಂದು ಬಿಸಿಸಿಐ ಸೂಚಿಸಿದೆ. ಅದಕ್ಕೆ ಪಾಕಿಸ್ತಾನ ಒಪ್ಪಿಗೆ ನೀಡಿದೆ.
icon

(1 / 7)

ಕೆಲವು ದಿನಗಳ ಹಿಂದಷ್ಟೇ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿಗಳು ಸಹ ಏಷ್ಯಾಕಪ್​ ಟೂರ್ನಿಗಾಗಿ ಪಾಕಿಸ್ತಾನಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಹೇಳುವ ಮೂಲಕ ಬಿಸಿಸಿಐ ಪರೋಕ್ಷ ಬೆಂಬಲ ಸೂಚಿಸಿವೆ. ಇದರ ಬೆನ್ನಲ್ಲೇ ಮತ್ತೊಂದು ಸಮಸ್ಯೆ ಆರಂಭವಾಗಿದೆ.
icon

(2 / 7)

ಏಷ್ಯಾಕಪ್​ ಟೂರ್ನಿಯನ್ನು ಶ್ರೀಲಂಕಾಗೆ ಸ್ಥಳಾಂತರಿಸಲಾಗುತ್ತದೆ ಎಂಬುದರ ಕುರಿತು ವರದಿಯಾಗಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ಪಾಕಿಸ್ತಾನ, ಟೂರ್ನಿ ಸ್ಥಳಾಂತರವಾದರೆ, ನಾವು ಬಹಿಷ್ಕರಿಸುತ್ತೇವೆ ಎಂದು ಬೆದರಿಕೆ ಹಾಕಿದೆ. ಈ ವಿವಾದ ಇಲ್ಲಿಗೆ ನಿಲ್ಲುತ್ತಿಲ್ಲ. ಏಕದಿನ ವಿಶ್ವಕಪ್​ ಮೇಲೂ ಪರಿಣಾಮ ಬಿದ್ದಿದೆ.
icon

(3 / 7)

ಭಾರತ ತಂಡವು ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಬರದಿದ್ದರೆ, ನಾವು ಕೂಡ ಏಕದಿನ ವಿಶ್ವಕಪ್ ಟೂರ್ನಿಗಾಗಿ ಭಾರತಕ್ಕೆ ಪ್ರಯಾಣ ಬೆಳೆಸಲ್ಲ. ನಮಗೂ ತಟಸ್ಥ ಸ್ಥಳಗಳಲ್ಲಿ ಪಂದ್ಯಗಳನ್ನು ಆಯೋಜಿಸಬೇಕು ಎಂದು ಕೋರಿದೆ.
icon

(4 / 7)

ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಮುಖ್ಯಸ್ಥ ನಜಮ್ ಸೇಥಿ ಇದೇ ವಿಷಯದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ವಿರುದ್ಧ ಪಾಕಿಸ್ತಾನಕ್ಕೆ ವಿರುದ್ಧ ಸೋಲುವ ಭಯದಿಂದ ಭಾರತ ಕ್ರಿಕೆಟ್ ತಂಡ ಇಲ್ಲಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್​​​​​ಗೆ ಅವರು ಈ ಹೇಳಿಕೆ ನೀಡಿದ್ದಾರೆ.
icon

(5 / 7)

ಭಾರತದ ವಾಲಿಬಾಲ್ ಮತ್ತು ಕಬಡ್ಡಿ ತಂಡಗಳು ಪಾಕಿಸ್ತಾನಕ್ಕೆ ಬಂದಿವೆ. ಅವರಿಗೆ ಇಲ್ಲಿ ಯಾವುದೇ ಭದ್ರತಾ ಸಮಸ್ಯೆಗಳಿಲ್ಲ. ಆದರೆ, ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಏಕೆ ಬರುತ್ತಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ನನಗೆ ಅನಿಸಿದ ಪ್ರಕಾರ ಭಾರತ ತಂಡ ಹೆದರಿದೆ. ಪಾಕಿಸ್ತಾನದಲ್ಲಿ ಪಾಕಿಸ್ತಾನವನ್ನು ಸೋಲಿಸುವುದು ಕಷ್ಟ. ಸೋಲುತ್ತೇವೆ ಎಂಬ ಭಯ ಟೀಮ್​​ ಇಂಡಿಯಾಗೆ ಇದ್ದಂತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
icon

(6 / 7)

ಅಹಮದಾಬಾದ್‌ನಲ್ಲಿ ಈ ವರ್ಷದ ಏಕದಿನ ವಿಶ್ವಕಪ್‌ನ ಭಾಗವಾಗಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ ಎಂದು ಸೇಥಿ ಹೇಳಿದರು. ಇದು ಏಕಪಕ್ಷೀಯ ನಿರ್ಧಾರ. ವಾಸ್ತವವಾಗಿ ನಾವು ಭಾರತಕ್ಕೆ ಬರುತ್ತಿಲ್ಲ. ಚೆನ್ನೈ, ಕೋಲ್ಕತ್ತಾ ಎಂದು ಹೇಳಿದರೆ ನಾವು ಯೋಚಿಸುತ್ತೇವೆ. ಭಾರತಕ್ಕೆ ಹೋಗಲು ನಮ್ಮ ಸರ್ಕಾರ ಒಪ್ಪುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
icon

(7 / 7)

IPL_Entry_Point

ಇತರ ಗ್ಯಾಲರಿಗಳು