IPL 2023 final: ರೈಲ್ವೆ ನಿಲ್ದಾಣದಲ್ಲೇ ಮಲಗಿದ್ರು ಸಿಎಸ್‌ಕೆ ಫ್ಯಾನ್ಸ್; ಮಳೆಯಿಂದ ಸಮಸ್ಯೆ ಅನುಭವಿಸಿದ್ದು ತಂಡಗಳಲ್ಲ, ಅಭಿಮಾನಿಗಳು
GT vs CSK IPL 2023 : ಭಾರಿ ಮಳೆಯಿಂದಾಗಿ ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯ ಇಂದು ಸಂಜೆ ನಡೆಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಿಎಸ್‌ಕೆ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ.
(1 / 7)
GT vs CSK IPL 2023 : ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಹೀಗಾಗಿ ಅಭಿಮಾನಿಗಳು ನಿರಾಶರಾಗಿ ಹಿಂತಿರುಗಿದರು. ಮಳೆಗೆ ತಂಡಗಳು ಸಂಕಷ್ಟಕ್ಕೊಳಗಾಗಿದ್ದು ಒಂದೆಡೆಯಾದರೆ, ಅಭಿಮಾನಿಗಳ ಕಷ್ಟ ಮತ್ತೊಂದು ಕಡೆ.(AFP)
(2 / 7)
ಮಳೆಯ ನಿರೀಕ್ಷೆ ಇಲ್ಲದೆ ಬಂದಿದ್ದ ಅಭಿಮಾನಿಗಳು ಅನಿರೀಕ್ಷತ ಮಳೆಗೆ ಒದ್ದೆಯಾದರು. ಕೊಡೆ ತರದವರು ಬಟ್ಟೆ, ಪ್ಲಾಸ್ಟಿಕ್ ಕವರ್ ಸೇರಿದಂತೆ ಇತರ ವಸ್ತುಗಳನ್ನು ಆಶ್ರಯಿಸಿದರು.(AFP)
(3 / 7)
ಫೈನಲ್ ಪಂದ್ಯವಾಗಿದ್ದ ಕಾರಣ ಮಳೆ ನಿಲ್ಲುವವರೆಗೂ ಅಭಿಮಾನಿಗಳು ಮೈದಾನದಲ್ಲೇ ಉಳಿದರು. ಮುಂದೂಡುವ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದ ಬಳಿಕ ಅಲ್ಲಿಂದ ಹಿಂತಿರುಗಿದರು.(PTI)
(4 / 7)
ಪಂದ್ಯದ ವೇಳೆ ಮಳೆಯಾಗುತ್ತದೆ ಎಂದು ಹಲವರು ನಿರೀಕ್ಷಿಸಿರಲಿಲ್ಲ. ಇದರಿಂದ ಅಭಿಮಾನಿಗಳು ಮಳೆಯಲ್ಲಿ ಒದ್ದೆಯಾಗಬೇಕಾಯಿತು.(PTI)
(5 / 7)
ಮಳೆ ಮುಂದುವರಿದಿದ್ದರಿಂದ ಪ್ರೇಕ್ಷಕರು ಕ್ರೀಡಾಂಗಣದಲ್ಲಿನ ಶೆಡ್‌ಗಳಲ್ಲಿ ಆಶ್ರಯ ಪಡೆದರು. ಮಳೆ ನಿಂತ ವೇಳೆ ಮತ್ತೆ ಶೆಡ್‌ನಿಂದ ಹೊರ ಬರುತ್ತಿದ್ದರು. ತಮ್ಮ ತಂಡವನ್ನು ಬೆಂಬಲಿಸಲು ಬಂದಿದ್ದ ನಿಷ್ಠಾವಂತ ಅಭಿಮಾನಿಗಳು ಸಮಸ್ಯೆ ಎದುರಿಸಿದರು. ಅದರಲ್ಲೂ ಸಿಎಸ್‌ಕೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.(AFP)
(6 / 7)
ಕೆಲವು ಪ್ರೇಕ್ಷಕರು ದೊಡ್ಡ ಕ್ಯಾರಿಬ್ಯಾಗ್‌ಗಳನ್ನು ತಲೆ ಮೇಳೆ ಎಳೆದುಕೊಂಡು ಮಳೆಯಿಂದ ರಕ್ಷಣೆ ಪಡೆಯಲು ಪ್ರಯತ್ನಿಸಿದರು.(AFP)
ಇತರ ಗ್ಯಾಲರಿಗಳು