ಕನ್ನಡ ಸುದ್ದಿ  /  Photo Gallery  /  Cricket News Ipl 2023 Ravindra Jadeja Life Story Watchman Son Is Indias Best All Rounder Csk Team India Jra

Ravindra Jadeja: ಸೆಕ್ಯೂರಿಟಿ ಗಾರ್ಡ್ ಮಗ ಸ್ಟಾರ್ ಕ್ರಿಕೆಟರ್ ಆಗಿದ್ದೇ ರೋಚಕ; ಕಂಗೆಡಿಸಿತ್ತು ಅಮ್ಮನ ಅಗಲಿಕೆ, ಸರ್ ಜಡೇಜಾ ಬದುಕಿನ ಕತೆ

  • Ravindra Jadeja: ಭಾರತ ಕ್ರಿಕೆಟ್‌ ತಂಡದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ. ವಿಶ್ವದ ಬೆಸ್ಟ್‌ ಆಲ್‌ರೌಂಡರ್‌ಗಳ ಪಟ್ಟಿಯಲ್ಲೂ ಇವರು ಸ್ಥಾನ ಪಡೆಯುತ್ತಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಲವು ಸಮಯದಿಂದ ಇವರು ನಂಬರ್‌ ವನ್ ಶ್ರೇಯಾಂಕ ಪಡೆದಿದ್ದಾರೆ. ಇವರು ಇಂದು ದೊಡ್ಡ ಕ್ರಿಕೆಟಿಗನಾಗುವಲ್ಲಿ ಅವರ ತಾಯಿಯ ಕನಸಿದೆ. ಅವರ ಬದುಕಿನ ಸಣ್ಣ ಚಿತ್ರಣ ಇಲ್ಲಿದೆ.

ಜಡೇಜಾ ಅವರ ತಂದೆ ಅನಿರುದ್ಧ್​ ಜಡೇಜಾ, ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು. ಅಮ್ಮ ಲತಾ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್​ ಆಗಿದ್ದರು. ಅಪ್ಪ ತುಂಬಾ ಶಿಸ್ತಿನ ಮನುಷ್ಯ. ಅದೇ ಶಿಷ್ತನ್ನು ಮಕ್ಕಳಿಗೂ ಕಲಿಸಿದ್ರು. ಅಲ್ಲದೆ ಮಗನನ್ನ ಸೇನೆಗೆ ಸೇರಿಸುವ ಮಹದಾಸೆ ಇಟ್ಟುಕೊಂಡಿದ್ರು. 
icon

(1 / 9)

ಆದರೆ, ಸರ್‌ ಜಡೇಜಾಗೆ ಕ್ರಿಕೆಟ್​​​ ಅಂದ್ರೆ ಹುಚ್ಚು ಪ್ರೀತಿ. ಆದರೆ, ಇದಕ್ಕೆ ಅಪ್ಪನ ಬೆಂಬಲ ಇರಲಿಲ್ಲ. ಅಮ್ಮನ ಬೆಂಬಲದೊಂದಿಗೆ ಅಪ್ಪನಿಗೆ ಗೊತ್ತಾಗದಂತೆ ಕ್ರಿಕೆಟ್​ ಆಡಲು ಹೋಗುತ್ತಿದ್ದರು. ಅಂತಹ ಸಾಮಾನ್ಯ ಹುಡುಗ ಇಂದು ಜಗತ್ತಿನ ನಂಬರ್‌ ವನ್‌ ಟೆಸ್ಟ್ ಆಲ್‌ರೌಂಡರ್‌ ಆಗಿದ್ದಾರೆ.
icon

(2 / 9)

ಜಡೇಜಾ ಜೀವನದಲ್ಲಿಆದ ಮಹಾ ದುರಂತವೇ ಅವರ ತಾಯಿಯ ಅಕಾಲಿಕ ಮರಣ. ಜಡೇಜಾ ಇನ್ನೂ 15 ವರ್ಷದವರಾಗಿದ್ದಾಗಲೇ, ಅವರನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮತ್ತು ಎಲ್ಲದಕ್ಕೂ ಬೆಂಬಲವಾಗಿ ನಿಂತಿದ್ದ ಅಮ್ಮನನ್ನು ಕಳೆದುಕೊಂಡರು. ಅನಿರೀಕ್ಷಿತ ರಸ್ತೆ ಅಪಘಾತದಲ್ಲಿ ಜಡೇಜಾ ತಾಯಿ ಇಹಲೋಕ ತ್ಯಜಿಸಿದರು.
icon

(3 / 9)

ಕೇವಲ ತಾಯಿಯ ಬೆಂಬಲ ಹಾಗೂ ಅವರ ನೆರಳಿನ ಬಲದೊಂದಿಗೆ ಕ್ರಿಕೆಟ್‌ ಆಡುತ್ತಿದ್ದ ಜಡೇಜಾ, ತನ್ನ ಕನಸು ಕಮರಿತು ಎಂದೇ ಭಾವಿಸಿದರು. ಅಂತಹ ಸಂದರ್ಭದಲ್ಲಿ ಅವರನ್ನು ತಾಯಿಯಂತೆ ನೋಡಿಕೊಂಡವರು ಅಕ್ಕ ನೈನಾ ಜಡೇಜಾ. ತಮ್ಮನನ್ನು ಅಮ್ಮನ ಸಮನಾಗಿ ನೋಡಿದ ಅಕ್ಕ, ತಾಯಿಯ ಉದ್ಯೋಗ ಪಡೆದು ಮನೆಯನ್ನು ನಿಭಾಯಿಸಿದರು. ಅಕ್ಕನ ನೆರಳಿನಲ್ಲಿ ಬಡತನದಲ್ಲಿ ಬೆಳೆದ ಜಡೇಜಾ ಇಂದು ಜಗತ್ಪ್ರಸಿದ್ದ ಕ್ರಿಕೆಟಿಗ. ಅಲ್ಲದೆ ವಿಶ್ವದ ಬೆಸ್ಟ್‌ ಫೀಲ್ಡರ್‌ಗಳಲ್ಲಿ ಒಬ್ಬರು.
icon

(4 / 9)

ರವೀಂದ್ರ ಜಡೇಜಾ 1988ರ ಡಿಸೆಂಬರ್ 6ರಂದು ಗುಜರಾತಿನಲ್ಲಿ ಜನಿಸಿದರು. ಬಾಲ್ಯದಲ್ಲಯೇ ತಂದೆ ತಾಯಿಯ ಕಷ್ಟವನ್ನು ಕಣ್ಣಾರೆ ಕಂಡಿದ್ದ ಅವರು, ಕಷ್ಟಟಪಟ್ಟು ಮೇಲಕ್ಕೆ ಬಂದರು. ತಂದೆಯ ಆಸೆಯಂತೆ ಸೇನೆಗೆ ಸೇರಲು ಒಪ್ಪದ ಜಡ್ಡು, ತಮ್ಮ ಆಸೆ, ಕನಸು ಹಾಗೂ ಪ್ರಾಣವೇ ಆಗಿದ್ದ ಕ್ರಿಕೆಟ್‌ನತ್ತ ಮುಖ ಮಾಡಿದರು. ತಂದೆಯ ಸ್ನೇಹಿತ ಮಹೇಂದ್ರ ಸಿಂಗ್​ ಬಂಗ್ಲೋ ಬಳಿ ಕೋಚಿಂಗ್​ ಪಡೆದರು. 
icon

(5 / 9)

ಆರಂಭದಲ್ಲಿ ಸ್ಥಳೀಯ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಅಬ್ಬರಿಸಿದ ಸರ್‌ ಜಡೇಜಾ, 2006ರಲ್ಲಿ ಲೀಸ್ಟ್​ ಎ ಹಾಗೂ ಫಸ್ಟ್‌ ಕ್ಲಾಸ್‌ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟರು. 2007ರಲ್ಲಿ ಟಿ20 ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದರು. 2008ರಲ್ಲಿ ಅಂಡರ್‌ 19 ವಿಶ್ವಕಪ್‌ಕ್‌ ತಂಡದ ಉಪನಾಯಕನಾಗಿಯೂ ಮಿಂಚಿದರು.
icon

(6 / 9)

ಅಂಡರ್​​​-19 ವಿಶ್ವಕಪ್​​​ ಬಳಿಕ ಜಡೇಜಾ ಜೀವನವೇ ಬದಲಾಯ್ತು. ಅದೇ ವರ್ಷ ಆರಂಭವಾದ ಐಪಿಎಲ್‌ಗೆ ಜಡೇಜಾ ಆಯ್ಕೆಯಾದರು. ಅಲ್ಲಿನ ಪ್ರದರ್ಶನದ ಮೇಲೆ ಮುಂದಿನ ವರ್ಷವೇ ಟೀಮ್​ ಇಂಡಿಯಾಗೂ ಕಾಲಿಟ್ಟರು. ಹೀಗೆ ತಮ್ಮ ಜೀವನದ ಪ್ರತಿ ಹಂತದಲ್ಲೂ ಯಶಸ್ಸಿನ ಮೆಟ್ಟಿಲೇರಿದ ಜಡೇಜಾ, ಐಪಿಎಲ್‌ ಹಾಗೂ ಟೀಮ್‌ ಇಂಡಿಯಾದ ಅತ್ಯುತ್ತಮ ಆಲ್‌ರೌಂಡರ್‌ ಆಗಿದ್ದಾರೆ.
icon

(7 / 9)

ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಜಡೇಜಾ ಅತ್ಯುತ್ತಮ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದರು. ಈ ಸರಣಿ ವೇಳೆ ಟೀಮ್‌ ಇಂಡಿಯಾ ನಾಯಕ ಜಡೇಜಾ ಕುರಿತು ಮಾತನಾಡಿದ್ದರು. ಜಡ್ಡು ಭಾರತ ತಂಡದಲ್ಲಿರುವುದು ನಮ್ಮ ಅದೃಷ್ಟ ಎಂದು ರೋಹಿತ್‌ ಹೇಳಿದ್ದರು. ಇದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ. 
icon

(8 / 9)

ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಜಡೇಜಾ ಅತ್ಯುತ್ತಮ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದರು. ಈ ಸರಣಿ ವೇಳೆ ಟೀಮ್‌ ಇಂಡಿಯಾ ನಾಯಕ ಜಡೇಜಾ ಕುರಿತು ಮಾತನಾಡಿದ್ದರು. ಜಡ್ಡು ಭಾರತ ತಂಡದಲ್ಲಿರುವುದು ನಮ್ಮ ಅದೃಷ್ಟ ಎಂದು ರೋಹಿತ್‌ ಹೇಳಿದ್ದರು. ಇದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ. (All photos: Ravindra Jadeja Instagram and ANI)

ಪ್ರಸ್ತುತ ಜಡೇಜಾ ಭಾರತ ತಂಡದಲ್ಲಿ ಕಾಯಂ ಆಲ್‌ರೌಂಡರ್‌ ಆಗಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುತ್ತಿದ್ದಾರೆ. 
icon

(9 / 9)

ಪ್ರಸ್ತುತ ಜಡೇಜಾ ಭಾರತ ತಂಡದಲ್ಲಿ ಕಾಯಂ ಆಲ್‌ರೌಂಡರ್‌ ಆಗಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುತ್ತಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು