ಕನ್ನಡ ಸುದ್ದಿ  /  Photo Gallery  /  Disadvantages By Consuming Mango In Summer

ಬೇಸಿಗೆಯಲ್ಲಿ ಹೆಚ್ಚು ಮ್ಯಾಂಗೋಶೇಕ್ ಸೇವಿಸುತ್ತಿದ್ದೀರಾ...ಹಾಗಿದ್ರೆ ಈ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ..!

  • ಬೇಸಿಗೆ ಎಂದರೆ ಕೂಡಲೇ ನೆನಪಾಗುವುದು ಮಾವಿನ ಹಣ್ಣು. ಹಣ್ಣುಗಳ ರಾಜ ಎಂದೇ ಕರೆಯುವ ಮಾವಿನ ಹಣ್ಣಿನಲ್ಲಿ ನಾನಾ ವಿಧಗಳಿವೆ. ಮಾರುಕಟ್ಟೆಯಲ್ಲಿ ದೊರೆಯುವ ನಾನಾ ರೀತಿಯ ಹಣ್ಣುಗಳನ್ನು ಮನೆಗೆ ತಂದು ಕೆಲವರು ಕತ್ತರಿಸಿ ತಿಂದರೆ, ಇನ್ನೂ ಕೆಲವರು ಐಸ್​​​​ಕ್ರೀಮ್ ಅಥವಾ ಮ್ಯಾಂಗೋ ಶೇಕ್ ಮಾಡಿ ಕುಡಿಯುತ್ತಾರೆ. ಆದರೆ ಇದರಿಂದ ನಿಮಗೆ ಸಮಸ್ಯೆಗಳು ಹೆಚ್ಚಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.

ದೇಹದಲ್ಲಿ ಉಷ್ಣತೆ ಹೆಚ್ಚಾದರೂ ಕಷ್ಟ, ಶೀತ ಹೆಚ್ಚಾದರೂ ಕಷ್ಟ. ಮಾವಿನ ಹಣ್ಣನ್ನು ಹೆಚ್ಚು ಸೇವಿಸಿದರೆ ನಿಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದ ತಲೆ ನೋವು, ಹೊಟ್ಟೆ ನೋವು ಸೇರಿದಂತೆ ಇನ್ನಿತರ ಗಂಭೀರ ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಹೆಚ್ಚು
icon

(1 / 5)

ಮಾವಿನ ಹಣ್ಣಿನಲ್ಲಿ ಸಿಹಿ ಅಂಶ ಹೆಚ್ಚಾಗಿದೆ. ಜೊತೆಗೆ ಮ್ಯಾಂಗೋಶೇಕ್ ತಯಾರಿಸಲು ಹಾಲು, ಸಕ್ಕರೆಯಂತ ಪದಾರ್ಥಗಳನ್ನು ಬಳಸುವುದರಿಂದ ನಿಮ್ಮ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಇದರಲ್ಲಿ ಕ್ಯಾಲೊರಿ ಹೆಚ್ಚಾಗಿರುವುದರಿಂದ ಸಮಸ್ಯೆಗಳಿಗೆ ದಾರಿ ಮಾಡಿಕೊಡದೆ ಮಿತವಾಗಿ ತಿನ್ನಿ.
icon

(2 / 5)

ಇಷ್ಟ ಎಂದು ಪ್ರತಿದಿನ ಮಾವಿನ ಹಣ್ಣು ಅಥವಾ , ಮಾವಿನ ಹಣ್ಣಿನಿಂದ ತಯಾರಿಸಿದ ಪದಾರ್ಥಗಳನ್ನು ಹೆಚ್ಚು ಸೇವಿಸಿದರೆ ಮುಂದೆ ನೀವೇ ಕಷ್ಟಪಡಬೇಕಾಗುತ್ತದೆ.
icon

(3 / 5)

ಮಾವಿನ ಹಣ್ಣನ್ನು ಹೆಚ್ಚು ಸೇವಿಸುವುದರಿಂದ ಉದರ ಸಂಬಂಧಿ ಸಮಸ್ಯೆಗಳು ಹೆಚ್ಚು ಬಾಧಿಸುತ್ತದೆ. ಹೊಟ್ಟೆನೋವು, ವಾಂತಿ, ಬೇಧಿ, ವಾಕರಿಕೆಯಂತ ಆರೋಗ್ಯ ತೊಂದರೆಗಳು ಕಾಡುವುದರಿಂದ ಜಾಗ್ರತೆ ಅಗತ್ಯ.
icon

(4 / 5)

ಕೆಲವರಿಗೆ ಮಾವಿನ ಹಣ್ಣಿನಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ. ಅಂತದ್ದರಲ್ಲಿ ಬಾಯಿಗೆ ರುಚಿ ನೀಡುತ್ತದೆ ಎಂಬ ಕಾರಣಕ್ಕೆ ಇದನ್ನು ಹೆಚ್ಚಾಗಿ ಸೇವಿಸಿದರೆ ತುರಿಕೆಯಂತ ಚರ್ಮಸಂಬಂಧಿ ಕಾಯಿಲೆಗಳು ಉಲ್ಪಣಗೊಳ್ಳುತ್ತವೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು