ಕನ್ನಡ ಸುದ್ದಿ  /  Photo Gallery  /  Easy Tips For Hair Straightening In Home

hair straightening at home: ಮನೆಯಲ್ಲಿಯೇ ಹೇರ್‌ ಸ್ಟ್ರೈಟನಿಂಗ್‌ ಮಾಡಬಹುದು, ಅದು ಕೂಡಾ ಸ್ಟ್ರೈಟನರ್‌ ಇಲ್ಲದೆ!

Hair Straightening Easy Tips : ಹೇರ್‌ ಸ್ಟ್ರೈಟನಿಂಗ್‌ ಬಗ್ಗೆ ಹೆಚ್ಚಿನ ಹೆಣ್ಣು ಮಕ್ಕಳಿಗೆ ಆಸಕ್ತಿ ಜಾಸ್ತಿ. ಕರ್ಲೀ ಅಥವಾ ಗುಂಗುರು ಕೂದಲಿನವರಂತೂ, ಒಮ್ಮೆಯಾದರೂ ಕೂದಲು ನೇರವಾಗಿಸಿ ಅಂದ ನೋಡಬೇಕೆಂದು ಬಯಸುತ್ತಾರೆ. ಆದರೆ ಪ್ರತಿ ಬಾರಿಯೂ ದುಬಾರಿ ಬೆಲೆ ಕೊಟ್ಟು ಪಾರ್ಲರ್‌ಗಳಿಗೆ ಹೋಗಿ ಹೇರ್‌ ಸ್ಟ್ರೈಟನಿಂಗ್‌ ಮಾಡಿಸಲು ಎಲ್ಲರಿಂದ ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ, ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಅದನ್ನು ಮನೆಯಲ್ಲಿಯೇ ಮಾಡಬಹುದು.

ಹಬ್ಬದ ಸೀಸನ್ ಶುರುವಾಗಿದೆ. ಇಂತಹ ಸಮಯದಲ್ಲಿ ಹುಡುಗಿಯರು ವಿವಿಧ ರೀತಿಯಲ್ಲಿ ರೆಡಿಯಾಗಬೇಕು ಎಂಬ ಯೋಚನೆಯಲ್ಲಿರುತ್ತಾರೆ. ಆದರೆ ಹೆಚ್ಚು ಸುಂದರವಾಗಿ ಕಾಣಲು ಈ ಬಾರಿ ನಿಮ್ಮ ಕೂದಲು ಸ್ಟ್ರೈಟ್‌ ಮಾಡಿಸುವ ಯೋಜನೆಯೂ ಇರಬಹುದು. ಆದರೆ ಪಾರ್ಲರ್‌ಗೆ ಹೋಗಲು ಸಮಯವಿಲ್ಲದಿರಬಹುದು. ಹಾಗಂತ ನಸುಮ್ಮನೆ ಕೂರಬೇಡಿ. ಈ ಸರಳ ವಿಧಾನದಿಂದ ನಿಮ್ಮ ಕೂದಲನ್ನು ಮನೆಯಲ್ಲಿಯೇ ನೇರವಾಗಿಸಬಹುದು.
icon

(1 / 6)

ಕೂದಲನ್ನು ನೇರಗೊಳಿಸಲು ಹಾಲು ತುಂಬಾ ಒಳ್ಳೆಯದು. ಕೂದಲನ್ನು ಸುಲಭವಾಗಿ ಮೃದುಗೊಳಿಸಲು ಪ್ರೋಟೀನ್ ಭರಿತ ಹಾಲನ್ನು ತೆಗೆದುಕೊಳ್ಳಬೇಕು. ಇದು ಕೂದಲು ಕಪ್ಪಾಗಲು ಸಹಾಯ ಮಾಡುತ್ತದೆ. ಮನೆಯಲ್ಲೇ ಸ್ಟ್ರೈಟ್ನರ್ ಆಗಿ ಹಾಲು ತುಂಬಾ ಉಪಯುಕ್ತವಾಗಿದೆ.
icon

(2 / 6)

ಮೊಸರಿನಲ್ಲಿ ಸ್ವಲ್ಪ ಜೇನುತುಪ್ಪ ಮತ್ತು ಬಾಳೆಹಣ್ಣನ್ನು ಬೆರೆಸಿ ಪೇಸ್ಟ್ ಮಾಡಿ. ಇದಕ್ಕೂ ಮುನ್ನ ಹಾಲಿಗೆ ನಿಂಬೆರಸ ಸೇರಿಸಿ ಫ್ರಿಡ್ಜ್ ನಲ್ಲಿ ತುಂಬಾ ಹೊತ್ತು ಇಡಿ. ಈಗ ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ.
icon

(3 / 6)

ಕೂದಲಿಗೆ ಪೇಸ್ಟ್ ಹಚ್ಚುವ ನಿಯಮಗಳು - ಕೂದಲಿಗೆ ಪೇಸ್ಟ್ ಹಚ್ಚುವಾಗ, ಬುಡದಿಂದ ಮೇಲಿನವರೆಗೆ ಚೆನ್ನಾಗಿ ಹಚ್ಚಬೇಕು. ಆ ಸಮಯದಲ್ಲಿ ನಿಮ್ಮ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ. ಇದು ಹೆಚ್ಚು ಪ್ರಯೋಜನಕಾರಿ.
icon

(4 / 6)

ಪೇಸ್ಟ್ ಅನ್ನು ಕೂದಲಿಗೆ ಹಚ್ಚಿದ ಬಳಿಕ, ಅದನ್ನು ದೀರ್ಘಕಾಲದವರೆಗೆ ಬಿಡಿ. ನಂತರ ಅದನ್ನು ಒರೆಸಿ. ಈ ಹಂತದಲ್ಲಿ ನೀವು ನಿಮ್ಮ ಕೂದಲನ್ನು ಕಟ್ಟಬಹುದು. ಇಲ್ಲವೇ ಕೂದಲನ್ನು ಸಡಿಲವಾಗಿ ಬಿಡಬಹುದು.
icon

(5 / 6)

ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಸಮಯವಾದ ನಂತರ, ಶಾಂಪೂ ಬಳಸಿ ಅದನ್ನು ಚೆನ್ನಾಗಿ ತೊಳೆಯಿರಿ. ಇದು ಕೂದಲನ್ನು ತಾಜಾ ಮತ್ತು ಸುಂದರವಾಗಿಸುತ್ತದೆ. ಇದರಿಂದ ಕೂದಲು ನೇರವಾಗುತ್ತದೆ. ಒಂದು ವೇಳೆ ಇದರಿಂದ ನಿಮಗೆ ಸಮಾಧಾನ ಆಗದಿದ್ದರೆ, ಮನೆಯಲ್ಲೇ ಹೇರ್‌ ಸ್ಟ್ರೈಟ್ನರ್‌ ಬಳಸಿ, ಸ್ಟ್ರೈಟನಿಂಗ್‌ ಮಾಡಿ.
icon

(6 / 6)

IPL_Entry_Point

ಇತರ ಗ್ಯಾಲರಿಗಳು