ಕನ್ನಡ ಸುದ್ದಿ  /  Photo Gallery  /  Fixed Deposits Interest Rates: These Psu Banks Offering More Than 7% Return On Fixed Deposits

Fixed Deposits Interest Rates: ಈ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ ಹೂಡಿಕೆ ಮಾಡಿದ್ರೆ ಉತ್ತಮ ಬಡ್ಡಿದರ ಗ್ಯಾರಂಟಿ

ಇತ್ತೀಚಿನ ರೆಪೊ ದರ ಹೆಚ್ಚಳದಿಂದಾಗಿ ಈ ಹಣಕಾಸು ವರ್ಷದಲ್ಲಿ ಬ್ಯಾಂಕ್‌ ಬಡ್ಡಿದರಗಳು ಹೆಚ್ಚಾಗಿವೆ. ಸಾಲದ ಮೇಲಿನ ಬಡ್ಡಿದರ ಹೆಚ್ಚಾದಂತೆ, ಹೂಡಿಕೆ ಮೇಲಿನ ಬಡ್ಡಿದರಗಳೂ ತುಸು ಹೆಚ್ಚಾಗಿವೆ. ಈಗ ರೆಪೊ ದರ ಶೇಕಡ 6.25ರಷ್ಟಿದ್ದು, ಇದು 2018ರ ಆಗಸ್ಟ್‌ ಬಳಿಕ ಅತ್ಯಧಿಕ ಹೆಚ್ಚಳವಾಗಿದೆ. ಹಲವು ಬ್ಯಾಂಕ್‌ಗಳು ಕಳೆದ ಕೆಲವು ತಿಂಗಳಿನಿಂದ ಸ್ಥಿರ ಠೇವಣಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ. ಫಿಕ್ಸಡ್‌ ಡೆಪೊಸಿಟ್‌ ಮಾಡುವವರಿಗೆ ಇದರಿಂದ ತುಸು ಹೆಚ್ಚು ಲಾಭವಾಗಲಿದೆ. ಸ್ಥಿರ ಠೇವಣಿ ಮಾಡುವ ಹಿರಿಯ ನಾಗರಿಕರಿಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಅತ್ಯುತ್ತಮ ಬಡ್ಡಿದರ ಪಡೆಯಬಹುದಾದ ಬ್ಯಾಂಕ್‌ಗಳು ಮತ್ತು ಅವುಗಳ ಪ್ರಸ್ತುತ ಬಡ್ಡಿದರದ ವಿವರ ಪಡೆಯೋಣ ಬನ್ನಿ.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾವು ಏಳು ದಿನದಿಂದ ಹತ್ತು ವರ್ಷದವರೆಗಿನ ಸ್ಥಿರ ಠೇವಣಿದಾರರಿಗೆ ಶೇಕಡ 7.80 ವರೆಗೆ ಉತ್ತಮ ಬಡ್ಡಿದರ ನೀಡುತ್ತಿದೆ. 5ರಿಂದ 10 ವರ್ಷ ಹೂಡಿಕೆ ಮಾಡುವ ಹಿರಿಯ ನಾಗರಿಕರು ಕಡಿಮೆಯೆಂದರೂ ವಾರ್ಷಿಕ ಶೇಕಡ 7.20 ಬಡ್ಡಿದರ ಪಡೆಯಬಹುದು.   
icon

(1 / 7)

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು 7 ದಿನದಿಂದ 10 ವರ್ಷದವರೆಗಿನ ಸ್ಥಿರ ಠೇವಣಿಗೆ  ಶೇಕಡ 3.50ರಿಂದ ಶೇಕಡ 7.25ರವರೆಗೆ ಬಡ್ಡಿದರ ನೀಡುತ್ತದೆ. 60ರಿಂದ 80 ವರ್ಷದ ವಯಸ್ಸಿನವರಿಗೆ  ಸ್ಥಿರ ಠೇವಣಿಗೆ ಇನ್ನೂ ಹೆಚ್ಚಿನ ಬಡ್ಡಿದರ ದೊರಕುತ್ತದೆ.
icon

(2 / 7)

ಬ್ಯಾಂಕ್‌ ಆಫ್‌ ಇಂಡಿಯಾವು 7ರಿಂದ 10 ವರ್ಷದವರೆಗಿನ ಸ್ಥಿರ ಠೇವಣಿಗೆ ಹಿರಿಯ ನಾಗರಿಕರಿಗೆ ಶೇಕಡ 7.75 ಬಡ್ಡಿದರ ನೀಡುತ್ತದೆ. ತೆರಿಗೆ ಉಳಿತಾಯದ ಸ್ಥಿರ ಠೇವಣಿಗೆ ಶೇಕಡ 6.50 ಬಡ್ಡಿದರ ದೊರಕುತ್ತದೆ. 
icon

(3 / 7)

ಕೆನರಾ ಬ್ಯಾಂಕ್‌ 7 ದಿನದಿಂದ 10 ವರ್ಷದವರೆಗಿನ ಸ್ಥಿರ ಠೇವಣಿಗೆ ಹಿರಿಯ ನಾಗರಿಕರಿಗೆ ಶೇಕಡ 7.50 ವಾರ್ಷಿಕ ಬಡ್ಡಿದರ ನೀಡುತ್ತದೆ.
icon

(4 / 7)

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ 7 ದಿನದಿಂದ 10 ವರ್ಷದವರೆಗಿನ ಸ್ಥಿರ ಠೇವಣಿಗೆ ಹಿರಿಯ ನಾಗರಿಕರಿಗೆ ಶೇಕಡ  7.50 ಬಡ್ಡಿದರ ನೀಡುತ್ತದೆ. ಹಿರಿಯ ನಾಗರಿಕರಿಗೆ ತೆರಿಗೆ ಉಳಿತಾಯದ ಸ್ಥಿರ ಠೇವಣಿಗೆ ಶೇಕಡ 6.60 ಬಡ್ಡಿದರ ನೀಡುತ್ತದೆ.
icon

(5 / 7)

ಪಂಜಾಬ್‌ ಆಂಡ್‌ ಸಿಂದ್‌ ಬ್ಯಾಂಕ್‌ನಲ್ಲಿ ಫಿಕ್ಸಡ್‌ ಡೆಪೊಸಿಟ್‌ ಅನ್ನು ಹೂಡಿಕೆ ಯೋಜನೆಯಾಗಿ ಪರಿಗಣಿಸುತ್ತದೆ. 7 ದಿನದಿಂದ 10 ವರ್ಷದವರೆಗಿನ ಸ್ಥಿರ ಠೇವಣಿಗೆ ಹಿರಿಯ ನಾಗರಿಕರಿಗೆ ಶೇಕಡ 7.50  ಬಡ್ಡಿದರ ದೊರಕುತ್ತದೆ. ಹಿರಿಯ ನಾಗರಿಕರಿಗೆ 7 ದಿನದಿಂದ 10 ವರ್ಷದವರೆಗಿನ ತೆರಿಗೆ ಉಳಿತಾಯದ ಸ್ಥಿರ ಠೇವಣಿಗೆ ಶೇಕಡ 6.60 ಬಡ್ಡಿದರ ನೀಡುತ್ತದೆ.
icon

(6 / 7)

ಬ್ಯಾಂಕ್‌ ಆಫ್‌ ಬರೋಡವು (ಬಿಒಬಿ) ಹಿರಿಯ ನಾಗರಿಕರಿಗೆ  7 ದಿನದಿಂದ 10 ವರ್ಷದವರೆಗಿನ ಸ್ಥಿರ ಠೇವಣಿಗೆ  7.25 ಬಡ್ಡಿದರ ನೀಡುತ್ತದೆ. ಹಿರಿಯ ನಾಗರಿಕರಿಗೆ 7 ದಿನದಿಂದ 10 ವರ್ಷದವರೆಗಿನ ತೆರಿಗೆ ಉಳಿತಾಯದ ಸ್ಥಿರ ಠೇವಣಿಗೆ ಶೇಕಡ  6.75- 6.90  ಬಡ್ಡಿದರ ನೀಡುತ್ತದೆ.
icon

(7 / 7)

IPL_Entry_Point

ಇತರ ಗ್ಯಾಲರಿಗಳು