Kannada News  /  Photo Gallery  /  Hindu Muslim Celerity Couples In Film Industry Bollywood Tollywood Sandalwood Kollywood Khushbu Sundar Gauri Khan Rsm

Celebrity Couples: ಚಿತ್ರರಂಗದ ಹಿಂದೂ-ಮುಸ್ಲಿಂ ಜೋಡಿ ಇವರು; ಕೆಲವರ ಜೀವನ ಹಾಲು ಜೇನು, ಕೆಲವರ ದಾಂಪತ್ಯದಲ್ಲಿ ಬಿರುಕು: ಫೋಟೋ ಗ್ಯಾಲರಿ

May 17, 2023 12:34 PM IST Rakshitha Sowmya
May 17, 2023 12:34 PM , IST

  • ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಅನ್ಯ ಧರ್ಮದವರನ್ನು ಮದುವೆ ಆಗಿದ್ದಾರೆ. ಅದರಲ್ಲಿ ಕೆಲವರು ಜೀವನ ಹಾಲು-ಜೇನು ಆದರೆ ಕೆಲವರು ವಿಚ್ಛೇದನ ಪಡೆದು ದೂರಾಗಿದ್ದಾರೆ. ಚಿತ್ರರಂಗದ ಕೆಲವು ಹಿಂದೂ ಹಾಗೂ ಮುಸ್ಲಿಂ ಜೋಡಿಯ ಫೋಟೋಗಳು ಇಲ್ಲಿವೆ ನೋಡಿ

ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್‌ ಚಿತ್ರರಂದಲ್ಲಿ ಅನೇಕ ಸಿನಿಮಾ ನಟ, ನಟಿಯರು ಇಸ್ಲಾಂ ಧರ್ಮೀಯರನ್ನು ಮದುವೆ ಆಗಿದ್ದಾರೆ. 

(1 / 15)

ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್‌ ಚಿತ್ರರಂದಲ್ಲಿ ಅನೇಕ ಸಿನಿಮಾ ನಟ, ನಟಿಯರು ಇಸ್ಲಾಂ ಧರ್ಮೀಯರನ್ನು ಮದುವೆ ಆಗಿದ್ದಾರೆ. (PC: Facebook Instagram)

ಕ್ರಿಕೆಟಿಗ ಮನ್ಸೂರ್‌ ಅಲಿ ಖಾನ್‌ ಪಟೌಡಿ ಅವರನ್ನು ಮದುವೆ ಆದ ಬಾಲಿವುಡ್‌ ನಟಿ ಶರ್ಮಿಳಾ ಠಾಗೂರ್‌ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ಬೇಗಂ ಆಯೆಷಾ ಸುಲ್ತಾನ ಎಂದು ಬದಲಿಸಿಕೊಂಡರು. 

(2 / 15)

ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ಇತ್ತೀಚೆಗೆ ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಅವರನ್ನು ಮದುವೆ ಆಗಿದ್ದಾರೆ. 

(3 / 15)

ರಂಗೀಲಾ ಹುಡುಗಿ ಊರ್ಮಿಳಾ ಮಾತೊಂಡ್ಕರ್‌, 2016 ರಲ್ಲಿ ಕಾಶ್ಮೀರಿ ಉದ್ಯಮಿ, ಮಾಡೆಲ್‌ ಮೊಹ್ಸಿನ್‌ ಅಖ್ತರ್‌ ಮೀರ್‌ ಅವರನ್ನು ಕೈ ಹಿಡಿದರು. 

(4 / 15)

ಮಂಗಳೂರು ಮೂಲದ ಸುನಿಲ್‌ ಶೆಟ್ಟಿ ಇಸ್ಲಾಂ ಸಮುದಾಯಕ್ಕೆ ಸೇರಿದ ಮಾನಾ ಶೆಟ್ಟಿ ಅವರನ್ನು ಮದುವೆ ಆಗಿದ್ದಾರೆ. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಸುನಿಲ್‌   ಪುತ್ರಿ ಆಥಿಯಾ ಶೆಟ್ಟಿ ಕ್ರಿಕೆಟಿಗ ರಾಹುಲ್‌ ಮದುವೆ ಆಗಿದ್ದಾರೆ. 

(5 / 15)

ಬಾಲಿವುಡ್‌ ನಟಿ ರಾಖಿ ಸಾವಂತ್‌ ಆದಿಲ್‌ ಖಾನ್‌ ದುರ್ರಾನಿಯನ್ನು ಮದುವೆ ಆಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಆದರೆ ಮದುವೆ ಆದ ಕೆಲವು ದಿನಗಳಲ್ಲೇ ಆದಿಲ್‌ ಖಾನ್‌ ಅಸಲಿ ಮುಖ ಕಳಚಿ ಬಿದ್ದಿದೆ. ರೇಪ್‌ ಪ್ರಕರಣ, ರಾಖಿ ಸಾವಂತ್‌ ಮೇಲೆ ಹಲ್ಲೆ ಆರೋಪ ಸೇರಿದಂತೆ ಇನ್ನಿತರ ಕೇಸ್‌ ಮೇಲೆ ಆದಿಲ್‌ ಜೈಲಿನಲ್ಲಿದ್ದಾರೆ. 

(6 / 15)

ಬಾಲಿವುಡ್‌ ನಟ ಶಾರುಖ್‌ ಖಾನ್‌ ಹಾಗೂ ಗೌರಿ ಖಾನ್‌ ಲವ್‌ ಸ್ಟೋರಿಯನ್ನು ಅನೇಕ ಇಂಟರ್‌ವ್ಯೂಗಳಲ್ಲಿ ಕೇಳಿದ್ದೇವೆ. ಈ ಜೋಡಿ ಅಂದಿನಿಂದ ಇದುವರೆಗೂ ಅಷ್ಟೇ ಪ್ರೀತಿಯಿಂದ ಇದ್ದಾರೆ. 

(7 / 15)

ತಮಗಿಂತ 5 ವರ್ಷ ಹಿರಿಯವರಾದ ಅಮೃತಾ ಸಿಂಗ್‌ ಕೈ ಹಿಡಿದಿದ್ದ ಸೈಫ್‌ ಅಲಿ ಖಾನ್‌ 2012 ರಲ್ಲಿ ಕರೀನಾ ಕಪೂರ್‌ ಕೈ ಹಿಡಿದಿದ್ದಾರೆ. ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 

(8 / 15)

ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ಬೆಂಗಳೂರು ವೈದ್ಯ ಅಜೀಜ್‌ ಪಾಷಾ ಎನ್ನುವವರನ್ನು ಮದುವೆ ಆಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ದಂಪತಿಗೆ ಗಂಡು ಮಗುವಿದ್ದು ಅಲಾದಿನ್‌ ಎಂದು ಹೆಸರಿಟ್ಟಿದ್ದಾರೆ. 

(9 / 15)

2005ರಲ್ಲಿ ಕಿರಣ್‌ ರಾವ್‌ ಅವರನ್ನು ಎರಡನೇ ಮದುವೆ ಆಗಿದ್ದ ಆಮೀರ್‌ ಖಾನ್ 2021ರಲ್ಲಿ ವಿಚ್ಛೇದನ ನೀಡಿದ್ದಾರೆ. 

(10 / 15)

ಬಹುಭಾಷಾ ನಟಿ ಖುಷ್ಪೂ ತಮಿಳು ನಟ ಪ್ರಭು ಗಣೇಶ್‌ ಅವರನ್ನು ಮೊದಲು ಮದುವೆ ಆಗಿದ್ದರು. ಆದರೆ ಕಾರಣಾಂತರಗಳಿಂದ ಪ್ರಭುವಿನಿಂದ ದೂರ ಆದ ನಂತರ ನಿರ್ದೇಶಕ ಸುಂದರ್‌ ಅವರನ್ನು ಕೈ ಹಿಡಿದರು. ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಾನು ಹಿಂದೂ ಧರ್ಮಕ್ಕೆ ಮತಾಂತರವಾಗಿಲ್ಲ ಎಂದು ಇತ್ತೀಚೆಗೆ ಖುಷ್ಬೂ ಸ್ಪಷ್ಟಪಡಿಸಿದ್ದರು. 

(11 / 15)

ಖ್ಯಾತ ಬಾಲಿವುಡ್‌ ನಟ ಮನೋಜ್‌ ಬಾಜ್ಪೇಯಿ 2006ರಲ್ಲಿ ನಟಿ ಶಬ್ನಾ ರಾಜಾರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಈ ಜೋಡಿಗೆ ಒಂದು ಹೆಣ್ಣು ಮಗು ಇದೆ. 

(12 / 15)

ಕನ್ನಡ, ತಮಿಳು ಕಿರುತೆರೆ ನಟಿ ದಿವ್ಯಾ ಶ್ರೀಧರ್‌ ಅಮ್ಜದ್‌ ಖಾನ್‌ ಎಂಬ ಸಹನಟನನ್ನು ಪ್ರೀತಿಸಿ ಮದುವೆ ಆದರು. ಅದರೆ ಕೆಲವು ದಿನಗಳಲ್ಲೇ ಅಮ್ಜದ್‌ ಖಾನ್‌ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಇತ್ತೀಚೆಗೆ ದಿವ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

(13 / 15)

ಬಾಲಿವುಡ್‌ ಖ್ಯಾತ ನಿರ್ದೇಶಕಿ, ಕೊರಿಯೋಗ್ರಾಫರ್‌ ತಮಗಿಂತ 13 ವರ್ಷ ಕಿರಿಯವರಾದ ಶಿರಿಶ್‌ ಕುಂದೇರ್‌ ಮದುವೆ ಆಗಿದ್ದಾರೆ. ಈ ಜೋಡಿಗೆ ತ್ರಿವಳಿ ಮಕ್ಕಳಿವೆ. 

(14 / 15)

ಖ್ಯಾತ ನಟ ನಾಸಿರುದ್ದೀನ್‌ ಷಾ 1982 ರಲ್ಲಿ ನಟಿ ರತ್ನಾ ಪಾಟಕ್‌ ಅವರನ್ನು ಮದುವೆ ಆಗಿದ್ದಾರೆ. 

(15 / 15)

ಇತರ ಗ್ಯಾಲರಿಗಳು