Mental illness: ಮಾನಸಿಕ ವ್ಯಥೆ ಇರುವವರಿಗೆ ಹೀಗೆ ಸಹಾಯ ಮಾಡಬಹುದು ನೋಡಿ
- Mental illness: ಮಾನಸಿಕ ವೇದನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಪ್ರತಿಯೊಬ್ಬರ ಮಾನಸಿಕ ಅನುಭವವೂ ಭಿನ್ನವಾಗಿದೆ. ಯಾರನ್ನಾದರೂ ಮಾನಸಿಕವಾಗಿ ಬೆಂಬಲಿಸಬೇಕು ಎಂದರೆ ಅವರ ಅಗತ್ಯತೆಗಳನ್ನು ಅರಿಯಿರಿ. ತಜ್ಞರ ಬೆಂಬಲ ಪಡೆಯಲು ಅವರನ್ನು ಪ್ರೋತ್ಸಾಹಿಸಿ. ನಿಮ್ಮ ಸಹಕಾರ ಅವರಿಗಿದೆ ಎಂಬುದನ್ನು ಮನವರಿಕೆ ಮಾಡಿಸಿ.

(1 / 6)
ನಿಮ್ಮ ಪರಿಚಯದವರಲ್ಲಿ ಯಾರಾದರೂ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದರೆ, ಅವರ ಪರವಾಗಿ ಸಹಾನುಭೂತಿ ತೋರಿಸಿ ಪ್ರತಿಕ್ರಿಯಿಸುವುದು ಅವಶ್ಯ. ಚಿಂತೆ, ಒತ್ತಡ, ಖಿನ್ನತೆಯಂತಹ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರಿಗೆ ಈ ಮಾರ್ಗಗಳ ಮೂಲಕ ಮಾರ್ಗದರ್ಶನ ಮಾಡಬಹುದು.
(2 / 6)
ಶಾಂತರಾಗಿ, ಗಮನವಿಟ್ಟು ಆಲಿಸಿ: ಮಾನಸಿಕ ವೇದನೆ ಅನುಭವಿಸುತ್ತಿರುವವರಿಗೆ ಸಹಾಯ ಮಾಡುವ ಮನಸ್ಸಿದ್ದರೆ ಮೊದಲು ಶಾಂತಿಯಿಂದ ಅವರು ಹೇಳುವುದನ್ನು ಕೇಳಿಸಿಕೊಳ್ಳಿ. ಅವರ ಮಾತಿಗೆ ಅಡ್ಡಿ ಬರದೆ, ಏನ್ನನ್ನೂ ಊಹಿಸಿಕೊಳ್ಳದೆ, ತೀರ್ಪು ನೀಡದೆ ಕೇಳಿಸಿಕೊಳ್ಳಿ.
(3 / 6)
ಭರವಸೆ ಮತ್ತು ಬೆಂಬಲ ನೀಡಿ: ಅವರು ಒಂಟಿಯಾಗಿಲ್ಲ, ಅವರೊಂದಿಗೆ ನೀವಿದ್ದೀರಿ ಎಂಬ ಭರವಸೆ ಅವರಲ್ಲಿ ಮೂಡಿಸಿ. ಅಗತ್ಯವಿದ್ದರೆ ಕೌನ್ಸಿಲರ್ ಅಥವಾ ಮನೋರೋಗ ತಜ್ಞರ ಸಹಾಯ ಪಡೆಯಲು ಅವರನ್ನು ಪ್ರೋತ್ಸಾಹಿಸಿ. ಸೂಕ್ತ ತಜ್ಞರನ್ನು ಹುಡುಕಲು ಅವರಿಗೆ ಬೆಂಬಲ ನೀಡಿ.
(4 / 6)
ಒತ್ತಡ ಕಳೆಯುವ, ಮನಸ್ಸಿಗೆ ಶಾಂತಿ ನೀಡುವ ಚಟುವಟಿಕೆಗಳ ಮೇಲೆ ಗಮನ ಹರಿಸುವಂತೆ ಪ್ರೋತ್ಸಾಹಿಸಿ. ದೀರ್ಘ ಉಸಿರಾಟ, ಧ್ಯಾನ ಹಾಗೂ ವ್ಯಾಯಾಮಗಳನ್ನು ಮಾಡಲು ಹೇಳಿ. ಹಿಂದೆ ಇದೇ ರೀತಿ ಆದಾಗ ಯಾವ ಮಾರ್ಗಗಳನ್ನು ಅನುಸರಿಸಿದ್ದರು ಎಂಬುದನ್ನು ತಿಳಿದುಕೊಂಡು ಈ ಬಾರಿಯೂ ಹಾಗೆಯೆ ಮಾಡಲು ತಿಳಿಸಿ. (Unsplash)
(5 / 6)
ತಜ್ಞರ ಸಹಾಯ ಪಡೆಯಿರಿ: ನಿಮ್ಮ ಸಂಗಾತಿ ಅಥವಾ ಪರಿಚಯದ ವ್ಯಕ್ತಿಯ ಮಾನಸಿಕ ಆರೋಗ್ಯ ತೀರಾ ಹದಗೆಟ್ಟಿದ್ದರೆ, ಕೂಡಲೇ ಮನೋವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಅವರ ಭೇಟಿ ನಿಗದಿ ಮಾಡುವುದು, ಅವರೊಂದಿಗೆ ಹೋಗುವುದು ಇಂತಹ ಸಹಾಯಗಳನ್ನು ಮಾಡಬಹುದು.
ಇತರ ಗ್ಯಾಲರಿಗಳು