ಕನ್ನಡ ಸುದ್ದಿ  /  Photo Gallery  /  Kgf Fame Actress Srinidhi Shettys New Photoshoot

Srinidhi Shetty: ‘ಕೆಜಿಎಫ್‌’ ಮುಗೀತು, ‘ಕೋಬ್ರಾ’ ಸಹ ರಿಲೀಸ್‌ ಆಯ್ತು... ಶ್ರೀನಿಧಿ ಶೆಟ್ಟಿ ಮುಂದಿನ ಸಿನಿಮಾ ಯಾವುದು?

  • "ಕೆಜಿಎಫ್‌" ಮೂಲಕ ಮೊದಲ ಸಿನಿಮಾದಲ್ಲಿಯೇ ಗೆಲುವು ದಾಖಲಿಸಿ, ಅದರ ಎರಡನೇ ಭಾಗದಷ್ಟೊತ್ತಿಗೆ ಕನ್ನಡದ ಯಾವ ನಾಯಕಿಗೂ ಸಿಗದ ಗೆಲುವನ್ನು ದಕ್ಕಿಸಿಕೊಂಡವರು ನಟಿ ಶ್ರೀನಿಧಿ ಶೆಟ್ಟಿ. ಸ್ಯಾಂಡಲ್‌ವುಡ್‌ನ ಈ ಚೆಲುವೆ, "ಕೆಜಿಎಫ್‌" ಮೊದಲ ಭಾಗ ಸಿನಿಮಾ ಬಿಡುಗಡೆಯಾದಂತೆ, ಪಕ್ಕದ ಕಾಲಿವುಡ್‌ಗೆ ಎಂಟ್ರಿ ಕೊಟ್ಟು, "ಕೊಬ್ರಾ" ಜತೆಗೆ ಸೆಣೆಸಿ ಬಂದರು. ಅಲ್ಲಿಂದ ಇಲ್ಲಿಯವರೆಗೂ ಈ ನಟಿ ಕೇವಲ ಮೂರೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಮುಂದೇನು? ಸದ್ಯ ಆ ಗುಟ್ಟು ಬಿಟ್ಟು ಕೊಡದ ಶ್ರೀನಿಧಿ, ಸೋಷಿಯಲ್‌ ಮೀಡಿಯಾದಲ್ಲಿ ಒಂದಾದ ಮೇಲೊಂದು ಫೋಟೋಶೂಟ್‌ ಗುಚ್ಛವನ್ನು ಇನ್‌ಸ್ಟಾಗ್ರಾಂಗೆ ಪೋಣಿಸುತ್ತಿದ್ದಾರೆ. ಇಲ್ಲಿ ಕಾಣುತ್ತಿರುವ ಫೋಟೋಗಳು ಇತ್ತೀಚಿನವು...

ಶ್ರೀನಿಧಿ ಶೆಟ್ಟಿ, ಮೂಲತಃ ಮಂಗಳೂರಿನವರು. ಮಾಡಲಿಂಗ್‌ ಮೂಲಕ ಗುರುತಿಸಿಕೊಂಡು, ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು, ದೊಡ್ಡ ಯಶಸ್ಸು ಪಡೆದುಕೊಂಡವರು.
icon

(1 / 5)

ಶ್ರೀನಿಧಿ ಶೆಟ್ಟಿ, ಮೂಲತಃ ಮಂಗಳೂರಿನವರು. ಮಾಡಲಿಂಗ್‌ ಮೂಲಕ ಗುರುತಿಸಿಕೊಂಡು, ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು, ದೊಡ್ಡ ಯಶಸ್ಸು ಪಡೆದುಕೊಂಡವರು.(Instagram/ Srinidhi Shetty)

ಕೆಜಿಎಫ್‌ ಮೂಲಕ ಎಂಟ್ರಿ ಪಡೆದ ಈ ನಟಿ, ಕೆಜಿಎಫ್‌ ಚಾಪ್ಟರ್‌ ೨ ರ ಮೂಲಕ ಕನ್ನಡದಲ್ಲಿ ಇತಿಹಾಸದ ಪುಟ ಸೇರಿದ ಸಿನಿಮಾದ ಭಾಗವಾದರು.
icon

(2 / 5)

ಕೆಜಿಎಫ್‌ ಮೂಲಕ ಎಂಟ್ರಿ ಪಡೆದ ಈ ನಟಿ, ಕೆಜಿಎಫ್‌ ಚಾಪ್ಟರ್‌ ೨ ರ ಮೂಲಕ ಕನ್ನಡದಲ್ಲಿ ಇತಿಹಾಸದ ಪುಟ ಸೇರಿದ ಸಿನಿಮಾದ ಭಾಗವಾದರು.(Instagram/ Srinidhi Shetty)

ಇದರ ಜತೆಗೆ ಪಕ್ಕದ ತಮಿಳಿನಲ್ಲಿ ಚಿಯಾನ್‌ ವಿಕ್ರಂ ಜತೆಗೆ ಕೋಬ್ರಾ ಸಿನಿಮಾದಲ್ಲಿಯೂ ನಟಿಸಿದರು. ಕಾಲಿವುಡ್‌ಗೂ ಅವರ ಪದಾರ್ಪಣೆಯಾಯಿತು.
icon

(3 / 5)

ಇದರ ಜತೆಗೆ ಪಕ್ಕದ ತಮಿಳಿನಲ್ಲಿ ಚಿಯಾನ್‌ ವಿಕ್ರಂ ಜತೆಗೆ ಕೋಬ್ರಾ ಸಿನಿಮಾದಲ್ಲಿಯೂ ನಟಿಸಿದರು. ಕಾಲಿವುಡ್‌ಗೂ ಅವರ ಪದಾರ್ಪಣೆಯಾಯಿತು.(Instagram/ Srinidhi Shetty)

ಇದೀಗ ಇದೇ ನಟಿ ಸದ್ಯ ಏನು ಮಾಡುತ್ತಿದ್ದಾರೆ ಎಂದರೆ, ಅದಕ್ಕೆ ಉತ್ತರವಿಲ್ಲ. ಸಿನಿಮಾ ಮಾಹಿತಿಯನ್ನು ಬಿಟ್ಟುಕೊಡದೇ ಕಾಯಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
icon

(4 / 5)

ಇದೀಗ ಇದೇ ನಟಿ ಸದ್ಯ ಏನು ಮಾಡುತ್ತಿದ್ದಾರೆ ಎಂದರೆ, ಅದಕ್ಕೆ ಉತ್ತರವಿಲ್ಲ. ಸಿನಿಮಾ ಮಾಹಿತಿಯನ್ನು ಬಿಟ್ಟುಕೊಡದೇ ಕಾಯಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.(Instagram/ Srinidhi Shetty)

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಶ್ರೀನಿಧಿ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವುದರಲ್ಲಿ ಸದಾ ಮುಂದು. ಇವು ಅವರ ಇತ್ತೀಚಿನ ಕೆಲ ಫೋಟೋಗಳು..
icon

(5 / 5)

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಶ್ರೀನಿಧಿ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವುದರಲ್ಲಿ ಸದಾ ಮುಂದು. ಇವು ಅವರ ಇತ್ತೀಚಿನ ಕೆಲ ಫೋಟೋಗಳು..(Kgf fame actress Srinidhi Shettys new Photoshoot )


IPL_Entry_Point

ಇತರ ಗ್ಯಾಲರಿಗಳು