Mangalore News: ಮಂಗಳೂರು ಹೊರವಲಯದಲ್ಲಿ ಸರಣಿ ಅಪಘಾತ, ತಪ್ಪಿದ ಭಾರೀ ಅನಾಹುತ photos
ಲಾರಿ,ಬಸ್ ಡಿಕ್ಕಿಯಿಂದ ಉಂಟಾದ ಸರಣಿ ಅಪಘಾತ ಯಾವುದೇ ಜೀವ ಹಾನಿ ಮಾಡದೇ ಇದರೂ ಭಾರೀ ನಷ್ಟವನ್ನುಂಟು ಮಾಡಿದೆ. ಮಂಗಳೂರು ಹೊರವಲಯದ ಎಡಪದವಿನಲ್ಲಿ ಘಟನೆ ನಡೆದಿದೆ.ಚಿತ್ರ- ವರದಿ:ಹರೀಶ ಮಾಂಬಾಡಿ ಮಂಗಳೂರು
(1 / 6)
ಕೆಂಪು ಮಣ್ಣು ಸಾಗಾಟದ ಲಾರಿಯೊಂದು ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಎಂಬಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
(2 / 6)
ಮಂಗಳೂರು ಕಡೆಯಿಂದ ಧಾವಿಸಿ ಬಂದ ಹೊರರಾಜ್ಯಗಳಿಗೆ ಕೆಂಪು ಮಣ್ಣು ಸಾಗಾಟ ನಡೆಸುವುದೆಂದು ಹೇಳಲಾದ ಲಾರಿಯೊಂದು ಎಡಪದವು ಜಂಕ್ಷನ್ ಬಳಿ ಮೂಡುಬಿದಿರೆ ಕಡೆಯಿಂದ ಆಗಮಿಸಿದೆ. ಖಾಸಗಿ ಬಸ್ಸು ಹಾಗೂ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ದಂತ ಚಿಕಿತ್ಸಾಲಯ ಸಹಿತ ಹಲವು ಅಂಗಡಿ ಕಟ್ಟಡಗಳಿಗೆ ಗುದ್ದಿ ಭಾರೀ ಹಾನಿ ಸಂಭವಿಸಿದೆ.
(3 / 6)
ಅಂಗಡಿ-ಮುಂಗಟ್ಟುಗಳ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಹಲವು ದ್ವಿಚಕ್ರ ವಾಹನಗಳು , ಸ್ವಿಫ್ಟ್ ಕಾರೊಂದಕ್ಕೂ ಡಿಕ್ಕಿ ಹೊಡೆದು ಹಲವು ದ್ವಿಚಕ್ರ ವಾಹನಗಳು ನುಜ್ಜು ಗುಜ್ಜಾಗಿವೆ. ಕಾರು ಕೂಡಾ ಜಖಮ್ ಗೊಂಡಿದ್ದು ಕಾರಿನಲ್ಲಿದ್ದವರಿಗೆ ಗಾಯಗಳಾಗಿವೆ.
(4 / 6)
ಅಪಘಾತದ ತೀವ್ರತೆಗೆ ಲಾರಿ , ಬಸ್ಸು , ಟ್ಯಾಂಕರ್ ಹಾಗೂ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೂ ಗಾಯಗಳಾಗಿವೆ. ಸರಣಿ ಅಪಘಾತ ನಡೆಸಿದ ಲಾರಿ ಅಂತಿಮವಾಗಿ ಪಲ್ಟಿಯಾಗಿದ್ದು ಲಾರಿಯ ಬ್ರೇಕ್ ಫೇಲ್ ಆಗಿರುವುದೇ ಕಾಲಣ ಎನ್ನಲಾಗಿದೆ
(5 / 6)
ಮೂರು ಅಂಗಡಿಗಳಿಗೆ ಭಾರೀ ಪ್ರಮಾಣದ ನಷ್ಟ ಉಂಟಾಗಿದ್ದು ನಾಲ್ಕು ದ್ವಿಚಕ್ರ ವಾಹನಗಳು ಸಂಪೂರ್ಣ ಜಖಮ್ ಗೊಂಡಿವೆ. ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತರ ಗ್ಯಾಲರಿಗಳು