Mental Health: ವಯಸ್ಸಾದರೂ ನೀವು ಯಂಗ್ ಕಾಣಬೇಕಾ; ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಸಾಕು
ಸದಾ ಯಂಗ್ ಹಾಗೂ ಎನರ್ಜಿಟಿಕ್ ಆಗಿ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ. ಕೆಲವರು ಕಡಿಮೆ ವಯಸ್ಸಾಗಿದ್ದರೂ ವಯಸ್ಸಾದವರಂತೆ ಕಾಣುತ್ತಾರೆ. ಇನ್ನೂ ಕೆಲವರು ಎಷ್ಟು ವಯಸ್ಸಾಗಿದ್ದರೂ ಕಿರಿಯರಂತೆ ಕಾಣುತ್ತಾರೆ. ವಯಸ್ಸು ಎಷ್ಟೇ ಆದರೂ ನೀವೂ ಚಿಕ್ಕವರಂತೆ ಕಾಣಬೇಕಾ? ಹಾಗಿದ್ದರೆ ಈ ಸಲಹೆಗಳನ್ನು ಅನುಸರಿಸಿ.
(1 / 8)
ತಪ್ಪದೆ ಮಾರ್ನಿಂಗ್ ವಾಕ್ ಮಾಡಿ : ಬೆಳಗಿನ ವಾಕಿಂಗ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನಡೆಯುವ ಶಕ್ತಿಯನ್ನು ಹೆಚ್ಚಿಸುತ್ತದೆ. ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ. ನೀವು ವಯಸ್ಸಾದರೂ ಯಂಗ್ ಆಗಿ ಕಾಣಬೇಕೆಂದರೆ ಈ ಮೊದಲ ಟಿಪ್ಸ್ ತಪ್ಪದೆ ಅನುಸರಿಸಿ.
(2 / 8)
ತುಪ್ಪವನ್ನು ಸೇವಿಸಿ: ತುಪ್ಪದಲ್ಲಿ ಹೆಚ್ಚಿನ ಕೊಬ್ಬು ಇದೆ ಎಂದು ತಪ್ಪು ತಿಳಿದು ಅದರಿಂದ ದೂರ ಇರುವವರೇ ಹೆಚ್ಚು. ಆದರೆ ತುಪ್ಪದಲ್ಲಿ ಆರೋಗ್ಯಕರ ಕೊಬ್ಬುಗಳಿವೆ ಎಂಬುದನ್ನು ನೆನಪಿನಲ್ಲಿಡಿ. ತುಪ್ಪ ನಿಮ್ಮ ತ್ವಚೆಯನ್ನು ತೇವಾಂಶದಿಂದ ಇಡುತ್ತದೆ. ಸುಕ್ಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.
(3 / 8)
ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿ: ನಿಮ್ಮ ಪ್ತತಿದಿನದ ಅಹಾರ ಕ್ರಮದಲ್ಲಿ ಪ್ರೋಟೀನ್‌ಯುಕ್ತ ಆಹಾರಗಳು ಇರುವಂತೆ ನೋಡಿಕೊಳ್ಳಿ. ಈ ಪ್ರೋಟೀನ್ ಭರಿತ ಆಹಾರಗಳಿಂದ ನಿಮಗೆ ಅನೇಕ ಪ್ರಯೋಜನಗಳಿವೆ. ನಿಮ್ಮ ಚರ್ಮ ಹಾಗೂ ದೇಹದ ಅಂಗಗಳು ಸೂಕ್ತವಾಗಿ ಕಾರ್ಯ ನಿರ್ವಹಿಸಲು ಇದು ಬಹಳ ಅಗತ್ಯ.
(4 / 8)
ಚಿಯಾ, ಅಗಸೆ ಬೀಜಗಳನ್ನು ಸೇವಿಸಿ: ಈ ಬೀಜಗಳು ನಿಮ್ಮ ಕರುಳಿನ ಆರೋಗ್ಯವನ್ನು ಆರೋಗ್ಯಕರವಾಗಿಡುತ್ತವೆ ಮತ್ತು ಅನೇಕ ಪೋಷಕಾಂಶಗಳನ್ನು ಒದಗಿಸುತ್ತವೆ. ಆದ್ದರಿಂದ ನಿಮ್ಮ ಅಹಾರ ಕ್ರಮದಲ್ಲಿ ಇವರೆಡೂ ಇರಲಿ.
(5 / 8)
ನಿಂಬೆ, ಆಮ್ಲಾ ಜ್ಯೂಸ್ ಸೇವಿಸಿ: ಪ್ರತಿದಿನ ಬೆಳಗ್ಗೆ ನಿಂಬೆ ರಸ ಮತ್ತು ಆಮ್ಲಾ ಜ್ಯೂಸ್ ಸೇವಿಸಿ. ಇದರಲ್ಲಿ ವಿಟಮಿನ್ ಸಿ ಮತ್ತು ಇತರ ಅನೇಕ ಉತ್ಕರ್ಷಣ ನಿರೋಧಕ ಅಂಶಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
(6 / 8)
ಕೆಫೀನ್ ಅವಾಯ್ಡ್ ಮಾಡಿ: ಪ್ರತಿದಿನ ಕಾಫಿ ಅಥವಾ ಟೀ ಕುಡಿಯುವುದನ್ನು ನಿಲ್ಲಿಸಿ. ಅಪರೂಪಕ್ಕೆ ಒಮ್ಮೆ ಆದರೆ ಸರಿ. ಆದರೆ ಪ್ರತಿದಿನ ಇದನ್ನು ಕುಡಿಯುವುದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗುತ್ತದೆ. ಶರೀರದ ಅಂಗಾಂಗಳಿಗೂ ಸಮಸ್ಯೆ.
(7 / 8)
ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ: ಕಚೇರಿ ಕೆಲಸ ಮಾಡುವವರು ಹೆಚ್ಚು ಹೊತ್ತು ಕುಳಿತುಕೊಳ್ಳುತ್ತಾರೆ. ಇದರಿಂದ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ಅನಿವಾರ್ಯವಾಗಿ ಈ ರೀತಿ ಕುಳಿತುಕೊಳ್ಳಬೇಕಾಗಿ ಬಂದರೆ ಅರ್ಧ ಗಂಟೆಗೊಮ್ಮೆ 5 ನಿಮಿಷ ವಾಕ್ ಮಾಡಿ.
ಇತರ ಗ್ಯಾಲರಿಗಳು