ಕನ್ನಡ ಸುದ್ದಿ  /  Photo Gallery  /  Relationship: Some Reasons To Relationships Fail; Avoid Them - Rst

Relationship: ದಾಂಪತ್ಯದ ಅನುಬಂಧದಲ್ಲಿ ಬಿರುಕು ಮೂಡಲು ಕಾರಣವಾಗುವ ಪ್ರಮುಖ ಅಂಶಗಳಿವು; ಇವುಗಳಿಂದ ದೂರವಿರಿ

Relationship: ಸಂಬಂಧವೆಂದರೆ ಬಂದು ಹೋಗುವ ಪಾತ್ರವಲ್ಲ. ಸಂಬಂಧದಲ್ಲಿ ಅನ್ಯೋನ್ಯತೆ ಸಾಧಿಸಿ, ದೀರ್ಘಕಾಲದವರೆಗೆ ಉಳಿಸಿಕೊಂಡು ಹೋಗುವುದು ಸವಾಲೇ ಸರಿ.  ತೆರೆದ ಮನಸ್ಸಿನ ಸಂವಹನ, ಒಬ್ಬರಿಗೊಬ್ಬರು ಬೆಂಬಲ ಸೂಚಿಸುವುದು, ಕೆಲಸವನ್ನು ಹಂಚಿಕೊಳ್ಳುವುದು ಈ ಮೂಲಕ ಸಂಬಂಧದ ಅಡಿಪಾಯವನ್ನು ಗಟ್ಟಿಗೊಳಿಸಬಹುದು.   

ಸಂಬಂಧಗಳು ಮಾನವ ಸಂವಹನದ ಮೂಲತತ್ವವಾಗಿವೆ. ಸಂವಹನದಿಂದ ಸಂಬಂಧಗಳಲ್ಲಿನ ಗೊಂದಲಗಳನ್ನು ಬಿಡಿಸಿಕೊಳ್ಳಬಹುದು. ಆದರೆ ಇತ್ತೀಚಿಗೆ ಸಂಬಂಧಗಳು ಕಾರಣವಿಲ್ಲದೆ ಅಂತ್ಯಗೊಳ್ಳುತ್ತಿವೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಶೇ40-50ರಷ್ಟು ವಿವಾಹಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ. ಸಂಬಂಧಗಳು ನಮ್ಮ ಜೀವನ ಸಾಗುವ ದಿಕ್ಕನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ಸಂಗಾತಿಯ ಮೇಲಿನ ನಿರೀಕ್ಷೆಗಳು ಸೋತಾಗ ಸಂಬಂಧ ಹಾಳಾಗಬಹುದು. ಸಂಬಂಧ ಕೆಡಲು ಎಂಟು ಪ್ರಮುಖ ಕಾರಣಗಳು ಇಲ್ಲಿವೆ. 
icon

(1 / 8)

ಸಂಬಂಧಗಳು ಮಾನವ ಸಂವಹನದ ಮೂಲತತ್ವವಾಗಿವೆ. ಸಂವಹನದಿಂದ ಸಂಬಂಧಗಳಲ್ಲಿನ ಗೊಂದಲಗಳನ್ನು ಬಿಡಿಸಿಕೊಳ್ಳಬಹುದು. ಆದರೆ ಇತ್ತೀಚಿಗೆ ಸಂಬಂಧಗಳು ಕಾರಣವಿಲ್ಲದೆ ಅಂತ್ಯಗೊಳ್ಳುತ್ತಿವೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಶೇ40-50ರಷ್ಟು ವಿವಾಹಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ. ಸಂಬಂಧಗಳು ನಮ್ಮ ಜೀವನ ಸಾಗುವ ದಿಕ್ಕನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ಸಂಗಾತಿಯ ಮೇಲಿನ ನಿರೀಕ್ಷೆಗಳು ಸೋತಾಗ ಸಂಬಂಧ ಹಾಳಾಗಬಹುದು. ಸಂಬಂಧ ಕೆಡಲು ಎಂಟು ಪ್ರಮುಖ ಕಾರಣಗಳು ಇಲ್ಲಿವೆ. (Unsplash)

ಸಂವಹನ ಸ್ಥಗಿತವಾಗುವುದು: ಸಂವಹನವು ಪ್ರತಿ ಸಂಬಂಧದ ತಳಹದಿ. ಸಂವಹನ ಸ್ಥಗಿತಗೊಂಡಾಗ ತಪ್ಪು ತಿಳುವಳಿಕೆ, ತಪ್ಪು ಅಭಿಪ್ರಾಯಗಳು ಮೂಡಲು ದಾರಿಯಾಗುತ್ತದೆ. ಇದರ ಪರಿಣಾಮವಾಗಿ ಜಗಳ ಉಂಟಾಗಿ, ಕೊನೆಯಲ್ಲಿ ಸಂಬಂಧದ ಕೊಂಡಿ ಕಳಚುತ್ತದೆ. 
icon

(2 / 8)

ಸಂವಹನ ಸ್ಥಗಿತವಾಗುವುದು: ಸಂವಹನವು ಪ್ರತಿ ಸಂಬಂಧದ ತಳಹದಿ. ಸಂವಹನ ಸ್ಥಗಿತಗೊಂಡಾಗ ತಪ್ಪು ತಿಳುವಳಿಕೆ, ತಪ್ಪು ಅಭಿಪ್ರಾಯಗಳು ಮೂಡಲು ದಾರಿಯಾಗುತ್ತದೆ. ಇದರ ಪರಿಣಾಮವಾಗಿ ಜಗಳ ಉಂಟಾಗಿ, ಕೊನೆಯಲ್ಲಿ ಸಂಬಂಧದ ಕೊಂಡಿ ಕಳಚುತ್ತದೆ. (Unsplash)

ಹಣಕಾಸಿನ ಸಮಸ್ಯೆಗಳು: ಹಣ ಎಂಬುದು ಹಲವು ಕೆಟ್ಟದ್ದಕ್ಕೆ ದಾರಿ ಮಾಡಿಕೊಡುತ್ತದೆ. ದಂಪತಿಗಳು ದೂರಾಗಲು ಹಣಕಾಸಿನ ಸಮಸ್ಯೆಗಳು ಕೂಡ ಪ್ರಮುಖ ಕಾರಣವಾಗಿದೆ.   
icon

(3 / 8)

ಹಣಕಾಸಿನ ಸಮಸ್ಯೆಗಳು: ಹಣ ಎಂಬುದು ಹಲವು ಕೆಟ್ಟದ್ದಕ್ಕೆ ದಾರಿ ಮಾಡಿಕೊಡುತ್ತದೆ. ದಂಪತಿಗಳು ದೂರಾಗಲು ಹಣಕಾಸಿನ ಸಮಸ್ಯೆಗಳು ಕೂಡ ಪ್ರಮುಖ ಕಾರಣವಾಗಿದೆ.   (Unsplash)

ದಾಂಪತ್ಯ ದ್ರೋಹ: ಯಾವುದೇ ಸಂಬಂಧವಾಗಲಿ ಮೋಸವು ಸಂಬಂಧದಲ್ಲಿನ ನಂಬಿಕೆ ಹಾಗೂ ಅಡಿಪಾಯವನ್ನು ನಾಶಪಡಿಸುತ್ತದೆ. ಒಮ್ಮೆ ಮೋಸ ಮಾಡಿದ ವ್ಯಕ್ತಿಯನ್ನು ಪುನಃ ನಂಬುವುದು ಕಷ್ಟವಾಗುತ್ತದೆ, ಅಲ್ಲದೆ ಸಂಬಂಧವನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ.  
icon

(4 / 8)

ದಾಂಪತ್ಯ ದ್ರೋಹ: ಯಾವುದೇ ಸಂಬಂಧವಾಗಲಿ ಮೋಸವು ಸಂಬಂಧದಲ್ಲಿನ ನಂಬಿಕೆ ಹಾಗೂ ಅಡಿಪಾಯವನ್ನು ನಾಶಪಡಿಸುತ್ತದೆ. ಒಮ್ಮೆ ಮೋಸ ಮಾಡಿದ ವ್ಯಕ್ತಿಯನ್ನು ಪುನಃ ನಂಬುವುದು ಕಷ್ಟವಾಗುತ್ತದೆ, ಅಲ್ಲದೆ ಸಂಬಂಧವನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ.  (Unsplash)

ಆದ್ಯತೆಗಳಲ್ಲಿನ ವ್ಯತ್ಯಾಸಗಳು: ತಮ್ಮ ಗುರಿ ಹಾಗೂ ಆದ್ಯತೆಗಳನ್ನು ಹೊಂದಿಸಲು ವಿಫಲರಾದ ದಂಪತಿಗಳಲ್ಲಿ ಘರ್ಷಣೆ ಉಂಟಾಗಬಹುದು. ಇದರಿಂದ ಇಬ್ಬರ ನಡುವೆ ತಪ್ಪುಗ್ರಹಿಕೆಗಳು ಮೂಡಬಹುದು. ಸಂವಹನ ಕೊರತೆ, ಭಿನ್ನ ಜೀವನ ಮೌಲ್ಯವೂ ಇದಕ್ಕೆ ಕಾರಣವಿರಬಹುದು. 
icon

(5 / 8)

ಆದ್ಯತೆಗಳಲ್ಲಿನ ವ್ಯತ್ಯಾಸಗಳು: ತಮ್ಮ ಗುರಿ ಹಾಗೂ ಆದ್ಯತೆಗಳನ್ನು ಹೊಂದಿಸಲು ವಿಫಲರಾದ ದಂಪತಿಗಳಲ್ಲಿ ಘರ್ಷಣೆ ಉಂಟಾಗಬಹುದು. ಇದರಿಂದ ಇಬ್ಬರ ನಡುವೆ ತಪ್ಪುಗ್ರಹಿಕೆಗಳು ಮೂಡಬಹುದು. ಸಂವಹನ ಕೊರತೆ, ಭಿನ್ನ ಜೀವನ ಮೌಲ್ಯವೂ ಇದಕ್ಕೆ ಕಾರಣವಿರಬಹುದು. (Unsplash)

ಅನ್ಯೋನ್ಯತೆಯ ಕೊರತೆ: ಅನ್ಯೋನ್ಯತೆಯು ಲೈಂಗಿಕ ಭಾವನೆಗಳನ್ನೂ ಮೀರಿದ್ದು. ಪರಸ್ಪರ ಕೈ ಹಿಡಿದುಕೊಳ್ಳುವುದು, ತಬ್ಬಿಕೊಳ್ಳುವುದು ಈ ರೀತಿ ಪ್ರೀತಿಯನ್ನು ವ್ಯಕ್ತ ಪಡಿಸುವ ಮೂಲಕ ಅನ್ಯೋನ್ಯವಾಗಿರಬಹುದು. ಸಂಬಂಧದಲ್ಲಿ ಅನ್ಯೋನ್ಯತೆಯನ್ನು ಅಳವಡಿಸಿಕೊಳ್ಳಲು ವಿಫಲವಾದಾಗ, ಅತೃಪ್ತಿಯ ಭಾವನೆಗಳಿಗೆ ಕಾರಣವಾಗಬಹುದು. ಇದು ಸಂಬಂಧ ಕೆಡಲು ಕಾರಣವಾಗಬಹುದು.   
icon

(6 / 8)

ಅನ್ಯೋನ್ಯತೆಯ ಕೊರತೆ: ಅನ್ಯೋನ್ಯತೆಯು ಲೈಂಗಿಕ ಭಾವನೆಗಳನ್ನೂ ಮೀರಿದ್ದು. ಪರಸ್ಪರ ಕೈ ಹಿಡಿದುಕೊಳ್ಳುವುದು, ತಬ್ಬಿಕೊಳ್ಳುವುದು ಈ ರೀತಿ ಪ್ರೀತಿಯನ್ನು ವ್ಯಕ್ತ ಪಡಿಸುವ ಮೂಲಕ ಅನ್ಯೋನ್ಯವಾಗಿರಬಹುದು. ಸಂಬಂಧದಲ್ಲಿ ಅನ್ಯೋನ್ಯತೆಯನ್ನು ಅಳವಡಿಸಿಕೊಳ್ಳಲು ವಿಫಲವಾದಾಗ, ಅತೃಪ್ತಿಯ ಭಾವನೆಗಳಿಗೆ ಕಾರಣವಾಗಬಹುದು. ಇದು ಸಂಬಂಧ ಕೆಡಲು ಕಾರಣವಾಗಬಹುದು.   (Unsplash)

ಬಗೆಹರಿಯದ ಸಂಘರ್ಷಗಳು: ಯಾವುದೇ ಸಂಬಂಧದಲ್ಲಿ ಸಂಘರ್ಷವನ್ನು ಪರಿಹರಿಸಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸಂಘರ್ಷಗಳು ಬಗೆಹರಿಯದೇ ಇದ್ದಾಗ ಅದು ಭಾವನಾತ್ಮಕ ಪರಿಣಾಮ ಬೀರಬಹುದು. ಅಸಮಾಧಾನ, ಸಂಬಂಧದ ಅವನತಿಗೂ ಇದು ಕಾರಣವಾಗಬಹುದು. 
icon

(7 / 8)

ಬಗೆಹರಿಯದ ಸಂಘರ್ಷಗಳು: ಯಾವುದೇ ಸಂಬಂಧದಲ್ಲಿ ಸಂಘರ್ಷವನ್ನು ಪರಿಹರಿಸಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸಂಘರ್ಷಗಳು ಬಗೆಹರಿಯದೇ ಇದ್ದಾಗ ಅದು ಭಾವನಾತ್ಮಕ ಪರಿಣಾಮ ಬೀರಬಹುದು. ಅಸಮಾಧಾನ, ಸಂಬಂಧದ ಅವನತಿಗೂ ಇದು ಕಾರಣವಾಗಬಹುದು. (Unsplash)

ಭಾವನಾತ್ಮಕ ಸಹಕಾರದ ಕೊರತೆ: ಸಂಗಾತಿಯ ಕಷ್ಟ ಹಾಗೂ ಸವಾಲಿನ ಸಮಯದಲ್ಲಿ ಭಾವನಾತ್ಮಕ ಸಹಕಾರ ನೀಡುವುದು ಬಹಳ ಮುಖ್ಯವಾಗುತ್ತದೆ. ಸಂಗಾತಿಗಳಿಬ್ಬರಲ್ಲಿ ಒಬ್ಬರು ಭಾವನಾತ್ಮಕ ಸಹಕಾರ ನೀಡದೇ ಹೋದರು ನಿರ್ಲಕ್ಷ್ಯ, ಒಂಟಿತನದ ಭಾವನೆಗಳಿಗೆ ಕಾರಣವಾಗುತ್ತದೆ. ಇದು ಶಾಶ್ವತವಾಗಿ ಇಬ್ಬರು ದೂರವಾಗಲು ಕಾರಣವಾಗಬಹುದು. 
icon

(8 / 8)

ಭಾವನಾತ್ಮಕ ಸಹಕಾರದ ಕೊರತೆ: ಸಂಗಾತಿಯ ಕಷ್ಟ ಹಾಗೂ ಸವಾಲಿನ ಸಮಯದಲ್ಲಿ ಭಾವನಾತ್ಮಕ ಸಹಕಾರ ನೀಡುವುದು ಬಹಳ ಮುಖ್ಯವಾಗುತ್ತದೆ. ಸಂಗಾತಿಗಳಿಬ್ಬರಲ್ಲಿ ಒಬ್ಬರು ಭಾವನಾತ್ಮಕ ಸಹಕಾರ ನೀಡದೇ ಹೋದರು ನಿರ್ಲಕ್ಷ್ಯ, ಒಂಟಿತನದ ಭಾವನೆಗಳಿಗೆ ಕಾರಣವಾಗುತ್ತದೆ. ಇದು ಶಾಶ್ವತವಾಗಿ ಇಬ್ಬರು ದೂರವಾಗಲು ಕಾರಣವಾಗಬಹುದು. (Unsplash)


IPL_Entry_Point

ಇತರ ಗ್ಯಾಲರಿಗಳು