Sherin Shringar: ದಪ್ಪ ಆಗಿದ್ದರಿಂದ್ಲೇ ಚಿತ್ರರಂಗದಲ್ಲಿ ಅವಕಾಶ ಕಳೆದುಕೊಂಡಿದ್ದ ಭೂಪತಿ ಸಿನಿಮಾ ನಟಿ ಶಿರಿನ್ ಈಗ ಏನು ಮಾಡ್ತಿದ್ದಾರೆ ?
- ಸಿನಿಮಾ ನಾಯಕಿ ಎಂದರೆ ತೆಳ್ಳಗೆ ಬೆಳ್ಳಗೆ ಗ್ಲಾಮರಸ್ ಆಗಿ ಇರಬೇಕು ಅನ್ನೋದು ಸಿನಿಮಾ ಪ್ರಪಂಚದ ನಿಯಮ. ಇದೇ ಕಾರಣಕ್ಕೆ ಎಷ್ಟೋ ಪ್ರತಿಭೆಗಳು ಅವಕಾಶ ವಂಚಿತರಾಗಿದ್ದಾರೆ.
- ಸಿನಿಮಾ ನಾಯಕಿ ಎಂದರೆ ತೆಳ್ಳಗೆ ಬೆಳ್ಳಗೆ ಗ್ಲಾಮರಸ್ ಆಗಿ ಇರಬೇಕು ಅನ್ನೋದು ಸಿನಿಮಾ ಪ್ರಪಂಚದ ನಿಯಮ. ಇದೇ ಕಾರಣಕ್ಕೆ ಎಷ್ಟೋ ಪ್ರತಿಭೆಗಳು ಅವಕಾಶ ವಂಚಿತರಾಗಿದ್ದಾರೆ.
(1 / 13)
ಒಂದು ಸಮಯದಲ್ಲಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಕೆಲವು ನಟಿಯರು ದಪ್ಪ ಆಗಿದ್ದರಿಂದಲೇ ಅವಕಾಶ ಕಳೆದುಕೊಂಡಿದ್ದಾರೆ. ಅದರಲ್ಲಿ ಶಿರಿನ್ ಕೂಡಾ ಒಬ್ಬರು. (PC: Sherin Shringar Instagram)
(2 / 13)
ದರ್ಶನ್ ಜೊತೆ ನಟಿಸಿದ್ದ ಈ ಚೆಲುವೆ ನಿಮಗೆ ನೆನಪಿರಬಹುದು. ಶಿರಿನ್ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.
(3 / 13)
ಒಂದು ಸಮಯದಲ್ಲಿ ಶಿರಿನ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಒಂದರ ಹಿಂದೊಂದರಂತೆ ಇವರಿಗೆ ಸಿನಿಮಾದಲ್ಲಿ ಆಫರ್ ಹುಡುಕಿ ಬಂದವು. ಆದರೆ ನಂತರ ಶಿರಿನ್‌ಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆ ಆಯ್ತು.
(4 / 13)
ಈಕೆಯ ಪೂರ್ತಿ ಹೆಸರು ಶಿರಿನ್ ಶೃಂಗಾರ್, 5 ಮೇ 1985 ರಂದು ಶಿರಿನ್ ಬೆಂಗಳೂರಿನಲ್ಲಿ ಜನಿಸಿದರು. ತಂದೆ ಅಲಿ, ತಾಯಿ ಯಶೋಧ.
(5 / 13)
ಬೆಂಗಳೂರಿನ ಕಾವೇರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದ ಶಿರಿನ್ ಬಾಲ್ಡ್ವಿನ್ ಕಾಲೇಜಿನಲ್ಲಿ ಪದವಿ ಪಡೆದರು.
(6 / 13)
ಶಿರಿನ್ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದ ಕಾರಣ ಸಿನಿಮಾದಲ್ಲಿ ಸುಲಭವಾಗಿ ಅವಕಾಶ ಒಲಿದು ಬಂತು. 2002 ರಲ್ಲಿ ಕನ್ನಡದ 'ಪೊಲೀಸ್ ಡಾಗ್' ಚಿತ್ರದ ಮೂಲಕ ಕರಿಯರ್ ಆರಂಭಿಸಿದರು.
(7 / 13)
ಅದೇ ವರ್ಷ ದರ್ಶನ್ ಜೊತೆ 'ಧ್ರುವ' ಚಿತ್ರದಲ್ಲಿ ನಟಿಸಿದ ನಂತರ ಶಿರಿನ್ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದರು. ಈ ಸಿನಿಮಾ ನಂತರ ಅವರು ತೆಲುಗು, ತಮಿಳು. ಮಲಯಾಳಂ ಸಿನಿಮಾಗಳಲ್ಲಿ ಕೂಡಾ ಅವಕಾಶ ಪಡೆದರು.
(8 / 13)
ಪೊಲೀಸ್ ಡಾಗ್, ಧ್ರುವ ನಂತರ ಭೂಪತಿ, ಮಸ್ತ್ ಮಜಾ ಮಾಡಿ, ಯೋಗಿ, ಸಿಹಿಗಾಳಿ, ಎಕೆ 56 ಕನ್ನಡ ಸಿನಿಮಾಗಳಲ್ಲಿ ಶಿರಿನ್ ನಟಿಸಿದರು.
(9 / 13)
2012ರಲ್ಲಿ ತೆರೆ ಕಂಡ 'ಎಕೆ 56' ಸಿನಿಮಾ ನಂತರ ಶಿರಿನ್ ಮತ್ತೆ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ನಂತರ 2015ರಲ್ಲಿ ರಿಲೀಸ್ ಆದ 'ನನ್‌ಬೆಂದ' ತಮಿಳು ಸಿನಿಮಾ ಬಳಿಕ ಶಿರಿನ್ ನಟನೆಯಿಂದ ಹಿಂದೆ ಸರಿದರು.
(10 / 13)
ಶಿರಿನ್ ದಪ್ಪ ಆದ ಕಾರಣ ಆಕೆಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಆಯ್ತು. ಅಷ್ಟೇ ಅಲ್ಲ ಆಕೆ ಬಾಡಿ ಶೆಮಿಂಗ್ ಕೂಡಾ ಒಳಗಾದರು.
(11 / 13)
ಸುಮಾರು 4 ವರ್ಷಗಳ ಕಾಲ ಬಣ್ಣದ ಲೋಕದಿಂದ ದೂರ ಉಳಿದಿದ್ದ ಶಿರಿನ್ 2019ರಲ್ಲಿ ತಮಿಳು ಬಿಗ್ ಬಾಸ್ -3 ಮೂಲಕ ಮತ್ತೆ ವಾಪಸಾದರು.
(12 / 13)
ತೂಕ ಹೆಚ್ಚಾದ ಕಾರಣ 4 ವರ್ಷಗಳ ಕಾಲ ತಾವು ಅನುಭವಿಸಿದ ಮಾನಸಿಕ ಹಿಂಸೆಯನ್ನು ಶಿರಿನ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ದಪ್ಪ ಇದ್ದಾಗ ತೆಗೆದ ಫೋಟೋ ಹಾಗೂ ನಂತರ ತೂಕ ಇಳಿಸಿಕೊಂಡಾಗ ತೆಗೆದ ಎರಡೂ ಫೋಟೋಗಳನ್ನು ಜೊತೆ ಸೇರಿಸಿ ಹಂಚಿಕೊಂಡಿದ್ದ ಶಿರಿನ್, ತಮ್ಮ ವೇಟ್ ಲಾಸ್ ಜರ್ನಿ ಬಗ್ಗೆ ಬರೆದುಕೊಂಡಿದ್ದರು.
(13 / 13)
ಲಾಂಗ್ ಗ್ಯಾಪ್ ಬಳಿಕ ಈಗ ಶಿರಿನ್, 'ರಜಿನಿ' ಎಂಬ ತಮಿಳು ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಶಿರಿನ್‌ಗೆ ಯಾವ ರೀತಿ ಯಶಸ್ಸು ದೊರೆಯಲಿದೆ ಕಾದು ನೋಡಬೇಕು.
ಇತರ ಗ್ಯಾಲರಿಗಳು