Kannada News  /  Photo Gallery  /  Sandalwood News Indian Actor Ashish Vidyarthi Gets Married With Rupali Barua At The Age Of 60

Ashish Vidyarthi Wedding: 60ರ ಹರೆಯದಲ್ಲಿ 2ನೇ ಮದುವೆಯಾದ ಆಶಿಶ್ ವಿದ್ಯಾರ್ಥಿ; ರೂಪಾಲಿ ಬರುವಾ ಕೈ ಹಿಡಿದ ಖಳನಟ PHOTOS

25 May 2023, 20:35 IST Meghana B
25 May 2023, 20:35 , IST

  • Ashish Vidyarthi Wedding: ತಮ್ಮ ಅಮೋಘ ಅಭಿನಯದಿಂದ ಭಾರತದ ಜನರ ಮನಗೆದ್ದಿರುವ ಹಿರಿಯ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಇಂದು ( ಮೇ 25) ಫ್ಯಾಷನ್​ ಇಂಡಸ್ಟ್ರಿಯ ಉದ್ಯಮಿ ರೂಪಾಲಿ ಬರುವಾ ಜೊತೆ ವಿವಾಹವಾಗಿದ್ದಾರೆ. ಅಂದಹಾಗೆ ಆಶಿಶ್ ವಿದ್ಯಾರ್ಥಿಗೆ ಇದು ಎರಡನೇ ಮದುವೆ. 60ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

60ರ ಹರೆಯದಲ್ಲಿ ಭಾರತದ ಖ್ಯಾತ ಖಳನಟ ಆಶಿಶ್ ವಿದ್ಯಾರ್ಥಿ ಎರಡನೇ ಮದುವೆಯಾಗಿದ್ದಾರೆ. ಇಂದು ಕೋಲ್ಕತ್ತಾ ಕ್ಲಬ್‌ನಲ್ಲಿ ಫ್ಯಾಷನ್​ ಇಂಡಸ್ಟ್ರಿಯ ಉದ್ಯಮಿ ರೂಪಾಲಿ ಬರುವಾ ಅವರೊಂದಿಗೆ ರಿಜಿಸ್ಟರ್​ ಮ್ಯಾರೇಜ್​ ಆಗಿದ್ದಾರೆ.  

(1 / 6)

ವರದಿಗಳ ಪ್ರಕಾರ, ಅವರ ಮದುವೆಯಲ್ಲಿ ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಅವರ ಮದುವೆಯ ಪೋಟೋಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

(2 / 6)

ರೂಪಾಲಿ ಅಸ್ಸಾಂನ ಗುವಾಹಟಿ ಮೂಲದವರಾಗಿದ್ದು, ಉದ್ಯಮಿಯಾಗಿದ್ದಾರೆ. ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ದುಬಾರಿ ಫ್ಯಾಷನ್ ಶಾಪ್​ ಇಟ್ಟುಕೊಂಡಿದ್ದಾರೆ. 

(3 / 6)

ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ 11 ಭಾಷೆಗಳಲ್ಲಿ ಸುಮಾರು 300 ಸಿನಿಮಾಗಳಲ್ಲಿ ನಟಿಸಿದ್ದಾರೆ ಆಶಿಶ್ ವಿದ್ಯಾರ್ಥಿ. 

(4 / 6)

ಮದುವೆಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಆಶಿಶ್ ವಿದ್ಯಾರ್ಥಿ, "ನನ್ನ ಜೀವನದ ಈ ಹಂತದಲ್ಲಿ, ರೂಪಾಲಿ ಅವರನ್ನು ಮದುವೆಯಾಗುವುದು ಒಂದು ಅಸಾಮಾನ್ಯ ಭಾವನೆ. ರೂಪಾಲಿ ಭೇಟಿ ಹೇಗಾಯಿತು ಎಂಬುದನ್ನು ಬೇರೆ ಸಮಯದಲ್ಲಿ ಹಂಚಿಕೊಳ್ಳುತ್ತೇನೆ. ನಾವು ಸ್ವಲ್ಪ ಸಮಯದ ಹಿಂದಷ್ಟೇ ಪರಿಚಯವಾಗಿದ್ದು, ಈ ಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ " ಎಂದು ಹೇಳಿದ್ದಾರೆ. 

(5 / 6)

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಈ ಹಿಂದೆ ನಟಿ ಶಕುಂತಲಾ ಬರುವಾ ಅವರ ಪುತ್ರಿ ರಾಜೋಶಿ ಬರುವಾ ಅವರನ್ನು ವಿವಾಹವಾಗಿದ್ದರು. ಇವರಿಗೆ ಅರ್ಥ್​ ವಿದ್ಯಾರ್ಥಿ ಎಂಬ ಮಗನಿದ್ದಾನೆ.  

(6 / 6)

ಇತರ ಗ್ಯಾಲರಿಗಳು