ಕಿಡಿಗೇಡಿಗಳಿಗೆ ಹೆದರಿದ್ರಾ ನಟಿ? ಕಾಮೆಂಟ್ ಬಾಕ್ಸ್ ಆಫ್ ಮಾಡಿ, ಹೀಗೂ ಸೀರೆ ಉಡಬಹುದು ಅಂತ ತೋರಿಸಿಕೊಟ್ಟ ಚೈತ್ರಾ ಆಚಾರ್
- Chaithra J Achar: ಇತ್ತೀಚಿನ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್ ಬಿಂಕ ಬಿನ್ನಾಣದಿಂದಲೇ ಹಲ್‌ಚಲ್ ಸೃಷ್ಟಿಸುತ್ತಿದ್ದಾರೆ ನಟಿ ಚೈತ್ರಾ ಜೆ ಆಚಾರ್. ತುಂಡುಡುಗೆಯಲ್ಲಿ ಮನಸೆಳೆದ ಈ ನಟಿ ಸೀರೆಯಲ್ಲೂ ಮನಮೋಹಕ. ಈಗ ಹೀಗೂ ಸೀರೆ ಉಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

(1 / 7)
ಮಹಿರಾ, ತಲೆದಂಡದಲ್ಲಿ ನಟಿಸಿದರೂ, ಟೋಬಿ ಸಿನಿಮಾ ಮೂಲಕ ಹೆಚ್ಚು ಪ್ರಚಲಿತಕ್ಕೆ ಬಂದ ನಟಿ ಚೈತ್ರಾ ಜೆ ಆಚಾರ್. ಆ ಸಿನಿಮಾದಲ್ಲಿನ ಪಾತ್ರದಿಂದ ಕನ್ನಡಿಗರ ಗಮನ ಸೆಳೆದರು.(Instagram/ Chaithra J Achar)
(2 / 7)
ಅದಾದ ಬಳಿಕ ಬಂದ ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಹ ನೋಡುಗರಿಗೆ ಇಷ್ಟವಾಯ್ತು. ಚೈತ್ರಾ ವೇಶ್ಯೆಯ ಪಾತ್ರಕ್ಕೆ ಬಣ್ಣ ಹಚ್ಚಿ ಪಾತ್ರ ಪರಕಾಯ ಪ್ರವೇಶಿಸಿದ್ದರು. ಬ್ಲಿಂಕ್ ಚಿತ್ರದಲ್ಲಿನ ಪಾತ್ರಕ್ಕೂ ಮೆಚ್ಚುಗೆ ಸಿಕ್ಕಿತ್ತು.
(3 / 7)
ಹೀಗೆ ನಟನೆಯ ಮೂಲಕವೇ ಬ್ಯಾಕ್ ಟು ಬ್ಯಾಕ್ ಸಿನಿಮಾ ಆಫರ್ ಗಿಟ್ಟಿಸಿಕೊಳ್ಳುತ್ತಿರುವ ಇದೇ ಚೈತ್ರಾ, ಇತ್ತೀಚೆಗಷ್ಟೇ ಉತ್ತರಕಾಂಡ ಸಿನಿಮಾಕ್ಕೂ ಆಯ್ಕೆಯಾಗಿದ್ದರು.
(4 / 7)
ಹೀಗೆ ಒಳ್ಳೊಳ್ಳೆಯ ಸಿನಿಮಾ ತಂಡಗಳನ್ನೇ ಸೇರುತ್ತ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ ನಟಿ ಚೈತ್ರಾ ಆಚಾರ್.
(5 / 7)
ಸಿನಿಮಾ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಚೈತ್ರಾ ಸಕ್ರಿಯರು. ನಾರ್ಮಲ್ ಲುಕ್‌ನಲ್ಲಿ ಕಾಣಿಸಿಕೊಳ್ಳದ ಚೈತ್ರಾ, ಕೊಂಚ ಬೋಲ್ಡ್ ವರಸೆಯಲ್ಲಿ ಪ್ರತ್ಯಕ್ಷರಾಗುತ್ತಾರೆ.
(6 / 7)
ಈಗ ಸೀರೆಯ ಫೋಟೋಶೂಟ್ ಜತೆಗೆ ಆಗಮಿಸಿದ್ದಾರೆ. ಸೀರೆಯಲ್ಲೂ ಕೊಂಚ ಮಾದಕತೆ ಉಕ್ಕಿಸಿದ್ದಾರೆ ಚೈತ್ರಾ. ಆದರೆ, ಕಿಡಿಗೇಡಿಗಳ ಕಾಟಕ್ಕೆ ಬೇಸತ್ತಿದ್ದಾರೆ.
ಇತರ ಗ್ಯಾಲರಿಗಳು