ಬುದ್ದಿ ಕಲಿಯದ ಕೆಕೆಆರ್ ವೇಗಿ ಹರ್ಷಿತ್ ರಾಣಾಗೆ ಮತ್ತೆ ದಂಡದ ಬರೆ; ಒಂದು ಪಂದ್ಯದಿಂದ ನಿಷೇಧ
- Harshit Rana : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ಅಭಿಷೇಕ್ ಪೊರೆಲ್ ಔಟಾದ ಸಂದರ್ಭದಲ್ಲಿ ಕೆಕೆಆರ್ ವೇಗಿ ಹರ್ಷಿತ್ ರಾಣಾ ಅವರು ಫ್ಲೈಯಿಂಗ್ ಕಿಸ್ ನೀಡಿ ಮತ್ತೊಮ್ಮೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ದಂಡದ ಶಿಕ್ಷೆಗೆ ಗುರಿಯಾಗಿದ್ದಾರೆ.

(1 / 6)
ಬುದ್ಧಿ ಕಲಿಯದ ಕೋಲ್ಕತ್ತಾ ನೈಟ್ ರೈಡರ್ಸ್ ವೇಗದ ಬೌಲರ್ ಹರ್ಷಿತ್ ರಾಣಾ ಅವರಿಗೆ ಮತ್ತೆ ಪಂದ್ಯದ ಶೇ.100 ರಷ್ಟು ದಂಡ ವಿಧಿಸಿರುವುದರ ಜೊತೆಗೆ ಒಂದು ಪಂದ್ಯದಿಂದ ಅಮಾನತು ಆಗಿದ್ದಾರೆ.(AP)
(2 / 6)
ಪ್ರಸಕ್ತ ಐಪಿಎಲ್ನಲ್ಲಿ ಎರಡನೇ ಬಾರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಕೆಕೆಆರ್ ಫಾಸ್ಟ್ ಬೌಲರ್ ಹರ್ಷಿತ್ ರಾಣಾ ಅವರಿಗೆ ಸರಿಯಾದ ಶಿಕ್ಷೆ ನೀಡಲಾಗಿದೆ.(PTI)
(3 / 6)
ಏಪ್ರಿಲ್ 29ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ ಗೆಲುವಿನ ವೇಳೆ ಹರ್ಷಿತ್, ನಿಷೇಧ ಶಿಕ್ಷೆ ಎದುರಿಸಿದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.(AP)
(4 / 6)
ಡೆಲ್ಲಿ ಎದುರಿನ ಪಂದ್ಯದಲ್ಲಿ 4 ಓವರ್ಗೆ 28 ರನ್ ನೀಡಿ 2 ವಿಕೆಟ್ ಕಬಳಿಸಿದ ಹರ್ಷಿಕ್, ಪಂದ್ಯದ 7ನೇ ಓವರ್ನಲ್ಲಿ ಅಭಿಷೇಕ್ ಪೊರೆಲ್ ವಿಕೆಟ್ ಉರುಳಿಸಿದ ನಂತರ ಅವರಿಗೆ ಪ್ಲೇಯಿಂಗ್ ಕಿಸ್ ನೀಡಿ ಲೇವಡಿ ಮಾಡಿದ್ದರು. ಐಪಿಎಲ್ನಲ್ಲಿ ಎರಡನೇ ಬಾರಿಗೆ ಹೀಗೆ ಮಾಡಿದ್ದಾರೆ.(PTI)
(5 / 6)
ಹೀಗಾಗಿ ಮೇ 3 ರಂದು ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯಕ್ಕೆ ಹರ್ಷಿತ್ ಲಭ್ಯವಿರುವುದಿಲ್ಲ.
ಇತರ ಗ್ಯಾಲರಿಗಳು