ಕನ್ನಡ ಸುದ್ದಿ  /  Sports  /  Cricket News Athiya Shetty Posts Clarification After Kl Rahuls Videos From London Strip Club Surface Online Prs

KL Rahul in Strip Clup: ಲಂಡನ್​ನಲ್ಲಿ ಅರೆನಗ್ನ ಡ್ಯಾನ್ಸ್​ ಮಾಡುವ ಸ್ಟ್ರಿಪ್ ​​​ಕ್ಲಬ್​ಗೆ ಹೋಗಿದ್ದ ರಾಹುಲ್​​​; ಸ್ಪಷ್ಟನೆ ನೀಡಿದ ಆಥಿಯಾ

ಶಸ್ತ್ರಚಿಕಿತ್ಸೆಗೆಂದು ಲಂಡನ್​​ಗೆ ತೆರಳಿದ್ದ ಕೆಎಲ್​ ರಾಹುಲ್ ಅಡಲ್ಟ್ ಅಥವಾ ಸ್ಟ್ರಿಪ್​ ಕ್ಲಬ್​ವೊಂದರಲ್ಲಿ (ಕಾಮಪ್ರಚೋದಕ ನೃತ್ಯಗಳ ರೂಪದಲ್ಲಿರುವ ಕ್ಲಬ್​) ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಟೀಕೆ ವ್ಯಕ್ತವಾಗುತ್ತಿದ್ದಂತೆ ರಾಹುಲ್​ ಪತ್ನಿ ಆಥಿಯಾ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಸ್ಟ್ರಿಪ್​ ಕ್ಲಬ್​​​ನಲ್ಲಿ ಕಾಣಿಸಿಕೊಂಡ ಕೆಎಲ್​ ರಾಹುಲ್​ ದಂಪತಿ
ಸ್ಟ್ರಿಪ್​ ಕ್ಲಬ್​​​ನಲ್ಲಿ ಕಾಣಿಸಿಕೊಂಡ ಕೆಎಲ್​ ರಾಹುಲ್​ ದಂಪತಿ

ಮಂಡಿರಜ್ಜು ಗಾಯದಿಂದ 16ನೇ ಆವೃತ್ತಿ ಐಪಿಎಲ್ (IPL 2023)​ ಅಲ್ಲದೆ, ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ (WTC Final 2023)​ ಪಂದ್ಯದಿಂದಲೂ ಆರಂಭಿಕ ಆಟಗಾರ ಕೆಎಲ್​ ರಾಹುಲ್ (KL Rahul)​ ಹೊರ ಬಿದಿದ್ದಾರೆ. ಗಾಯಗೊಂಡ ಬೆನ್ನಲ್ಲೇ ರಾಹುಲ್​​, ಲಂಡನ್​​ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ. ತದನಂತರ ಬೆಂಗಳೂರಿನ ಎನ್​ಸಿಎನಲ್ಲಿ ಪುನಃಶ್ಚೇತನ ತರಬೇತಿಗೆ ಒಳಗಾಗಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಂಚಲನ ಮೂಡಿಸಿದ ರಾಹುಲ್​ ವಿಡಿಯೋ

ಇದೆಲ್ಲದರ ಮಧ್ಯೆ​ ರಾಹುಲ್​ ಅವರ ವಿಡಿಯೋವೊಂದು ಸಂಚಲನ ಮೂಡಿಸಿದೆ. ಶಸ್ತ್ರಚಿಕಿತ್ಸೆಗೆಂದು ಲಂಡನ್​​ಗೆ ತೆರಳಿದ್ದ ರಾಹುಲ್ ಅಡಲ್ಟ್ ಅಥವಾ ಸ್ಟ್ರಿಪ್​ ಕ್ಲಬ್​ವೊಂದರಲ್ಲಿ (ಕಾಮ ಪ್ರಚೋದಕ ನೃತ್ಯಗಳ ರೂಪದಲ್ಲಿರುವ ಕ್ಲಬ್​) ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಭಾರಿ ಟೀಕೆ ವ್ಯಕ್ತವಾಗುತ್ತಿದ್ದಂತೆ ರಾಹುಲ್​ ಪತ್ನಿ ಆಥಿಯಾ ಶೆಟ್ಟಿ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಲಂಡನ್​ಗೆ ಶಸ್ತ್ರಚಿಕಿತ್ಸೆಗೆ ತೆರಳಿದ್ದ ವೇಳೆ ಕೆಎಲ್​ ರಾಹುಲ್​ ಮತ್ತು ಪತ್ನಿ ಆಥಿಯಾ ಶೆಟ್ಟಿ (Athiya Shetty) ಜೊತೆಯಾಗಿ ಸ್ಟ್ರಿಪ್​ ಕ್ಲಬ್​ಗೆ (KL Rahul in Strip Clup) ಹೋಗಿದ್ದರು ಎನ್ನಲಾದ ವಿಡಿಯೋ ಭಾರಿ ವೈರಲ್​ ಆಗುತ್ತಿದೆ. ಇದಕ್ಕೂ ಮುನ್ನ ರಾಹುಲ್​ ಶಸ್ತ್ರಚಿಕಿತ್ಸೆ ಮುಗಿದ ಬೆನ್ನಲ್ಲೇ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಊರುಗೋಲಿನಿಂದಿಗೆ ರಾಹುಲ್​ ನಡೆದಾಡುವುದನ್ನು ಕಂಡು ಅಭಿಮಾನಿಗಳು ಬೇಸರಗೊಂಡಿದ್ದರು. ಇದೀಗ ರಾಹುಲ್​​ ಸ್ಟ್ರಿಪ್​ ಕ್ಲಬ್​ಗೆ ಹೋಗಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್​ ಆಗುತ್ತಿದೆ.

ಆಥಿಯಾ ಶೆಟ್ಟಿ ಸ್ಪಷ್ಟನೆ

ಇದೆಲ್ಲವನ್ನೂ ತಳ್ಳಿ ಹಾಕಿದ ಆಥಿಯಾ ಶೆಟ್ಟಿ ಇನ್​ಸ್ಟಾಗ್ರಾಂ ಪೋಸ್ಟ್​​ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾನು ಸಾಮಾನ್ಯವಾಗಿ ಮೌನವಾಗಿರಲು ಮತ್ತು ಪ್ರತಿಕ್ರಿಯಿಸದೆ ಇರಲು ಬಯಸುತ್ತೇನೆ. ಆದರೆ ಕೆಲವೊಮ್ಮೆ ನಿಮ್ಮ ಪರವಾಗಿ ನಿಲ್ಲುವುದು ಮುಖ್ಯ. ರಾಹುಲ್, ನಾನು ಮತ್ತು ನಮ್ಮ ಸ್ನೇಹಿತರು ಸಾಮಾನ್ಯ ಸ್ಥಳಕ್ಕೆ ಹೋಗಿದ್ದೆವು. ಇಂತಹ ವಿಷಯಗಳ ಕುರಿತು ಮಾತನಾಡುವುದನ್ನು ಮೊದಲು ನಿಲ್ಲಿಸಿ. ವರದಿ ಮಾಡುವ ಮೊದಲು ಸತ್ಯಾಸತ್ಯತೆ ಪರಿಶೀಲಿಸಿ. ಶಾಂತಿ ಮತ್ತು ಪ್ರೀತಿ ಎಂದು ನಟಿ ಪೋಸ್ಟ್​ನಲ್ಲಿ ಬರೆದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಸ್ಟ್ರಿಪ್​​​ ಕ್ಲಬ್​ ಎಂದರೇನು?

ಈ ವಿಡಿಯೋದಲ್ಲಿ ಕೆಎಲ್ ರಾಹುಲ್ ಅವರು ಕ್ಲಬ್​ವೊಂದರಲ್ಲಿ ಆನಂದಿಸುತ್ತಿದ್ದರು. ಆದರೆ ಇದನ್ನು ಸ್ಟ್ರಿಪ್​ ಕ್ಲಬ್​ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಹಾಗಾದರೆ ಸ್ಟ್ರಿಪ್ ಕ್ಲಬ್ ಎಂದರೇನು? ಡ್ಯಾನ್ಸರ್‌ಗಳು ಪೋಲ್ ಡ್ಯಾನ್ಸ್ ಮಾಡುವಾಗ ಒಂದೊಂದಾಗಿ ತಮ್ಮ ಬಟ್ಟೆಗಳನ್ನು ತೆಗೆಯುತ್ತಾರೆ. ಕೊನೆಗೆ ಅವರು ಬಿಕಿನಿಯಲ್ಲಿ ಮಾತ್ರ ಇರುತ್ತಾರೆ. ಲಂಡನ್‌ನಲ್ಲಿ ಇದು ತುಂಬಾ ಸಾಮಾನ್ಯವಾಗಿದೆ. ಆದರೆ, ಭಾರತದಲ್ಲಿ ಈ ರೀತಿಯ ಕ್ಲಬ್‌ಗಳಿಗೆ ಅವಕಾಶವಿಲ್ಲ. ಹಾಗಾಗಿ ಕೆಎಲ್ ರಾಹುಲ್ ಇಂತಹ ಕ್ಲಬ್‌ನಲ್ಲಿ ಕಾಣಿಸಿಕೊಂಡಿರುವುದು ಕ್ರಿಕೆಟ್​​​ ಅಭಿಮಾನಿಗಳನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.

ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ

ಈ ಬಾರಿಯ ಐಪಿಎಲ್​​ನಲ್ಲಿ ಕೆಎಲ್​ ರಾಹುಲ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೆಟ್ಟ ಸ್ಟ್ರೈಕ್​ರೇಟ್​ನಿಂದ ತುಂಬಾ ಟೀಕೆಗೆ ಗುರಿಯಾದರು. ಆಡಿದ 9 ಪಂದ್ಯಗಳಲ್ಲಿ ಕೇವಲ 34.25ರ ಸರಾಸರಿಯಲ್ಲಿ 274 ರನ್​ ಗಳಿಸಿದ್ದರು. ಅದು ಕೂಡ 113.22ರ ಸ್ಟ್ರೈಕ್​ರೇಟ್​​ನಲ್ಲಿ. ಎರಡು ಅರ್ಧಶತಕ ಸಿಡಿಸಿದ್ದಾರೆ.

2022ರಿಂದ ರಾಹುಲ್​ಗೆ ಕೆಟ್ಟ ಸಮಯ

ಜನವರಿ 2022ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಕೆಎಲ್ ರಾಹುಲ್ ಅವರು ಕೆಟ್ಟ ದಿನಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೂ ಮೊದಲು ಆರು ತಿಂಗಳ ಹಿಂದೆ ಸೆಪ್ಟೆಂಬರ್ 2021ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಕೆಎಲ್ ರಾಹುಲ್ ಟೆಸ್ಟ್ ತಂಡ ಸೇರಿದ ರಾಹುಲ್, ಟೆಸ್ಟ್ ತಂಡದಲ್ಲಿ ಉಪನಾಯಕತ್ವವನ್ನೂ ಪಡೆದರು. ರೋಹಿತ್​ ಅಲಭ್ಯತೆಯಲ್ಲಿ ನಾಯಕನೂ ಆದರು.

ಆದರೆ ಬ್ಯಾಟಿಂಗ್​ನಲ್ಲಿ ಪದೆಪದೇ ನಿರಾಸೆ ಮೂಡಿಸುತ್ತಲೇ ಬಂದಿದ್ದಾರೆ. ಸತತ ಫೇಲ್ಯೂರ್​​ನಿಂದ ಸೆಲೆಕ್ಟರ್​ಗಳ ಕೆಂಗಣ್ಣಿಗೆ ಗುರಿಯಾಗಿರುವ ರಾಹುಲ್​​ರನ್ನು​, ಅಂತಾರಾಷ್ಟ್ರೀಯ T20 ಕ್ರಿಕೆಟ್​ಗೆ ಆಯ್ಕೆ ಮಾಡಲಾಗುತ್ತಿಲ್ಲ. ಏಕದಿನ ಹೊರತುಪಡಿಸಿ, ಟೆಸ್ಟ್​ ಕ್ರಿಕೆಟ್​ನಲ್ಲೂ ತಮ್ಮದೇ ಛಾಪು ಮೂಡಿಸುತ್ತಿಲ್ಲ. ಹಾಗಾಗಿ ತನಗೆ ಹೊರಿಸಿದ್ದ ಉಪನಾಯಕತ್ವ ಜವಾಬ್ದಾರಿಯನ್ನು ವಾಪಸ್​ ತೆಗೆದುಕೊಳ್ಳಲಾಗಿದೆ. ಈಗವರ ಮುಂದಿನ ಗುರಿ ಏಕದಿನ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವುದು.