Kannada News  /  Photo Gallery  /  Cricket News Ipl 2023 Shubman Gill Becomes Youngest Batter To Score 25th Fifty In T20 Gujarat Titans Rcb Vs Gt Jra

Shubman Gill: ಟಿ20 ಕ್ರಿಕೆಟ್‌ನಲ್ಲಿ 25 ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಗಿಲ್; ಪಾಕ್ ಆಟಗಾರನ ದಾಖಲೆ ಬ್ರೇಕ್

22 May 2023, 16:10 IST Jayaraj
22 May 2023, 16:10 , IST

  • RCB vs GT IPL 2023: ಚಿನ್ನಸ್ವಾಮಿ ಮೈದಾನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅದ್ಭುತ ಶತಕ ಸಿಡಿಸುವ ಮೂಲಕ, ಗುಜರಾತ್‌ ಟೈಟಾನ್ಸ್‌ ಆಟಗಾರ ಶುಬ್ಮನ್ ಗಿಲ್ ದೇಶೀಯ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಭೂತಪೂರ್ವ ದಾಖಲೆ ನಿರ್ಮಿಸಿದರು.

ಭಾನುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಗಿಲ್, ದೇಶೀಯ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಉನ್ನತ ದಾಖಲೆ ನಿರ್ಮಿಸಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ, ಅವರು ಟಿ20 ಕ್ರಿಕೆಟ್‌ನಲ್ಲಿ 25 ಬಾರಿ 50 ರನ್‌ಗಳ ಗಡಿ ದಾಟಿದ ಮೈಲಿಗಲ್ಲು ಸ್ಥಾಪಿಸಿದರು. ಗಿಲ್ ದೇಶೀಯ ಮತ್ತು ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4 ಶತಕ ಮತ್ತು 21 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಚಿನ್ನಸ್ವಾಮಿಯಲ್ಲಿ ಶತಕ ಸಿಡಿಸುವ ವೇಳೆಗೆ ಅವರಿಗೆ 23 ವರ್ಷ 255 ದಿನಗಳು. ಈ ನಿಟ್ಟಿನಲ್ಲಿ ಅವರು ಪಾಕಿಸ್ತಾನದ ಅಹ್ಮದ್ ಶೆಹಜಾದ್ ಅವರ ದಾಖಲೆಯನ್ನು ಮುರಿದಿದ್ದಾರೆ. 

(1 / 5)

ಭಾನುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಗಿಲ್, ದೇಶೀಯ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಉನ್ನತ ದಾಖಲೆ ನಿರ್ಮಿಸಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ, ಅವರು ಟಿ20 ಕ್ರಿಕೆಟ್‌ನಲ್ಲಿ 25 ಬಾರಿ 50 ರನ್‌ಗಳ ಗಡಿ ದಾಟಿದ ಮೈಲಿಗಲ್ಲು ಸ್ಥಾಪಿಸಿದರು. ಗಿಲ್ ದೇಶೀಯ ಮತ್ತು ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4 ಶತಕ ಮತ್ತು 21 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಚಿನ್ನಸ್ವಾಮಿಯಲ್ಲಿ ಶತಕ ಸಿಡಿಸುವ ವೇಳೆಗೆ ಅವರಿಗೆ 23 ವರ್ಷ 255 ದಿನಗಳು. ಈ ನಿಟ್ಟಿನಲ್ಲಿ ಅವರು ಪಾಕಿಸ್ತಾನದ ಅಹ್ಮದ್ ಶೆಹಜಾದ್ ಅವರ ದಾಖಲೆಯನ್ನು ಮುರಿದಿದ್ದಾರೆ. (PTI)

ಪಾಕಿಸ್ತಾನದ ಅಹ್ಮದ್ ಶೆಹಜಾದ್ 24 ವರ್ಷ ಮತ್ತು 75 ದಿನಗಳ ವಯಸ್ಸಿನಲ್ಲಿ ಟಿ20 ಕ್ರಿಕೆಟ್‌ನಲ್ಲಿ 25 ಬಾರಿ 50 ರನ್ ಗಡಿ ದಾಟಿದ್ದಾರೆ. ಶೆಹಜಾದ್ ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ 5 ಶತಕ ಮತ್ತು 40 ಅರ್ಧ ಶತಕಗಳನ್ನು ಗಳಿಸಿದ್ದಾರೆ.

(2 / 5)

ಪಾಕಿಸ್ತಾನದ ಅಹ್ಮದ್ ಶೆಹಜಾದ್ 24 ವರ್ಷ ಮತ್ತು 75 ದಿನಗಳ ವಯಸ್ಸಿನಲ್ಲಿ ಟಿ20 ಕ್ರಿಕೆಟ್‌ನಲ್ಲಿ 25 ಬಾರಿ 50 ರನ್ ಗಡಿ ದಾಟಿದ್ದಾರೆ. ಶೆಹಜಾದ್ ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ 5 ಶತಕ ಮತ್ತು 40 ಅರ್ಧ ಶತಕಗಳನ್ನು ಗಳಿಸಿದ್ದಾರೆ.( AFP)

ಈ ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮೂರನೇ ಸ್ಥಾನದಲ್ಲಿದ್ದಾರೆ. 24 ವರ್ಷ ಮತ್ತು 135 ದಿನಗಳ ವಯಸ್ಸಿನಲ್ಲಿ, ಅವರು ಟಿ20 ಕ್ರಿಕೆಟ್‌ನಲ್ಲಿ ವೈಯಕ್ತಿಕ 25 ಬಾರಿ 50 ರನ್‌ಗಳ ಗಡಿ ದಾಟಿದ್ದರು. ಬಾಬರ್ ಪ್ರಸ್ತುತ ಟಿ20 ಮಾದರಿಯಲ್ಲಿ 9 ಶತಕ ಮತ್ತು 76 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. 

(3 / 5)

ಈ ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮೂರನೇ ಸ್ಥಾನದಲ್ಲಿದ್ದಾರೆ. 24 ವರ್ಷ ಮತ್ತು 135 ದಿನಗಳ ವಯಸ್ಸಿನಲ್ಲಿ, ಅವರು ಟಿ20 ಕ್ರಿಕೆಟ್‌ನಲ್ಲಿ ವೈಯಕ್ತಿಕ 25 ಬಾರಿ 50 ರನ್‌ಗಳ ಗಡಿ ದಾಟಿದ್ದರು. ಬಾಬರ್ ಪ್ರಸ್ತುತ ಟಿ20 ಮಾದರಿಯಲ್ಲಿ 9 ಶತಕ ಮತ್ತು 76 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. (AP)

ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ 24 ವರ್ಷ ಮತ್ತು 208 ದಿನಗಳ ವಯಸ್ಸಿನಲ್ಲಿ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ 25 ಬಾರಿ ಅರ್ಧಶತಕ ಸಿಡಿಸಿದ್ದಾರೆ. ಅವರು ಈ ಮಾದರಿಯಲ್ಲಿ ಇದುವರೆಗೆ 5 ಶತಕ ಮತ್ತು 37 ಅರ್ಧ ಶತಕಗಳನ್ನು ಗಳಿಸಿದ್ದಾರೆ.

(4 / 5)

ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ 24 ವರ್ಷ ಮತ್ತು 208 ದಿನಗಳ ವಯಸ್ಸಿನಲ್ಲಿ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ 25 ಬಾರಿ ಅರ್ಧಶತಕ ಸಿಡಿಸಿದ್ದಾರೆ. ಅವರು ಈ ಮಾದರಿಯಲ್ಲಿ ಇದುವರೆಗೆ 5 ಶತಕ ಮತ್ತು 37 ಅರ್ಧ ಶತಕಗಳನ್ನು ಗಳಿಸಿದ್ದಾರೆ.(AP)

ಗಿಲ್‌ಗಿಂತ ಮುಂಚೆ, ಅವರ ಸ್ನೇಹಿತ ಇಶಾನ್ ಕಿಶನ್ ಟಿ20 ಕ್ರಿಕೆಟ್‌ನಲ್ಲಿ 25 ಬಾರಿ 50 ರನ್‌ಗಳ ಗಡಿ ದಾಟಿದ್ದ ಅತ್ಯಂತ ಕಿರಿಯ ಭಾರತೀಯ ಎಂಬ ದಾಖಲೆ ಹೊಂದಿದ್ದರು. ಅವರು 24 ವರ್ಷ 272 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದರು. ಸದ್ಯಕ್ಕೆ ಈ ದಾಖಲೆ ಗಿಲ್ ಪಾಲಾಗಿದೆ.

(5 / 5)

ಗಿಲ್‌ಗಿಂತ ಮುಂಚೆ, ಅವರ ಸ್ನೇಹಿತ ಇಶಾನ್ ಕಿಶನ್ ಟಿ20 ಕ್ರಿಕೆಟ್‌ನಲ್ಲಿ 25 ಬಾರಿ 50 ರನ್‌ಗಳ ಗಡಿ ದಾಟಿದ್ದ ಅತ್ಯಂತ ಕಿರಿಯ ಭಾರತೀಯ ಎಂಬ ದಾಖಲೆ ಹೊಂದಿದ್ದರು. ಅವರು 24 ವರ್ಷ 272 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದರು. ಸದ್ಯಕ್ಕೆ ಈ ದಾಖಲೆ ಗಿಲ್ ಪಾಲಾಗಿದೆ.(IPL twitter)

ಇತರ ಗ್ಯಾಲರಿಗಳು