ಕನ್ನಡ ಸುದ್ದಿ  /  Sports  /  Cricket News Ipl 2023 Top Expensive Players Who Did Not Get Chance To Play Shivam Mavi Mathew Wade Joe Root Jra

IPL 2023: ದುಬಾರಿ ಮೊತ್ತಕ್ಕೆ ಖರೀದಿಯಾದರೂ ಆಡುವ ಅವಕಾಶವೇ ಪಡೆಯದ ಆಟಗಾರರಿವರು

IPL 2023 Final: ಫ್ರಾಂಚೈಸಿಗಳಿಂದ ದುಬಾರಿ ಬೆಲೆ ಪಡೆದ ಆಟಗಾರರಿಗೆ ಐಪಿಎಲ್ 2023ರ ಆವೃತ್ತಿಯಲ್ಲಿ ಸರಿಯಾದ ಆಡುವ ಅವಕಾಶ ಸಿಕ್ಕಿಲ್ಲ. ಅವರ ಪಟ್ಟಿ ಇಲ್ಲಿದೆ.

ಐಪಿಎಲ್‌ನಲ್ಲಿ ಅವಕಾಶ ವಂಚಿತ ಆಟಗಾರರು
ಐಪಿಎಲ್‌ನಲ್ಲಿ ಅವಕಾಶ ವಂಚಿತ ಆಟಗಾರರು

ಐಪಿಎಲ್‌ 2023ರ‌ (IPL 2023) ಆವೃತ್ತಿಗೆ ಭಾನುವಾರ ತೆರೆ ಬೀಳಲಿದೆ. ಹಲವು ದಾಖಲೆ ಹಾಗೂ ವೈಶಿಷ್ಟ್ಯಗಳಿಗೆ ಕಾರಣವಾದ ಪ್ರಸಕ್ತ ಆವೃತ್ತಿಯಲ್ಲಿ ಯಾವ ತಂಡ ಟ್ರೋಫಿ ಎತ್ತಿ ಹಿಡಿಯಲಿದೆ ಎಂಬುದು ಇಂದು( ಇಂದು 28) ರಾತ್ರಿ ಸ್ಪಷ್ಟವಾಗಲಿದೆ. (ಐಪಿಎಲ್)

ಟ್ರೆಂಡಿಂಗ್​ ಸುದ್ದಿ

ಇಂಡಿಯನ್ ಪ್ರೀಮಿಯರ್ ಲೀಗ್‌ (IPL)ನಲ್ಲಿ ಆಡಲು ಹಲವು ಆಟಗಾರರು ಕಾಯುತ್ತಿರುತ್ತಾರೆ. ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಆಡಿರುವ ಪ್ರಮುಖ ಆಟಗಾರರು ಮಿಲಿಯನ್‌ ಡಾಲರ್‌ ಟೂರ್ನಿಯಲ್ಲಿ ಭಾಗಿಯಾಗಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ, ಎಲ್ಲಾ ಆಟಗಾರರಿಗೆ ಆಡುವ ಅವಕಾಶ ಸಿಗುವುದಿಲ್ಲ. ಇನ್ನೂ ಕೆಲವು ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಿದರೂ, ಅವರಿಗೆ ಆಡುವ ಬಳಗದಲ್ಲಿ ಅವಕಾಶವೇ ಸಿಗುವುದಿಲ್ಲ.

ಹೆಚ್ಚಿನ ಸಂದರ್ಭಗಳಲ್ಲಿ ದೇಶೀಯ ಆಟಗಾರರಿಗಿಂತ ದುಬಾರಿ ಬೆಲೆಗೆ ಖರೀದಿಯಾಗುವ ವಿದೇಶಿ ಬ್ಯಾಟರ್‌ಗಳು ಅವಕಾಶ ವಂಚಿತರಾಗುತ್ತಾರೆ. ತಂಡದ ಆಡುವ ಬಳಗದ ಸಂಯೋಜನೆ ಮತ್ತು ಅವರ ಪ್ರದರ್ಶನದ ಕಾರಣದಿಂದಾಗಿ ಕೆಲವು ಆಟಗಾರರು ಟೂರ್ನಿಯುದ್ದಕ್ಕೂ ಬೆಂಚು ಕಾಯಬೇಕಾಗುತ್ತದೆ. ಪ್ರಸಕ್ತ ಆವೃತ್ತಿಯಲ್ಲೂ ಹಲವು ಬಲಿಷ್ಠ ಹಾಗೂ ದುಬಾರಿ ಬೆಲೆ ಪಡೆದ ಆಟಗಾರರು ಟೂರ್ನಿಯುದ್ದಕ್ಕೂ ಬೆಂಚು ಬೆಚ್ಚಗಾಗಿಸಿದ ನಿದರ್ಶನವಿದೆ. ಇವರಲ್ಲಿ ಹೆಚ್ಚಿನ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳಿಂದ ದುಬಾರಿ ಮೊತ್ತವನ್ನು ಪಡೆದಿದ್ದಾರೆ. ಆದರೂ ಅವರಿಗೆ ಐಪಿಎಲ್ 2023ರಲ್ಲಿ ಆಡುವ ಅವಕಾಶ ಸಿಗಲಿಲ್ಲ. ಅವರ ಪಟ್ಟಿ ಇಲ್ಲಿದೆ.

ಶಿವಂ ಮಾವಿ (ಗುಜರಾತ್ ಟೈಟಾನ್ಸ್)

ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಬರೋಬ್ಬರಿ 6 ಕೋಟಿ ರೂಪಾಯಿ ಕೊಟ್ಟು ಆಲ್‌ರೌಂಡರ್‌ ಶಿವಂ ಮಾವಿಯನ್ನು ಖರೀದಿಸಿತು. ಆದರೆ ಹಾಲಿ ಚಾಂಪಿಯನ್‌ ಪರ ಆಡಲು ಅವರಿಗೆ ಒಂದೇ ಒಂದು ಅವಕಾಶ ಕೂಡಾ ಸಿಕ್ಕಿಲ್ಲ.

ಮ್ಯಾಥ್ಯೂ ವೇಡ್ (ಗುಜರಾತ್ ಟೈಟಾನ್ಸ್)

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್‌ ಪರ 10 ಪಂದ್ಯಗಳನ್ನು ಆಡಿದ್ದ ವಿಕೆಟ್‌ ಕೀಪರ್ ಹಾಗೂ ಬ್ಯಾಟ್ಸ್‌ಮನ್ ವೇಡ್, ಈ ಬಾರಿ ಬೆಂಚು ಬೆಚ್ಚಗಾಗಿಸಿದ್ದು ಮಾತ್ರ. ಬರೋಬ್ಬರಿ 2.40 ಕೋಟಿ ರೂಪಾಯಿಗೆ ಆಸ್ಟ್ರೇಲಿಯಾ ಆಟಗಾರನನ್ನು ಖರೀದಿಸಿದ್ದ ಗುಜರಾತ್ ಟೈಟಾನ್ಸ್‌, ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ನೀಡಿಲ್ಲ.

ಸಾಯಿ ಕಿಶೋರ್ (ಗುಜರಾತ್ ಟೈಟಾನ್ಸ್)

ಬಲಿಷ್ಠ ಆಟಗಾರರ ಬೃಹತ್‌ ಬಳಗವನ್ನು ಹೊಂದಿರುವ ಗುಜರಾತ್‌ ತಂಡದಲ್ಲಿ, ಆಡುವ ಬಳಗದ ಹೊರತಾಗಿಯೂ ಪ್ರತಿಭಾವಂತ ಆಟಗಾರರಿದ್ದಾರೆ. ಸಾಯಿ ಕಿಶೋರ್ ಅವರನ್ನು 3 ಕೋಟಿ ರೂಪಾಯಿಗೆ ಖರೀದಿಸಿದ ಫ್ರಾಂಚೈಸಿಯು, ಸಂಪೂರ್ಣ ಸೀಸನ್‌ನಲ್ಲಿ ಅವಕಾಶ ನೀಡಲೇ ಇಲ್ಲ. ಎಡಗೈ ಸ್ಪಿನ್ನರ್ ಕಳೆದ ವರ್ಷ ಐದು ಪಂದ್ಯಗಳಲ್ಲಿ ಆಡಿದ್ದರು.

ಡೆವಾಲ್ಡ್ ಬ್ರೆವಿಸ್ (ಮುಂಬೈ ಇಂಡಿಯನ್ಸ್)

ಬೇಬಿ ಎಬಿ ಎಂದೇ ಕರೆಯಲ್ಪಡುವ ದಕ್ಷಿಣ ಆಫ್ರಿಕದ ಸ್ಫೋಟಕ ಬ್ಯಾಟರ್ ಬ್ರೆವಿಸ್ ಅವರನ್ನು 3 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ಖರೀದಿಸಿತ್ತು.‌ ಆದರೆ ಇವರಿಗೆ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿಲ್ಲ.

ಜೋ ರೂಟ್ (ರಾಜಸ್ಥಾನ ರಾಯಲ್ಸ್)

ಇಂಗ್ಲೆಂಡ್‌ನ ಅನುಭವಿ ಬಲಗೈ ಬ್ಯಾಟರ್ ಅನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು 1 ಕೋಟಿ ರೂಪಾಯಿಗೆ ಖರೀದಿಸಿತ್ತು. ಬಟ್ಲರ್‌ ಜೊತೆಗೆ ತಂಡದ ಪರ ಇವರು ಇನ್ನಿಂಗ್ಸ್‌ ತೆರೆಯುವ ನಿರೀಕ್ಷೆ ಇತ್ತು. ಆದರೆ, ಅವರಿಗೆ ಅವಕಾಶಗಳು ಸಿಗಲಿಲ್ಲ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ ಒಂದು ಇನ್ನಿಂಗ್ಸ್‌ನಲ್ಲಿ ಮಾತ್ರ ಬ್ಯಾಟಿಂಗ್‌ ಅವಕಾಶ ಸಿಕ್ಕಿತು. ಅದರಲ್ಲಿ ಕೇವಲ 10 ರನ್‌ ಗಳಿಸಿ ಅವರು ಔಟಾದರು. ಹೀಗಾಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ರೂಟ್‌ಗೆ ಸೂಕ್ತ ಅವಕಾಶ ಸಿಗಲಿಲ್ಲ.