ಕನ್ನಡ ಸುದ್ದಿ  /  Sports  /  Ex Pcb Official Gives Huge Verdict On Shaheen Afridi Injury

Shaheen Afridi injury: 'ಶಹೀನ್ ಅಫ್ರಿದಿ ಆರೇಳು ತಿಂಗಳ ಕಾಲ ತಂಡದಿಂದ ಹೊರಗೆ'; ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ

“ಸದ್ಯದ ನೋವು ಹೆಚ್ಚಿನ ಗಾಯಗಳಿಗೆ ಕಾರಣವಾಗದಿದ್ದರೆ, ಶಾಹೀನ್ ಚೇತರಿಸಿಕೊಳ್ಳಲು ಮೂರ್ನಾಲ್ಕು ತಿಂಗಳು ಬೇಕು. ಪಿಸಿಬಿಯ ವೈದ್ಯಕೀಯ ಮಂಡಳಿಯು ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಿದರೆ, ಶಾಹೀನ್ ಆರರಿಂದ ಏಳು ತಿಂಗಳುಗಳ ಕಾಲ ಹೊರಗುಳಿಯುತ್ತಾರೆ” ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಮುಖ್ಯ ವೈದ್ಯಾಧಿಕಾರಿ ಡಾ.ಸೊಹೈಲ್ ಸಲೀಂ ತಿಳಿಸಿದ್ದಾರೆ.

ಶಹೀನ್‌ ಅಫ್ರಿದಿ ಗಾಯ
ಶಹೀನ್‌ ಅಫ್ರಿದಿ ಗಾಯ (Getty)

ಟಿ20 ವಿಶ್ವಕಪ್ ಫೈನಲ್ ಪಂದ್ಯವು, ಪಾಕಿಸ್ತಾನ ತಂಡಕ್ಕೆ ಎರಡು ಕಾರಣಗಳಿಗಾಗಿ ಮರೆಯಲಾಗದ ಪಂದ್ಯವಾಗಿದೆ. ಒಂದು ಇಂಗ್ಲೆಂಡ್‌ ವಿರುದ್ಧ ಅನುಭವಿಸಿದ ಸೋಲು. ಅದು ಕೂಡಾ ಮೂರು ತಿಂಗಳ ಅವಧಿಯಲ್ಲಿ ಎರಡು ಬಾರಿ ಫೈನಲ್‌ನಲ್ಲಿ ಎದುರಾದ ಸೋಲು. ಮತ್ತೊಂದು, ಶಾಹೀನ್ ಅಫ್ರಿದಿಯ ಗಾಯ.

ಕನಿಷ್ಠ ಮೂರು ತಿಂಗಳ ಕಾಲ ಅಫ್ರಿದಿಯನ್ನು ಪಂದ್ಯಗಳಿಂದ ದೂರವಿಟ್ಟ ಮೊಣಕಾಲಿನ ಗಾಯವು, ಪಾಕಿಸ್ತಾನ ತಂಡಕ್ಕೆ ದೊಡ್ಡ ಪೆಟ್ಟು. ಕ್ಯಾಚ್ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಎಡಗೈ ವೇಗಿಯ ಮೊಣಕಾಲಿಗೆ ಗಾಯವಾಯಿತು. ಕ್ಯಾಚ್‌ ಪಡೆದು ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಅವರ ವಿಕೆಟ್‌ ಕೀಳುವಲ್ಲಿ ಅವರು ಯಶಸ್ವಿಯಾದರೂ, ಈ ಪ್ರಕ್ರಿಯೆಯಲ್ಲಿ ಅಫ್ರಿದಿ ತಮ್ಮ ಮೊಣಕಾಲಿಗೆ ನೋವು ಮಾಡಿಕೊಂಡು ದೀರ್ಘ ಕಾಲಕ್ಕೆ ಪಂದ್ಯಗಳಿಂದ ಹೊರಬೀಳುವಂತಾಯ್ತು.

ಈಗ, ಶಾಹೀನ್ ಗಾಯದ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಂಡಿದೆ. ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಅಫ್ರಿದಿಯ ಫಿಟ್‌ನೆಸ್‌ ಮುಂದಿನ ದಿನಗಳಲ್ಲಿ ಅಪಾಯದ ಹಂತಕ್ಕೆ ಹೋಗಬಹುದು ಎಂದು ಪಿಸಿಬಿಯ ಮಾಜಿ ವೈದ್ಯಕೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ಅಫ್ರಿದಿ ಮೊಣಕಾಲಿನ ಅಸ್ಥಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಏಷ್ಯಾಕಪ್‌ ಕೂಡಾ ಮಿಸ್‌ ಮಾಡಿಕೊಂಡಿದ್ದರು. ಪುನರ್ವಸತಿ ಬಳಿಕ, 22 ವರ್ಷದ ಬೌಲರ್‌ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೂ, ಭಾನುವಾರದ ಪಂದ್ಯದಲ್ಲಿ ಅಫ್ರಿದಿ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಶಾಹೀನ್ ಗಾಯದ ಪ್ರಕರಣವನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡದಿದ್ದರೆ, ಆಫ್ರಿದಿ ಅವರ ವೃತ್ತಿಜೀವನವು ಅಪಾಯಕ್ಕೆ ಸಿಲುಕಬಹುದು ಎಂದು ಪಿಸಿಬಿಯ ಮಾಜಿ ಅಧಿಕಾರಿ ಹೇಳಿದ್ದಾರೆ.

“ಸದ್ಯದ ನೋವು ಹೆಚ್ಚಿನ ಗಾಯಗಳಿಗೆ ಕಾರಣವಾಗದಿದ್ದರೆ, ಶಾಹೀನ್ ಚೇತರಿಸಿಕೊಳ್ಳಲು ಮೂರ್ನಾಲ್ಕು ತಿಂಗಳು ಬೇಕು. ಪಿಸಿಬಿಯ ವೈದ್ಯಕೀಯ ಮಂಡಳಿಯು ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಿದರೆ, ಶಾಹೀನ್ ಆರರಿಂದ ಏಳು ತಿಂಗಳುಗಳ ಕಾಲ ಹೊರಗುಳಿಯುತ್ತಾರೆ” ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಮುಖ್ಯ ವೈದ್ಯಾಧಿಕಾರಿ ಡಾ.ಸೊಹೈಲ್ ಸಲೀಂ ತಿಳಿಸಿದ್ದಾರೆ.

ಅಫ್ರಿದಿ ಕ್ಯಾಚ್ ಪಡೆದ ಕ್ಷಣದಲ್ಲಿ ನೋವಿನಿಂದ ಬಳಲುತ್ತಿದ್ದರು. ಮೊಹಮ್ಮದ್ ಹ್ಯಾರಿಸ್ ತಕ್ಷಣವೇ ಸ್ಥಳಕ್ಕೆ ಬಂದರು. ಶಾಹೀನ್ ಕೂಡಾ ತಕ್ಷಣವೇ ಮೈದಾನ ತೊರೆದರು. ಆ ಬಳಿಕ ಅವರು 16ನೇ ಓವರ್ ಬೌಲ್ ಮಾಡಲು ಹಿಂತಿರುಗಿದರೂ, ನೋವಿನಿಂದ ಬಳಲುತ್ತಿದ್ದ ಆಫ್ರಿದಿ ಕೇವಲ ಒಂದು ಎಸೆತ ಎಸೆದು ಬಳಿಕ ಕುಂಟುತ್ತಾ ಹೊರನಡೆದರು.

ಇದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದೆ. ಅಲ್ಲದೆ ಇಂಗ್ಲೆಂಡ್‌ ವಿರುದ್ಧದ ಸೋಲಿಗೆ ಅಫ್ರಿದಿ ಹೊರಬಿದ್ದಿದ್ದು ಕೂಡಾ ಪ್ರಮುಖ ಕಾರಣ ಎಂದು ತಂಡದ ನಾಯಕ ಬಾಬರ್‌ ಅಜಾಂ ಹೇಳಿದ್ದಾರೆ.

ಅಫ್ರಿದಿ ಅವರು ಭಾರತ ಮತ್ತು ಜಿಂಬಾಬ್ವೆ ವಿರುದ್ಧ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ 3/14 ಮತ್ತು ಬಾಂಗ್ಲಾದೇಶದ ವಿರುದ್ಧ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಅಲ್ಲದೆ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇನ್ನೂ ಎರಡು ವಿಕೆಟ್ ಪಡೆದು ಫಾರ್ಮ್‌ಗೆ ಮರಳಿದರು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧವೂ ಸಹ, ಶಾಹೀನ್ ಮೊದಲ ಓವರ್‌ನಲ್ಲೇ ವಿಕೆಟ್‌ ಕಿತ್ತು ಮಿಂಚಿದರು. ಅಬ್ಬರಿಸಲು ಮುಂದಾಗಿದ್ದ ಅಲೆಕ್ಸ್ ಹೇಲ್ಸ್‌ ಬೌಲ್ಡ್‌ ಮಾಡಿ, ತಮ್ಮ ವೇಗದ ಬೌಲಿಂಗ್‌ ಸಾಮರ್ಥ್ಯ ತೋರಿಸಿದರು. ಸದ್ಯ ಫಾರ್ಮ್‌ಗೆ ಮರಳಿದ್ದ ತಂಡದ ಪ್ರಮುಖ ಬೌಲರ್‌ ತಿಂಗಳುಗಟ್ಟಲೆ ಹೊರಗುಳಿಯುವಂತಾಗಿದೆ. ಇದು ಪಾಕಿಸ್ತಾನದ ಮುಂದಿನ ಸರಣಿಗಳ

ವಿಭಾಗ