ಕನ್ನಡ ಸುದ್ದಿ  /  Sports  /  India Vs South Africa Match Delay As Rain Intensifies In Lucknow

India vs South Africa 1st ODI: ಮೊದಲ ಏಕದಿನ ಪಂದ್ಯಕ್ಕೆ ವರುಣನ ಅಡ್ಡಿ, ತಡವಾಗಿ ಆರಂಭ

ಭಾರತ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ 87 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 35 ಪಂದ್ಯಗಳನ್ನು ಗೆದ್ದಿದ್ದರೆ, ಪ್ರವಾಸಿಗರು 49 ಬಾರಿ ಗೆಲುವು ಸಾಧಿಸಿದ್ದಾರೆ. ಅಂದರೆ ಭಾರತಕ್ಕಿಂತ ದಕ್ಷಿಣ ಆಫ್ರಿಕಾ ಹೆಚ್ಚು ಬಲಿಷ್ಠವಾಗಿದೆ.

ಲಖನೌ ಕ್ರೀಡಾಂಗಣ
ಲಖನೌ ಕ್ರೀಡಾಂಗಣ

ಲಖನೌ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ನಗರದಲ್ಲಿ ನಿರಂತರ ಮಳೆಯಿಂದಾಗಿ ಟಾಸ್ ವಿಳಂಬವಾಗಿದೆ.

ಪಂದ್ಯ 1.30ಕ್ಕೆ ಆರಂಭವಾಗಬೇಕಿತ್ತು. ಮಳೆಯಿಂದಾಗಿ ಪಂದ್ಯವನ್ನು ಅರ್ಧ ಗಂಟೆ ಮುಂದೂಡುವುದಾಗಿ ಬಿಸಿಸಿಐ ಆರಂಭದಲ್ಲಿ ತಿಳಿಸಿತ್ತು. ಆದರೆ ನಗರದಲ್ಲಿ ತುಂತುರು ಮಳೆ ತೀವ್ರಗೊಂಡಿದ್ದರಿಂದ ಪಂದ್ಯ ಮತ್ತಷ್ಟು ವಿಳಂಬವಾಗಿದೆ. ಸದ್ಯದ ಮಾಹಿತಿ ಪ್ರಕಾರ ಪಂದ್ಯ 3.45 ಗಂಟೆಗೆ ಆರಂಭವಾಗಲಿದೆ.

ಮಳೆಯಿಂದಾಗಿ ಪಂದ್ಯವನ್ನು 40 ಓವರ್‌ಗಳಿಗೆ ಇಳಿಸಲಾಗಿದೆ.

ಸದ್ಯ ಮಳೆ ನಿಂತಿದ್ದು ಮೈದಾನದ ಪಿಚ್‌ ಮೇಲೆ ಹಾಕಿದ್ದ ಕವರ್‌ಗಳನ್ನು ತೆಗೆಯಲಾಗಿದೆ. ಪಿಚ್‌ ಸಿದ್ಧವಾದ ಬಳಿಕ ಟಾಸ್‌ ಪ್ರಕ್ರಿಯೆ ನಡೆಯಲಿದೆ. ಆ ಬಳಿಕ ಪಂದ್ಯ ಆರಂಭಗೊಳ್ಳಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ 87 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 35 ಪಂದ್ಯಗಳನ್ನು ಗೆದ್ದಿದ್ದರೆ, ಪ್ರವಾಸಿಗರು 49 ಬಾರಿ ಗೆಲುವು ಸಾಧಿಸಿದ್ದಾರೆ. ಅಂದರೆ ಭಾರತಕ್ಕಿಂತ ದಕ್ಷಿಣ ಆಫ್ರಿಕಾ ಹೆಚ್ಚು ಬಲಿಷ್ಠವಾಗಿದೆ.

ಮುಂಬರುವ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಟ್ಯಾಂಡ್‌ಬೈ ಆಟಗಾರರಾಗಿ ಆಯ್ಕೆಯಾಗಿರುವ ಕೆಲ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ.‌ ಈ ಎಲ್ಲರನ್ನೂ ಏಕದಿನ ತಂಡದಲ್ಲಿ ಆಡಿಸುವುದಾಗಿ ಸ್ಟ್ಯಾಂಡ್-ಇನ್ ನಾಯಕ ಶಿಖರ್ ಧವನ್ ಬುಧವಾರ ಹೇಳಿದ್ದಾರೆ. ಹೀಗಾಗಿ ಆಟಗಾರರು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಈ ಮೂರೂ ಪಂದ್ಯಗಳಲ್ಲಿ ಆಟಬಹುದು.

ಶಿಖರ್ ಧವನ್ ಮತ್ತೊಮ್ಮೆ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಈ ಸರಣಿಯಲ್ಲಿ ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಬ್ಯಾಕಪ್ ಆಟಗಾರರಾಗಿ ಆಯ್ಕೆಯಾದ ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್ ಮತ್ತು ದೀಪಕ್ ಚಹಾರ್ ಕೂಡ ಇದ್ದಾರೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಟಿ20 ವಿಶ್ವಕಪ್ ತಂಡದ ಭಾಗವಾಗಿರುವ ಹೆಚ್ಚಿನ ಆಟಗಾರರು ಇದ್ದಾರೆ. ಭಾರತ ಪ್ರವಾಸವನ್ನು ಉನ್ನತ ಮಟ್ಟದಲ್ಲಿ ಮುಗಿಸಲು ಹರಿಣಗಳು ಎದುರು ನೋಡುತ್ತಿದ್ದಾರೆ.

ಸರಣಿಯ ಎರಡನೇ ಪಂದ್ಯವು ಅಕ್ಟೋಬರ್ 9ರಂದು ರಾಂಚಿಯಲ್ಲಿ ನಡೆಯಲಿದೆ. ಬಳಿಕ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ಅಕ್ಟೋಬರ್ 11 ರಂದು ದೆಹಲಿಯಲ್ಲಿ ನಡೆಯಲಿದೆ.

ಭಾರತದ ಸಂಭಾವ್ಯ ಆಡುವ ಬಳಗ

ಶಿಖರ್ ಧವನ್(ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಕೆಎಲ್ ಯಾದವ್, ರವಿ ಬಿಷ್ಣೋಯ್

ದಕ್ಷಿಣ ಆಫ್ರಿಕಾ

ಆರ್ ಆರ್ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಟಿ ಬವುಮಾ(ನಾಯಕ), ಎಕೆ ಮಾರ್ಕ್ರಾಮ್, ಜೆಎನ್ ಮಲನ್, ಡ್ವೈನ್ ಪ್ರಿಟೋರಿಯಸ್, ಡಬ್ಲ್ಯೂಡಿ ಪಾರ್ನೆಲ್, ಕ್ವಿಂಟನ್ ಡಿ ಕಾಕ್, ಕಗೀಸೋ ರಬಾಡ, ಟಿ ಶಮ್ಸಿ, ಕೇಶವ್ ಮಹಾರಾಜ್

ವಿಭಾಗ