ಕನ್ನಡ ಸುದ್ದಿ  /  Sports  /  India Vs Sri Lanka Third And Final Odi Match Tomorrow In Thiruvananthapuram

India vs Sri Lanka 3rd ODI: ಕ್ಲೀನ್ ಸ್ವೀಪ್ ಆಗುತ್ತಾ ಶನಕ ಪಡೆ? ತಿರುವನಂತಪುರಂನಲ್ಲಿ ನಾಳೆ ಭಾರತ-ಲಂಕಾ ಕೊನೆಯ ಏಕದಿನ ಫೈಟ್

ಭಾರತ-ಶ್ರೀಲಂಕಾ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ತಿರುವನಂತಪುರಂನಲ್ಲಿ ನಾಳೆ (ಜ.15, ಭಾನುವಾರ) ನಡೆಯಲಿದೆ. ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಸಾಧಿಸಿದೆ.

ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾದ ಆಟಗಾರರು ಅಭ್ಯಾಸ ನಡೆಸಿದರು. (ಫೋಟೋ-PTI)
ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾದ ಆಟಗಾರರು ಅಭ್ಯಾಸ ನಡೆಸಿದರು. (ಫೋಟೋ-PTI)

ತಿರುವನಂತಪುರಂ(ಕೇರಳ): ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಈಗಾಗಲೇ ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ಮೂರನೇ ಹಾಗೂ ಅಂತಿಮ ಪಂದ್ಯಕ್ಕೆ ಸಿದ್ಧವಾಗಿದೆ.

ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಾಳೆ (ಜ.15, ಭಾನುವಾರ) ಕೊನೆಯ ಪಂದ್ಯ ನಡೆಯಲಿದ್ದು, ರೋಹಿತ್ ಪಡೆ ಲಂಕಾ ತಂಡವನ್ನು ಕ್ಲೀನ್ ಸ್ವೀಪ್ ಮಾಡುವತ್ತ ಚಿತ್ತ ಹರಿಸಿದೆ. ಈ ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಈಗಾಗಲೇ ತಿರುವನಂತಪುರಂಗೆ ಬಂದಿಳಿದಿರುವ ಇತ್ತಂಡಗಳು ಇವತ್ತು ನೆಟ್ ನಲ್ಲಿ ಬೆವರು ಹರಿಸಿವೆ. ಸರಣಿ ಗೆದ್ದಿರುವ ಕಾರಣ ರೋಹಿತ್ ಪಡೆ ನಾಳೆ ಹೊಸ ಪ್ರಯೋಗವನ್ನು ಮಾಡಬಹುದು. ಇತ್ತ ದಸುನ್ ಶತನ ಪಡೆ ಕ್ಲೀನ್ ಸ್ವೀಪ್ ನಿಂದ ಪಾರಾಗಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಇದೆ.

ಈ ವರ್ಷ ಭಾರತದಲ್ಲೇ ಐಸಿಸಿ ಏಕದಿನ ವಿಶ್ವಕಪ್ ನಡೆಯಲಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾಗೆ ಪ್ರತಿ ಪಂದ್ಯವೂ ಮುಖ್ಯವಾಗಿರುತ್ತದೆ. ಲಂಕಾ ವಿರುದ್ಧ ಸರಣಿ ಗೆದ್ದಿದ್ದರು ಅಂತಿಮ ಪಂದ್ಯವನ್ನೂ ಸುಲಭವಾಗಿ ಪರಿಗಣಿಸುವಂತಿಲ್ಲ. ಹಿಂದಿನ ಪಂದ್ಯಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಫೀಲ್ಡಿಂಗ್, ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮತ್ತಷ್ಟು ಸುಧಾರಿಸಿಕೊಳ್ಳಬೇಕು.

ಟೀಂ ಇಂಡಿಯಾ ತನ್ನ ತವರು ನೆಲದಲ್ಲಿ ಇನ್ನೂ ಕನಿಷ್ಠ 12 ಏಕದಿನ ಪಂದ್ಯಗಳು ಆಡಲಿದೆ. ಜೊತೆಗೆ ಏಷ್ಯಾ ಕಪ್ ಕೂಡ ಇರಲಿದೆ. ಆಟಗಾರರಿಗೆ ತಮ್ಮ ಜವಾಬ್ದಾರಿಯ ಹೊರೆ ನಿರ್ವಹಣೆಯ ಮನಸ್ಸಿನಲ್ಲಿರುತ್ತದೆ. ಹೀಗಾಗಿ ಪ್ರತಿಪಂದ್ಯದಲ್ಲೂ ಆಟಗಾರರು ತಮ್ಮನ್ನು ತಾವು ಮತ್ತಷ್ಟು ಸವಾಲಿಗೆ ಸಿದ್ಧಗೊಳಿಸಿಕೊಳ್ಳುವ ಅವಶ್ಯಕತೆ ಇದೆ.

ಮುಂದಿನ ದಿನಗಳಲ್ಲಿ ನ್ಯೂಜಿಲೆಂಡ್ ವಿರುದ್ಧವೂ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ ಆಡಲಿದೆ. ಆದ್ದರಿಂದ ನಾವು ಹುಡುಗರನ್ನು ತಾಜಾವಾಗಿರಿಸಿಕೊಳ್ಳಬೇಕಾಗಿದೆ. ನಾವು ಈಗ ದೀರ್ಘಾವಧಿಯನ್ನು ಹೊಂದಿದ್ದೇವೆ ಮತ್ತು ನಾವು ಎಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅಗತ್ಯವಿದ್ದರೆ, ನಾವು ಕೆಲವು ಬದಲಾವಣೆಗಳನ್ನು ಮಾಡುತ್ತೇವೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಹೀಗಾಗಿ ನಾಳಿನ ಪಂದ್ಯದಲ್ಲಿ ಹೊಸ ಪ್ರಯೋಗ ಮಾಡುವ ಸಾಧ್ಯತೆ ಇದೆ. ಆದರೆ ಯಾರಿಗೆ ಅವಕಾಶ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ, ಭಾರತವು ನಾಲ್ಕು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು. ಪಂದ್ಯದಲ್ಲಿ ಕೆ ಎಲ್ ರಾಹುಲ್ 103 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗಿ ಉಳಿಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಂದ್ಯ: ಭಾರತ vs ಶ್ರೀಲಂಕಾ, ಮೂರನೇ ಏಕದಿನ ಪಂದ್ಯ

ದಿನಾಂಕ: ಭಾನುವಾರ, ಜನವರಿ 15, 2023

ಸಮಯ: 1:30 PM

ಸ್ಥಳ: ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರಂ

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ವಾಷಿಂಗ್ಟನ್, ವಾಷಿಂಗ್ಟನ್ , ಅರ್ಷದೀಪ್ ಸಿಂಗ್

ಶ್ರೀಲಂಕಾ ತಂಡ

ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ದಸುನ್ ಶನಕ (ನಾಯಕ), ಅವಿಷ್ಕ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಧನಂಜಯ ಡಿ ಸಿಲ್ವ, ಚರಿತ್ ಅಸಲಂಕ, ವನಿಂದು ಹಸರಂಗ, ದುನಿತ್ ವೆಲ್ಲಲಗೆ, ಚಾಮಿಕ ಕರುಣಾರತ್ನೆ, ಕಸುನ್ ರಜಿತ, ಲಹಿರು ಕುಮಾರ, ಸದೀರ ಸಮರವಿಕ್ರಮ, ಪ್ರಮೋದರೆ ವರವಿಕ್ರಮ, ಮಧುಶನ್, ಪಾತುಮ್ ನಿಸ್ಸಾಂಕ, ದಿಲ್ಶನ್ ಮಧುಶಂಕ, ಮಹೇಶ್ ತೀಕ್ಷಣ