ಕನ್ನಡ ಸುದ್ದಿ  /  Sports  /  Indian Cricket Team Is Divided When It Comes To Support Which Team For Fifa World Cup Final Says Kl Rahul

KL Rahul: ಇದೊಂದು ವಿಷಯದಲ್ಲಿ ಭಾರತ ಕ್ರಿಕೆಟ್‌ ತಂಡದಲ್ಲಿ 'ಭಿನ್ನಾಭಿಪ್ರಾಯ'ವಿದೆ: 'ಸತ್ಯ' ಬಿಚ್ಚಿಟ್ಟ ಕೆಎಲ್‌ ರಾಹುಲ್!‌

ಎಲ್ಲರಿಗೂ ತಿಳಿದಿರುವಂತೆ ಇಂದು(ಡಿ.18-ಭಾನುವಾರ) ಕತಾರ್‌ನಲ್ಲಿ ಫಿಫಾ ಫುಟ್ಬಾಲ್ ವಿಶ್ವಕಪ್‌ 2022 ಫೈನಲ್‌ ಪಂದ್ಯ ನಡೆಯಲಿದೆ. ಆದರೆ ಭಾರತ ಕ್ರಿಕೆಟ್‌ ತಂಡದ ಆಟಗಾರರಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್‌ ತಂಡಗಳನ್ನು ಬೆಂಬಲಿಸುವ ವಿಚಾರದ ಕುರಿತು 'ಭಿನ್ನಾಭಿಪ್ರಾಯ'ವಿದೆಯಂತೆ. ಈ ಕುರಿತು ಭಾರತದ ಆರಂಭಿಕ ಬ್ಯಾಟ್ಸಮನ್‌ ಕೆಎಲ್‌ ರಾಹುಲ್‌ ಹೇಳಿರುವುದೇನು ಎಂಬುದನ್ನು ಗಮನಿಸುವುದಾದರೆ..

ಕೆಎಲ್‌ ರಾಹುಲ್‌ (ಸಂಗ್ರಹ ಚಿತ್ರ)
ಕೆಎಲ್‌ ರಾಹುಲ್‌ (ಸಂಗ್ರಹ ಚಿತ್ರ) (AFP)

ಚಟ್ಟೋಗ್ರಾಮ್(ಬಾಂಗ್ಲಾದೇಶ): ಭಾರತ ಕ್ರಿಕೆಟ್‌ ತಂಡದಲ್ಲಿ ಎಲ್ಲವೂ ಸರಿ ಇದೆಯಾ ಎಂದು ಕೇಳಿದರೆ, ಹೌದು ಎಲ್ಲವೂ ಸರಿಯಿದೆ ಎಂಬ ಉತ್ತರ ಆಟಗಾರರಿಂದ ಬರುತ್ತದೆ. ಆದರೆ ಭಾರತ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ ಕೆಎಲ್‌ ರಾಹುಲ್‌, ಭಾರತ ಕ್ರಿಕೆಟ್‌ ತಂಡದಲ್ಲಿ ಒಂದು ವಿಷಯದಲ್ಲಿ 'ಭಿನ್ನಾಭಿಪ್ರಾಯ'ವಿದೆ ಎಂಬ ಸಂಗತಿಯನ್ನು ಹೊರಗೆಡವಿದ್ದಾರೆ.

ಅರೆ! ಭಾರತ ಕ್ರಿಕೆಟ್‌ ತಂಡದಲ್ಲಿ ಭಿನ್ನಾಭಿಪ್ರಾಯವೇ ಎಂದು ನೀವು ಹುಬ್ಬೇರಿಸುವ ಮುನ್ನ, ಕೆಎಲ್‌ ರಾಹುಲ್‌ ಹೇಳಿದ 'ಭಿನ್ನಾಭಿಪ್ರಾಯ'ದ ಕಥೆ ತಿಳಿಯುವುದು ಉತ್ತಮ. ಕೆಎಲ್‌ ರಾಹುಲ್‌ ಹೇಳಿದ 'ಭಿನ್ನಾಭಿಪ್ರಾಯ'ದ ವಿಚಾರ ಆಟಕ್ಕೆ ಸಂಬಂಧಿಸಿದಂತೆ ಅಥವಾ ತಂಡದ ಆಟಗಾರರ ಮಧ್ಯ ಇರುವ ಭಿನ್ನಾಭಿಪ್ರಾಯವಲ್ಲ, ಬದಲಿಗೆ ಫಿಫಾ ಫುಟ್ಬಾಲ್ ವಿಶ್ವಕಪ್‌ 2022 ಫೈನಲ್‌ ಪಂದ್ಯದ ಕುರಿತು.

ಹೌದು, ಎಲ್ಲರಿಗೂ ತಿಳಿದಿರುವಂತೆ ಇಂದು(ಡಿ.18-ಭಾನುವಾರ) ಕತಾರ್‌ನಲ್ಲಿ ಫಿಫಾ ಫುಟ್ಬಾಲ್ ವಿಶ್ವಕಪ್‌ 2022 ಫೈನಲ್‌ ಪಂದ್ಯ ನಡೆಯಲಿದೆ. ಈ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಭಾರತ ಕ್ರಿಕೆಟ್‌ ತಂಡದ ಆಟಗಾರರಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್‌ ತಂಡಗಳನ್ನು ಬೆಂಬಲಿಸುವ ವಿಚಾರದ ಕುರಿತು 'ಭಿನ್ನಾಭಿಪ್ರಾಯ'ವಿದೆಯಂತೆ.

ಈ ಕುರಿತು ಮಾತನಾಡಿರುವ ಕೆಎಲ್‌ ರಾಹುಲ್‌, ಕ್ರೀಡಾಪಟುಗಳಾಗಿ ನಮಗೆ ಫುಟ್ಬಾಲ್‌ ಅತ್ಯಂತ ಇಷ್ಟವಾಗುತ್ತದೆ. ಅದರಲ್ಲೂ ಫಿಫಾ ವಿಶ್ವಕಪ್‌ ಪಂದ್ಯಾವಳಿ ಬಗ್ಗೆ ತಂಡದ ಪ್ರತಿ ಆಟಗಾರರಲ್ಲೂ ಕುತೂಹಲವಿದ್ದೇ ಇರುತ್ತದೆ. ಆದರೆ ಬೆಂಬಲದ ವಿಚಾರಕ್ಕೆ ಬಂದಾಗ, ತಂಡದ ಆಟಗಾರರಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತವೆ ಎಂದು ಕೆಎಲ್‌ ರಾಹುಲ್‌ ಹೇಳಿದ್ದಾರೆ.

ತಂಡದ ಕೆಲವು ಆಟಗಾರರು ಅರ್ಜೆಂಟೀನಾ ತಂಡವನ್ನು ಬೆಂಬಲಿಸಿದರೆ, ಮತ್ತೆ ಕೆಲವು ಆಟಗಾರರು ಫ್ರಾನ್ಸ್‌ ತಂಡವನ್ನು ಬೆಂಬಲಿಸುತ್ತಿದ್ದಾರೆ. ಇದು ಆಟಗಾರರ ಮಧ್ಯೆ ಸ್ನೇಹಪರ ಜಗಳಕ್ಕೂ ಕಾರಣವಾಗುತ್ತಿದೆ. ಡ್ರೆಸ್ಸಿಂಗ್‌ ರೂಮ್‌ನಲ್ಲಿ ಇದನ್ನೆಲ್ಲಾ ನೋಡುವುದೇ ಚೆಂದ ಎಂದು ಕೆಎಲ್‌ ರಾಹುಲ್‌ ಹೇಳಿದ್ದಾರೆ.

ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯಾವಳಿ ಕುರಿತು ಇಡೀ ಜಗತ್ತೇ ಇಬ್ಭಾಗವಾಗಿದೆ. ಕೆಲವರು ಅರ್ಜೆಂಟೀನಾ ತಂಡವನ್ನು ಬೆಂಬಲಿಸಿದರೆ, ಮತ್ತೆ ಕೆಲವರು ಫ್ರಾನ್ಸ್‌ ತಂಡವನ್ನು ಬೆಂಬಲಿಸುತ್ತಿದ್ದಾರೆ. ಇದಕ್ಕೆ ಭಾರತ ಕ್ರಿಕೆಟ್‌ ತಂಡವೂ ಹೊರತಾಗಿಲ್ಲ. ಈ ಇಬ್ಭಾಗ ಪಂದ್ಯ ನೋಡುವ ಸಮಯದಲ್ಲಿ ಖಂಡಿತ ಮನರಂಜನೆಯನ್ನು ನೀಡಲಿದೆ ಎಂದು ಕೆಎಲ್‌ ರಾಹುಲ್‌ ಹೇಳಿದ್ದಾರೆ.

ಭಾರತ ತಂಡದ ಪ್ರತಿಯೊಬ್ಬ ಆಟಗಾರ ಫುಟ್ಬಾಲ್‌ನ್ನು ಇಷ್ಟಪಡುತ್ತಾನೆ. ಇದೇ ಕಾರಣಕ್ಕೆ ನಾವು ಅಭ್ಯಾಸದ ಸಮಯದಲ್ಲೂ ಫುಟ್ಬಾಲ್‌ ಆಡುತ್ತೇವೆ. ಹೀಗಾಗಿ ಇಡೀ ತಂಡ ಇಂದು ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯವನ್ನು ವೀಕ್ಷಿಸಲಿದೆ. ಈ ಪೈಕಿ ಅರ್ಜೆಂಟೀನಾ ಮತ್ತು ಫ್ರಾನ್ಸ್‌ ತಂಡದ ಬೆಂಬಲಿಗರ ನಡುವೆ ಕಿತ್ತಾಟ ನಡೆಯಲಿದ್ದು, ಇದು ನಮಗೆ ಮನರಂಜನೆ ಒದಗಿಸಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಕೆಎಲ್‌ ರಾಹುಲ್‌ ಹೇಳಿದ್ದಾರೆ.

ಆದರೆ ಫುಟ್ಬಾಲ್‌ ವಿಶ್ವಕಪ್‌ ಪಂದ್ಯಾವಳಿ ನಿಜಕ್ಕೂ ರೋಚಕ ಅನುಭವ ನೀಡುತ್ತದೆ. ಈ ಬಾರಿ ಎರಡು ಬಲಿಷ್ಠ ತಂಡಗಳು ಸೆಣೆಸಲಿದ್ದು, ಖಂಡಿತವಾಗಿಯೂ ಈ ಪಂದ್ಯ ರೋಚಕವಾಗಿರಲಿದೆ. ಯಾವುದೇ ತಂಡ ಗೆದ್ದರೂ ಅದು ಫುಟ್ಬಾಲ್‌ನ ವಿಜಯವಾಗಿರುತ್ತದೆ, ಹೀಗಾಗಿ ನಾನು ಎರಡೂ ತಂಡಗಳಿಗೂ ಶುಭ ಹಾರೈಸುತ್ತೇನೆ ಎಂದು ಕೆಎಲ್‌ ರಾಹುಲ್‌ ತಿಳಿಸಿದ್ದಾರೆ.

ಅತ್ತ ಕತಾರ್‌ನ ಲುಸೇಲ್‌ ಕ್ರೀಡಾಂಗಣದಲ್ಲಿ ಫಿಫಾ ಫುಟ್ಬಾಲ್‌ ವಿಶ್ವಕಪ್‌ 2022ರ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅರ್ಜೆಂಟೀನಾ ಮತ್ತು ಫ್ರಾನ್ಸ್‌ ತಂಡಗಳ ಮುಖಾಮುಖಿಗಾಗಿ ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಅದರಲ್ಲೂ ಅರ್ಜೆಂಟೀನಾ ತಂಡದ ಸ್ಟಾರ್‌ ಆಟಗಾರ ಲಿಯೋನೆಲ್‌ ಮೆಸ್ಸಿ ಮೈದಾನಕ್ಕಿಳಿಯುವುದನ್ನು ಕಣ್ತುಂಬಿಕೊಳ್ಳಲು, ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ವಿಭಾಗ