ಕನ್ನಡ ಸುದ್ದಿ  /  Sports  /  Suryakumar Make Record Most Run Sixes Against South Africa

Surya Kumar Yadav Record: ಪಾಕ್‌ ಆರಂಭಿಕ ರಿಜ್ವಾನ್‌ ದಾಖಲೆ ಪುಡಿಗಟ್ಟಿದ ಸೂರ್ಯಕುಮಾರ್; ಧವನ್‌ ರೆಕಾರ್ಡ್‌ ಸಹ ಬ್ರೇಕ್..‌

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡದಿಂದ ಸೂರ್ಯಕುಮಾರ್ ಯಾದವ್ ಬಿರುಸಿನ ಆಟ ಪ್ರದರ್ಶಿಸಿ, ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅರ್ಧಶತಕ ಸಿಡಿಸುವ ಮೂಲಕ ಎರಡು ದಾಖಲೆಗಳನ್ನು ದಾಟಿ ಮುಂದಡಿ ಇಟ್ಟಿದ್ದಾರೆ.

ಪಾಕ್‌ ಆರಂಭಿಕ ರಿಜ್ವಾನ್‌ ದಾಖಲೆ ಪುಡಿಗಟ್ಟಿದ ಸೂರ್ಯಕುಮಾರ್; ಧವನ್‌ ರೆಕಾರ್ಡ್‌ ಸಹ ಬ್ರೇಕ್..‌
ಪಾಕ್‌ ಆರಂಭಿಕ ರಿಜ್ವಾನ್‌ ದಾಖಲೆ ಪುಡಿಗಟ್ಟಿದ ಸೂರ್ಯಕುಮಾರ್; ಧವನ್‌ ರೆಕಾರ್ಡ್‌ ಸಹ ಬ್ರೇಕ್..‌ (Twitter/ BCCI)

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಿದೆ. ಇದರೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡದಿಂದ ಸೂರ್ಯಕುಮಾರ್ ಯಾದವ್ ಬಿರುಸಿನ ಆಟ ಪ್ರದರ್ಶಿಸಿ, ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅರ್ಧಶತಕ ಸಿಡಿಸುವ ಮೂಲಕ ಎರಡು ದಾಖಲೆಗಳನ್ನು ದಾಟಿ ಮುಂದಡಿ ಇಟ್ಟಿದ್ದಾರೆ.

ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಿರುಸಿನ ಇನ್ನಿಂಗ್ಸ್ ಮೂಲಕವೇ ಗಮನಸೆಳೆದರು. ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡ 50 ರನ್ ಗಳಿಸಿದರು. ಆರಂಭಿಕ ದಾಂಡಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾಕ್ಕೆ ಸೂರ್ಯಕುಮಾರ್ ಆಸರೆಯಾದರು.

ಪಾಕ್‌ ಪ್ಲೇಯರ್‌ ಮೊಹಮ್ಮದ್ ರಿಜ್ವಾನ್ ದಾಖಲೆ ಪುಡಿ..

ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ 2021 ರಲ್ಲಿ ಟಿ20 ಕ್ರಿಕೆಟ್‌ನಲ್ಲಿ 42 ಸಿಕ್ಸರ್‌ಗಳನ್ನು ಬಾರಿಸಿದ್ದರು. ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಅವರ ಹೆಸರಲ್ಲಿತ್ತು. ಇದೀಗ ಟೀಂ ಇಂಡಿಯಾದ ಸೂರ್ಯಕುಮಾರ್ ಅವರ ರೆಕಾರ್ಡ್‌ ಮುರಿದಿದ್ದಾರೆ. ಪ್ರಸಕ್ತ ವರ್ಷದಲ್ಲಿ ಈ ವರೆಗೂ 45 ಸಿಕ್ಸ್‌ ಬಾರಿಸಿದ್ದಾರೆ. ಈ ಮೂಲಕ ಸೂರ್ಯಕುಮಾರ್ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ನಿರ್ಮಿಸಿದಂತಾಗಿದೆ.

ಧವನ್‌ ರೆಕಾರ್ಡ್‌ ಬ್ರೇಕ್.‌..

ಕೇವಲ ಪಾಕ್‌ ಕ್ರಿಕೆಟಿಗನ ದಾಖಲೆ ಮಾತ್ರವಲ್ಲ ಟೀಂ ಇಂಡಿಯಾದ ಆಟಗಾರ ಶಿಖರ್‌ ಧವನ್‌ ಅವರ ದಾಖಲೆಯನ್ನೂ ಮುರಿದಿದ್ದಾರೆ ಸೂರ್ಯಕುಮಾರ್.‌ ಪ್ರಸಕ್ತ ಕ್ಯಾಲೆಂಡರ್‌ ವರ್ಷದಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ರನ್‌ ಸಿಡಿಸಿದ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 2018ರಲ್ಲಿ ಟಿ20 ಫಾರ್ಮೆಟ್‌ನಲ್ಲಿ ಶಿಖರ್‌ ಧವನ್‌ 689 ರನ್‌ ಗಳಿಸಿದ್ದರು. ಇದೀಗ ಸೂರ್ಯಕುಮಾರ್‌ ಕೇವಲ 21 ಇನ್ನಿಂಗ್ಸ್‌ಗಳಲ್ಲಿ 732 ರನ್‌ ಪೇರಿಸಿದ್ದಾರೆ.