Kannada News  /  Video Gallery  /  Mother Under Rubble Of The Earthquake Gives Birth To Baby .. Viral Video

Baby born during earthquake: ಭೂಕಂಪದ ಅವಶೇಷಗಳಡಿ ಸಿಲುಕಿ ಮಗುವಿಗೆ ಜನ್ಮ ನೀಡಿ ಮೃತಪಟ್ಟ ತಾಯಿ.. ಕರುಳು ಹಿಂಡುವ ದೃಶ್ಯ ನೋಡಿ

07 February 2023, 15:20 IST HT Kannada Desk
07 February 2023, 15:20 IST
  • ಸಾಲು ಸಾಲು ಭೂಕಂಪದಿಂದಾಗಿ ಟರ್ಕಿ ಮತ್ತು ಸಿರಿಯಾ ತತ್ತರಿಸಿದ್ದು, ಈವರೆಗೆ 4,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಬೃಹತ್​ ಕಟ್ಟಡಗಳು ಧರೆಗುರುಳಿ ಬಿದ್ದಿದ್ದು, ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಅವಶೇಷಗಳಡಿಯಿಂದ ಈಗ ತಾನೆ ಹುಟ್ಟಿದ ಮಗುವನ್ನು ರಕ್ಷಿಸಿರುವುದು ಕಂಡು ಬಂದಿದೆ. ಭೂಕಂಪದ ಅವಶೇಷಗಳಡಿ ಸಿಲುಕಿ ಮಗುವಿಗೆ ಜನ್ಮ ನೀಡಿ ಬಳಿಕ ತಾಯಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ. ಆದರೆ ಪವಾಡವೆಂಬಂತೆ ಮಗು ಬದುಕಿದೆ.
More