ಕನ್ನಡ ಸುದ್ದಿ  /  ಕ್ರಿಕೆಟ್  /  ಸನಾತನ ಧರ್ಮ ನಿಂದಿಸಿದವರಿಗೆ ಇದೇ ಗತಿ; ಬಿಜೆಪಿ ಮೇಲುಗೈ ಬಳಿಕ ಕಾಂಗ್ರೆಸ್​ಗೆ ವೆಂಕಟೇಶ್ ಪ್ರಸಾದ್ ಕೌಂಟರ್

ಸನಾತನ ಧರ್ಮ ನಿಂದಿಸಿದವರಿಗೆ ಇದೇ ಗತಿ; ಬಿಜೆಪಿ ಮೇಲುಗೈ ಬಳಿಕ ಕಾಂಗ್ರೆಸ್​ಗೆ ವೆಂಕಟೇಶ್ ಪ್ರಸಾದ್ ಕೌಂಟರ್

HT Kannada Desk HT Kannada

Dec 03, 2023 03:03 PM IST

ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್.

    • Venkatesh Prasad: ಕಾಂಗ್ರೆಸ್ ಮಿತ್ರ ಪಕ್ಷ ಉದಯನಿಧಿ ಸ್ಟಾಲಿನ್ ನೀಡಿದ್ದ ಸನಾತನ ಧರ್ಮ ಕುರಿತ ವಿವಾದಾತ್ಮಕ ಹೇಳಿಕೆಯೇ ಕಾಂಗ್ರೆಸ್‌ ಈ ಹೀನಾಯ ಸಾಧನೆಗೆ ಕಾರಣ ಎಂದು ಅವರು ಹೇಳಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್.
ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್.

ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್​ಗಡ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶ ಪ್ರಕ್ರಿಯೆ ನಡೆಯುತ್ತಿರುವ ಮಧ್ಯೆಯೇ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ (Venkatesh Prasad), ಕಾಂಗ್ರೆಸ್​ಗೆ (Congress) ಕೌಂಟರ್ ಕೊಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್​ಸಿಬಿ vs ಸಿಎಸ್​ಕೆ ಪಂದ್ಯಕ್ಕೆ ವರುಣನ ಕರಿನೆರಳು; ಮಳೆಯಿಂದ ಪಂದ್ಯ ರದ್ದಾದರೆ ಯಾವ ತಂಡಕ್ಕಿದೆ ಪ್ಲೇಆಫ್​ ಚಾನ್ಸ್?

ಐರ್ಲೆಂಡ್‌ ವಿರುದ್ಧ ವಿಶೇಷ ಮೈಲಿಗಲ್ಲು; ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ ಬಾಬರ್ ಅಜಮ್

ಆರ್‌ಸಿಬಿ vs ಸಿಎಸ್‌ಕೆ ಕಾಳಗದಲ್ಲಿ ಯಾರು ಗೆದ್ದರೆ ಏನಾಗುತ್ತೆ; ಗೆಲ್ಲುವ ಸಾಧ್ಯತೆ ಯಾವ ತಂಡಕ್ಕೆ ಹೆಚ್ಚು?

ನಂಬಿದರೂ ನಂಬದಿದ್ದರೂ ಇದೇ ಸತ್ಯ; ಆರ್​ಸಿಬಿ ವಿರುದ್ಧ ಸಿಎಸ್​ಕೆ ಸೋತು ಪ್ಲೇಆಫ್​ನಿಂದ ಹೊರಬಿದ್ದರೆ ಎಂಎಸ್ ಧೋನಿಗೆ ಅದೇ ವಿದಾಯದ ಪಂದ್ಯ

ನಾಲ್ಕು ರಾಜ್ಯಗಳ ಪೈಕಿ 3ರಲ್ಲಿ ಬಿಜೆಪಿ ಅಧಿಕಾರಕ್ಕೇರುವ ಚುನಾವಣಾ ಟ್ರೆಂಡ್​​ಗಳ ನಡುವೆ ಸನಾತನ ವಿರೋಧಿಗಳಿಗೆ ತಕ್ಕ ಪಾಠ ಜರುಗಿದೆ ಎಂದು ಕಾಂಗ್ರೆಸ್​ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿಕಾರಿದ್ದಾರೆ.

ತೆಲಂಗಾಣ ಹೊರತುಪಡಿಸಿ ಮೂರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಚಂಡ ವಿಜಯ ಸಿಕ್ಕ ನಂತರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಕಾರ್ಯಕರ್ತರನ್ನು ವೆಂಕಿ ಅಭಿನಂದಿಸಿದ್ದಾರೆ.

ಈ ಹೀನಾಯ ಸೋಲಿಗೆ ನಂತರ ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಾಲುದಾರರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಕಾಂಗ್ರೆಸ್​ ಹೀನಾಯ ಸೋಲಿಗೆ ಕಾರಣ ವಿವರಿಸಿದ್ದಾರೆ. ಅಲ್ಲದೆ, ಮುಂದಾದರೂ ಪಾಠ ಕಲಿಯುವಂತೆ ಪರೋಕ್ಷ ಸಲಹೆ ಕೊಟ್ಟಿದ್ದಾರೆ.

ಕೈ ಮಿತ್ರ ಪಕ್ಷ ಉದಯನಿಧಿ ಸ್ಟಾಲಿನ್ ನೀಡಿದ್ದ ಸನಾತನ ಧರ್ಮ ಕುರಿತ ವಿವಾದಾತ್ಮಕ ಹೇಳಿಕೆಯೇ ಕಾಂಗ್ರೆಸ್‌ ಈ ಹೀನಾಯ ಸಾಧನೆಗೆ ಕಾರಣ ಎಂಬುದನ್ನು ಪರೋಕ್ಷವಾಗಿ ಉಲ್ಲೇಖಿಸಿ ಪೋಸ್ಟ್​ ಮಾಡಿದ್ದಾರೆ.

ಸನಾತನ ಧರ್ಮವನ್ನು ದುರುಪಯೋಗ ಪಡಿಸಿಕೊಂಡವರು, ನಿಂದಿಸಿದವರಿಗೆ ಸರಿಯಾದ ಪಾಠ ಆಗಿದೆ. ಯಾರೇ ಆಗಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವೆಂಕಟೇಶ್ ಪ್ರಸಾದ್​ನಲ್ಲಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ವೆಂಕಟೇಶ್ ಪ್ರಸಾದ್ ಪೋಸ್ಟ್​ನಲ್ಲಿ ಏನಿದೆ?

‘ಸನಾತನ ಧರ್ಮವನ್ನು ದುರುಪಯೋಗಪಡಿಸಿಕೊಂಡರೆ, ನಿಂದಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಚುನಾವಣೆಯೇ ನಿದರ್ಶನ. ಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿಗೆ ಅಭಿನಂದನೆಗಳು’

ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ, ಅಮಿತ್ ಶಾ ಅವರ ಅದ್ಭುತ ನಾಯಕತ್ವ ಮತ್ತು ಪಕ್ಷದ ತಳಮಟ್ಟದ ಕಾರ್ಯಕರ್ತರ ಅಮೋಘ ಕಾರ್ಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಎಂದು ಪೋಸ್ಟ್​ನಲ್ಲಿ ಮಾಜಿ ಕ್ರಿಕೆಟಿಗ ಬರೆದಿದ್ದಾರೆ.

ಉದಯನಿಧಿ ಸ್ಟಾಲಿನ್ ಹೇಳಿದ್ದೇನು?

ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯು, ಕೊರೊನಾಗೆ ಹೋಲಿಸಿ ಉದಯನಿಧಿ ಸ್ಟಾಲಿನ್‌ ವಿವಾದಕ್ಕೆ ಗುರಿಯಾಗಿದ್ದರು. ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಸನಾತನ ನಿರ್ಮೂಲನಾ ಕಾರ್ಯಕ್ರಮದಲ್ಲಿ ಅವಹೇಳನಾಕಾರಿ ಹೇಳಿಕೆ ನೀಡಿದ್ದರು.

ಸನಾತನ ಧರ್ಮವು ಡೆಂಗ್ಯು, ಮಲೇರಿಯಾ, ಕೊರೊನಾ ಇದ್ದಂತೆ. ಸನಾತನ ವಿರೋಧಿ ಸಮ್ಮೇಳನ ಎಂಬುದರ ಬದಲಿಗೆ ಸನಾತನ ನಿರ್ಮೂಲನಾ ಸಮ್ಮೇಳನ ಎಂದು ಸಮಾವೇಶ ನಡೆಸಿದ್ದು ತುಂಬಾ ಖುಷಿ ನೀಡಿತು ಎಂದಿದ್ದರು.

ಇದು ಭಾರಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದ್ದು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಸ್ಟಾಲಿನ್ ಹೇಳಿದ್ದರು.

ನಾಲ್ಕು ವಿಧಾನಸಭಾ ಚುನಾವಣಾ ಫಲಿತಾಂಶಗಳ ಪೈಕಿ ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಉಳಿದಂತೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಡದಲ್ಲಿ ಬಿಜೆಪಿಯೇ ಬಹುಮತ ಪಡೆಯಲಿದೆ.

IPL, 2024

Live

RR

103/6

15.0 Overs

VS

PBKS

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ