ಕನ್ನಡ ಸುದ್ದಿ  /  ಕ್ರಿಕೆಟ್  /  ಇತಿಹಾಸ ಸೃಷ್ಟಿಸಿದ ಬಾಬರ್ ಅಜಮ್; ಟಿ20ಐ ಕ್ರಿಕೆಟ್​ನಲ್ಲಿ ನಾಯಕನಾಗಿ ಇಯಾನ್ ಮಾರ್ಗನ್ ದಾಖಲೆ ಸರಿಗಟ್ಟಿದ ಪಾಕ್ ಕ್ಯಾಪ್ಟನ್

ಇತಿಹಾಸ ಸೃಷ್ಟಿಸಿದ ಬಾಬರ್ ಅಜಮ್; ಟಿ20ಐ ಕ್ರಿಕೆಟ್​ನಲ್ಲಿ ನಾಯಕನಾಗಿ ಇಯಾನ್ ಮಾರ್ಗನ್ ದಾಖಲೆ ಸರಿಗಟ್ಟಿದ ಪಾಕ್ ಕ್ಯಾಪ್ಟನ್

Prasanna Kumar P N HT Kannada

Apr 28, 2024 02:25 PM IST

ಇತಿಹಾಸ ಸೃಷ್ಟಿಸಿದ ಬಾಬರ್ ಅಜಮ್; ಟಿ20ಐ ಕ್ರಿಕೆಟ್​ನಲ್ಲಿ ನಾಯಕನಾಗಿ ಇಯಾನ್ ಮಾರ್ಗನ್ ದಾಖಲೆ ಸರಿಗಟ್ಟಿದ ಪಾಕ್ ಕ್ಯಾಪ್ಟನ್

    • Babar Azam : ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಮರು ನೇಮಕಗೊಂಡ ಬೆನ್ನಲ್ಲೇ ಬಾಬರ್ ಅಜಮ್, ಟಿ20ಐ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಇಯಾನ್ ಮಾರ್ಗನ್ ದಾಖಲೆ ಸರಿಗಟ್ಟಿದ್ದಾರೆ.
ಇತಿಹಾಸ ಸೃಷ್ಟಿಸಿದ ಬಾಬರ್ ಅಜಮ್; ಟಿ20ಐ ಕ್ರಿಕೆಟ್​ನಲ್ಲಿ ನಾಯಕನಾಗಿ ಇಯಾನ್ ಮಾರ್ಗನ್ ದಾಖಲೆ ಸರಿಗಟ್ಟಿದ ಪಾಕ್ ಕ್ಯಾಪ್ಟನ್
ಇತಿಹಾಸ ಸೃಷ್ಟಿಸಿದ ಬಾಬರ್ ಅಜಮ್; ಟಿ20ಐ ಕ್ರಿಕೆಟ್​ನಲ್ಲಿ ನಾಯಕನಾಗಿ ಇಯಾನ್ ಮಾರ್ಗನ್ ದಾಖಲೆ ಸರಿಗಟ್ಟಿದ ಪಾಕ್ ಕ್ಯಾಪ್ಟನ್

ಏಕದಿನ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣ ನಾಯಕತ್ವ ತ್ಯಜಿಸಿದ್ದ ಬಾಬರ್​ ಅಜಮ್ (Babar Azam), ಇತ್ತೀಚೆಗಷ್ಟೆ ನ್ಯೂಜಿಲೆಂಡ್ ಸರಣಿಗೂ ಮುನ್ನ ವೈಟ್​ ಬಾಲ್ ಕ್ಯಾಪ್ಟನ್ಸಿಗೆ ಮರು ನೇಮಕಗೊಂಡರು. ಮತ್ತೆ ಜವಾಬ್ದಾರಿ ವಹಿಸಿಕೊಂಡ ಮೊದಲ ಸರಣಿಯಲ್ಲೇ ಎರಡು ಪಂದ್ಯ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ, ಫ್ಯಾನ್ಸ್​ಗೆ ಆತಂಕ

ಕ್ರಿಕೆಟ್​​​ನಲ್ಲಿ ಆಟಗಾರರು ಧರಿಸುವ ನೆಕ್ ಡಿವೈಸ್ ಅಥವಾ ಕ್ಯೂ-ಕಾಲರ್​ ಎಂದರೇನು; ಪ್ರಯೋಜನ ಮತ್ತು ಬೆಲೆ ಎಷ್ಟು?

ಜಿಟಿ ವಿರುದ್ಧ ಗೆದ್ದು ಪ್ಲೇಆಫ್​ಗೇರಲು ಎಸ್​ಆರ್​ಹೆಚ್ ಸಜ್ಜು; ಹವಾಮಾನ ವರದಿ, ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ಇಲ್ಲಿದೆ

ಅಗ್ರಸ್ಥಾನಕ್ಕೇರುವ ಹುಮ್ಮಸ್ಸಿನಲ್ಲಿ ಕುಸಿದ ರಾಜಸ್ಥಾನ್ ರಾಯಲ್ಸ್; ಎದ್ದುಬಿದ್ದು ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್

ಪಾಕಿಸ್ತಾನದ ವೈಟ್ ಬಾಲ್ ನಾಯಕ ಬಾಬರ್ ಅಜಮ್, ಶನಿವಾರ (ಏಪ್ರಿಲ್ 27) ಟಿ20ಐ ಕ್ರಿಕೆಟ್​ನಲ್ಲಿ ಜಂಟಿ-ಅತ್ಯಂತ ಯಶಸ್ವಿ ನಾಯಕ ಎಂಬ ಇತಿಹಾಸ ಬರೆದಿದ್ದಾರೆ. ಚುಟುಕು ಕ್ರಿಕೆಟ್ ಸ್ವರೂಪದಲ್ಲಿ ಅತಿ ಹೆಚ್ಚು ಗೆದ್ದ ನಾಯಕರ ಪಟ್ಟಿಯಲ್ಲಿ ಬಾಬರ್​, ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ ಅವರ 44 ಗೆಲುವುಗಳ ದಾಖಲೆ ಸರಿಗಟ್ಟಿದ್ದಾರೆ. ಏಪ್ರಿಲ್ 27ರಂದು ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20ಐ ಪಂದ್ಯದಲ್ಲಿ ಗೆದ್ದು ಈ ಮೈಲಿಗಲ್ಲನ್ನು ಸಾಧಿಸಿದರು.

17ನೇ ಆವೃತ್ತಿಯ ಐಪಿಎಲ್ ನಡುವೆಯೇ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ಮಧ್ಯೆ ಐದು ಪಂದ್ಯಗಳ ಟಿ20 ಸರಣಿ ಏಪ್ರಿಲ್ 18ರಿಂದ ಪ್ರಾರಂಭವಾಗಿತ್ತು. ಆದರೆ ಮೊದಲ ಪಂದ್ಯವು ಮಳೆಯ ಕಾರಣ ಪಂದ್ಯವು ಸ್ಥಗಿತಗೊಂಡಿತ್ತು. ಉಳಿದ ನಾಲ್ಕು ಪಂದ್ಯಗಳಲ್ಲಿ ಪ್ರವಾಸಿ ತಂಡ 2 ಮತ್ತು ಅತಿಥೇಯ ತಂಡ ಎರಡು ಗೆಲುವುಗಳನ್ನು ಸಾಧಿಸಿದೆ. 2-2ರಲ್ಲಿ ಸರಣಿ ಸಮಬಲಗೊಂಡಿದೆ. ಇದು ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆಯ ಭಾಗವಾಗಿದೆ ಎಂಬುದು ವಿಶೇಷ. ಸರಣಿಯ ಕೊನೆಯ ಪಂದ್ಯದಲ್ಲಿ ಬಾಬರ್​ ಪಡೆ 9 ರನ್​ಗಳಿಂದ ಗೆದ್ದು ಬೀಗಿದೆ.

ನಾಯಕನಾಗಿ ಬಾಬರ್ ಅಜಮ್ ದಾಖಲೆ

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯವು ಪಾಕಿಸ್ತಾನದ ಟಿ20ಐ ನಾಯಕನಾಗಿ ಬಾಬರ್ ಅವರ 76ನೇ ಪಂದ್ಯವಾಗಿದೆ. ಟಿ20ಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಮುನ್ನಡೆಸಿರುವ ಬಾಬರ್, 44 ಪಂದ್ಯಗಳಲ್ಲಿ ಗೆಲುವು, 25 ಸೋಲು ಕಂಡಿದ್ದಾರೆ. 7 ಪಂದ್ಯಗಳು ಯಾವುದೇ ಫಲಿತಾಂಶ ಇಲ್ಲ. ಮಾರ್ಗನ್ ಇಂಗ್ಲೆಂಡ್‌ನ ಐ20ಐ ನಾಯಕರಾಗಿ 72 ಪಂದ್ಯಗಳಲ್ಲಿ 44 ಅನ್ನು ಗೆದ್ದಿದ್ದಾರೆ. 27 ಸೋಲು ಕಂಡಿದ್ದಾರೆ. 1 ಪಂದ್ಯ ಫಲಿತಾಂಶ ಕಂಡಿಲ್ಲ.

ಈ ವರ್ಷ ಟಿ20 ವಿಶ್ವಕಪ್‌ಗೆ ಪದಾರ್ಪಣೆ ಮಾಡಲಿರುವ ಉಗಾಂಡಾ ತಂಡದ ನಾಯಕ ಕೂಡ ಈ ಪಟ್ಟಿಯಲ್ಲಿದ್ದಾರೆ. ನಾಯಕ ಬ್ರಿಯಾನ್ ಮಸಾಬಾ ಅವರು ಇಲ್ಲಿಯವರೆಗೆ ಆಡಿದ 56 ಟಿ20 ಗಳಲ್ಲಿ ತಂಡವನ್ನು ಮುನ್ನಡೆಸಿ 44 ಪಂದ್ಯಗಳನ್ನು ಗೆದ್ದಿದ್ದಾರೆ. ಭಾರತದ ದಿಗ್ಗಜ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಟಿ20ಯಲ್ಲಿ ನಾಯಕರಾಗಿ ತಲಾ 42 ಪಂದ್ಯಗಳನ್ನು ಗೆದ್ದಿದ್ದಾರೆ.ಅಫ್ಘಾನಿಸ್ತಾನದ ಮಾಜಿ ನಾಯಕ ಅಸ್ಗರ್ ಅಫ್ಘಾನ್ ಅವರು ಕೂಡ 42 ಟಿ20ಐಗಳನ್ನು ಗೆದ್ದಿದ್ದಾರೆ.

ಬಾಬರ್ ಮತ್ತೆ ಮಿಂಚು

ಪಾಕಿಸ್ತಾನ-ನ್ಯೂಜಿಲೆಂಡ್ ಮಧ್ಯೆ 5 ಪಂದ್ಯಗಳ ಸರಣಿಯ 5ನೇ ಮತ್ತು ಅಂತಿಮ ಟಿ20ಐನಲ್ಲಿ ಮೆನ್ ಇನ್ ಗ್ರೀನ್‌, 9 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿತು. 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. 29 ವರ್ಷದ ಬಾಬರ್ 44 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 69 ರನ್ ಗಳಿಸಿದರು. ಫಖರ್ ಜಮಾನ್ 33 ಎಸೆತಗಳಲ್ಲಿ 43 ರನ್ ಕೊಡುಗೆ ನೀಡಿದರು. ಉಸ್ಮಾನ್ ಖಾನ್ 31 ರನ್ ಗಳಿಸಿ ಔಟಾದರು. 179 ರನ್‌ ಗುರಿ ಬೆನ್ನಟ್ಟಿದ ಕಿವೀಸ್, ಟಿಮ್ ಸೀಫರ್ಟ್ ಅರ್ಧಶತಕ ಗಳಿಸಿದರೂ ಅಗತ್ಯ ಗುರಿ ಸಾಧಿಸಲು ವಿಫಲವಾಯಿತು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ