logo
ಕನ್ನಡ ಸುದ್ದಿ  /  ಕ್ರಿಕೆಟ್  /  ಜಿಟಿ ವಿರುದ್ಧ ಗೆದ್ದು ಪ್ಲೇಆಫ್​ಗೇರಲು ಎಸ್​ಆರ್​ಹೆಚ್ ಸಜ್ಜು; ಹವಾಮಾನ ವರದಿ, ಪ್ಲೇಯಿಂಗ್ Xi, ಪಿಚ್ ರಿಪೋರ್ಟ್ ಇಲ್ಲಿದೆ

ಜಿಟಿ ವಿರುದ್ಧ ಗೆದ್ದು ಪ್ಲೇಆಫ್​ಗೇರಲು ಎಸ್​ಆರ್​ಹೆಚ್ ಸಜ್ಜು; ಹವಾಮಾನ ವರದಿ, ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ಇಲ್ಲಿದೆ

Prasanna Kumar P N HT Kannada

May 16, 2024 07:00 AM IST

google News

ಜಿಟಿ ವಿರುದ್ಧ ಗೆದ್ದು ಪ್ಲೇಆಫ್​ಗೇರಲು ಎಸ್​ಆರ್​ಹೆಚ್ ಸಜ್ಜು; ಹವಾಮಾನ ವರದಿ, ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ಇಲ್ಲಿದೆ

    • SRH vs GT Preview : 17ನೇ ಆವೃತ್ತಿಯ ಐಪಿಎಲ್​ನ 66ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಪಿಚ್ ರಿಪೋರ್ಟ್, ಹವಾಮಾನ ವರದಿ, ಪ್ಲೇಯಿಂಗ್ XI ವರದಿ ಇಲ್ಲಿದೆ.
ಜಿಟಿ ವಿರುದ್ಧ ಗೆದ್ದು ಪ್ಲೇಆಫ್​ಗೇರಲು ಎಸ್​ಆರ್​ಹೆಚ್ ಸಜ್ಜು; ಹವಾಮಾನ ವರದಿ, ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ಇಲ್ಲಿದೆ
ಜಿಟಿ ವಿರುದ್ಧ ಗೆದ್ದು ಪ್ಲೇಆಫ್​ಗೇರಲು ಎಸ್​ಆರ್​ಹೆಚ್ ಸಜ್ಜು; ಹವಾಮಾನ ವರದಿ, ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ಇಲ್ಲಿದೆ

2016ರ ಚಾಂಪಿಯನ್ ಸನ್​ರೈಸರ್ಸ್ ಹೈದರಾಬಾದ್ ಮತ್ತು 2022ರ ವಿಜೇತ ತಂಡ ಗುಜರಾತ್ ಟೈಟಾನ್ಸ್ ತಂಡಗಳು (SRH vs GT Preview) 17ನೇ ಆವೃತ್ತಿಯ ಐಪಿಎಲ್​ನ 66ನೇ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ಪ್ಲೇಆಫ್​ ಟಿಕೆಟ್ ಅನ್ನು ಅಧಿಕೃತಗೊಳಿಸಲು ಪ್ಯಾಟ್ ಕಮಿನ್ಸ್ ಪಡೆ ಸಜ್ಜಾಗಿದ್ದರೆ, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದು ಅಭಿಯಾನ ಮುಗಿಸಲು ಶುಭ್ಮನ್ ಗಿಲ್ (Shubman Gill) ಪಡೆ ತಯಾರಿ ನಡೆಸಿದೆ. ಈ ಪಂದ್ಯಕ್ಕೆ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವು ಆತಿಥ್ಯ ವಹಿಸಲಿದೆ.

ಎಸ್​ಆರ್​ಹೆಚ್​ ತಂಡಕ್ಕಿನ್ನೂ ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇದೀಗ ಪ್ಲೇಆಫ್ ಪ್ರವೇಶಿಸಲು ಮತ್ತು ಐಪಿಎಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸುವ ಉತ್ತಮ ಅವಕಾಶ ಹೊಂದಿದೆ. ಫ್ರಾಂಚೈಸ್ ಲೀಗ್​ನಲ್ಲಿ ಅತ್ಯಂತ ಕೆಟ್ಟ ರನ್ ರೇಟ್ ಹೊಂದಿರುವ ಜಿಟಿ ಈಗಾಗಲೇ ರೇಸ್​​ನಿಂದ ಹೊರಗುಳಿದಿದೆ. ಹೀಗಾಗಿ ಗುಜರಾತ್​ಗೆ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ, ಪ್ಲೇಯಿಂಗ್ XI ನೋಡೋಣ.

ಪಿಚ್​ ರಿಪೋರ್ಟ್

ಮೊದಲು ಬ್ಯಾಟ್ ಮಾಡಿದ ತಂಡಗಳು ಈ ಮೈದಾನದಲ್ಲಿ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿವೆ. ಹೀಗಾಗಿ ಟಾಸ್ ಗೆದ್ದ ನಾಯಕರ ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಇಲ್ಲಿ ಸನ್​ರೈಸರ್ಸ್​ ದೊಡ್ಡ ಮೊತ್ತದ ಸ್ಕೊರ್​ ಕಲೆ ಹಾಕಿದ್ದು, ಮಹತ್ವದ ಪಂದ್ಯದಲ್ಲೂ ಅಂತಹದ್ದೇ ಆಟವನ್ನು ನಿರೀಕ್ಷಿಸಲಾಗಿದೆ. ಬ್ಯಾಟರ್​​ಗಳಿಗೆ ಹೇಳಿ ಮಾಡಿಸಿದ ಪಿಚ್ ಇದಾಗಿದೆ. ಆದರೆ ಕೆಲವು ಪಂದ್ಯಗಳಲ್ಲಿ ಸ್ಕೋರ್ ಕೂಡ ಕಡಿಮೆಯಾಗಿದೆ. ಎಸ್​​ಆರ್​ಹೆಚ್ ಬ್ಯಾಟರ್​ಗಳ ಅಗ್ರೆಸ್ಸಿವ್ ಆಟಕ್ಕೆ ಕಡಿವಾಣ ಹಾಕಲು ಜಿಟಿ ಬೌಲರ್​ಗಳು ಕರಸತ್ತು ನಡೆಸಬೇಕಿದೆ.

ಹವಾಮಾನ ವರದಿ

ಹವಾಮಾನ ಪರಿಸ್ಥಿತಿಗಳ ಬಗ್ಗೆ ಹೇಳುವುದಾದರೆ, ಪಂದ್ಯದ ದಿನದಂದು ಮಳೆ ಬೀಳುವ ಮುನ್ಸೂಚನೆ ಇದೆ. ಮಳೆಯ ಮುನ್ಸೂಚನೆಯ ಕಾರಣ ಟಾಸ್ ಗೆದ್ದ ನಾಯಕ ಚೇಸಿಂಗ್ ಆಯ್ಕೆ ಮಾಡಿದರೂ ಅಚ್ಚರಿ ಇಲ್ಲ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ರದ್ದಾದರೆ ಎಸ್​ಆರ್​​ಹೆಚ್​ ನೇರವಾಗಿ ಪ್ಲೇಆಫ್​ ಪ್ರವೇಶಿಸಲಿದೆ. ಹವಾಮಾನ ಇಲಾಖೆ ಪ್ರಕಾರ ತಾಪಮಾನ 25 ° C ಮತ್ತು 36 ° C ನಡುವೆ ಇರುತ್ತದೆ. ರಾತ್ರಿ ವೇಳೆ ಜೋರು ಮಳೆಯನ್ನು ನಿರೀಕ್ಷಿಸಲಾಗಿದೆ.

ಹೆಡ್-ಟು-ಹೆಡ್ ರೆಕಾರ್ಡ್

ಒಟ್ಟು ಪಂದ್ಯಗಳು - 04

ಸನ್‌ರೈಸರ್ಸ್​​ಗೆ ಜಯ - 03

ಡೆಲ್ಲಿ ಕ್ಯಾಪಿಟಲ್ಸ್ ಗೆಲುವು - 01

ಯಾವುದೇ ಫಲಿತಾಂಶವಿಲ್ಲ - 00

ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್​), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಸನ್ವಿರ್ ಸಿಂಗ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕತ್, ಮಯಾಂಕ್ ಮಾರ್ಕಂಡೆ.

ಇಂಪ್ಯಾಕ್ಟ್ ಪ್ಲೇಯರ್​: ಟಿ.ನಟರಾಜನ್

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ XI

ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್​), ಶಾರುಖ್ ಖಾನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಕಾರ್ತಿಕ್ ತ್ಯಾಗಿ

ಇಂಪ್ಯಾಕ್ಟ್ ಪ್ಲೇಯರ್: ಸಂದೀಪ್ ವಾರಿಯರ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ