ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಇಂಗ್ಲೆಂಡ್ 5ನೇ ಟೆಸ್ಟ್: 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಆಶ್ವಿನ್‌ಗೆ ಗಾರ್ಡ್ ಆಫ್ ಹಾನರ್, ವಿಶೇಷ ಸ್ಮರಣಿಕೆ ನೀಡಿ ಗೌರವ

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಆಶ್ವಿನ್‌ಗೆ ಗಾರ್ಡ್ ಆಫ್ ಹಾನರ್, ವಿಶೇಷ ಸ್ಮರಣಿಕೆ ನೀಡಿ ಗೌರವ

Raghavendra M Y HT Kannada

Mar 07, 2024 11:48 AM IST

ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ರವಿಚಂದ್ರನ್ ಅಶ್ವಿನ್ ಅವರು ಕೋಚ್ ರಾಹುಲ್ ಡ್ರಾವಿಡ್ ಅವರಿಂದ ವಿಶೇಷ ಸ್ಮರಣಿಕೆಯನ್ನು ಸ್ವೀಕರಿಸಿದರು. ನಾಯಕ ರೋಹಿತ್ ಶರ್ಮಾ ಇದ್ದಾರೆ.

    • 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಆರ್ ಅಶ್ವಿನ್ ಕೋಚ್ ರಾಹುಲ್ ದ್ರಾವಿಡ್ ಅವರಿಂದ ವಿಶೇಷ ಸ್ಮರಣಿಯನ್ನು ಸ್ವೀಕರಿಸಿದರು. ಧರ್ಮಶಾಲಾ ಮೈದಾನಕ್ಕೆ ಆಗಮಿಸಿದ ಬಲಗೈ ಸ್ಪಿನ್ನರ್‌ಗೆ ಗಾರ್ಡ್ ಆಫ್ ಹಾನರ್ ನೀಡಲಾಯಿತು. 
ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ರವಿಚಂದ್ರನ್ ಅಶ್ವಿನ್ ಅವರು ಕೋಚ್ ರಾಹುಲ್ ಡ್ರಾವಿಡ್ ಅವರಿಂದ ವಿಶೇಷ ಸ್ಮರಣಿಕೆಯನ್ನು ಸ್ವೀಕರಿಸಿದರು. ನಾಯಕ ರೋಹಿತ್ ಶರ್ಮಾ ಇದ್ದಾರೆ.
ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ರವಿಚಂದ್ರನ್ ಅಶ್ವಿನ್ ಅವರು ಕೋಚ್ ರಾಹುಲ್ ಡ್ರಾವಿಡ್ ಅವರಿಂದ ವಿಶೇಷ ಸ್ಮರಣಿಕೆಯನ್ನು ಸ್ವೀಕರಿಸಿದರು. ನಾಯಕ ರೋಹಿತ್ ಶರ್ಮಾ ಇದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 500 ವಿಕೆಟ್‌ಗಳ ಸಾಧನೆ ಮಾಡಿದ್ದ ಟೀಂ ಇಂಡಿಯಾದ (Team India) ಹಿರಿಯ ಬಲಗೈ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಮತ್ತೊಂದು ದಾಖಲೆ ಮಾಡಿದ್ದಾರೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಇಂದಿನಿಂದ (ಮಾರ್ಚ್ 7, ಗುರುವಾರ) ಇಂಗ್ಲೆಂಡ್ ವಿರುದ್ಧ (India vs England 5th Test) ನಡೆಯುತ್ತಿರುವ 5ನೇ ಹಾಗೂ ಕೊನೆಯ ಟೆಸ್ಟ್ ಆರ್ ಅಶ್ವಿನ್ ಅವರಿಗೆ 100ನೇ ಟೆಸ್ಟ್ ಪಂದ್ಯವಾಗಿದೆ. 37 ವರ್ಷದ ಖ್ಯಾತ ಸ್ಪಿನ್ನರ್ ಅಶ್ವಿನ್ ಈ ಸಾಧನೆ ಮಾಡುತ್ತಿರುವ ಭಾರತದ 13ನೇ ಆಟಗಾರ ಎನಿಸಿಕೊಂಡಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಆರ್ ಅಶ್ವಿನ್ ಅವರಿಗೆ ಟೆಸ್ಟ್ ಕ್ಯಾಪ್ ಹೊಂದಿರುವ ಸ್ಮರಣಿಯನ್ನು ನೀಡಿ ಗೌರವಿಸಿದರು. ಅಶ್ವಿನ್ ಅವರು ಮೈದಾನಕ್ಕೆ ಆಗಮಿಸುತ್ತಿದ್ದಂತೆ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದರು. ಐತಿಹಾಸಿಕ ಕ್ಷಣಕ್ಕೆ ಅಶ್ವಿನ್ ಅವರ ಪತ್ನಿ ಹಾಗೂ ಮಕ್ಕಳ ಸಾಕ್ಷಿಯಾದರು.

ಟ್ರೆಂಡಿಂಗ್​ ಸುದ್ದಿ

ರನೌಟ್​ ಆಗದಿದ್ದರೂ ಚೆಂಡಿನಿಂದ ಪೆಟ್ಟು ತಿಂದ ರವೀಂದ್ರ ಜಡೇಜಾ ಔಟಾಗಿದ್ದೇಕೆ; ಕ್ರಿಕೆಟ್ ನಿಯಮ ಹೇಳುವುದೇನು?

ರಾಜಸ್ಥಾನ್ ರಾಯಲ್ಸ್ ಸೋಲಿಸಿ ಪ್ಲೇಆಫ್​​ ಆಸೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್; ಆರ್​ಸಿಬಿಗೆ ಒತ್ತಡ

400 ಕೋಟಿ ಲಾಭ ಪಡೀತಿದ್ರು ಅವರಿಗೇನು ಸಮಸ್ಯೆ; ಸಂಜೀವ್ ಗೋಯೆಂಕಾ ವಿರುದ್ಧ ಗುಡುಗಿದ ವೀರೇಂದ್ರ ಸೆಹ್ವಾಗ್

ಯಾಕ್ರಪ್ಪ ನೀವೇ ಹಿಂಗಾದ್ರೆ ಹೆಂಗೆ; ಟಿ20 ವಿಶ್ವಕಪ್​ಗೂ ಮುನ್ನ ತಲೆನೋವು ಹೆಚ್ಚಿಸಿದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ

ಕಪಿಲ್ ದೇವ್, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕಾರ್, ಸೌರವ್ ಗಂಗೂಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಲೆ, ಹರ್ಭಜನ್ ಸಿಂಗ್, ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ ಹಾಗೂ ಚೇತೇಶ್ವರ ಪೂಜಾರ 100 ಟೆಸ್ಟ್ ಪಂದ್ಯಗಳ ಸಾಧನೆ ಮಾಡಿದ್ದಾರೆ.

ಅಶ್ವಿನ್ 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ ಟೀಂ ಇಂಡಿಯಾಗೆ ಸ್ಪಿನ್ ವಿಭಾಗದಲ್ಲಿ ಆಧಾರಸ್ತಂಭವಾಗಿದ್ದಾರೆ. 99 ಟೆಸ್ಟ್‌ ಪಂದ್ಯಗಳಲ್ಲಿ 53.9 ಸ್ಟ್ರೇಕ್ ರೇಟ್‌, 26.5 ಸರಾಸರಿಯಲ್ಲಿ 507 ವಿಕೆಟ್‌ಗಳನ್ನು ಪಡೆದಿದ್ದಾರೆ. 500 ವಿಕೆಟ್‌ಗಳ ಸಾಧನೆ ಮೂಲಕ ಕ್ರಿಕೆಟ್ ದಿಗ್ಗಜರಾದ ಶೇನ್ ವಾರ್ನ್, ಅನಿಲ್ ಕುಂಬ್ಲೆ ಹಾಗೂ ಮುತ್ತಯ್ಯ ಮುರಳೀಧರನ್ ಅವರ ಸಾಲಿಗೆ ಸೇರಿದ್ದಾರೆ.

ಆರ್ ಅಶ್ವಿನ್, ಜಾನಿ ಬೈರ್‌ಸ್ಟೋವ್‌ಗೆ ಶುಭಕೋರಿದ ಸಚಿನ್ ತೆಂಡೂಲ್ಕರ್

ರವಿಚಂದ್ರನ್ ಅಶ್ವಿನ್ ಮಾತ್ರವಲ್ಲದೆ, ಇಂಗ್ಲೆಂಡ್‌ನ ಬ್ಯಾಟರ್ ಬಾನಿ ಬೈರ್‌ಸ್ಟೋವ್ ಅವರಿಗೆ 100ನೇ ಟೆಸ್ಟ್ ಪಂದ್ಯವಾಗಿದೆ. ಬೈರ್‌ಸ್ಟೋವ್ ಇಂಗ್ಲೆಂಡ್‌ ಪರ 100ನೇ ಪಂದ್ಯವನ್ನಾಡುತ್ತಿದ್ದಾರೆ. ಈ ಇಬ್ಬರು ಆಟಗಾರರಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶುಭಕೋರಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರವ ಸಚಿನ್, ಅಶ್ವಿನ್ ಮತ್ತು ಬೈರ್‌ಸ್ಟೋವ್ 100ನೇ ಅಂತಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದಾರೆ. ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅವರ ಉತ್ಸಾಹ ಮತ್ತು ಪರಿಶ್ರಮವನ್ನು ಹೇಳುವಂತ ಅದ್ಭುತ ಸಾಧನೆ. ಈ ಇಬ್ಬರೂ ಆಟಗಾರರು ಮುಂದೆ ಮತ್ತಷ್ಟು ಅತ್ಯುತ್ತಮ ಆಟವನ್ನು ಆಡಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ಊಟದ ವಿರಾಮ ವೇಳೆಗೆ 25.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ. ಬೆನ್ ಡಕೆಟ್ 27, ಒಲಿ ಪೊಪ್ 11 ರನ್ ಗಳಿಸಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿ ಪೆಲಿವಿಯನ್ ಸೇರಿಕೊಂಡಿದ್ದಾರೆ.

ಭಾರತ-ಇಂಡ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 3-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಈ ಪಂದ್ಯವನ್ನು ಗೆದ್ದರೆ 4-1 ಅಂತರದಲ್ಲಿ ಸರಣಿಯನ್ನು ಮುಗಿಸಲಿದೆ. ಹೈದಾರಾಬಾದ್‌ನಲ್ಲಿ ನಡೆದಿದ್ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 28 ರನ್‌ಗಳಿಂದ ಜಯ ಸಾಧಿಸಿತ್ತು. ಬಳಿಕ ವಿಶಾಖಪಟ್ಟಣಂ, ರಾಜ್‌ಕೋಟ್ ಹಾಗೂ ರಾಂಚಿಯಲ್ಲಿ ನಡೆದಿದ್ದ ಕ್ರಮವಾಗಿ 2, 3 ಹಾಗೂ 4ನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಪಡೆ ಗೆಲುವು ಸಾಧಿಸಿತ್ತು.

(This copy first appeared in Hindustan Times Kannada website. To read more like this please logon to kannada.hindustantimes.com )

IPL, 2024

Live

RCB

187/9

20.0 Overs

VS

DC

24/3

(2.3)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ