logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್, ಭಾರತ ಎರಡೂ ಅಲ್ಲ; ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಆರಿಸಿದ ಆಂಗ್ಲರ ಮಾಜಿ ಕ್ರಿಕೆಟಿಗ

ಇಂಗ್ಲೆಂಡ್, ಭಾರತ ಎರಡೂ ಅಲ್ಲ; ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಆರಿಸಿದ ಆಂಗ್ಲರ ಮಾಜಿ ಕ್ರಿಕೆಟಿಗ

Prasanna Kumar P N HT Kannada

Jan 03, 2024 01:28 PM IST

google News

ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸರ್ ಹುಸೇನ್.

    • T20 World Cup 2024: ಜೂನ್​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಫೈನಲ್ ಪ್ರವೇಶಿಸುವ ತಂಡಗಳ ಕುರಿತು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸರ್ ಹುಸೇನ್ ಭವಿಷ್ಯವನ್ನು ಹಂಚಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸರ್ ಹುಸೇನ್.
ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸರ್ ಹುಸೇನ್.

2024ರ ಟಿ20 ವಿಶ್ವಕಪ್ ಟೂರ್ನಿ (T20 World Cup 2024) ಆರಂಭಕ್ಕೆ ಇನ್ನೂ 6 ತಿಂಗಳ ಕಾಲ ಸಮಯ ಇದೆ. ಒಟ್ಟು 20 ತಂಡಗಳು ಭರ್ಜರಿ ಸಿದ್ಧತೆ ಆರಂಭಿಸಿದೆ. ಅದಾಗಲೇ ಮಾಜಿ ಕ್ರಿಕೆಟರ್​​ಗಳು ತಮ್ಮ ಅಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ. ಈ ಬಾರಿ ವಿಶ್ವಕಪ್​​​ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡ ಯಾವುದು ಎಂಬುದನ್ನು ಬಹಿರಂಗಪಡಿಸುತ್ತಿದ್ದಾರೆ. ಈ ಸಾಲಿನಲ್ಲಿ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ನಾಸರ್ ಹುಸೇನ್​ (Nasser Hussain), ಟ್ರೋಫಿ ಗೆಲ್ಲುವ ಫೇವರಿಟ್ ತಂಡವನ್ನು ಹೆಸರಿಸಿದ್ದಾರೆ.

ದಕ್ಷಿಣ ಟ್ರೋಫಿ ಗೆಲ್ಲಲಿದೆ - ನಾಸರ್​ ಹುಸೇನ್

ನಾಸರ್ ಹುಸೇನ್ ಅವರು ಜೂನ್‌ನಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಫೈನಲ್ ಪ್ರವೇಶಿಸುವ ತಂಡಗಳ ಕುರಿತು ತಮ್ಮ ಭವಿಷ್ಯವನ್ನು ಹಂಚಿಕೊಂಡಿದ್ದಾರೆ. ಪ್ರಭಾವಿ ನಾಯಕ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ (England) ಮತ್ತೊಮ್ಮೆ ಪ್ರಶಸ್ತಿ ಪಡೆಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿರುವ ಮಾಜಿ ಆಟಗಾರ, ದಕ್ಷಿಣ ಆಫ್ರಿಕಾ (South Africa) ತಂಡ ಈ ಬಾರಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಲಿದೆ ಎಂದು ಭವಿಷ್ಯ ನುಡಿಸಿದ್ದಾರೆ.

ಫೈನಲ್​​ನಲ್ಲಿ ಈ ತಂಡಗಳು ಸೆಣಸಾಟ

ಉಳಿದ ತಂಡಗಳ ಬಗ್ಗೆ ಹೆಚ್ಚಿನದಾಗಿ ಯೋಚಿಸಿಲ್ಲ. ಆದರೆ, ನಾನು ದಕ್ಷಿಣ ಆಫ್ರಿಕಾ ತಂಡ ಪ್ರಶಸ್ತಿ ಗೆಲ್ಲಲಿದೆ ಎಂದು ಹೇಳುತ್ತೇನೆ ಎಂದು ಹುಸೇನ್, ಐಸಿಸಿ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ. ಇಂಗ್ಲೆಂಡ್‌, ವೆಸ್ಟ್ ಇಂಡೀಸ್, ಪಾಕಿಸ್ತಾನದಂತಹ ತಂಡಗಳು ಅದ್ಭುತ ಹೋರಾಟ ನಡೆಸಲಿವೆ. ಆದರೆ, ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ಗೆ ತಂಡಗಳು ಸೆಣಸಾಟ ನಡೆಸಲಿವೆ. ಆದರೆ, ಪ್ರಶಸ್ತಿ ಗೆಲ್ಲುವುದು ದಕ್ಷಿಣ ಆಫ್ರಿಕಾ ಮಾತ್ರ ಎಂದು ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಪ್ರಭಾವಶಾಲಿ ಪ್ರದರ್ಶನದ ಕುರಿತು ಮಾತನಾಡಿದ್ದು, ಪ್ರಮುಖ ವೇಗದ ಬೌಲರ್ಸ್ ಆ್ಯನ್ರಿಚ್ ನೋಕಿಯಾ ಮತ್ತು ಸಿಸಂಡಾ ಮಗಾಲಾ ಅವರು ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ ಗೆಲ್ಲುವ ಅವಕಾಶ ಹೆಚ್ಚಿಸುವ ಪ್ರಮುಖ ಪಾತ್ರದಾರಿಗಳು. ತಂಡದ ಪ್ರದರ್ಶನ ಮತ್ತಷ್ಟು ಬಲಪಡಿಸಲು ದಕ್ಷಿಣ ಆಫ್ರಿಕಾದ ದೇಶೀಯ ಟಿ20 ಸ್ಪರ್ಧೆ, ಸೌತ್​ ಆಫ್ರಿಕಾ ಟಿ20 ಲೀಗ್​ ಸಹ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದ್ದಾರೆ.

ಸರಣಿ ಶ್ರೇಷ್ಠ ಪ್ರಶಸ್ತಿ ಯಾರಿಗೆ?

ಎಸ್​ಎಟಿ20 ಸ್ಪರ್ಧೆಯು ಆಟಗಾರರ ಸಾಮರ್ಥ್ಯವನ್ನು ಉನ್ನತೀಕರಿಸಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಟಿ20 ವಿಶ್ವಕಪ್​ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯುವ ಆಟಗಾರ ಯಾರು ಎಂಬುದನ್ನೂ ತಿಳಿಸಿದ್ದಾರೆ. ಭಾರತದ ಸೂರ್ಯಕುಮಾರ್ ಯಾದವ್ ಅವರನ್ನು ಅತ್ಯುತ್ತಮ ಪ್ರದರ್ಶನಕಾರರಾಗಿ ಹೊರಹೊಮ್ಮಲಿದ್ದಾರೆ. ಸೂರ್ಯ ಅವರ ಟಿ20 ಪರಾಕ್ರಮ ಹೊಗಳಿದ ಹುಸೇನ್, ಭಾರತದ ರಣಭಯಂಕರ ಆಟಗಾರ ಎಂದು ಹೇಳಿದ್ದಾರೆ.

ಪ್ರಸ್ತುತ ಟಿ20 ಕ್ರಿಕೆಟ್​ನಲ್ಲಿ ಜಗತ್ತು ಗಮನಿಸಬೇಕಾದ ವ್ಯಕ್ತಿ ಎಂದರೆ ಸೂರ್ಯಕುಮಾರ್ ಎಂದು ಘೋಷಿಸಿದ ಹುಸೇನ್, ಟಿ20 ಕ್ರಿಕೆಟ್‌ನಲ್ಲಿ ಯಾವಾಗ? ಹೇಗೆ ಆಡಬೇಕೆಂಬುದು ಆತನಿಗೆ ತಿಳಿದಿದೆ. ಪ್ರತಿ ಸಲವೂ ಏನು ಮಾಡಬೇಕೆಂಬುದು ಆತನಿಗೆ ಗೊತ್ತಿದೆ. ಟಿ20 ಕ್ರಿಕೆಟ್​ ಎಂಬುದು ಆತನಿಗೆ ಮೋಜಿನ ಆಟವಾಗಿದೆ. ಈ ಫಾರ್ಮೆಟ್​ನಲ್ಲಿ ಸೂರ್ಯ ಆಟ ನೋಡುವುದೇ ಒಂದು ಆನಂದ. ವಿನೋದಮಯ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ