ಕನ್ನಡ ಸುದ್ದಿ  /  ಕ್ರಿಕೆಟ್  /  ಟೆಸ್ಟ್ ಕ್ರಿಕೆಟ್ ಎಂದರೆ ನಿಜವಾದ ಜೀವನ, ಬದುಕು ಕಲಿಸುವುದಕ್ಕಿಂತ ಹೆಚ್ಚು ಟೆಸ್ಟ್‌ ಕಲಿಸುತ್ತದೆ; ಆರ್ ಅಶ್ವಿನ್

ಟೆಸ್ಟ್ ಕ್ರಿಕೆಟ್ ಎಂದರೆ ನಿಜವಾದ ಜೀವನ, ಬದುಕು ಕಲಿಸುವುದಕ್ಕಿಂತ ಹೆಚ್ಚು ಟೆಸ್ಟ್‌ ಕಲಿಸುತ್ತದೆ; ಆರ್ ಅಶ್ವಿನ್

Jayaraj HT Kannada

Mar 07, 2024 09:20 PM IST

ಬದುಕು ಕಲಿಸುವುದಕ್ಕಿಂತ ಹೆಚ್ಚು ಟೆಸ್ಟ್‌ ಕಲಿಸುತ್ತದೆ ಎಂದು ಆರ್ ಅಶ್ವಿನ್

    • ಧರ್ಮಶಾಲಾ ಮೈದಾನದಲ್ಲಿ ವಿಶೇಷ ಗೌರವ ಪಡೆದ ಅಶ್ವಿನ್‌, ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಂದ ಟೆಸ್ಟ್ ಕ್ಯಾಪ್ ಹೊಂದಿರುವ ಸ್ಮರಣಿಕೆ ಪಡೆದರು. ಮೈದಾನಕ್ಕೆ ಆಗಮಿಸುತ್ತಿದ್ದಂತೆ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದ ಅಶ್ವಿನ್, ಬಳಿಕ ಟೆಸ್ಟ್‌ ಸ್ವರೂಪದ ಬಗ್ಗೆ ಮಾತನಾಡಿದರು. ಯುವ ಪ್ರತಿಭೆಗಳಿಗೆ ಕಿವಿಮಾತು ಹೇಳಿದರು.
ಬದುಕು ಕಲಿಸುವುದಕ್ಕಿಂತ ಹೆಚ್ಚು ಟೆಸ್ಟ್‌ ಕಲಿಸುತ್ತದೆ ಎಂದು ಆರ್ ಅಶ್ವಿನ್
ಬದುಕು ಕಲಿಸುವುದಕ್ಕಿಂತ ಹೆಚ್ಚು ಟೆಸ್ಟ್‌ ಕಲಿಸುತ್ತದೆ ಎಂದು ಆರ್ ಅಶ್ವಿನ್ (AFP)

ಭಾರತ ಕ್ರಿಕೆಟ್‌ ತಂಡದ ಅನುಭವಿ ಬಲಗೈ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin), ಇಂಗ್ಲೆಂಡ್‌ ವಿರುದ್ಧದ ಸರಣಿಯ ಐದನೇ ಟೆಸ್ಟ್ ಪಂದ್ಯದಲ್ಲಿ ವಿಶೇಷ ಮೈಲಿಗಲ್ಲು ತಲುಪಿದರು. ಧರ್ಮಶಾಲಾದಲ್ಲಿ ಮಾರ್ಚ್ 7ರ ಗುರುವಾರ ಆರಂಭವಾದ ಟೆಸ್ಟ್ ಪಂದ್ಯದ ಮೂಲಕ, ಆರ್ ಅಶ್ವಿನ್ 100ನೇ ಟೆಸ್ಟ್ ಪಂದ್ಯವಾಡಿದ ಕ್ರಿಕೆಟಿಗರ ಬಳಗ ಸೇರಿಕೊಂಡರು. 37 ವರ್ಷದ ಹಿರಿಯ ಬೌಲರ್‌, ಈ ಮೈಲಿಗಲ್ಲು ತಲುಪಿದ ಭಾರತದ 13ನೇ ಆಟಗಾರ. ಹಿಮಾಲಯದ ತಪ್ಪಲಿನಲ್ಲಿರುವ ಧರ್ಮಶಾಲಾದಲ್ಲಿ ಸುಂದರ ಪರಿಸರದ ನಡುವೆ 100ನೇ ಟೆಸ್ಟ್‌ ಪಂದ್ಯ ಆಡಿದ ಅಶ್ವಿನ್‌, ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಪಡೆದು ಮಿಂಚಿದರು. ಪಂದ್ಯಕ್ಕೂ ಮುನ್ನ ಗಾರ್ಡ್‌ ಆಫ್‌ ಹಾನರ್ ಗೌರವ ಪಡೆದ ಅಶ್ವಿನ್‌, ವಿಶೇಷ ಸ್ವರೂಪದ ಪಂದ್ಯದ ಕುರಿತು ಮಾತನಾಡಿದರು.

ಟ್ರೆಂಡಿಂಗ್​ ಸುದ್ದಿ

ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲ್ಲುವುದರ ಜತೆಗೆ ಈ ತಂಡಗಳೂ ಸೋಲಬೇಕು; ಹೀಗಾದಾಗ ಮಾತ್ರ ನಮ್ಮವರ ಪ್ಲೇಆಫ್ ಕನಸು ನನಸು!

ಸಿಎಸ್​ಕೆ ಪ್ಲೇಆಫ್​​ಗೆ ಬರಲೆಂದು ಸಹಾಯ ಮಾಡಿತೇ ರಾಜಸ್ಥಾನ್ ರಾಯಲ್ಸ್; ತನಿಖೆಗೆ ಆಗ್ರಹಿಸಿದ ನೆಟ್ಟಿಗರು

ರನೌಟ್​ ಆಗದಿದ್ದರೂ ಚೆಂಡಿನಿಂದ ಪೆಟ್ಟು ತಿಂದ ರವೀಂದ್ರ ಜಡೇಜಾ ಔಟಾಗಿದ್ದೇಕೆ; ಕ್ರಿಕೆಟ್ ನಿಯಮ ಹೇಳುವುದೇನು?

ರಾಜಸ್ಥಾನ್ ರಾಯಲ್ಸ್ ಸೋಲಿಸಿ ಪ್ಲೇಆಫ್​​ ಆಸೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್; ಆರ್​ಸಿಬಿಗೆ ಒತ್ತಡ

ಪಂದ್ಯದ ಆರಂಭಕ್ಕೂ ಮುನ್ನ ಮೈದಾನದಲ್ಲಿ ವಿಶೇಷ ಗೌರವ ಪಡೆದ ಅಶ್ವಿನ್‌, ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಂದ ಟೆಸ್ಟ್ ಕ್ಯಾಪ್ ಹೊಂದಿರುವ ಸ್ಮರಣಿಕೆ ಪಡೆದರು. ಮೈದಾನಕ್ಕೆ ಆಗಮಿಸುತ್ತಿದ್ದಂತೆ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದ ಅಶ್ವಿನ್, ಭಾವುಕರಾದರು. ತಮ್ಮ ಜೀವನದ ವಿಶೇಷ ಕ್ಷಣಕ್ಕೆ ಅಶ್ವಿನ್ ಅವರ ಪತ್ನಿ ಹಾಗೂ ಮಕ್ಕಳು ಸಾಕ್ಷಿಯಾದರು.

ವಿಶೇಷ ಮೈಲಿಗಲ್ಲು ತಲುಪುವಲ್ಲಿ ತಮ್ಮೊಂದಿಗೆ ಸದಾ ಕಾಲ ಜೊತೆಯಿದ್ದ ತಮ್ಮ ಪತ್ನಿ ಹಾಗೂ ಕುಟುಂಬಕ್ಕೆ ಅಶ್ವಿನ್‌ ವಂದಿಸಿದರು. ಕುಟುಂಬ ಸದಸ್ಯರ ತ್ಯಾಗಕ್ಕೆ ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿ | ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಆಶ್ವಿನ್‌ಗೆ ಗಾರ್ಡ್ ಆಫ್ ಹಾನರ್, ವಿಶೇಷ ಸ್ಮರಣಿಕೆ ನೀಡಿ ಗೌರವ

“ನಮ್ಮ ದೇಶದ ಕ್ರಿಕೆಟ್ ಅಭಿಮಾನಿಗಳಿಗೆ ನಾನು ಈ ಮಾತು ಹೇಳಲು ಬಯಸುತ್ತೇನೆ. ಐಪಿಎಲ್ ಅತ್ಯಂತ ಜನಪ್ರಿಯ ಪಂದ್ಯಾವಳಿ ಹೌದು. ಬಹಳಷ್ಟು ಮಕ್ಕಳು ಟಿ20 ಕ್ರಿಕೆಟ್ ಆಡಲು ಬಯಸುತ್ತಾರೆ. ಆ ಮೂಲಕ ಐಪಿಎಲ್‌ ಆಡಬೇಕೆಂದು ಕನಸು ಕಣುತ್ತಾರೆ. ನಾನು ಅವರಿಗೆ ನಿಜವಾಗಿಯೂ ಶುಭ ಹಾರೈಸುತ್ತೇನೆ. ಅವರೆಲ್ಲ ಆ ಹಂತಕ್ಕೆ ತಲುಪುತ್ತಾರೆ ಎಂದು ಭಾವಿಸುತ್ತೇನೆ”.

“ಆದರೆ ಒಂದು ವಿಷಯವನ್ನು ನೆನಪಿಡಿ. ನಾವು ಹೆಮ್ಮೆಯಿಂದ ಆಡುತ್ತಿರುವ ಟೆಸ್ಟ್‌ ಕ್ರಿಕೆಟ್‌ ಸ್ವರೂಪವು, ಜೀವನ ಕಲಿಸದಷ್ಟು ವಿಷಯಗಳನ್ನು ನಿಮಗೆ ಕಲಿಸುತ್ತದೆ. ಟೆಸ್ಟ್ ಕ್ರಿಕೆಟ್ ಎಂದರೆ ಜೀವನ. ಇದು ನಿಮಗೆ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು ಮತ್ತು ಒತ್ತಡವನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಕಲಿಸುತ್ತದೆ. ಈ ಆಟವು ನೀವು ಹಾಕಿದ ಯಾವುದೇ ಶ್ರಮಕ್ಕೆ ತಕ್ಕ ಲಾಭಾಂಶ ತಂದುಕೊಡುತ್ತದೆ. ಹೆಚ್ಚಿನ ಜನರು ಈ ಕ್ರೀಡೆಯನ್ನು ಆಡಬೇಕು. ಅದ್ಭುತ ಸ್ವರೂಪವು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಬೇಕು ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ” ಎಂದು ಅಶ್ವಿನ್‌ ಮನದಾಳದ ಮಾತುಗಳನ್ನು ಆಡಿದ್ದಾರೆ.

ಇದನ್ನೂ ಓದಿ | ಒಂದೇ ಸರಣಿಯಲ್ಲಿ 700 ರನ್; ಸುನಿಲ್ ಗವಾಸ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಯಶಸ್ವಿ ಜೈಸ್ವಾಲ್

ದೇಶಿಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡದ ಪರ ಆಡಿದ್ದ ಅಶ್ವಿನ್‌, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರು. 2011ರಲ್ಲಿ ದೆಹಲಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಅಶ್ವಿನ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆಗ ಭಾರತದ ಹಾಲಿ ಕೋಚ್‌ ರಾಹುಲ್ ದ್ರಾವಿಡ್‌ ಅವರಿಗೆ ಅದು 157ನೇ ಟೆಸ್ಟ್ ಪಂದ್ಯವಾಗಿತ್ತು. ಆಗ ಸಹ ಆಟಗಾರನಾಗಿದ್ದ ಅಶ್ವಿನ್‌ಗೆ, ಇದೀಗ ದ್ರಾವಿಡ್‌ ಅವರು ಮುಖ್ಯ ಕೋಚ್‌ ಆಗಿದ್ದಾರೆ. ಅವರಿಂದಲೇ ವಿಶೇಷ ಕ್ಯಾಪ್‌ ಪಡೆದಿದ್ದಾರೆ.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ