ಕನ್ನಡ ಸುದ್ದಿ  /  ಕ್ರಿಕೆಟ್  /  ಕೊಹ್ಲಿ, ಧೋನಿ, ಸಚಿನ್, ಬುಮ್ರಾ ಸೇರಿ ಸಹ ಆಟಗಾರರನ್ನು ಇಮಿಟೇಟ್ ಮಾಡಿದ ರೋಹಿತ್​, ವಿಡಿಯೋ ವೈರಲ್

ಕೊಹ್ಲಿ, ಧೋನಿ, ಸಚಿನ್, ಬುಮ್ರಾ ಸೇರಿ ಸಹ ಆಟಗಾರರನ್ನು ಇಮಿಟೇಟ್ ಮಾಡಿದ ರೋಹಿತ್​, ವಿಡಿಯೋ ವೈರಲ್

Prasanna Kumar P N HT Kannada

Jan 27, 2024 12:43 PM IST

ರೋಹಿತ್ ಶರ್ಮಾ.

    • Rohit Sharma Imitates Teammates: ಇತ್ತೀಚೆಗೆ ನಡೆದ ಬಿಸಿಸಿಐ ಪ್ರಶಸ್ತಿ ಸಮಾರಂಭದ ವೇಳೆ ನಾಯಕ ರೋಹಿತ್​ ಶರ್ಮಾ, ತನ್ನ ಸಹ ಆಟಗಾರರನ್ನು ಇಮಿಟೇಟ್ ಮಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
 ರೋಹಿತ್ ಶರ್ಮಾ.
ರೋಹಿತ್ ಶರ್ಮಾ.

ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ (India vs England 1st Test) ತೊಡಗಿಸಿಕೊಂಡಿದೆ. ರೆಡ್ ಬಾಲ್ ನಿಯೋಜನೆಯ ಮೊದಲ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್​ನಲ್ಲಿ 436 ರನ್​ಗಳಿಗೆ ಆಲೌಟ್​ ಆದ ಭಾರತ, 190 ರನ್​ಗಳ ಮುನ್ನಡೆ ಪಡೆದಿದೆ. ಇಂಗ್ಲೆಂಡ್​ 2ನೇ ಇನ್ನಿಂಗ್ಸ್​ ನಡೆಸುತ್ತಿದ್ದು, ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ವಿಶ್ವಕಪ್ ಬಳಿಕ ಟಿ20 ಸ್ವರೂಪಕ್ಕೆ ರೋಹಿತ್ ಶರ್ಮಾ ವಿದಾಯ; ಹಾರ್ದಿಕ್ ಆಯ್ಕೆಗೆ ಅಚ್ಚರಿಯ ಕಾರಣ ತಿಳಿಸಿದ ವರದಿ

ವಿರಾಟ್‌ ಕೊಹ್ಲಿಯಿಂದ ನಾವು ತುಂಬಾ ಕಲಿತಿದ್ದೇವೆ; ಅವರ ಬಗ್ಗೆ ಗೌರವ ಇದೆ ಎಂದ ಮೊಹಮ್ಮದ್‌ ರಿಜ್ವಾನ್‌

Explainer: ಪ್ಲೇಆಫ್‌ ಪ್ರವೇಶಿಸಲು ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಎಷ್ಟು ಅಂತರದಿಂದ ಗೆಲ್ಲಬೇಕು? ಹೀಗಿದೆ ಲೆಕ್ಕಾಚಾರ

ಕೆಕೆಆರ್​ ವಿರುದ್ಧ ಗುಜರಾತ್ ಟೈಟಾನ್ಸ್ ಗೆದ್ದರಷ್ಟೇ ಉಳಿಗಾಲ; ಸಂಭಾವ್ಯ ತಂಡ, ಹವಾಮಾನ ವರದಿ, ಪಿಚ್ ರಿಪೋರ್ಟ್ ವಿವರ

ಹೈದರಾಬಾದ್‌ನಲ್ಲಿ ಮೊದಲ ಟೆಸ್ಟ್ ಪ್ರಾರಂಭವಾಗುವ ಮೊದಲು, ಭಾರತೀಯ ಆಟಗಾರರು ಬಿಸಿಸಿಐ ಆಯೋಜಿಸಿದ್ದ ನಮನ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಹಲವು ಪ್ರಶಸ್ತಿ ನೀಡಲಾಯಿತು. ಆದರೆ ಈ ವೇಳೆ ರೋಹಿತ್​​ ಶರ್ಮಾ ಅವರ ಫನ್ನಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ನಾಯಕ ರೋಹಿತ್, ಭಾರತೀಯ ಆಟಗಾರರ ಬ್ಯಾಟಿಂಗ್, ಬೌಲಿಂಗ್ ಮತ್ತು ಸೆಲೆಬ್ರೇಷನ್​ ಅನ್ನು ಅನುಕರಿಸಿದ್ದಾರೆ. ಈ ಕ್ಲಿಪ್‌ನಲ್ಲಿ ತಮ್ಮ ಪುಲ್ ಶಾಟ್, ಎಂಎಸ್ ಧೋನಿ ಅವರ ಹೆಲಿಕಾಪ್ಟರ್ ಶಾಟ್, ಸಚಿನ್ ತೆಂಡೂಲ್ಕರ್ ಅವರ ಅಪ್ಪರ್ ಕಟ್, ಸೂರ್ಯಕುಮಾರ್ ಯಾದವ್ ಅವರ ಸುಪ್ಲಾ ಶಾಟ್, ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಆಕ್ಷನ್ ಮತ್ತು ಭಾರತದ ಬೌಲರ್ ವಿಕೆಟ್ ಪಡೆದ ನಂತರ ವಿರಾಟ್ ಕೊಹ್ಲಿ ಸೆಲೆಬ್ರೇಷನ್ ಮಾಡುವ ವಿಧಾನವನ್ನು ನಕಲು ಮಾಡಿದ್ದಾರೆ.

ಅಷ್ಟೆ ಅಲ್ಲದೆ, ಶತಕ ಸಿಡಿಸಿದ ನಂತರ ಶುಭ್ಮನ್ ಗಿಲ್ ಸಂಭ್ರಮಿಸುವ ವಿಧಾನವನ್ನೂ ಅನುಕರಿಸಿದ್ದಾರೆ ರೋಹಿತ್​. ರೋಹಿತ್​ ಅವರ ಈ ವಿಡಿಯೋ ಸಖತ್ ಮಜವಾಗಿದ್ದು, ನೆಟ್ಟಿಗರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಹ ಆಟಗಾರರನ್ನು ಇಮಿಟೇಟ್ ಮಾಡಿರುವ ರೋಹಿತ್​, ಕೊಹ್ಲಿ ಸೆಲೆಬ್ರೇಷನ್​ ಅನ್ನು ಅದ್ಭುತವಾಗಿ ತೋರಿಸಿದ್ದಾರೆ. ಥೇಟ್ ಕೊಹ್ಲಿಯಂತೆಯೇ ಅಗ್ರೆಸ್ಸಿವ್ ಸೆಲೆಬ್ರೇಷನ್ ಮಾಡಿದ್ದಾರೆ.

ಪ್ರಶಸ್ತಿ ಗೆದ್ದ ಆಟಗಾರರು

ಬುಮ್ರಾ ಅವರು 2021-22 ಋತುವಿನಲ್ಲಿ ಅವರ ವೀರಾವೇಶದ ಪ್ರದರ್ಶನಕ್ಕೆ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ (ಪುರುಷರು) ಪಾಲಿ ಉಮ್ರಿಗರ್ ಪ್ರಶಸ್ತಿ ಗೆದ್ದರು. 2022-23 ಋತುವಿನಲ್ಲಿ ನೀಡಿದ ಅತ್ಯದ್ಭುತ ಪ್ರದರ್ಶನಕ್ಕೆ ಶುಭ್ಮನ್ ಗಿಲ್ ಕೂಡ ಅದೇ ಬಹುಮಾನ ಪಡೆದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ ಗಳಿಸಿದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್​, 2022-23ರ ಆವೃತ್ತಿಯಲ್ಲಿ ಭಾರತದ ಪರ ಅತ್ಯುತ್ತಮ ಅಂತಾರಾಷ್ಟ್ರೀಯ ಡೆಬ್ಯು ಪ್ರಶಸ್ತಿಯನ್ನು ಗೆದ್ದರು.

ರವಿಶಾಸ್ತ್ರಿಗೆ ವಿಶೇಷ ಗೌರವ

ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಮಾಜಿ ಕ್ರಿಕೆಟಿಗ ಫಾರೂಖ್ ಇಂಜಿನಿಯರ್ ಅವರಿಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರವಿಶಾಸ್ತ್ರಿ ಭಾರತದ ಪರ 80 ಟೆಸ್ಟ್ ಮತ್ತು 150 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಅಲ್ಲದೆ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿದ್ದರು. ಶಾಸ್ತ್ರಿ ಅವರನ್ನು 2014ರಲ್ಲಿ ಟೀಮ್ ಇಂಡಿಯಾದ ನಿರ್ದೇಶಕರಾಗಿ ನೇಮಿಸಲಾಯಿತು. ಫಾರುಖ್ ಅವರು ಭಾರತದ ಪರ 46 ಟೆಸ್ಟ್, 5 ಏಕದಿನ ಪಂದ್ಯಗಳನ್ನಾಡಿದ್ದಾರೆ.

ಮೊದಲ ಟೆಸ್ಟ್ ಪಂದ್ಯದ ಸ್ಕೋರ್

ಹೈದರಾಬಾದ್​​ನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ 246 ರನ್​ಗಳಿಗೆ ಆಲೌಟ್​ ಆಗಿದೆ. ಇನ್ನು ಭಾರತ ಮೊದಲ ಇನ್ನಿಂಗ್ಸ್​​ನಲ್ಲಿ 436 ರನ್ ಕಲೆ ಹಾಕಿದ್ದು, 190 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

(This copy first appeared in Hindustan Times Kannada website. To read more like this please logon to kannada.hindustantime.com )

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ