logo
ಕನ್ನಡ ಸುದ್ದಿ  /  Karnataka  /  Mangaluru News: Ullal Srinivas Mallya's 120th Birth Anniversary Celebrated By Samarasya Mangalore; Dyfi Demands Harekala Bridge For Public Use

Mangaluru News: ಉಳ್ಳಾಲ್ ಶ್ರೀನಿವಾಸ್ ಮಲ್ಯರ 120ನೇ ಜಯಂತಿ ಆಚರಿಸಿದ ಸಾಮರಸ್ಯ ಮಂಗಳೂರು; ಹರೇಕಳ ಸೇತುವೆ ಸಾರ್ವಜನಿಕ ಬಳಕೆಗೆ DYFI ಆಗ್ರಹ

HT Kannada Desk HT Kannada

Nov 22, 2022 09:28 AM IST

ಮಂಗಳೂರು ನಗರದಲ್ಲಿ ಸಾಮರಸ್ಯ ಮಂಗಳೂರು ಸಂಘಟನೆ ನಿನ್ನೆ ಉಳ್ಳಾಲ್ ಶ್ರೀನಿವಾಸ್ ಮಲ್ಯರ 120ನೇ ಜಯಂತಿ ಆಚರಿಸಿತು. ಇನ್ನೊಂದಡೆ, ಹರೇಕಳ ಗ್ರಾಮದಲ್ಲಿ ಹರೇಕಳ ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಆಗ್ರಹಿಸಿ ಡಿವೈಎಫ್‌ಐ ಪ್ರತಿಭಟನೆ ನಡೆಸಿತು. ಎರಡು ಪ್ರತ್ಯೇಕ ಸಂಕ್ಷಿಪ್ತ ಸುದ್ದಿಗಳು ಇಲ್ಲಿವೆ.

  • Mangaluru News: ಮಂಗಳೂರು ನಗರದಲ್ಲಿ ಸಾಮರಸ್ಯ ಮಂಗಳೂರು ಸಂಘಟನೆ ನಿನ್ನೆ ಉಳ್ಳಾಲ್ ಶ್ರೀನಿವಾಸ್ ಮಲ್ಯರ 120ನೇ ಜಯಂತಿ ಆಚರಿಸಿತು. ಇನ್ನೊಂದಡೆ, ಹರೇಕಳ ಗ್ರಾಮದಲ್ಲಿ ಹರೇಕಳ ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಆಗ್ರಹಿಸಿ ಡಿವೈಎಫ್‌ಐ ಪ್ರತಿಭಟನೆ ನಡೆಸಿತು. ಎರಡು ಬೇರೆ ಬೇರೆ ಸಂಕ್ಷಿಪ್ತ ಸುದ್ದಿಗಳು ಇಲ್ಲಿವೆ. 

ಮಂಗಳೂರು ನಗರದಲ್ಲಿ ಸಾಮರಸ್ಯ ಮಂಗಳೂರು ಸಂಘಟನೆ ನಿನ್ನೆ ಉಳ್ಳಾಲ್ ಶ್ರೀನಿವಾಸ್ ಮಲ್ಯರ 120ನೇ ಜಯಂತಿ ಆಚರಿಸಿತು. ಇನ್ನೊಂದಡೆ, ಹರೇಕಳ ಗ್ರಾಮದಲ್ಲಿ ಹರೇಕಳ ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಆಗ್ರಹಿಸಿ ಡಿವೈಎಫ್‌ಐ ಪ್ರತಿಭಟನೆ ನಡೆಸಿತು. ಎರಡು ಪ್ರತ್ಯೇಕ ಸಂಕ್ಷಿಪ್ತ ಸುದ್ದಿಗಳು ಇಲ್ಲಿವೆ.
ಮಂಗಳೂರು ನಗರದಲ್ಲಿ ಸಾಮರಸ್ಯ ಮಂಗಳೂರು ಸಂಘಟನೆ ನಿನ್ನೆ ಉಳ್ಳಾಲ್ ಶ್ರೀನಿವಾಸ್ ಮಲ್ಯರ 120ನೇ ಜಯಂತಿ ಆಚರಿಸಿತು. ಇನ್ನೊಂದಡೆ, ಹರೇಕಳ ಗ್ರಾಮದಲ್ಲಿ ಹರೇಕಳ ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಆಗ್ರಹಿಸಿ ಡಿವೈಎಫ್‌ಐ ಪ್ರತಿಭಟನೆ ನಡೆಸಿತು. ಎರಡು ಪ್ರತ್ಯೇಕ ಸಂಕ್ಷಿಪ್ತ ಸುದ್ದಿಗಳು ಇಲ್ಲಿವೆ.

ಮಂಗಳೂರು: ಭಾರತದ ಸ್ವಾತಂತ್ರ ಹೋರಾಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಹಲವಾರು ಕೊಡುಗೆಗಳನ್ನು ನೀಡಿದ ಅಭಿವೃದ್ಧಿಯ ಹರಿಕಾರ, ಆಧುನಿಕ ಪ್ರಾಂತ್ಯದ ಶಿಲ್ಪಿ ಉಳ್ಳಾಲ್ ಶ್ರೀನಿವಾಸ್ ಮಲ್ಯರ 120ನೇ ಜಯಂತಿಯಂದು ಸಾಮರಸ್ಯ ಮಂಗಳೂರು ಸಂಘಟನೆ ನೇತತ್ವದಲ್ಲಿ ಬಿಂದು ಮಂಗಳೂರು ನಗರದ ಕದ್ರಿಯಲ್ಲಿರುವ ಉಳ್ಳಾಲ್ ಶ್ರೀನಿವಾಸ್ ಮಲ್ಯ ಸ್ಮಾರಕ ಉದ್ಯಾನವನದಲ್ಲಿ ಸೋಮವಾರ ಆಚರಿಸಲಾಯಿತು.

ಟ್ರೆಂಡಿಂಗ್​ ಸುದ್ದಿ

Bangalore Rains: ಬೆಂಗಳೂರಲ್ಲಿ ವರುಣ ದರ್ಶನ, ಸತತ 5 ತಿಂಗಳ ನಂತರ ಸುರಿದ ಮಳೆಗೆ ತಂಪಾದ ಉದ್ಯಾನ ನಗರಿ

Indian Railways:ಬೆಳಗಾವಿ-ಭದ್ರಾಚಲಂ, ಅರಸಿಕೆರೆ-ಹೈದ್ರಾಬಾದ್‌ ರೈಲು ರದ್ದು, ವಂದೇಭಾರತ್‌ ರೈಲು ಮಾರ್ಗ ಬದಲಾವಣೆ

Tumkur News: ತುಮಕೂರು ಹರಳೂರಿನ ಐತಿಹಾಸಿಕ ಶ್ರೀವೀರಭದ್ರ ಸ್ವಾಮಿಯ ಅದ್ದೂರಿ ರಥೋತ್ಸವ

Hassan Scandal: ಬಂಧನ ಭೀತಿ, ಜಾಮೀನಿಗಾಗಿ ನ್ಯಾಯಾಲಯಕ್ಕೆ ಮೊರೆ ಹೋದ ಎಚ್‌ಡಿ ರೇವಣ್ಣ

 ಉಳ್ಳಾಲ್ ಶ್ರೀನಿವಾಸ್ ಮಲ್ಯರ 120ನೇ ಜಯಂತಿ ಆಚರಣೆ

ಈ ಸಂದರ್ಭದಲ್ಲಿ ಮಲ್ಯರ ಕುಟುಂಬಸ್ಥರಾದ ನರಹರಿ ಮಲ್ಯ, ಬಾಲಚಂದ್ರ ಮಲ್ಯ ,ವಿಜಿತಾತ್ಮ ಮಲ್ಯ, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಮಾಜಿ ಶಾಸಕ ಜೆ.ಆರ್ ಲೋಬೊ, ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ, ಮಾಜಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲ್ಲಿನೋ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಮಾಜಿ ಉಪಮಹಾಪೌರ ಮೊಹಮ್ಮದ್ ಕುಂಜತ್ಬೈಲ್, ವಿಶ್ವಕರ್ಮ ಸಮಾಜದ ಮುಖಂಡ ಉದಯ್ ಆಚರ್, ಕುಡಿಯಾಲ್ ಖಬ್ಬರ್ ಪತ್ರಿಕೆಯ ಸಂಪಾದಕ ವೆಂಕಟೇಶ್ ಬಾಳಿಗ, ನಗರ ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಬಿ ಸಾಲಿಯಾನ್, ಯೋಗೇಶ್ ನಾಯಕ್,ಎ.ಸಿ ಜಯರಾಜ್, ಚೇತನ್ ಕುಮಾರ,ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷ ಶಾಂತಲಗಟ್ಟಿ, ರೂಪ ಚೇತನ್, ಮಾಲಿನಿ ನಾಯಕ್,ಗಣೇಶ್ ಪೈ, ಸುರೇಂದ್ರ ಶೆಣೈ,ಉಮ್ಮರ್ ಸಾಲತ್ತೂರು, ಸತೀಶ್ ಪೆಂಗಲ್, ಶಿವಪ್ಪ ಸಾಲಿಯಾನ್ ,ಉದಯ್ ಕುಂದರ್ ,ಟಿ.ಕೆ ಸುಧೀರ್ ,ಮೋಹನ್ ಶೆಟ್ಟಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.

ಹರೇಕಳ ಗ್ರಾಮದಲ್ಲಿ ಸೇತುವೆ ಬಳಕೆಗೆ ಮುಕ್ತಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಹರೇಕಳ ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಒತ್ತಾಯಿಸಿ ಡಿ.ವೈ.ಎಫ್. ಐ ಹರೇಕಳ ಗ್ರಾಮ ಸಮಿತಿ ವತಿಯಿಂದ ಪ್ರತಿಭಟನೆ ಸೋಮವಾರ ಸಂಜೆ ನಡೆಯಿತು.

ಹರೇಕಳ ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಒತ್ತಾಯಿಸಿ ಡಿ.ವೈ.ಎಫ್. ಐ ಹರೇಕಳ ಗ್ರಾಮ ಸಮಿತಿ ವತಿಯಿಂದ ಪ್ರತಿಭಟನೆ ಸೋಮವಾರ ಸಂಜೆ ನಡೆಯಿತು.

ಡಿ.ವೈ.ಎಫ್. ಐ ಜಿಲ್ಲಾ ಅಧ್ಯಕ್ಷ ಬಿ.ಕೆ.ಇಂತಿಯಾಝ್ ಮಾತನಾಡಿ, ಜನರ ಅನುಕೂಲಕ್ಕೆ ಮಾಡಿರುವ ಸೇತುವೆಯನ್ನು ಆದಷ್ಟು ಬೇಗ ಜನರಿಗೆ ಉಪಯೋಗಕ್ಕೆ ಸಿಗುವಂತೆ ಮಾಡಲಿ. ಬೆಳಗ್ಗೆ 6 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಇಲ್ಲಿ ಜನರ ಅನುಕೂಲಕ್ಕೆ ಗೇಟ್ ತರೆಯುತ್ತಿದ್ದು ಅದನ್ನು ಬೆಳಗ್ಗೆ 6ರಿಂದ ರಾತ್ರಿ 11.00 ಗಂಟೆಯವರೆಗೆ ತರೆಯಲಿ. 15 ದಿನದಲ್ಲಿ ಈ ಸೇತುವೆಯನ್ನು ಜನಸಾಮಾನ್ಯರಿಗೆ ಮುಕ್ತ ಮಾಡಿಕೊಡದೇ ಇದ್ದಲ್ಲಿ ಅನಿರ್ದಿಷ್ಠ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಉಳ್ಳಾಲ ಡಿ.ವೈ.ಎಫ್. ಐ ಅಧ್ಯಕ್ಷ ರಫೀಕ್ ಹರೇಕಳ, ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಹರೇಕಳ, ಹರೇಕಳ ಸಿ.ಐ.ಟಿ.ಯು ರಿಕ್ಷಾ ಯೂನಿಯನ್ ಅಧ್ಯಕ್ಷ ಆಶೀಫ್ ಪಂಜಿಮಾಡಿ , ಹರೇಕಳ ಡಿ.ವೈ.ಎಫ್. ಐ ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಲಚ್ಚಿಲ್, ಸಿ.ಪಿ.ಐ.ಎಂ ಹಿರಿಯ ಮುಖಂಡರಾದ ಉಮ್ಮರಬ್ಬ, ಸತ್ತಾಎ್ ಕೊಜಪಾಡಿ, ಎವ್ರೀಸ್, ಇಸ್ಮಾಯಿಲ್ ಆಲಡ್ಕ, ಇಸ್ಮಾಯಿಲ್ ಆಲಡ್ಕ ಕೆ.ಎಚ್ ಹಮೀದ್ ಉಪಸ್ಥಿತರಿದ್ದರು. ಗ್ರಾಮ ಸಮಿತಿ ಕಾರ್ಯದರ್ಶಿ ರಿಝ್ವಾನ್ ಕಂಡಿಗ ಸ್ವಾಗತಿಸಿದರು.

    ಹಂಚಿಕೊಳ್ಳಲು ಲೇಖನಗಳು